ಕೋವಿಡ್ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ SSLC ಪರೀಕ್ಷೆಗಳನ್ನು ಹಲವು ವಿರೋಧ, ವಿವಾದಗಳ ನಡುವೆಯೂ ಕರೋನಾ ಸಮಯದಲ್ಲೇ ನಡೆಸಲಾಗಿತ್ತು. ಪರೀಕ್ಷೆಗಳನ್ನು ನಡೆಸಲು ಸ್ವತಃ ಶಿಕ್ಷಣ ಸಚಿವರು ವಿಶೇಷ ಮುತುವರ್ಜಿ ವಹಿಸಿದ್ದರು.
SSLC ಪರೀಕ್ಷೆಗಳ ಫಲಿತಾಂಶದ ದಿನಾಂಕ ನಿಗದಿಯೆಂದು ಹಲವು ಮಾಧ್ಯಮಗಳು ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿದ್ದವು. ಬಳಿಕ ಶಿಕ್ಷಣ ಸಚಿವರು ಗೊಂದಲಕ್ಕೆ ತೆರೆ ಎಳೆದು ಫಲಿತಾಂಶ ಪ್ರಕಟ ದಿನ ನಿಗದಿಯಾಗಿಲ್ಲ ಎಂದು ಹೇಳಿದ್ದರು.
ಇಂದು ಸುರೇಶ್ ಕುಮಾರ್ ಫೇಸ್ಬುಕ್ ಪೋಸ್ಟ್ ಮೂಲಕ SSLC ಪರೀಕ್ಷೆಗಳ ಫಲಿತಾಂಶವನ್ನು ಸೋಮವಾರ 10-8-2020 ರಂದು ಮಧ್ಯಾಹ್ನ 3.00 ಗಂಟೆಗೆ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.