ನಾಗರಿಕ ಸೇವೆಗಳ ಪರೀಕ್ಷೆ 2019 ಫಲಿತಾಂಶಗಳನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗ (UPSC) ಪ್ರಕಟಿಸಿದೆ. ಪ್ರದೀಪ್ ಸಿಂಗ್ ಎಂಬವರು ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಮಹಿಳಾ ಅಭ್ಯರ್ಥಿಗಳಲ್ಲಿ ಪ್ರತಿಭಾ ವರ್ಮಾ ಅಗ್ರಸ್ಥಾನದಲ್ಲಿದ್ದಾರೆ.
ಪರೀಕ್ಷೆಯ 2019 ರ ಆವೃತ್ತಿಯ ಮೂಲಕ ಒಟ್ಟು 829 ಅಭ್ಯರ್ಥಿಗಳನ್ನು ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆ ಮಾಡಲಾಗಿದೆ.
2019 ರ ಸೆಪ್ಟೆಂಬರ್ನಲ್ಲಿ ನಡೆದ ನಾಗರಿಕ ಸೇವೆಗಳ ಪರೀಕ್ಷೆಯ ಲಿಖಿತ ಭಾಗ ಮತ್ತು 2019 ರ ಫೆಬ್ರವರಿ-ಆಗಸ್ಟ್ನಲ್ಲಿ ನಡೆದ ಸಂದರ್ಶನಗಳ ಫಲಿತಾಂಶದ ಆಧಾರದ ಮೇಲೆ ಯುಪಿಎಸ್ಸಿ ಆಯ್ದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಘೋಷಿಸಿದೆ.
ಕರ್ನಾಟಕದ ಜಯದೇವ್ 5 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಇನ್ನು ಸಂಪೂರ್ಣ ಪರೀಕ್ಷೆಯನ್ನು ಕನ್ನಡದಲ್ಲೇ ಉತ್ತರಿಸಿರುವ ದರ್ಶನ್ ಕುಮಾರ್ H G ಎಂಬವರು 594 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ


ಭಾರತೀಯ ಆಡಳಿತ ಸೇವೆ (Indian Administrative Service- IAS), ಭಾರತೀಯ ವಿದೇಶಿ ಸೇವೆ(Indian Administrative Service- IFS), ಭಾರತೀಯ ಪೊಲೀಸ್ ಸೇವೆ (Indian Police Service- IPS) ಮತ್ತು ಇತರ ಕೇಂದ್ರ ಸೇವೆಗಳಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಯುಪಿಎಸ್ಸಿ ಪ್ರತಿವರ್ಷ ನಾಗರಿಕ ಸೇವೆಗಳ ಪರೀಕ್ಷೆಯನ್ನು ನಡೆಸುತ್ತದೆ.
2020ರ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಮೇ 31 ರಂದು ನಡೆಸಲು ನಿರ್ಧರಿಸಲಾಗಿತ್ತು. ಕರೋನ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಅಕ್ಟೋಬರ್ 4 ಕ್ಕೆ ಮರು ನಿಗದಿಪಡಿಸಲಾಗಿದೆ.






