ಅರ್ನಾಬ್ ಗೋಸ್ವಾಮಿ ಪ್ರಕರಣದ ನಂತರ ಕುನಾಲ್ ಕಮ್ರಾ ನ್ಯಾಯಾಂಗ ನಿಂದನೆ ಪ್ರಕರಣ ದೇಶದಲ್ಲಿ ಸದ್ದು ಮಾಡುತ್ತಿದೆ. ಭಾರತದ ಅಟಾರ್ನಿ ಜನರಲ್ ಕೆ ಕೆ ವೇಣುಗOಪಾಲ್ ಅವರು ಕುನಾಲ್ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ಅನುಮತಿ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ಕುನಾಲ್ ಕಮ್ರಾ ತಮ್ಮ ಮೊಟ್ಟ ಮೊದಲ ಪ್ರತಿಕ್ರಿಯೆಯನ್ನು ಫೇಸ್ಬುಕ್ ಮೂಲಕ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ನಾನು ಮಾಡಿರುವ ಟ್ವೀಟ್ಗಳನ್ನು ಅಳಿಸುವುದಿಲ್ಲ ಅಥವಾ ಕ್ಷಮೆಯನ್ನೂ ಯಾಚಿಸುವುದಿಲ್ಲ. ಸುಪ್ರಿಂಕೋರ್ಟ್ ಬಗೆಗಿನ ನನ್ನ ದೃಷ್ಟಿಕೋನ ಇನ್ನೂ ಬದಲಾಗಿಲ್ಲ. ಏಕೆಂದರೆ, ಇನ್ನೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಕುರಿತು ಸುಪ್ರಿಂ ಕೋರ್ಟ್ ಇನ್ನೂ ಸಮ್ಮನೆ ಕುಳಿತಿದೆ. ನನ್ನ ಟ್ವೀಟ್ಗಳನ್ನು ನ್ಯಾಯಾಂಗ ನಿಂದನೆ ಎಂದು ಸುಪ್ರಿಂ ಕೋರ್ಟ್ನ ಜಡ್ಜ್ಗಳು ಹೇಳುವ ಮುನ್ನ (ಇನ್ನೂ ಹೇಳಿಲ್ಲ), ಆ ಟ್ವೀಟ್ಗಳನ್ನು ಓದಿ ಅವರು ಒಂದು ಬಾರಿಗೆ ನಗುವುದಂತೂ ಸತ್ಯ, ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಪ್ರೈಮ್ ಟೈಮ್ನಲ್ಲಿ ಕೂಗಾಡುವ ಲೌಡ್ ಸ್ಪೀಕರ್ ಪ್ರಕರಣದಲ್ಲಿ ಸುಪ್ರಿಂಕೋರ್ಟ್ನ ಪಕ್ಷಪಾತೀಯ ನಿರ್ಧಾರದ ಕುರಿತಾಗಿ ನನ್ನ ಟ್ವೀಟ್ಗಳು ಬರೆಯಲ್ಪಟ್ಟಿದ್ದವು. ಸುಪ್ರಿಂ ಕೋರ್ಟ್ ನ್ಯಾಯಾಧಿಶರು, ದೇಶದ ಪ್ರಸಿದ್ದ ವಕೀಲರ ಎದುರು ಒಂದು ಕಾಮಿಡಿ ಶೋ ನಡೆಸುವುದು ನನಗೆ ತುಂಬಾ ಇಷ್ಟ. ಯಾವುದೇ ಇತರ ವೇದಿಕೆಗಳಿಗಿಂತಲೂ ನಾನು ಸುಪ್ರಿಂ ಕೋರ್ಟಿನಲ್ಲಿಯೇ ನನ್ನ ಕಾಮಿಡಿ ಶೋ ನೀಡುತ್ತೇನೆ ಎಂದು, ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಹೇಳಿದ್ದಾರೆ.
No lawyers, No apology, No fine, No waste of space
Dear Judges, Mr KK Venugopal,
The tweets I recently put out…
Posted by Kunal Kamra on Thursday, November 12, 2020
Also Read: ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕುನಾಲ್ ಕಮ್ರಾ ಬೆಂಬಲಕ್ಕೆ ನಿಂತ ಕಣ್ಣನ್ ಗೋಪಿನಾಥನ್
ನನ್ನ ವಿರುದ್ದ ಇರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಶೀಘ್ರದಲ್ಲಿ ಪರಿಗಣಿಸಿದಂತೆ ದೇಶದ ಇತರ ಸಮಸ್ಯೆಗಳನ್ನು ಕೂಡಾ ಶೀಘ್ರದಲ್ಲಿ ಪರಿಗಣಿಸಿದ್ದರೆ ಚೆನ್ನಾಗಿರುತ್ತಿತ್ತು. ನೋಟು ಬ್ಯಾನ್, 370ನೇ ವಿಧಿ ರದ್ದುಗೊಳಿಸಿದ್ದು, ಎಲೆಕ್ಟೋರಲ್ ಬಾಂಡ್ಗ ಕುರಿತಾದ ಅರ್ಜಿಯನ್ನು ಕೂಡಾ ಶೀಘ್ರದಲ್ಲಿ ಪರಿಗಣಿಸಬಹುದಿತ್ತು. ಇವುಗಳನ್ನು ಶೀಘ್ರವೇ ಪರಿಗಣಿಸಬೇಕಾದ ಅಗತ್ಯತೆಯೂ ಇತ್ತು, ಎಂದು ಅವರು ಬರೆದುಕೊಂಡಿದ್ದಾರೆ.
Also Read: ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿಸಿದ ಅಟಾರ್ನಿ ಜನರಲ್
“ನನ್ನ ಒಂದು ಟ್ವೀಟ್ನಲ್ಲಿ ಸುಪ್ರಿಂಕೋರ್ಟ್ನಲ್ಲಿರುವ ಮಹಾತ್ಮಾ ಗಾಂಧೀಯವರ ಫೋಟೊ ಬದಲಿಗೆ ಹರೀಶ್ ಸಾಳ್ವೆ ಅವರ ಫೋಟೋ ಹಾಕಲು ಸಲಹೆ ನೀಡಿದ್ದೆ. ಈಗ ಇನ್ನೊಂದು ಸಲಹೆ ನೀಡುತ್ತೇನೆ, ಪಂಡಿತ್ ನೆಹರೂ ಅವರ ಫೋಟೋವನ್ನು ಕೂಡಾ ತೆಗೆದು ಮಹೇಶ್ ಜೇಠ್ಮಲಾನಿ ಫೋಟೋ ಹಾಕಿದರೆ ಒಳಿತು,” ಎಂದು ಅವರು ವ್ಯಂಗ್ಯವಾಡಿದ್ದಾರೆ.