ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಮತ್ತೆ ವಿರೋಧ ವ್ಯಕ್ತವಾಗಿದೆ. ಮನ್ ಕಿ ಬಾತ್ ಬದಲು ಕೆಲಸದ ಬಗ್ಗೆ ಮಾತನಾಡಿ, ರೈತರ ಬಗ್ಗೆ ಮಾತನಾಡಿ ಎಂಬ ಆಗ್ರಹ ಕೇಳಿ ಬರುತ್ತಿದೆ.
ಈ ಕುರಿತಾಗಿ ಟ್ವಿಟರ್ನಲ್ಲಿ ʼಜಾಬ್ ಕಿ ಬಾತ್ʼ ಹಾಗೂ ʼಕಿಸಾನ್ ಕಿ ಬಾತ್ʼ ಎಂಬ ಎರಡು ಹ್ಯಾಷ್ಟ್ಯಾಗ್ಗಳು ಭಾರಿ ಸದ್ದು ಮಾಡುತ್ತಿವೆ. ಇಷ್ಟು ಮಾತ್ರವಲ್ಲದೆ, ಪ್ರಧಾನಿಯವರ ಕಾರ್ಯಕ್ರಮವನ್ನು ʼಮನ್ ಕಿ ಬಕ್ವಾಸ್ʼ ಎಂದು ಟೀಕಿಸಲಾಗಿದೆ.

ಈ ಹಿಂದೆ ಒಂದು ಬಾರಿ, ಮನ್ ಕಿ ಬಾತ್ ಕಾರ್ಯಕ್ರಮವನ್ನು ಯೂಟ್ಯೂಬ್ನಲ್ಲಿ ʼಡಿಸ್ಲೈಕ್ʼ ಮಾಡುವ ಅಭಿಯಾನವನ್ನು ನೆಟ್ಟಿಗರು ಆರಂಭಿಸಿದ್ದರು. ಈಗ ಮತ್ತೆ ಆ ಅಭಿಯಾನ ಮುಂದುವರೆದಿದೆ. ಮನ್ ಕಿ ಬಾತ್ ಕಾರ್ಯಕ್ರಮವನ್ನು ಇಷ್ಟಪಟ್ಟವರಿಗಿಂತ ಅದನ್ನು ಇಷ್ಟ ಪಡದೇ ಇರುವ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ.
ಇನ್ನು ಜನರಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಯೂಟ್ಯೂಬ್ನಲ್ಲಿ ಕಮೆಂಟ್ಗಳನ್ನು ಹಾಕಲು ಅವಕಾಶವನ್ನು ನೀಡಲಾಗಿಲ್ಲ.
ಒಟ್ಟಿನಲ್ಲಿ, ಮಾತುಗಳಿಂದ ಜನರನನು ಮೋಡಿ ಮಾಡಲು ನಡೆಸುತ್ತಿರುವ ಪ್ರಯತ್ನ ವಿಫಲವಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಯುವಕರು ಉದ್ಯೋಗ ನೀಡುವಂತೆ ಈ ಹಿಂದೆಯೂ ಟ್ವಿಟರ್ನಲ್ಲಿ ಹ್ಯಾಷ್ಟ್ಯಾಗ್ಗಳನ್ನು ಟ್ರೆಂಡ್ ಮಾಡಿದ್ದರು. #ModiRozgarDo ಎಂಬ ಟ್ವಿಟರ್ ಅಭಿಯಾನದಲ್ಲಿ 80 ಲಕ್ಷಕ್ಕೂ ಮಿಕ್ಕಿ ಯುವಕರು ಪಾಲ್ಗೊಂಡಿದ್ದರು.








