• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭಾರತ- ಅಮೆರಿಕ ನೂತನ ಮಿಲಿಟರಿ ಒಪ್ಪಂದದಿಂದ ನಿಜಕ್ಕೂ ಲಾಭ ಯಾರಿಗೆ?

by
October 29, 2020
in ದೇಶ
0
ಭಾರತ- ಅಮೆರಿಕ ನೂತನ ಮಿಲಿಟರಿ ಒಪ್ಪಂದದಿಂದ ನಿಜಕ್ಕೂ ಲಾಭ ಯಾರಿಗೆ?
Share on WhatsAppShare on FacebookShare on Telegram

ಭಾರತ ಮತ್ತು ಅಮೆರಿಕ ನಡುವಿನ ಮಿಲಿಟರಿ ಸಹಕಾರ ಒಪ್ಪಂದ ಬೇಸಿಕ್ ಎಕ್ಸಚೇಂಜ್ ಅಂಡ್ ಕೋಅಪರೇಷನ್ ಅಗ್ರೀಮೆಂಟ್(ಬಿಇಸಿಎ) ಗೆ ಉಭಯ ರಾಷ್ಟ್ರಗಳು ಸಹಿ ಮಾಡಿವೆ. ಮಂಗಳವಾರ ನಡೆದ ಎರಡೂ ದೇಶಗಳ ಉನ್ನತ ಮಟ್ಟದ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಮತ ಸೂಚಿಸಲಾಗಿದೆ. ಚೀನಾ ಜೊತೆಗಿನ ಕಳೆದ ಕೆಲವು ವರ್ಷಗಳ ಗಡಿ ಬಿಕ್ಕಟ್ಟು ದಿನೇದಿನೆ ಬಿಗಡಾಯಿಸುತ್ತಿರುವ ಹೊತ್ತಿನಲ್ಲಿ ವಿಶ್ವ ಮಿಲಿಟರಿ ಶಕ್ತಿ ಅಮೆರಿಕದೊಂದಿಗಿನ ಈ ಮಹತ್ವದ ಒಪ್ಪಂದ ಹೆಚ್ಚು ಚರ್ಚೆಗೆ ಒಳಗಾಗಿದೆ.

ADVERTISEMENT

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ನಡುವೆ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಎರಡು ವರ್ಷ ಹಿಂದೆಯೇ ಅಮೆರಿಕ ಮತ್ತು ಭಾರತ ನಡುವೆ ಜಾರಿಗೆ ಬಂದ ಸರಣಿ ಕಮ್ಯುನಿಕೇಷನ್, ಕಾಂಪಾಟಿಬಿಲಿಟಿ ಮತ್ತು ಸೆಕ್ಯುರಿಟಿ ಅಗ್ರಿಮೆಂಟ್(ಕ್ಯಾಮ್ ಕಾಸಾ) ಭಾಗವಾಗಿ, ಸರಣಿಯ ಕೊನೆಯ ಒಪ್ಪಂದವಾಗಿ ಬಿಇಸಿಎಗೆ ಉಭಯ ರಾಷ್ಟ್ರಗಳು ಸಹಿ ಮಾಡಿವೆ.

ಉಭಯ ದೇಶಗಳ ಮಿಲಿಟರಿ ಸಹಕಾರ ಮತ್ತು ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆ ಇದಾಗಿದ್ದು, ನೆರೆರಾಷ್ಟ್ರ ಚೀನಾ ಭಾರತದ ವಿರುದ್ಧ ಹದ್ದುಮೀರಿದ ವರಸೆ ತೋರುತ್ತಿರುವ ಈ ಹೊತ್ತಿನಲ್ಲಿ ಇಂತಹದ್ದೊಂದು ಒಪ್ಪಂದ ತೀರಾ ಅಗತ್ಯವಾಗಿತ್ತು. ಇದರಿಂದಾಗಿ ಅಮೆರಿಕದಂತಹ ಶಕ್ತಿಶಾಲಿ ರಾಷ್ಟ್ರ ಭಾರತದ ಬೆನ್ನಿಗೆ ನಿಂತಂತಾಗಿದೆ. ಅದು ಸಹಜವಾಗೇ ಚೀನಾದ ಉದ್ಧಟತನಗಳಿಗೆ ಕಡಿವಾಣ ಹಾಕಲಿದೆ. ಆ ಹಿನ್ನೆಲೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಉಭಯ ರಾಷ್ಟ್ರ ನಾಯಕರ ನಡುವಿನ ಮಾತುಕತೆಯಲ್ಲಿ ಪ್ರಮುಖವಾಗಿ ಚೀನಾದ ಆಕ್ರಮಣಕಾರಿ ನೀತಿಯ ಬಗ್ಗೆಯೇ ಹೆಚ್ಚು ಚರ್ಚಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರಮುಖವಾಗಿ ಸೇನಾ ಕಾರ್ಯಾಚರಣೆಯಲ್ಲಿ ಅತ್ಯಂತ ನಿರ್ಣಾಯಕವಾದ ಭೌಗೋಳಿಕ ಮಾಹಿತಿ ಮತ್ತು ತಂತ್ರಜ್ಞಾನ ವಿನಿಮಯಕ್ಕೆ ಈ ಒಪ್ಪಂದದ ಮೂಲಕ ನಿರ್ದಿಷ್ಟ ಸಾಂಸ್ಥಿಕ ಸ್ವರೂಪ ಬಂದಂತಾಗಿದೆ. ಆ ಹಿನ್ನೆಲೆಯಲ್ಲಿಯೇ ರಕ್ಷಣೆಯ ವಿಷಯದಲ್ಲಿ ಭಾರತದೊಂದಿಗೆ ಅಮೆರಿಕ ದೃಢವಾಗಿ ನಿಲ್ಲಲಿದೆ ಎಂದು ಹೇಳುವ ಮೂಲಕ ಅಮೆರಿಕದ ನಾಯಕದ್ವಯರು, ಪರೋಕ್ಷವಾಗಿ ಚೀನಾಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಇದಿಷ್ಟು; ಬಿಇಸಿಎ ವಿಷಯದಲ್ಲಿ ನಮ್ಮ ಮುಖ್ಯವಾಹಿನಿ ಮಾಧ್ಯಮಗಳು ಎರಡು ದಿನಗಳಿಂದ ಹೇಳುತ್ತಿರುವ ಸಂಗತಿಗಳು. ಉಭಯ ರಾಷ್ಟ್ರಗಳ ಅಧಿಕೃತ ಹೇಳಿಕೆಗಳು, ಮಾಧ್ಯಮಗಳಿಗೆ ನೀಡಿದ ಸಂಕ್ಷಿಪ್ತ ವಿವರಗಳು ಮತ್ತು ಇಂತಹ ಒಪ್ಪಂದಗಳ ಸಂದರ್ಭದಲ್ಲಿ ಅವುಗಳ ಉತ್ತಮ ಅಂಶಗಳನ್ನಷ್ಟೇ ಪ್ರಚಾರಕ್ಕೆ ತರುವ ಉದ್ದೇಶದ ಸ್ಥಾಪಿತ ಮಿಲಿಟರಿ ಮತ್ತು ವ್ಯೂಹಾತ್ಮಾಕ ತಂತ್ರಗಾರಿಕೆಗಳ ವಿಶ್ಲೇಷಣಾಕಾರರ ಮಾತುಗಳ ಆಧಾರದಲ್ಲಿ ಮಾಧ್ಯಮಗಳು ಈ ಮೇಲಿನ ವಿವರಗಳನ್ನೇ ಒಪ್ಪಂದಗಳ ಹೂರಣವೆಂದು ಹೇಳಿವೆ.

ಆದರೆ, ವಾಸ್ತವ ಏನು? ನಿಜವಾಗಿಯೂ ಈ ಒಪ್ಪಂದ ಕೇವಲ ಭಾರತಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಮಾತ್ರ ಹೊಂದಿದೆಯೇ? ಭಾರತದ ಹಿತಕ್ಕಾಗಿ ಮಿಲಿಟರಿ ಒಪ್ಪಂದ ಮಾಡಿಕೊಳ್ಳುವ ಮಟ್ಟಿಗೆ ಅಮೆರಿಕ ಭಾರತದ ಮೇಲೆ ಕಾಳಜಿ ಹೊಂದಿದೆಯೇ? ಅಮೆರಿಕದ ಮಿಲಿಟರಿ ಕೂಟ ರಾಷ್ಟ್ರವಾಗಲೀ, ಅಥವಾ ಐರೋಪ್ಯ ರಾಷ್ಟ್ರಗಳಂತೆ ಸಾಂಪ್ರದಾಯಿಕ ಮಿತ್ರರಾಷ್ಟ್ರ ಸ್ಥಾನಮಾನವನ್ನಾಗಲೀ ಹೊಂದಿರದ ಭಾರತದ ಮೇಲೆ ವಿಶ್ವದ ದೊಡ್ಡಣ್ಣನಿಗೆ ಇಷ್ಟೊಂದು ಪ್ರೀತಿ ಹೇಗೆ ಮತ್ತು ಏಕೆ ಬಂದಿದೆ? ಎಂಬ ಪ್ರಶ್ನೆಗಳು ಏಳುವುದು ಸಹಜ.

ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಬಿಇಸಿಎ ಒಪ್ಪಂದದ ಕುರಿತು ಭಿನ್ನ ಅಭಿಪ್ರಾಯಗಳು ಕೇಳಿಬರತೊಡಗಿವೆ. ಭಾರತ ಕೂಡ ಒಂದು ವೇಳೆ ಡೊಕ್ಲಾಮ್ ಮತ್ತು ಲಡಾಖ್ ಬಿಕ್ಕಟ್ಟು ಮತ್ತು ಆ ನೆಪದಲ್ಲಿ ಚೀನಾ ನಡೆಸುತ್ತಿರುವ ಆಕ್ರಮಣಕಾರಿ, ದಬ್ಬಾಳಿಕೆಯ ಯತ್ನಗಳು ಇರದೇ ಹೋಗಿದ್ದರೆ, ಅಮೆರಿಕದೊಂದಿಗೆ ಇಂತಹದ್ದೊಂದು ಒಪ್ಪಂದಕ್ಕೆ ಮುಂದಾಗುತ್ತಿರಲಿಲ್ಲ ಎಂಬ ಅಭಿಪ್ರಾಯಗಳೂ ಇವೆ. ಆ ಹಿನ್ನೆಲೆಯಲ್ಲಿ ಇದು ಒಂದು ರೀತಿಯಲ್ಲಿ ಭಾರತದ ಈ ಧಾವಂತದ ಒಪ್ಪಂದ, ನೆಗಡಿ ಎಂದು ಮೂಗನ್ನೇ ಕತ್ತರಿಸಿಕೊಂಡಂತಾಗಿದೆ. ಚೀನಾದ ಆಕ್ರಮಣದ ಆತಂಕದಲ್ಲಿ ಹಿಂದೆ ಮುಂದೆ ನೋಡದೆ, ಈವರೆಗೆ ಪ್ರಯೋಗಕ್ಕೊಳಗಾಗದ ಬಗೆಯ ಹಲವು ಸೂಕ್ಷ್ಮ ಮಿಲಿಟರಿ ವಿಷಯದಲ್ಲಿ ಅಮೆರಿಕದೊಂದಿಗೆ ಏಕಾಏಕಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಟೀಕೆಗಳೂ ಕೇಳಿಬಂದಿವೆ.

ಭೌಗೋಳಿಕವಾಗಿ ಹೆಚ್ಚು ನಿಖರ ಮತ್ತು ಕರಾರುವಾಕ್ಕು ಮಾಹಿತಿ ಒಳಗೊಂಡಿರುವ ಡೇಟಾಸೆಟ್ಸ್ ಹೊಂದಿರುವ ಅಮೆರಿಕದ ಮಿಲಿಟರಿ ಸಾಫ್ಟವೇರ್ ನೆರವು ದೊರೆತಲ್ಲಿ ತನ್ನ ದೂರಗಾಮಿ ಮತ್ತು ಶಕ್ತಿಶಾಲಿ ಶಸ್ತ್ರಾಸ್ತ್ರಗಳ ಗುರಿ ನಿಖರತೆಗೆ ದೊಡ್ಡ ಬೆಂಬಲ ದೊರೆಯಲಿದೆ ಎಂಬುದು ಭಾರತದ ಈ ಅವಸರದ ಹೆಜ್ಜೆಯ ಹಿಂದಿರುವ ಕಾರಣ. ಆದರೆ, ಅಮೆರಿಕದ ಜಿಯೋಗ್ರಾಫಿಕ್ ಇನ್ ಫಾರ್ಮೇಷನ್ ಸಿಸ್ಟಮ್(ಜಿಐಎಸ್) ತಂತ್ರಜ್ಞಾನದ ನೆರವಿನಿಂದ ಭೂ ರಚನೆ, ಹವಾಗುಣ ಮುಂತಾದ ಸೇನಾ ಕಾರ್ಯಾಚರಣೆಗೆ ಅಗತ್ಯವಾದ ಅತ್ಯಂತ ಸಮೀಪದ ದೃಶ್ಯಾವಳಿಯನ್ನೊಳಗೊಂಡ ಕರಾರುವಾಕ್ಕು ಮಾಹಿತಿಯನ್ನು ಪಡೆಯಬಹುದು. ಹಾಗೇ ಅಮೆರಿಕದ ಅತ್ಯಾಧುನಿಕ ಉಪಗ್ರಹ ಚಿತ್ರಗಳು(ಡೇಟಾ ಮತ್ತು ವೀಡಿಯೋಸಹಿತ), ಮಿಲಿಟರಿ ಬಳಕೆಯ ಸ್ಪಷ್ಟ ಮತ್ತು ನಿಖರ ಜಿಪಿಎಸ್ ತಂತ್ರಜ್ಞಾನ ಬಳಕೆಯ ಅವಕಾಶ ಕೂಡ ಸಿಗಲಿದೆ. ವಿಶೇಷ ಕ್ಯಾಮ್ ಕಾಸಾ ಒಪ್ಪಂದದ ಭಾಗವಾಗಿ ಅಮೆರಿಕದ ವಿವಿಧ ಸೆನ್ಸಾರ್ ಗಳು ಸಂಗ್ರಹಿಸುವ ಬೃಹತ್ ಮಾಹಿತಿ ಕೂಡ ಲಭ್ಯವಾಗಬಹುದು. ಹೊಸ ಜಗತ್ತಿನ ಸಮರ ನೀತಿಯಲ್ಲಿ ಇಂತಹ ಉಪಗ್ರಹ ಮತ್ತು ಸಾಫ್ಟವೇರ್ ಆಧಾರಿತ ಅತಿ ಸೂಕ್ಷ್ಮ ತಂತ್ರಜ್ಞಾನಗಳು ಬಹಳ ನಿರ್ಣಾಯಕವಾಗಿರುವುದರಿಂದ, ಸಹಜವಾಗೇ ಇಂತಹ ನೆರವು ಮತ್ತು ಬೆಂಬಲ ಭಾರತದ ಸೇನಾ ಕಾರ್ಯಾಚರಣೆಗೆ ಹೊಸ ವೇಗ ಮತ್ತು ನಿಖರತೆ ತಂದುಕೊಡಬಹುದು.

ಮೇಲ್ನೋಟಕ್ಕೆ ಬಿಇಸಿಎ ಒಪ್ಪಂದದ ಈ ಅನುಕೂಲಗಳು ಮಹಾನ್ ಎನಿಸದೇ ಇರಲಾರವು. ಆದರೆ, ಅದರ ಆಳದಲ್ಲಿ ಅಮೆರಿಕಕ್ಕೆ ಆಗುವ ಅನುಕೂಲಗಳು ಮತ್ತು ಭಾರತಕ್ಕೆ ಆಗಬಹುದಾದ ಅನಾನುಕೂಲಗಳು ನಿಜಕ್ಕೂ ಆತಂಕ ಹುಟ್ಟಿಸುತ್ತವೆ ಎಂದು ‘ಫೋರ್ಸ್’ ಮಿಲಿಟರಿ ಸಂಬಂಧಿತ ನಿಯತಕಾಲಿಕದ ಸಂಪಾದಕ ಪ್ರವೀಣ್ ಸಹಾನಿ ಹೇಳುತ್ತಾರೆ.

ಈ ಒಪ್ಪಂದದ ಮೂಲಕ ಅಮೆರಿಕದ ಮಿಲಿಟರಿ ತಂತ್ರಜ್ಞಾನದ ನೆರವು ಪಡೆಯುವ ಅವಕಾಶ ಭಾರತಕ್ಕೆ ಸಿಕ್ಕಿದೆ ಎಂಬುದು ನಾಣ್ಯದ ಒಂದು ಬದಿಯಷ್ಟೇ. ಮತ್ತೊಂದು ಬದಿ ಎಂದರೆ; ಅದೇ ಹೊತ್ತಿಗೆ ಅಮೆರಿಕಕ್ಕೆ ಭಾರತದ ಸೇನಾ ಸಂಬಂಧಿತ ಸೈಬರ್ ವಿಭಾಗದಲ್ಲಿ ಕೈಯಾಡಿಸಲು ಮತ್ತು ಇಚ್ಛೆಪಟ್ಟಲ್ಲಿ, ಆ ಸೈಬರ್ ವಲಯದ ನಿಯಂತ್ರಣದಲ್ಲಿರುವ ಇಡೀ ಮಿಲಿಟರಿ ತಂತ್ರಜ್ಞಾನವನ್ನು ತನಗೆ ಬೇಕಾದಂತೆ ತಿರುಚಲು ಮತ್ತು ಬಳಸಿಕೊಳ್ಳಲು ಕೂಡ ಮುಕ್ತ ಅವಕಾಶವಾಗುವಂತೆ ಇಡೀ ವ್ಯವಸ್ಥೆಯ ಕೀಲಿಕೈ ಅಮೆರಿಕದ ಪಾಲಾಗಲಿದೆ ಎಂದು ಅವರು ‘ದಿ ವೈರ್’ಗೆ ಬರೆದಿರುವ ವಿಶ್ಲೇಷಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸೇನಾ ಕಾರ್ಯಾಚರಣೆಯಲ್ಲಿ ಬಳಕೆಯಾಗುವ ತಂತ್ರಜ್ಞಾನ ಮತ್ತು ಸಾಫ್ಟವೇರ್, ಕಂಪ್ಯೂಟರ್ ಸಾಫ್ಟವೇರ್, ಎಂಬೆಡೆಡ್ ಪ್ರೊಸೆಸರ್ಸ್, ರೌಟರ್ಸ್, ವೈರ್ ಸಹಿತ ಮತ್ತು ವೈರ್ ರಹಿತ ಟ್ರಾನ್ಸ್ ಮಿಷನ್ಸ್, ಕಂಟ್ರೋಲರ್ಸ್ ಮತ್ತಿತರ ನಿರ್ಣಾಯಕ ಪರಿಕರಗಳು ಅಮೆರಿಕದ ಸಂಪರ್ಕಕ್ಕೂ ಬರಲಿವೆ. ಏಕೆಂದರೆ, ಒಪ್ಪಂದದ ಪ್ರಕಾರ ಅಮೆರಿಕದ ಮಿಲಿಟರಿ ಸೈಬರ್ ತಜ್ಞರು ಕ್ಯಾಮ್ ಕಾಸಾ ಸಿಸ್ಟಮ್ಸ್ ಬಳಕೆಯ ಅಧಿಕೃತ ಅವಕಾಶ ಹೊಂದಿರುವುದರಿಂದ, ಆ ಸಿಸ್ಟಮ್ಸ್ ಬಳಸುವ ಭಾರತದ ಮಿಲಿಟರಿ ಸೈಬರ್ ವಲಯದ ನಿಯಂತ್ರಣವೂ ಅವರ ಕೈ ಸೇರಲಿದೆ. ಆಗ ಅಮೆರಿಕ ಮನಸ್ಸು ಮಾಡಿದರೆ ಭಾರತದ ಕ್ಷಿಪಣಿ ಮತ್ತಿತರ ದಾಳಿ ಶಸ್ತ್ರಾಸ್ತ್ರಗಳ ಗುರಿ, ವೇಗ, ಕ್ರಮಿಸುವ ದೂರ ಮತ್ತಿತರ ನಿರ್ಣಾಯಕ ಮಾಹಿತಿಯನ್ನೊಳಗೊಂಡ ಸಾಫ್ಟ್ ವೇರ್ ಗಳನ್ನು ತಿದ್ದಲು, ಅಳಿಸಿಹಾಕಲು ಅಥವಾ ದೋಷಪೂರಿತಗೊಳಿಸಲು ಅವಕಾಶವಿದೆ. ಸೈಬರ್ ಸ್ಪೇಸ್ ಬಳಸಿ ದಾಳಿ ನಡೆಸುವ ತನ್ನ ಪರಿಣಾಮಕಾರಿ ನ್ಯಾನೋ ವೆಪನ್ಸ್ ಮೂಲಕ ಭಾರತೀಯ ಸೇನೆಯ ಭೌತಿಕ ರಚನೆಗಳನ್ನೂ ನಾಶ ಮಾಡಬಹುದು. 2010ರಲ್ಲಿ ಇಂತಹ ನ್ಯಾನೋ ಸೈಬರ್ ವೆಪನ್ ಬಳಸಿಯೇ ಇರಾನ್ ನ ಅಣ್ವಸ್ತ್ರ ನಾಶ ಪಡಿಸಲಾಗಿತ್ತು. ಅತ್ಯಂತ ರಹಸ್ಯವಾಗಿ ನಡೆದ ಆ ಕಾರ್ಯಾಚರಣೆಯನ್ನು ಯಾರು ನಡೆಸಿದ್ದು ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ಆದರೆ, ಅಮೆರಿಕವೇ ಅದನ್ನು ನಡೆಸಿದೆ ಎಂಬುದು ಬಹುತೇಕ ಜಾಗತಿಕ ನಂಬಿಕೆ. ಯುದ್ಧ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಬಳಿಕ ಇಂತಹ ನೂರಾರು ವಿಧ್ವಂಸಕ ತಂತ್ರಜ್ಞಾನಗಳಿವೆ. ಹಾಗಾಗಿ ಭಾರತಕ್ಕೆ ಇದು ಆತಂಕದ ಸಂಗತಿ ಎಂದು ಪ್ರವೀಣ್ ಹೇಳಿದ್ದಾರೆ.

ಸದ್ಯ ಭಾರತವನ್ನು ತನ್ನ ವ್ಯೂಹಾತ್ಮಕ ರಕ್ಷಣಾ ಪಾಲುದಾರ ಎಂದು ಅಮೆರಿಕ ಪರಿಗಣಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ತೀರಾ ಇಂತಹ ಕೃತ್ಯಗಳಿಗೆ ಅದು ಇಳಿಯಲಾರದು ಎಂಬ ನಂಬಿಕೆ ಇದೆ. ಆದರೆ, ಮನಸ್ಸು ಮಾಡಿದರೆ, ಅದಕ್ಕೆ ಅಂತಹ ವಿಧ್ವಂಸಕ ಕೃತ್ಯಗಳನ್ನು ಎಸಗಿ ಭಾರತವನ್ನು ಇನ್ನಷ್ಟು ದುರ್ಬಲಗೊಳಿಸುವ ಮತ್ತು ಆ ಮೂಲಕ ತನ್ನ ಮೇಲೆ ಇನ್ನಷ್ಟು ಅವಲಂಬಿಸಿರುವಂತೆ ಮಾಡುವ ತಾಕತ್ತು ಅದಕ್ಕಿದೆ ಎಂಬುದನ್ನು ಅಲ್ಲಗಳೆಯಲಾಗದು ಎಂದೂ ಅವರು ಹೇಳಿದ್ದಾರೆ.

ಆ ಹಿನ್ನೆಲೆಯಲ್ಲಿ; ಈಗಾಗಲೇ ಚೀನಾ ಮತ್ತು ಅಮೆರಿಕ ನಡುವಿನ ಜಾಗತಿಕ ಸೇನಾ ಮತ್ತು ವ್ಯಾಪಾರ ಪೈಪೋಟಿಯಲ್ಲಿ ದಾಳವಾಗಿರುವ ಭಾರತ, ಸಾಕಷ್ಟು ಬಿಕ್ಕಟ್ಟಿಗೆ ಸಿಲುಕಿದೆ. ಚೀನಾದ ಗಡಿ ಆಕ್ರಮಣಗಳ ಹಿಂದೆ ಕೂಡ, ನೆರೆಯ ದೇಶ ತನ್ನ ಬದಲಾಗಿ ಅಮೆರಿಕಕ್ಕೆ ಆಪ್ತವಾಗಿದೆ ಎಂಬ ಅಸಹನೆಯೇ ಹೆಚ್ಚು ಕೆಲಸ ಮಾಡುತ್ತಿದೆ ಎಂಬ ವಾದಗಳೂ ಇವೆ. ಇದೀಗ, ಗಡಿಯಲ್ಲಿ ಪ್ರಬಲ ನೆರೆ ರಾಷ್ಟ್ರ ಆಕ್ರಮಣ ನಡೆಸುತ್ತಿರುವ ಹೊತ್ತಲ್ಲಿ; ಭಾರತದ ಮಿಲಿಟರಿ ಡಿಜಿಟಲ್ ವ್ಯವಸ್ಥೆಯನ್ನು ಅಮೆರಿಕದ ಹಸ್ತಕ್ಷೇಪಕ್ಕೆ ತೆರೆಯುವ ಮೂಲಕ ಪ್ರಧಾನಿ ಮೋದಿಯವರ ಸರ್ಕಾರ ಮತ್ತೊಂದು ಅಪಾಯವನ್ನು ಮೈಮೇಲೆ ಎಳೆದುಕೊಂಡಿದೆ ಎಂದೂ ಹೇಳಲಾಗುತ್ತಿದೆ.

Tags: ಕ್ಯಾಮ್ ಕಾಸಾಚೀನಾ ಆಕ್ರಮಣಜೈಶಂಕರ್ಡೊಕ್ಲಾಮ್ಪ್ರಧಾನಿ ಮೋದಿಬಿಇಸಿಎಭಾರತ-ಅಮೆರಿಕ ಸೇನಾ ಒಪ್ಪಂದರಾಜನಾಥ್ ಸಿಂಗ್ಲಡಾಖ್ ಬಿಕ್ಕಟ್ಟು
Previous Post

ಕರ್ನಾಟಕ: 3146 ಹೊಸ ಕೋವಿಡ್‌ ಪ್ರಕರಣಗಳು ದಾಖಲು

Next Post

ಜಮ್ಮು ಕಾಶ್ಮೀರದಲ್ಲಿ 70 ವರ್ಷಗಳ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರ

Related Posts

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್
ಇದೀಗ

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

by ಪ್ರತಿಧ್ವನಿ
January 18, 2026
0

ಬೆಂಗಳೂರು : ರಾಜ್ಯದ ಅಬಕಾರಿ ಇಲಾಖೆಯಲ್ಲಿ ಕೇಳಿ ಬಂದಿರುವ ಲಂಚ ಹಗರಣದಲ್ಲಿ ಬೆಂಗಳೂರು ನಗರ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು...

Read moreDetails
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

January 18, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

January 17, 2026
ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

January 17, 2026
Next Post
ಜಮ್ಮು ಕಾಶ್ಮೀರದಲ್ಲಿ 70 ವರ್ಷಗಳ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರ

ಜಮ್ಮು ಕಾಶ್ಮೀರದಲ್ಲಿ 70 ವರ್ಷಗಳ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರ

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada