ಯುನೈಟೆಡ್ ಕಿಂಗಡಮ್‌ನ ಸಂಸದರು, ಕಲಾವಿದರು, ಭಾರತೀಯ ಮೂಲದವರು ಸೇರಿದಂತೆ ಒಟ್ಟು 200 ಜನರು ಬಹಿರಂಗವಾಗಿ ಪತ್ರ ಬರೆದು, ಭಾರತದಲ್ಲಿ ನಡೆಯುತ್ತಿರುವ ʼಸರ್ವಾಧಿಕಾರಿ ಹಾಗೂ ಬಹುಸಂಖ್ಯಾತ ಓಲೈಕೆ ರಾಜಕಾರಣʼವನ್ನು ಖಂಡಿಸಿದ್ದಾರೆ. ಇವರಲ್ಲಿ 50 ಜನರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿವಿಧ ಕ್ಷೇತ್ರಗಳ ತಜ್ಞರು ಎಂಬುದು ಗಮನಾರ್ಹ ಅಂಶ.
Also Read: ಇಂದಿರಾ ಗಾಂಧಿಯದ್ದು ಮುಕ್ತ ಸರ್ವಾಧಿಕಾರ, ಇಂದು ಇರುವುದು ಮುಖವಾಡ ಧರಿಸಿರುವ ಸರ್ವಾಧಿಕಾರ
“ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಚಿತ್ರಣ ಎಂದಿಗೂ ಇಷ್ಟು ಕೆಟ್ಟದಾಗಿರಲಿಲ್ಲ” ಎಂದು ಪತ್ರದಲ್ಲಿ ಹೇಳಿಲಾಗಿದೆ. ಪತ್ರದ ಸಂಪೂರ್ಣ ಸಾರಾಂಶ ಈ ಕೆಳಗಿನಂತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಸಂವಿಧಾನಾತ್ಮಕವಾದ ಭಿನ್ನಮತವನ್ನು ಹತ್ತಿಕ್ಕುವ ಪ್ರಯತ್ನದ ವಿರುದ್ದ ನಾವು ದನಿ ಎತ್ತುತ್ತಿದ್ದೇವೆ. ವಿದ್ಯಾರ್ಥಿ ಸಂಘಟನೆಗಳನ್ನು, ಮಹಿಳಾ ಹೋರಾಟಗಾರರನ್ನು, ಮಾನವ ಹಕ್ಕುಗಳ ಹೋರಾಟಗಾರರನ್ನು ಮತ್ತು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡವರ ವಿರುದ್ದ ದಮನಕಾರಿ ನೀತಿ ಅನುಸರಿಸಿರುವುದು ಮೋದಿಯ ಆಡಳಿತದಲ್ಲಿ ನಡೆದಿದೆ.
Also Read: ಲಾಕ್ ಡೌನ್ ಕಾರ್ಯತಂತ್ರದ ವೈಫಲ್ಯ ಪ್ರಶ್ನಿಸಿದರೆ ದೇಶದ ವಿರೋಧಿ ಟೀಕೆ ಹೇಗೆ?
ಯುಎಪಿಎಯಂತಹ ಕರಾಳ ಕಾನೂನುಗಳ ಮುಖಾಂತರ ವಿನಾಕಾರಣ ಹಲವರನ್ನು ಬಂಧಿಸಲಾಗಿದೆ. ಸಾಂವಿಧಾನಿಕವಾಗಿ ಮತ್ತು ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಗಲಭೆಗಳ ರೂಪವನ್ನೂ ನೀಡಲಾಗಿದೆ.
ಭಿನ್ನಮತವನ್ನು ಅಪರಾಧೀಕರಣಗೊಳಿಸುವ ಹುನ್ನಾರ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕೋವಿಡ್ ಲಾಕ್‌ಡೌನ್‌ನ ಮರೆಯಲ್ಲಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಭಾರತದಲ್ಲಿ ಕರೋನಾ ಸೋಂಕನ್ನು ನಿಯಂತ್ರಿಸಲು ವಿಫಲರಾಗಿದ್ದಲ್ಲದೇ, ಸರ್ಕಾರದ ವಿರುದ್ದ ಪ್ರತಿಭಟಿಸಿದವರನ್ನು ಯಾವುದೇ ಶುಚಿತ್ವವಿಲ್ಲದ ಜೈಲುಗಳಿಗೆ ತಳ್ಳಿ ಸೋಂಕಿಗೆ ಒಳಗಾಗುವಂತೆ ಮಾಡಿದ್ದಾರೆ.

ಇಷ್ಟು ಮಾತ್ರವಲ್ಲದೇ, ಬಿಜೆಪಿ ನಾಯಕರ ಪ್ರಚೋದನಕಾರಿ ಭಾಷಣಗಳು, ಪ್ರತಿಭಟನಾಕಾರರ ವಿರುದ್ದದ ಹಲ್ಲೆಗಳಿಗೆ ಕಾರಣವಾದವು. ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಭೀಕರ ಗಲಭೆಗಳಲ್ಲಿ ಮುಸ್ಲಿಂರ ವಿರುದ್ದ ದೌರ್ಜನ್ಯ ನಡೆಸುವ ಸಲುವಾಗಿ ಪೊಲೀಸ್ ಇಲಾಖೆಯನ್ನು ಕೂಡಾ ಬಳಸಿಕೊಳ್ಳಲಾಗಿತ್ತು.
Also Read: ಜೆಎನ್‌ಯು ಘಟನೆ ನಾಝಿವಾದದ ಆರಂಭಿಕ ಲಕ್ಷಣ!
ನರೇಂದ್ರ ಮೋದಿಯವರ ಆಡಳಿತವು, ವ್ಯವಸ್ಥಿತವಾಗಿ ಭಾರತದ ಪ್ರಜಾಪ್ರಭುತ್ವನ್ನು ನಾಶ ಮಾಡುತ್ತಿದೆ. ಬದಲಾಗಿ, ದೇಶದಲ್ಲಿ ಸರ್ವಾಧಿಕಾರತ್ವ ಹಾಗೂ ಬಹುಸಂಖ್ಯಾತರನ್ನು ಓಲೈಸುವ ರಾಜಕಾರಣವನ್ನು ಮಾಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಚಿತ್ರಣ ಇಷ್ಟೊಂದು ಕೆಟ್ಟದಾಗಿ ಎಂದೂ ಇರಲಿಲ್ಲ.
ಇಂತಹ ವಿಷಕಾರಿ ಪ್ರಯತ್ನವನ್ನು ವಿರೋಧಿಸಿ ಹೋರಾಡುತ್ತಿರುವ ಎಲ್ಲರಿಗೂ ನಾವು ಬೆಂಬಲ ನೀಡುತ್ತೇವೆ. ಇದರೊಂದಿಗೆ ವಿನಾಕಾರಣ ಬಂಧನದಲ್ಲಿರುವ ಎಲ್ಲಾ ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸಬೇಕು.
Also Read: ಜೆಎನ್‌ಯು ನಾಶಕ್ಕೆ ಅಂತಿಮ ಮೊಳೆ ಹೊಡೆಯುತ್ತಿರುವ ಸರ್ಕಾರ
ಸಹಿ ಹಾಕಿದ ಪ್ರಮುಖ ವ್ಯಕ್ತಿಗಳು ಯಾರು?
ಬ್ರಿಟನ್‌ನ ಲೇಬರ್ ಪಾರ್ಟಿಯ ಜೆರೆಮಿ ಕೋರ್ಬೆನ್ ಮತ್ತು ಜೋನ್ ಮೆಕ್‌ಡೋನೆಲ್, ಗ್ರೀನ್ ಪಾರ್ಟಿಯ ಕ್ಯಾರೊಲಿನ್ ಲುಕಾಸ್, ಸ್ಕಾಟಿಷ್ ನ್ಯಾಷನಲ್ ಪಾರ್ಟಿಯ ಸದಸ್ಯ ಹಾಗೂ ಮಾನವ ಹಕ್ಕುಗಳ ಆಯೋಗದ ಅಂತರಾಷ್ಟ್ರೀಯ ವಕ್ತಾರರಾದ ಬ್ರೆಂಡನ್ ಓʼಹಾರಾ, ಭಾರತೀಯ ಮೂಲದ ಬ್ರಿಟನ್ ಸಂಸದ ಶಮಿ ಚಕ್ರವರ್ತಿ ಅವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
Also Read: CAA ವಿರುದ್ಧದ ಹೋರಾಟ ಹತ್ತಿಕ್ಕಲು ಮುಂದಾಗಿ ಬೆತ್ತಲಾಗುತ್ತಿರುವ BJP ನಾಯಕತ್ವ
ಭಾರತದಲ್ಲಿ ನಡೆಯುತ್ತಿರುವ ಸರ್ವಾಧಿಕಾರತ್ವದ ವಿರುದ್ದ ಹೋರಾಡುತ್ತಿರುವ ಕಾರ್ಯಕರ್ತರಿಗೆ ತಮ್ಮ ಬಹಿರಂಗ ಬೆಂಬಲವನ್ನು ಕೂಡಾ ಘೋಷಿಸಿದ್ದಾರೆ. ಆಸ್ಕರ್ ಪ್ರಶಸ್ತಿ ಗಳಿಸಿದ್ದ ಸ್ಲಂಡಾಗ್ ಮಿಲಿಯನೇರ್ ಚಿತ್ರದ ನಿರ್ದೇಶಕ ಡ್ಯಾನಿ ಬಾಯ್ಲ್, ಲೇಖಕರಾದ ಹ್ಯಾರಿ ಕುಂಜ್ರು, ಕಲಾವಿದರಾದ ಮ್ಯಾಕ್ಸಿನ್ ಪೀಕ್ ಮುಂತಾದವರ ಸಹಿಯೂ ಇದರಲ್ಲಿ ಸೇರಿದೆ.
ಭಾರತೀಯ ಮೂಲದ ಪತ್ರಕರ್ತರಾದ ಆಶ್ ಸರ್ಕಾರ್, ಆಂಜೆಲಾ ಸೈನಿ, ಲೇಖಕರಾದ ನಿಕೇಶ್ ಶುಕ್ಲಾ, ಪ್ರೀತಿ ತನೇಜಾ, ಸಂದೀಪ್ ಪರ್ಮಾರ್, ಸಂಗೀತಕಾರರಾದ ಕಪಿಲ್ ಶೇಷಸಾಯಿ, ಸಾರಥಿ ಕೊರ್ವಾರ್ ಸೇರಿದಂತೆ ಇನ್ನೂ ಅನೇಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಕೃಪೆ: ದಿ ವೈರ್