• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಮೊದಲ ಬಾಲ್ ಎದುರಿಸಲು ಕ್ರಿಕೆಟ್ ದೇವರಿಗೆ ಭಯವಿತ್ತಾ..?

by
July 7, 2020
in Uncategorized
0
ಮೊದಲ ಬಾಲ್ ಎದುರಿಸಲು ಕ್ರಿಕೆಟ್ ದೇವರಿಗೆ ಭಯವಿತ್ತಾ..?
Share on WhatsAppShare on FacebookShare on Telegram

ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಲೋಕ ಕಂಡ ದಿಗ್ಗಜ ಆಟಗಾರರು. ಈ ಇಬ್ಬರು ಆಟಗಾರರು ಬಹುತೇಕ ಪಂದ್ಯಗಳಲ್ಲಿ ಆರಂಭಿಕ ಆಟಗಾರರಾಗಿ ಅಂಗಳಕ್ಕೆ ಇಳಿದು ಭಾರತೀಯರು ಸೇರಿದಂತೆ ವಿಶ್ವದ ಕ್ರಿಕೆಟ್ ಪ್ರೇಮಿಗಳನ್ನು ಮನರಂಜಿಸಿದ್ರು ಎಂದರೆ ಸುಳ್ಳಲ್ಲ. ಬಂಗಾಳದ ಹುಲಿ ಸೌರವ್ ಗಂಗೂಲಿ ಎಡಗೈ ಬ್ಯಾಟ್ಸ್ಮನ್ ಆಗಿದ್ದು, ಮುಂಬೈಕರ್ ಸಚಿನ್ ತೆಂಡೂಲ್ಕರ್ ಬಲಗೈ ಬ್ಯಾಟ್ಸ್ಮನ್ಗಳಾಗಿ ಅಂಗಳದ ಎಲ್ಲಾ ದಿಕ್ಕುಗಳಿಗೂ ಚೆಂಡನ್ನು ಅಟ್ಟುವ ಮೂಲಕ ಮನರಂಜನೆಯ ಮಹಾಪೂರ ಉಣಿಸಿದ್ರು. ಇದೀಗ ಕ್ರಿಕೆಟ್ ದೇವರ ಮಹಾನ್ ಸೀಕ್ರೆಟ್ ಒಂದು ಬಯಲಾಗಿದೆ. ಆರಂಭಿಕ ಆಟಗಾರನಾಗಿ ಬಂದರೂ ಸಚಿನ್ ತೆಂಡೂಲ್ಕರ್ ಸ್ಕ್ರೈಕ್ ಮಾಡಲು ಮುಂದಾಗುತ್ತಿರಲಿಲ್ಲ. ನಾನ್ಸ್ಟ್ರೈಕ್ ಆಟಗಾರನಾಗಿ ನಿಲ್ಲುತ್ತಿದ್ದರು. ಇದಕ್ಕೆ ಕಾರಣ ಏನು ಎನ್ನುವುದನ್ನು ಬಂಗಾಳದ ಹುಲಿ ಸೌರವ್ ಗಂಗೂಲಿ ಬಿಚ್ಚಿಟ್ಟಿದ್ದಾರೆ.

ADVERTISEMENT

ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ ಸಾಕಷ್ಟು ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. 176 ಇನ್ನಿಂಗ್ಸ್ ಆಡಿರುವ ಬಂಗಾಳದ ಹುಲಿ ಸೌರವ್ ಹಾಗೂ ಕ್ರಿಕೆಟ್ ದೇವರು ಸಚಿನ್ ಒಟ್ಟು 8227 ರನ್ ಕಲೆ ಹಾಕಿದ್ದಾರೆ. ಸಚಿನ್ ತಂಡೋಲ್ಕರ್ ಒಟ್ಟು 340 ಏಕದಿನ ಪಂದ್ಯಗಳನ್ನು ಆಡಿದ್ದು ಅದರಲ್ಲಿ ಮೊದಲ ಬಾಲ್ ಎದುರಿಸಿದ್ದು ಕೇವಲ 47 ಬಾರಿ ಮಾತ್ರ. ಇನ್ನುಳಿದ ಪಂದ್ಯಗಳಲ್ಲಿ ಮೊದಲ ಬಾಲ್ ಎದುರಿಸುವ ಬದಲು ನಾನ್ ಸ್ಟ್ರೈಕ್ನಲ್ಲಿ ಆಡಲು ಮನಸ್ಸು ಮಾಡುತ್ತಿದ್ದರು. ಈ ಬಗ್ಗೆ ಸೌರವ್ ಗಂಗೂಲಿ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಜೊತೆ ಸಂಭಾಷಣೆ ನಡೆಸುತ್ತ ಈ ಸೀಕ್ರೆಟ್ ಬಯಲು ಮಾಡಿದ್ದಾರೆ. ಗಂಗೂಲಿ ಬಿಚ್ಚಿಟ್ಟಿರುವ ಈ ಮಾಹಿತಿ ಬಿಸಿಸಿಐನ ಟ್ವಿಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಆರಂಭಿಕ ಆಟಗಾರರ ಜೊತೆ ಮಯಾಂಕ್ (‘Open Nets with Mayank’) ಕಾರ್ಯಕ್ರಮದಲ್ಲಿ ಮಾತನಾಡಿದ ಸೌರವ್ ಗಂಗೂಲಿ, 1996 ರಿಂದ 2007ರ ನಡುವೆ ಯಶಸ್ವಿ ಜೋಡಿ ಎನಿಸಿಕೊಂಡ ಹಲವಾರು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಸ್ವತಃ ಸೌರವ್ ಗಂಗೂಲಿ ನಾಯಕತ್ವದಲ್ಲಿ 136 ಪಂದ್ಯಗಳಲ್ಲಿ ಆರಂಭಿಕ ಆಟಗಾರರಾಗಿ ಅಂಗಳಕ್ಕೆ ಇಳಿದಿದ್ದು, ಸರಾಸರಿ 49.32 ರಂತೆ 6,609 ರನ್ಗಳನ್ನು ಬಾರಿಸಿದ್ದಾರೆ. ಈ ಯಶಸ್ವಿ ಜೋಡಿ ತನ್ನೊಳಗೆ ಸಾಕಷ್ಟು ರಹಸ್ಯಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲಿ ಒಂದನ್ನು ಸೌರವ್‌ ಗಂಗೂಲಿ ಬಹಿರಂಗ ಮಾಡಿದ್ದಾರೆ. ಸಚಿನ್‌ ತೆಂಡೂಲ್ಕರ್‌ ಬಹುತೇಕ ಸಮಯ ನಿಮ್ಮನ್ನು ಮೊದಲ ಬಾಲ್‌ ಆಡಲು ಕಳುಹಿಸುತ್ತಿದ್ದರಂತೆ ನಿಜನಾ..? ಎನ್ನುವ ಪ್ರಶ್ನೆಗೆ ಬಿಸಿಸಿಐ ಅಧ್ಯಕ್ಷ ಉತ್ತರ ಎಸ್‌ ಎನ್ನುವುದಾಗಿದೆ.

ಒಂದೇ ಪ್ರಶ್ನೆಗೆ ಎರಡು ಉತ್ತರ ಕೊಟ್ಟಿರುವ ಸೌರವ್‌ ಗಂಗೂಲಿ, ಯಾವಾಗಲೂ ಸಚಿನ್‌ ಅದನ್ನೇ ಮಾಡುತ್ತಿದ್ದರು. ನೀನು ಕೆಲವೊಮ್ಮೆ ಯಾಕೆ ಮೊದಲ ಬಾಲ್‌ ಎದುರಿಸಬಾರದು ಎನ್ನುತ್ತಿದೆ. ಆದರೆ ಆತ ಒಪ್ಪುತ್ತಿರಲಿಲ್ಲ. ಸಚಿನ್‌ ಯಾವಾಗ ಉತ್ತಮ ಫಾರ್ಮ್‌ನಲ್ಲಿ ಇರ್ತಾರೋ ಆಗ ನಾನು ನಾನ್‌ಸ್ಟ್ರೈಕ್‌ನಲ್ಲಿ ಇರ್ತೇನೆ ಎನ್ನುತ್ತಿದ್ದರು. ಅದೇ ರೀತಿ ಫಾರ್ಮ್‌ನಲ್ಲಿ ಇಲ್ಲದಿದ್ದಾಗಲೂ ಒತ್ತಡ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ನಾನ್‌ಸ್ಟ್ರೈಕ್‌ನಲ್ಲಿ ಆಡಲು ಬಯಸುತ್ತಿದ್ದರು ಎಂದಿದ್ದಾರೆ.

ಸದ್ಯಕ್ಕೆ ಬಿಸಿಸಿಐ ಟ್ವಿಟರ್‌ ಪೇಜ್‌ನಲ್ಲಿ ಗಂಗೂಲಿ ಅವರ ಸಂದರ್ಶನದ ಪುಟ್ಟ ತುಣುಕೊಂದನ್ನು ಹಾಕಿದ್ದು, ಶೀಘ್ರದಲ್ಲೇ ಸಂಪೂರ್ಣ ಸಂದರ್ಶನ ಬರಲಿದೆ ಎಂದಿದ್ದಾರೆ. ಆದರೆ ಸಚಿನ್‌ ಯಾವುದೇ ಕಾರಣಕ್ಕೂ ಪಂದ್ಯದ ಮೊದಲ ಬಾಲ್‌ ಎದುರಿಸಲು ಸಿದ್ಧರಿರಲಿಲ್ಲ ಎನ್ನುವುದನ್ನು ಜಗತ್ತಿನ ಎದುರು ಸೌರವ್‌ ಗಂಗೂಲಿ ಬಿಚ್ಚಿಟ್ಟಿದ್ದಾರೆ. ಒಂದೆರಡು ಬಾರಿ ಸಚಿನ್‌ಗಿಂತಾ ಮುಂಚೆ ನಾನು ಬಂದು ನಾನ್‌ಸ್ಕ್ರೈಕ್‌ ಕಡೆ ನಿಂತಿರುವುದೂ ಇದೆ ಎಂದಿದ್ದಾರೆ. ಆದರೆ ಈ ಮಾತನ್ನು ಕ್ರಿಕೆಟ್‌ ದೇವರು ಎಂದೇ ಕ್ರಿಕೆಟ್‌ ಪ್ರೇಮಿಗಳ ಮನಸ್ಸಲ್ಲಿ ಉಳಿದುಕೊಂಡಿರುವ ಸಚಿನ್‌ ತೆಂಡೂಲ್ಕರ್‌ ಒಪ್ಪಿಕೊಳ್ಳಬೇಕಿದೆ. ಅಥವಾ ತಿರಸ್ಕರಿಸಬೇಕಿದೆ.

ಟೆಸ್ಟ್‌ನಲ್ಲಿ 15,921 ರನ್‌ ಗಳಿಸಿರುವ ಮಾಸ್ಟರ್‌ ಬ್ಲಾಸ್ಟರ್‌ 51 ಸೆಂಚ್ಯೂರಿ ದಾಖಲಿಸಿದ್ದಾರೆ. ಏಕದಿನ ಪಂದ್ಯದಲ್ಲಿ 18,426 ಬಾರಿಸಿರುವ ಸಚಿನ್‌ ತೆಂಡೂಲ್ಕರ್‌, 49 ಶತಕದ ದಾಖಲೆಯನ್ನು ಬುಟ್ಟಿಯಲ್ಲಿಟ್ಟುಕೊಂಡಿದ್ದಾರೆ. 24 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಆಟವಾಡಿರುವ ಮುಂಬೈಕರ್‌ ಸಚಿನ್‌ ತೆಂಡೂಲ್ಕರ್‌, 6 ವಿಶ್ವಕಪ್‌ ಸರಣಿಯಲ್ಲಿ ಭಾರತಕ್ಕೆ ಶಕ್ತಿಯಾಗಿದ್ದವರು. 2011ರ ವಿಶ್ವಕಪ್‌ ಗೆಲುವಿನೊಂದಿಗೆ ವಿದಾಯ ಹೇಳಿದ್ದಾರೆ. ಆದರೆ ಸಚಿನ್‌ ತೆಂಡೂಲ್ಕರ್‌, ಮೊದಲ ಬಾಲು ಎದುರಿಸಲು ಭಯ ಪಡ್ತಿದ್ರಾ..? ಎನ್ನುವುದಕ್ಕೆ ಸಚಿನ್‌ ಬಗ್ಗೆ ಗಂಗೂಲಿ ಹೇಳಿದ್ದಾರೆ. ಆದರೆ ಅದು ಸತ್ಯವೇ..? ಎನ್ನುವ ಬಗ್ಗೆ ಅವರೇ ಸ್ಪಷ್ಟನೆ ಕೊಡಲಬೇಕಿದೆ.

Tags: ಕ್ರಿಕೆಟ್
Previous Post

ರಾಘವೇಂದ್ರ ಕೋ. ಆಪರೇಟ್‌ ಬ್ಯಾಂಕ್ ‌ಹಗರಣ– ಸಿಇಒ ಆತ್ಮಹತ್ಯೆ..!

Next Post

ರಷ್ಯಾ ಚುನಾವಣೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ಸರ್ವಾಧಿಕಾರಿ ಮಾದರಿ

Related Posts

ಆಯುರ್ವೇದಿಕ್ ಚಿಕಿತ್ಸೆ ಟೆಂಟ್: 40 ಲಕ್ಷ ವಂಚಿಸಿದ್ದ ನಕಲಿ ಸ್ವಾಮೀಜಿ ಬಂಧನ
Uncategorized

ಆಯುರ್ವೇದಿಕ್ ಚಿಕಿತ್ಸೆ ಟೆಂಟ್: 40 ಲಕ್ಷ ವಂಚಿಸಿದ್ದ ನಕಲಿ ಸ್ವಾಮೀಜಿ ಬಂಧನ

by ಪ್ರತಿಧ್ವನಿ
December 10, 2025
0

ಬೆಂಗಳೂರು: ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದು ಐಟಿ ಕಂಪನಿಯ ಉದ್ಯೋಗಿಗೆ ಬರೋಬ್ಬರಿ 40 ಲಕ್ಷ ವಂಚಿಸಿದ್ದ ನಕಲಿ ಸ್ವಾಮೀಜಿ ವಿನಯ್ ಗುರೂಜಿ ಸೇರಿ ಇಬ್ಬರನ್ನ ಜ್ಞಾನಭಾರತಿ...

Read moreDetails
Belagavi Politics: ಲಕ್ಷ್ಮಣ್‌ ಸವದಿಗೆ ತೀವ್ರ ನಿರಾಸೆ ತಂದಿಟ್ಟ ಜಾರಕಿಹೊಳಿ ಬ್ರದರ್ಸ್‌ ತಂತ್ರ

Belagavi Politics: ಲಕ್ಷ್ಮಣ್‌ ಸವದಿಗೆ ತೀವ್ರ ನಿರಾಸೆ ತಂದಿಟ್ಟ ಜಾರಕಿಹೊಳಿ ಬ್ರದರ್ಸ್‌ ತಂತ್ರ

December 13, 2025
*ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಆರ್.ವಿ. ದೇವರಾಜ್ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ*

*ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಆರ್.ವಿ. ದೇವರಾಜ್ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ*

December 2, 2025
ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು

ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು

November 17, 2025

ಜಪಾನಿನ ನೈಡೆಕ್ ಕಂಪನಿಯ ಆರ್ಚರ್ಡ್ ಹಬ್ ಗೆ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ್..

November 15, 2025
Next Post
ರಷ್ಯಾ ಚುನಾವಣೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ಸರ್ವಾಧಿಕಾರಿ ಮಾದರಿ

ರಷ್ಯಾ ಚುನಾವಣೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ಸರ್ವಾಧಿಕಾರಿ ಮಾದರಿ

Please login to join discussion

Recent News

BBK 12: ಬಿಗ್‌ಬಾಸ್‌ ಮನೆಯಿಂದ ರಕ್ಷಿತಾ ಶೆಟ್ಟಿ & ಧ್ರುವಂತ್ ಔಟ್‌
Top Story

BBK 12: ಬಿಗ್‌ಬಾಸ್‌ ಮನೆಯಿಂದ ರಕ್ಷಿತಾ ಶೆಟ್ಟಿ & ಧ್ರುವಂತ್ ಔಟ್‌

by ಪ್ರತಿಧ್ವನಿ
December 14, 2025
ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಮ್ಮ ಹೋರಾಟ: ಡಿ.ಕೆ ಶಿವಕುಮಾರ್
Top Story

ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಮ್ಮ ಹೋರಾಟ: ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 14, 2025
ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?
Top Story

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

by ಪ್ರತಿಧ್ವನಿ
December 14, 2025
ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್
Top Story

ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 14, 2025
ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ
Top Story

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

by ಪ್ರತಿಧ್ವನಿ
December 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಬಿಗ್‌ಬಾಸ್‌ ಮನೆಯಿಂದ ರಕ್ಷಿತಾ ಶೆಟ್ಟಿ & ಧ್ರುವಂತ್ ಔಟ್‌

BBK 12: ಬಿಗ್‌ಬಾಸ್‌ ಮನೆಯಿಂದ ರಕ್ಷಿತಾ ಶೆಟ್ಟಿ & ಧ್ರುವಂತ್ ಔಟ್‌

December 14, 2025
ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಮ್ಮ ಹೋರಾಟ: ಡಿ.ಕೆ ಶಿವಕುಮಾರ್

ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಮ್ಮ ಹೋರಾಟ: ಡಿ.ಕೆ ಶಿವಕುಮಾರ್

December 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!