• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಪರಿಸರ ರಕ್ಷಿಸುವ ಮೂಲಕ ಜೀವನ ಸಾಗಿಸುವ ಪೋಲಿಯೋ ಸಂತ್ರಸ್ತ ರಾಜಪ್ಪನ್

ಫೈಝ್ by ಫೈಝ್
April 21, 2021
in ದೇಶ
0
ಪರಿಸರ ರಕ್ಷಿಸುವ ಮೂಲಕ ಜೀವನ ಸಾಗಿಸುವ ಪೋಲಿಯೋ ಸಂತ್ರಸ್ತ ರಾಜಪ್ಪನ್
Share on WhatsAppShare on FacebookShare on Telegram

ಕಾದುನಮ್ಮಲ್ಲನೇಕರು ನಮ್ಮ ಸಣ್ಣದೊಂದು ದೌರ್ಭಾಗ್ಯವನ್ನೋ, ನ್ಯೂನತೆಯನ್ನೋ ಹಿಡಿದುಕೊಂಡು ಕೊರಗುತ್ತಿರುತ್ತೇವೆ. ಆದರೆ, ಕೇರಳದ ಕೊಟ್ಟಯಂ ಮೂಲದ ವ್ಯಕ್ತಿಯೊಬ್ಬರು ತಮ್ಮ ದೈಹಿಕ ಸವಾಲುಗಳನ್ನು ಮೀರಿ ಪರಿಸರ ಸಂರಕ್ಷಣೆ ಕೈಂಕರ್ಯದಲ್ಲಿ ತೊಡಗಿದ್ದಾರೆ. ಅವರ ಹೆಸರು ಎನ್‌ ಎಸ್‌ ರಾಜಪ್ಪನ್.‌

ತನ್ನ ಸಣ್ಣ ವಯಸ್ಸಿನಲ್ಲೇ ಪೊಲಿಯೋಗೆ ಒಳಗಾದ ರಾಜಪ್ಪನ್‌ ಅವರಿಗೆ ಈಗ 70 ವರ್ಷ, ಪೊಲೀಯೊದಿಂದಾಗಿ ಐದು ವರ್ಷದಲ್ಲೇ ಪಾರ್ಶ್ವವಾಯುವಿಗೆ ಒಳಗಾದ ಅವರು ತಮ್ಮ ಇಚ್ಛಾಶಕ್ತಿಯಿಂದ ಹಾಗೂ ಪರಿಶ್ರಮದಿಂದಲೇ ಗುರುತಿಸಲ್ಪಟ್ಟಿದ್ದಾರೆ.

ಕಳೆದ ಐದಾರು ವರ್ಷಗಳಿಂದ ರಾಜಪ್ಪನ್ ಪ್ರತಿದಿನ ದೋಣಿ ಬಾಡಿಗೆಗೆ ತೆಗೆದುಕೊಂಡು ವೆಂಬನಾಡ್ ನದಿಯಲ್ಲಿ ಎಸೆದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದಾರೆ. ಸಂಗ್ರಹಿಸಿ ಅದನ್ನವರು ಸ್ಥಳೀಯ ಏಜೆನ್ಸಿಯೊಂದಕ್ಕೆ ಮಾರುತ್ತಾರೆ. ಮಾರಿ ಬಂದ ಹಣದಿಂದ ತಮ್ಮ ಜೀವನ ನಿರ್ವಹಣೆ ಮಾಡುತ್ತಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ನನ್ನ ಕಾಲುಗಳನ್ನು ಸರಿಸಲು ಸಾಧ್ಯವಾದ ಕಾರಣ, ದೈನಂದಿನ ವೇತನದ ಕೆಲಸವನ್ನು ಮಾಡಲು ನನಗೆ ಅವಕಾಶವಿರಲಿಲ್ಲ, ಆದ್ದರಿಂದ ನಾನು ಜೀವನೋಪಾಯಕ್ಕಾಗಿ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದೇನೆ. ಒಂದು ಕಿಲೋಗ್ರಾಂ ಪ್ಲಾಸ್ಟಿಕ್ ನಿಂದ ನಾನು 12 ರೂ. ಗಳಿಸುತ್ತೇನೆ, ನಾನು ಸಂಪೂರ್ಣ ದೋಣಿ ತುಂಬುವಷ್ಟು ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿದರೂ ಅದು ಸಾಕಾಗುವುದಿಲ್ಲ (ತೂಕ ಕಡಿಮೆ). ಆದರೆ ಪ್ಲಾಸ್ಟಿಕ್‌ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದೇನೆ, ಏಕೆಂದರೆ ಆ ಮೂಲಕ ನಾನು ನದಿಯನ್ನೂ ನನ್ನನ್ನೂ ಉಳಿಸುತ್ತೇನೆ, ಅದು ನಿಜಕ್ಕೂ ಮುಖ್ಯವಾದುದು ”ಎಂದು ಅವರನ್ನು ಸಂದರ್ಶಿಸಿದ ದಿ ಬೆಟರ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ഒരുപാട് സന്തോഷം…

സഹായവും, സ്നേഹവും അറിയിച്ച എല്ലാവർക്കും ഒരുപാട് നന്ദി. അദ്ദേഹത്തിന്റെ അഡ്രസ്സ് നമ്മൾ മീഡിയയിൽ…

Posted by Nandu Ks on Wednesday, July 8, 2020

ಏಕಾಂಗಿಯಾಗಿರಲು ಆದ್ಯತೆ ನೀಡುವ ರಾಜಪ್ಪನ್, ತನ್ನ ಹೊರೆಯನ್ನು ಕುಟುಂಬದ ಮೇಲೆ ಹೇರಲು ಬಯಸದಷ್ಟು ಸ್ವಾಭಿಮಾನಿ, ಹಾಗಾಗಿ ಒಂಟಿಯಾಗಿಯೇ ಬದುಕಲು ನಿರ್ಧರಿಸಿದ್ದಾರೆ. ಆಹಾರವನ್ನು ಅವರ ಸಹೋದರಿ ವಿಲಾಸಿನಿ ತಯಾರಿಸಿ ನೀಡುತ್ತಾರೆ, ಬಿಟ್ಟರೆ ಉಳಿದೆಲ್ಲಾ ತನ್ನ ಕೆಲಸಗಳನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ ರಾಜಪ್ಪನ್!.

2018 ರ ಕೇರಳ ಪ್ರವಾಹದ ಸಂದರ್ಭದಲ್ಲಿ, ರಾಜಪ್ಪನ್ ಅವರ ಮನೆ ಸಾಕಷ್ಟು ಹಾನಿಗೊಳಗಾಗಿದೆ. ಆಗಲೂ, ರಾಜಪ್ಪನ್ ಯಾರ ಸಹಾಯವನ್ನು ಕಾದು ಕೂರಲಿಲ್ಲ. ಬದಲಾಗಿ, ಕೆಲವು ವಾರಗಳವರೆಗೆ ದೋಣಿಯಲ್ಲಿ ವಾಸಿಸುತ್ತಿದ್ದರು ಎಂದು ನೆಕ್ಸಸ್‌ ಫಾರ್‌ ಗುಡ್‌ ವೆಬ್‌ಸೈಟ್‌ ಹೇಳಿದೆ.

ಕರೋನ ವೈರಸ್ ಪ್ರೇರಿತ ಲಾಕ್‌ಡೌನ್ ಘೋಷಿಸಿದ ನಂತರ, ಪ್ರವಾಸಿಗರ ಸಂಖ್ಯೆ ಇಳಿಮುಖವಾದ್ದರಿಂದ, ನದಿಯಲ್ಲಿ ತೇಲುವ ಪ್ಲಾಸ್ಟಿಕ್‌ ಬಾಟಲಿಗಳ ಸಂಖ್ಯೆ ಕಡಿಮೆಯಾಗಿದೆ. ಇದು ತನ್ನ ಅಲ್ಪಗಳಿಕೆಯ ಭಾಗವನ್ನು ಇನ್ನಷ್ಟು ಕುಂಠಿತಗೊಳಿಸುವುದಾದರೂ, ಅದರ ಕುರಿತು ಚಿಂತಿಸದ ರಾಜಪ್ಪನ್‌ ʼಬಾಟಲಿಗಳಲ್ಲದೆ ನದಿ ಸ್ವಚ್ಛವಾಗಿರುವುದನ್ನು ಕಾಣುವಾಗ ಅತೀವ ಖುಶಿಯಾಗುತ್ತದೆʼ ಎನ್ನುತ್ತಾರೆ ಮುಗ್ಧವಾಗಿ.

ರಾಜಪ್ಪನ್‌ ಅವರ ಈ ಪ್ರಕೃತಿಯ ಸೇವೆ ಬೆಳಕಿಗೆ ಬಂದಿರುವುದರ ಹಿಂದೆಯೂ ಒಂದು ಸೋಜುಗದ ಕತೆಯಿದೆ. ನಂದು ಎಂಬ ಹವ್ಯಾಸಿ ಫೋಟೋಗ್ರಾಫರ್‌ ಒಬ್ಬರು ತನ್ನ ಒಂದು ಪ್ರಾಜೆಕ್ಟ್‌ ಕೆಲಸಗಳಿಗಾಗಿ ವೆಂಬನಾಡ್‌ ನದಿಗೆ ಭೇಟಿ ನೀಡಿರದಿದ್ದರೆ, ರಾಜಪ್ಪನ್‌, ಅವರ‌ ಬದುಕು, ಪ್ರಕೃತಿಗೆ ಅವರು ಮಾಡುತ್ತಿರುವ ಸೇವೆ ಯಾವುದೂ ವೆಂಬನಾಡಿನ ಹೊರಗೆ ಯಾರಿಗೂ ತಿಳಿಯುತ್ತಿರಲಿಲ್ಲ. ಹೊರ ಜಗತ್ತಿಗೆ ಮಾತ್ರವಲ್ಲ, ವೆಂಬನಾಡ್‌ ಆಸುಪಾಸಿನವರೂ ಇವರು ದೋಣಿ ಹಿಡಿದು ಮೀನುಗಾರಿಕೆ ನಡೆಸುತ್ತಿದ್ದಾರೆಂದೇ ಭಾವಿಸಿದ್ದರು.

ಫೊಟೋಗ್ರಾಫರ್‌ ನಂದು ಜೊತೆಗೆ ರಾಜಪ್ಪನ್

ರಾಜಪ್ಪನ್‌ ಬಾಟಲಿ ಸಂಗ್ರಹಿಸುವ ಚಿತ್ರವನ್ನು ಸೆರೆಹಿಡಿದ ನಂದು ತನ್ನ ಫೇಸ್‌ಬುಕ್‌ ಖಾತೆಯ ಮೂಲಕ ಅದನ್ನು ಹಂಚುತ್ತಾರೆ. ಅಲ್ಲದೆ, ಒಂದು ವಿಡಿಯೋ ಮಾಡಿ ಯೂಟ್ಯೂಬ್‌ ಅಲ್ಲಿ ಹರಿಬಿಡುತ್ತಾರೆ. 2020 ರ ಜೂನ್-‌ ಜುಲೈ ತಿಂಗಳ ವೇಳೆಯಲ್ಲಿ ರಾಜಪ್ಪನ್‌ ಹಾಗೂ ಅವರ ಈ ಸೇವೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ಸಾಮಾಜಿಕ ಬಳಕೆದಾರರು ರಾಜಪ್ಪನ್‌ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಬೇಕೆಂದು, ಆ ಮೂಲಕ ಅವರು ಮಾಡುತ್ತಿರುವ ಸೇವೆಯನ್ನು ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ಪರಿಸರವನ್ನು ರಕ್ಷಿಸುವ ಮೂಲಕ ಜೀವನ ಸಾಗಿಸುವ ವಿಭಿನ್ನ ಸಾಮರ್ಥ್ಯದ ರಾಜಪ್ಪನ್‌ ಅವರಿಗೆ ಸ್ವಂತ ದೋಣಿ ಕೊಡಿಸುವುದಾಗಿಯೂ ಕೇರಳ ಸ್ಕ್ರಾಪ್‌ ಮರ್ಚಂಟ್‌ ಅಸೋಸಿಯೇಷನ್‌ ಘೋಷಿಸಿತ್ತು.

Meet NS Rajappan. He cannot walk as he is paralysed below his knees. Uses his hands to move around. Everyday Rajappan gets into his small boat & collect plastic bottles from Vembanad lake. All alone. From last many years. Let’s make him famous. @thebetterindia pic.twitter.com/uDhXIzAHI7

— Parveen Kaswan, IFS (@ParveenKaswan) January 2, 2021


ADVERTISEMENT

69-year-old NS Rajappan from Kerala cannot walk as he is paralysed; he uses his hands to move around. Every day without…

Posted by Ministry of Jal Shakti, Department of Water Resources, RD & GR on Monday, July 20, 2020

Tags: Rajappanಕೇರಳ
Previous Post

ಹಠಮಾರಿ ಸರ್ಕಾರ – ಪಟ್ಟು ಬಿಡದ ರೈತರು; ಸಂಧಾನ ಮತ್ತೆ ವಿಫಲ

Next Post

ಕಾಫಿ ಮಂಡಳಿಯನ್ನೂ ಮುಚ್ಚಲು ಮುಂದಾದ ಕೇಂದ್ರ ಸರ್ಕಾರ?

Related Posts

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
0

ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಬೀದರ್...

Read moreDetails

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
Next Post
ಕಾಫಿ ಮಂಡಳಿಯನ್ನೂ ಮುಚ್ಚಲು ಮುಂದಾದ ಕೇಂದ್ರ ಸರ್ಕಾರ?

ಕಾಫಿ ಮಂಡಳಿಯನ್ನೂ ಮುಚ್ಚಲು ಮುಂದಾದ ಕೇಂದ್ರ ಸರ್ಕಾರ?

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada