ರಾಮಮಂದಿರ ನಿರ್ಮಾಣವನ್ನು ವಿರೋಧಿಸುತ್ತಿದ್ದವರು, ಪ್ರಶ್ನಿಸುತ್ತಿದ್ದವರು ಇಂದು ಅದೇ ರಾಮಮಂದಿರವನ್ನು ಹೊಗಳುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
ಬಿಹಾರದಲ್ಲಿ ಎರಡನೇ ಹಂತದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ, ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ರಾಮಮಂದಿರವನ್ನು ಉಲ್ಲೇಖಿಸಿದ್ದಾರೆ. ಹಾಗೂ ಆರ್ಜೆಡಿಯ 15 ವರ್ಷಗಳ ಆಡಳಿತವನ್ನು ಜಂಗಲ್ ರಾಜ್ ಎಂದು ಕರೆದಿದ್ದಾರೆ.
Also Read: ರಾಮಮಂದಿರ ನಿರ್ಮಾಣಕ್ಕೆ ನರೇಂದ್ರ ಮೋದಿಯವರ ಯಾವುದೇ ಕೊಡುಗೆ ಇಲ್ಲ: ಸುಬ್ರಮಣಿಯನ್ ಸ್ವಾಮಿ
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಲಿದೆ. ಎನ್ಡಿಎ ಭರವಸೆ ನೀಡಿರುವುದನ್ನು ಅದು ಪೂರೈಸುತ್ತದೆ. ಆದರೆ ಯಾಕೆ ರಾಮಮಂದಿರ ನಿರ್ಮಾಣವಾಗಿಲ್ಲ ಎಂದು ಪ್ರಶ್ನಿಸುತ್ತಿದ್ದವರಿಗೆ ಈಗ ಟೀಕಿಸಲು ವಿಷಯಗಳೇ ಇಲ್ಲವಾಗಿದೆ. ಅವರು ರಾಮಮಂದಿರವನ್ನು ಹೊಗಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದು ಎನ್ಡಿಎ ಹಾಗೂ ಬಿಜೆಪಿಯ ಗುರುತು. ನಮ್ಮ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದ್ದಾರೆ.
Also Read: ರಾಮಮಂದಿರ ಶಿಲಾನ್ಯಾಸ: ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು
ದರ್ಭಾಂಗದಲ್ಲಿ ಮಾತನಾಡಿದ ಪ್ರಧಾನಿ, ದರ್ಭಾಂಗಕ್ಕೆ ಸೇರಿದ ಮಿಥಿಲಾ ಹಾಗೂ ಸೀತಾಗೆ ಇರುವ ಸಂಬಂಧವನ್ನು ಉಲ್ಲೇಖಿಸಿದ್ದಾರೆ.
ಹದಿನೈದು ವರ್ಷಗಳಕಾಲ ಬಿಹಾರವನ್ನು ಆಳಿದ ಆರ್ಜೆಡಿ ಬಿಹಾರವನ್ನು ಲೂಠಿ ಮಾಡಿತ್ತು, ಆರ್ಜೆಡಿ ಕಾಲದಲ್ಲಿ ಬಿಹಾರ ಜಂಗಲ್ ರಾಜ್ಯವಾಗಿತ್ತು, ಅವರ ಆಡಳಿತದಲ್ಲಿ ಅಪರಾಧ ಪ್ರಮಾಣ ಹೆಚ್ಚಿತ್ತು. ಆದರೆ ನಿತೀಶ್ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ಬಿಹಾರದ ಆರ್ಥಿಕ ಪ್ರಗತಿಗೆ ಸಾಕಷ್ಟು ಶ್ರಮಿಸಿದ್ದಾರೆ. ಬಿಹಾರದ ಲೂಠಿಗೋರರನ್ನು ಮತ್ತೊಮ್ಮ ಸೋಲಿಸುವ ಮೂಲಕ ನಿತೀಶ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಕರೋನಾ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಮತದಾನದ ಹಕ್ಕು ಚಲಾಯಿಸುವಂತೆ ಪ್ರಧಾನಿ ಕೇಳಿಕೊಂಡಿದ್ದಾರೆ.