• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಜಿಲೆಟಿನ್‌ ಸ್ಫೋಟ: ಸರ್ಕಾರ ಮಾಧ್ಯಮದ ಮುಂದೆ ತಾತ್ಕಾಲಿಕ ಹೇಳಿಕೆ ಕೊಡದೆ ಕಠಿಣ ಕ್ರಮಕೈಗೊಳ್ಳಲಿ -ಹೆಚ್‌ಡಿಕೆ

by
February 23, 2021
in Uncategorized, ಕರ್ನಾಟಕ
0
ಜಿಲೆಟಿನ್‌ ಸ್ಫೋಟ: ಸರ್ಕಾರ ಮಾಧ್ಯಮದ ಮುಂದೆ ತಾತ್ಕಾಲಿಕ ಹೇಳಿಕೆ ಕೊಡದೆ ಕಠಿಣ ಕ್ರಮಕೈಗೊಳ್ಳಲಿ -ಹೆಚ್‌ಡಿಕೆ
Share on WhatsAppShare on FacebookShare on Telegram

ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೆನಾಗೇವಲ್ಲಿ ಸಮೀಪದ ಕ್ವಾರೆಯಲ್ಲಿ ಜಿಲೆಟಿನ್‌ ಸ್ಫೋಟಗೊಂಡು ದುರಂತದ ಬಗ್ಗೆ ಜೆಡಿಎಸ್‌ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಇದು ಸರ್ಕಾರದ ಶಾಮೀಲು ಮತ್ತು ಬೇಜವಬ್ದಾರಿತನ, ಅಧಿಕಾರಿಗಳ ಪ್ರೋತ್ಸಾಹದಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ಸರ್ಕಾರಕ್ಕೆ ಜನರ ಜೀವ ರಕ್ಷಣೆ ಮಾಡುವ ಜವಬ್ದಾರಿಯಿದ್ದರೆ ತನಿಖೆ ನಡೆಸಿ ಕ್ರಮಕೈಗೊಳ್ಳಲಿ, ಅದು ಬಿಟ್ಟು ಘಟನೆ ಸಂಭವಿಸಿದ ವೇಳೆ ಮಾಧ್ಯಮಗಳ ಮುಂದೆ ತಾತ್ಕಾಲಿಕ ಹೇಳಿಕೆಗಳನ್ನು ನೀಡಬೇಡಿ ಎಂದು ಸಿಎಂ ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಬ್ರಹ್ಮರವರ್ಷಿಣಿ ಕಲ್ಲುಕ್ವಾರಿಯಲ್ಲಿ ಅಕ್ರಮಗಣಿಗಾರಿಕೆಯ ಪರಿಶೀಲನೆಯ ನಂತರವೇ ಈ ರೀತಿಯ ಘಟನೆ ನಡೆದಿದೆ ಎಂದರೆ ಮಾಹಿತಿ ಮೊದಲೇ ಗೊತ್ತಿತ್ತು ಎಂದರ್ಥ, ಇಂತಹ ಘಟನೆಗಳಿಂದ ಅಮಾಯಕರ ಜೀವಗಳು ಬಲಿಯಾಗುತ್ತಿವೆ. ಸರ್ಕಾರದ ಜನಪ್ರತಿನಿಧಿಗಳೆ ಪ್ರತ್ಯೆಕ್ಷವಾಗಿ, ಪರೋಕ್ಷವಾಗಿ ಬೆಂಬಲ ಕೊಡುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಕಠಿಣವಾದ ಕ್ರಮಕೈಗೊಳ್ಳಬೇಕೆಂದು ಹೆಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಇತ್ತೀಚೆಗೆ ರಾಜ್ಯದೆಲ್ಲೆಡೆ ಅಕ್ರಮಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಅಧಿಕಾರಿಗಳು ಹಣಕ್ಕೆ ಆಸೆಪಟ್ಟು ಹಾಗು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಕ್ರಮಗಣಿಗಾರಿಕೆಗೆ ಅನುಮತಿ ನೀಡುತ್ತಿರುವುದು ದುರಾದೃಷ್ಟಕರ ಎಂದು ಅಧಿಕಾರಿಗಳ ಮತ್ತು ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಸರ್ಕಾರ ಕೇವಲ ಹೇಳಿಕೆ ಕೊಡುವುದಲ್ಲ ಮುಂದೆ ಈ ರೀತಿಯಾಗದಂತೆ ಕಠಿಣ ಕ್ರಮಕೈಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.

ಈಗಿನ ಯಡಿಯೂರಪ್ಪ ಸರ್ಕಾರಕ್ಕೆ ಹಣಲೂಟಿ ಮಾಡುವುದೊಂದು ಬಿಟ್ಟು ಬೇರೆಯೇನೂ ಗೊತ್ತಿಲ್ಲ, ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡಬೇಕೆಂಬ ಯೋಚನೆ ಇಲ್ಲ, ಇವತ್ತಿನ ಸರ್ಕಾರದಲ್ಲಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವಂತಹ ಅಂಶಗಳನ್ನು ಕಾಣಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸದೆ ಇರುವುದರ ಬಗ್ಗೆ ಟೀಕಿಸಿದ್ದಾರೆ.

Previous Post

ಟೂಲ್‌ಕಿಟ್‌ ಪ್ರಕರಣ: ದಿಶಾ ರವಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ನ್ಯಾಯಾಲಯ

Next Post

ಆದಿವಾಸಿಗಳು ಹಿಂದೂಗಳಲ್ಲ, ಅವರು ಎಂದಿಗೂ ಹಿಂದೂಗಳಾಗುವುದಿಲ್ಲ: ಜಾರ್ಖಂಡ್ ಸಿಎಂ

Related Posts

ರವಿಬೆಳಗೆರೆ ವಿಚಾರದಲ್ಲಿ ಪ್ರತಾಪ್ ಸಿಂಹ ಕಿಡಿ: ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ
Uncategorized

ರವಿಬೆಳಗೆರೆ ವಿಚಾರದಲ್ಲಿ ಪ್ರತಾಪ್ ಸಿಂಹ ಕಿಡಿ: ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ

by ಪ್ರತಿಧ್ವನಿ
April 29, 2026
0

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ‘ಸಾಧನಾ ಸೌರಭ’ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹಿರಿಯ ಪತ್ರಕರ್ತ ದಿವಂಗತ ರವಿ ಬೆಳೆಗೆರೆ ಕುರಿತು ತೀವ್ರ...

Read moreDetails
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
Next Post
ಆದಿವಾಸಿಗಳು ಹಿಂದೂಗಳಲ್ಲ, ಅವರು ಎಂದಿಗೂ ಹಿಂದೂಗಳಾಗುವುದಿಲ್ಲ: ಜಾರ್ಖಂಡ್ ಸಿಎಂ

ಆದಿವಾಸಿಗಳು ಹಿಂದೂಗಳಲ್ಲ, ಅವರು ಎಂದಿಗೂ ಹಿಂದೂಗಳಾಗುವುದಿಲ್ಲ: ಜಾರ್ಖಂಡ್ ಸಿಎಂ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!