ಹಾಥ್ರಾಸ್ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಬಿಐ ವಿಚಾರಣೆಯನ್ನು ಆರಂಭಿಸಿದೆ. ಮಂಗಳವಾರ ಅಪರಾಹ್ನ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು, ಸ್ಥಳದಿಂದ ಕೆಲವು ಸಾಕ್ಷ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸದರ್ಭದಲ್ಲಿ ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಅಥವಾ ಸಂತ್ರಸ್ಥೆಯ ಕುಟುಂಬದವರ ಅನುಮತಿಯನ್ನು ಪಡೆಯುವ ಗೋಜಿಗೆ ಅಧಿಕಾರಿಗಳು ಹೋಗಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸದಯಕ್ಕೆ ಸಂತ್ರಸ್ಥೆಯ ಹಳ್ಳಿಯಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಿಬಿಐ ಅಧಿಕಾರಿಗಳ ವಿಚಾರಣೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.
Also Read: ಹಾಥ್ರಾಸ್ ಪ್ರಕರಣದ ಆರೋಪಿಗಳಿಗೆ ಬೆಂಬಲ ನೀಡಿ ಸಭೆ ಕರೆದ ಮೇಲ್ಜಾತಿಯ ಬಿಜೆಪಿ ನಾಯಕ
ವಿಚಾರಣೆಯ ಕಾರಣವನ್ನು ನೀಡಿ ಸಂತ್ರಸ್ಥೆಯ ಅಣ್ಣನನ್ನು ಸಿಬಿಐ ಅಧಿಕಾರಿಗಳು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ ಎಂದು ವರದಿಯಾಗಿದೆ. ಸೆಪ್ಟೆಂಬರ್‌ರಂದು ನಡೆದ ಘಟನೆಗಳ ಕುರಿತಾಗಿ ನೀಡಿದ ಹೇಳಿಕೆಯಲ್ಲಿ ದೋಷ ಇರುವ ಕಾರಣಕ್ಕಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಸಂತ್ರಸ್ಥೆಯ ಅಣ್ಣನ ಹೇಳಿಕೆಯನ್ನು ಉತ್ತರ ಪ್ರದೇಶ ಪೊಲೀಸರಿಗೆ ನೀಡಿರುವ ಹೇಳಿಕೆಯೊಂದಿಗೆ ತಾಳೆ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Also Read: ಹಾಥ್ರಾಸ್: ಅತ್ಯಾಚಾರವೇ ನಡೆದಿಲ್ಲ ಎಂದ ಪೊಲೀಸರು









