ಉತ್ತರ ಪ್ರದೇಶದ ಹಾಥ್ರಾಸ್‌ನಲ್ಲಿ ನಡೆದ ಅಮಾನವೀಯ ಘಟನೆಯನ್ನು ಖಂಡಿಸಿ ಭಾರತೀಯ ಯುವ ಕಾಂಗ್ರೆಸ್ ಸತ್ಯಾಗ್ರಹ ನಡೆಸಿದೆ. ಮಹಾತ್ಮಾ ಗಾಂಧಿ ವೇಷಧಾರಿಗಳಾಗಿ ಮೊಂಬತ್ತಿ ಬೆಳಗಿಸಿ ಜಂತರ್ ಮಂತರ್‌ವರೆಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ ವಿ ಈ ಸಂದರ್ಭದಲ್ಲಿ ಮಾತನಾಡಿ, ಮಹಾತ್ಮ ಗಾಂಧಿಯ ತತ್ವ ಆದರ್ಶಗಳನ್ನು ಮತ್ತೆ ನೆನಪಿಸುವ ಸಲುವಾಗಿ ನಾವು ಇಲ್ಲಿ ಸೇರಿದ್ದೇವೆ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಹಾಥ್ರಾಸ್ ಸಂತ್ರಸ್ಥೆಗೆ ನ್ಯಾಯ ಸಿಗುವವರೆಗೆ ಹೋರಾಡಲಾಗುವುದು ಎಂದು ಹೇಳಿದರು.
ದೆಹಲಿಯ ಇಂಡಿಯಾಗೇಟ್‌ನಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದರಿಂದ ಜಂತರ್ ಮಂತರ್‌ನಲ್ಲಿ ಸತ್ಯಾಗ್ರಹವನ್ನು ನಡೆಸಲಾಯಿತು. ನೂರಕ್ಕಿಂತ ಹೆಚ್ಚು ಜನರು ಸೇರುವ ಅವಕಾಶವನ್ನು ಪೊಲೀಸರು ನೀಡಿರಲಿಲ್ಲ.