• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಬಿಹಾರ ಚುನಾವಣೆ: ಶಿವಸೇನೆಗಿಂತ ಹೆಚ್ಚು ಮತಗಳನ್ನು ಪಡೆದ ʼನೋಟಾʼ..!

by
November 11, 2020
in ದೇಶ
0
ಬಿಹಾರ ಚುನಾವಣೆ: ಶಿವಸೇನೆಗಿಂತ ಹೆಚ್ಚು ಮತಗಳನ್ನು ಪಡೆದ ʼನೋಟಾʼ..!
Share on WhatsAppShare on FacebookShare on Telegram

ಬಿಹಾರ ಚುನಾವಣೆಯ ಮತ ಎಣಿಕೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಸರ್ಕಾರವನ್ನು ರಚಿಸುವತ್ತ ತನ್ನ ದೃಷ್ಟಿಯನ್ನೂ ನೆಟ್ಟಿದೆ. ಈ ನಡುವೆ ಗಮನಿಸಬೇಕಾದ ವಿಚಾರವೇನೆಂದರೆ, ಬಿಹಾರದಲ್ಲಿ ʼನೋಟಾʼ (None of the Above – NOTA) ಮತಗಳಲ್ಲಿ ಗಣನೀಯ ಇಳಿಕೆಯಾಗಿದೆ.

ADVERTISEMENT

ಬಿಹಾರದಲ್ಲಿ ನೋಟಾ ಮೊದಲ ಬಾರಿಗೆ ಬಳಕೆಯಾಗಿದ್ದು 2015ರ ವಿಧಾನಸಭಾ ಚುನಾವಣೆಯಲ್ಲಿ. ಅಂದಿನ ಚುನಾವಣೆಯಲ್ಲಿ ದಾಖಲಾದ 3,81,20,124 ಅಧಿಕೃತ ಮತಗಳಲ್ಲಿ 9,47,279 ಮತಗಳು ನೋಟಾ ಮತಗಳಾಗಿದ್ದವು. ಅಂದರೆ ಒಟ್ಟು ಮತದಾನದ ಶೇ. 2.48ರಷ್ಟು ಮತಗಳು ನೋಟಾ ಮತಗಳಾಗಿದ್ದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಬಾರಿಯ ಚುನಾವಣೆಯಲ್ಲಿ ನೋಟಾ ಮತಗಳ ಪ್ರಮಾಣ ಇಳಿಕೆಯಾಗಿದೆ. ಈ ಬಾರಿ ಒಟ್ಟು 7,06,502 ನೋಟಾ ಮತಗಳು ಬಿಹಾರದಲ್ಲಿ ದಾಖಲಾಗಿವೆ. ಅಂದರೆ ಒಟ್ಟು ಮತದಾನದ ಶೇ. 1.68ರಷ್ಟು ನೋಟಾ ಮತಗಳು ಚಲಾಯಿಸಲಾಗಿವೆ.

ನೋಟಾಗಿಂತಲೂ ಹಿಂದೆ ಬಿದ್ದ ಶಿವಸೇನೆ ಮತ್ತು ಎನ್‌ಸಿಪಿ:

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಸಿಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿರುವ ಶಿವಸೇನೆಯು ಈ ಬಾರಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ವಿಫಲವಾಗಿದೆ. ನೋಟಾ ಮತಗಳಿಗಿಂತಲೂ ಕಡಿಮೆ ಮತಗಳನ್ನು ಶಿವಸೇನೆ ಹಾಗೂ ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿ (NCP) ಪಡೆದಿದೆ.

ಶಿವಸೇನೆಯು ಒಟ್ಟು ಮತದಾನದ ಶೇ. 0.05 ಮತಗಳನ್ನಷ್ಟೇ ಪಡೆಯಲು ಶಕ್ತವಾಗಿದೆ. ಎನ್ನು ಎನ್‌ಸಿಪಿಯು ಶೇ. 0.23ರಷ್ಟು ಮತಗಳನ್ನು ಮಾತ್ರ ಪಡೆದಿದೆ.

ರಾಷ್ಟ್ರ ಮಟ್ಟದಲ್ಲಿ ಶಿವಸೇನೆಯನ್ನು ಬಲಪಡಿಸಲು ಹೂಡಿರುವ ಯೋಜನೆಯ ಇನ್ನೊಂದು ವಿಫಲ ಯತ್ನ ಇದಾಗಿದೆ. ಈ ಹಿಂದೆ ನಡೆದ ಗುಜರಾತ್‌, ಛತ್ತೀಸ್‌ಘಡ್‌, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿಯೂ ತನ್ನ ಪ್ರಭಾವವನ್ನು ಬೀರಲು ಶಿವಸೇನೆ ಯತ್ನಿಸಿತ್ತು. ಆದರೆ, ಅವರ ಯಾವ ಪ್ರಯತ್ನಗಳು ಕೂಡಾ ಯಶಸ್ವಿಯಾಗಲಿಲ್ಲ.

ಬಿಹಾರದಲ್ಲಿ 50 ಜನ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲು ಶಿವಸೇನೆ ಯೋಜಿಸಿತ್ತು. ಆದರೆ, ಕೊನೆಗೆ 30 ಜನರಿಗೆ ಬಿ ಫಾರಂ ನೀಡಿತ್ತು. ಅದರಲ್ಲಿ 22 ಜನರ ನಾಮಪತ್ರಗಳು ಮಾತ್ರ ಊರ್ಜಿತವಾಗಿತ್ತು. ಇನ್ನು ಎನ್‌ಸಿಪಿಯು ಒಟ್ಟು 80 ಜನ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿತ್ತು.

2013ರಲ್ಲಿ ಸುಪ್ರಿಂ ಕೋರ್ಟ್‌ ತೀರ್ಪು ನೀಡಿದ ನಂತರ ಇವಿಎಂಗಳಲ್ಲಿ ನೋಟಾ ಗುಂಡಿಯನ್ನು ಅಳವಡಿಸಲಾಗಿತ್ತು. ಒಂದು ವೇಳೆ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳಿಗಿಂತಲೂ ಹೆಚ್ಚಿನ ಮತಗಳು ನೋಟಾಗೆ ಬಿದ್ದರೆ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ವಜಾಗೊಳಿಸದೇ, ಎರಡನೇ ಅತೀ ಹೆಚ್ಚು ಮತ ದೊರೆತ ಅಭ್ಯರ್ಥಿಗಳನ್ನು ವಿಜೇತರು ಎಂದು ಘೊಷಿಸುವುದು ನೋಟಾ ಮತಗಳ ಇಳಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Previous Post

ಅರ್ನಾಬ್‌ ಗೋಸ್ವಾಮಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

Next Post

ಸುದ್ದಿ ಜಾಲತಾಣ ಹಾಗೂ OTTಗಳನ್ನು ನಿಯಂತ್ರಿಸಲಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
Next Post
ಸುದ್ದಿ ಜಾಲತಾಣ ಹಾಗೂ OTTಗಳನ್ನು ನಿಯಂತ್ರಿಸಲಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ

ಸುದ್ದಿ ಜಾಲತಾಣ ಹಾಗೂ OTTಗಳನ್ನು ನಿಯಂತ್ರಿಸಲಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada