ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸರ್ ಎಚ್ ಎನ್ ರಿಲಾಯನ್ಸ್ ಫೌಂಡೇಶನ್ ಆಸ್ಪತ್ರೆ ಬೆಂಗಳೂರಲ್ಲಿ ಕೋವಿಡ್-19 ರೋಗಿಗಳಿಗೆ ದಿನಕ್ಕೆ 375 ರೂಪಾಯಿಗಳಂತೆ 15 ದಿನದ ಕ್ವಾರಂಟೈನ್ ಪ್ಯಾಕೇಜ್ ನೀಡುತ್ತಿದೆ ಎಂಬಸಂದೇಶ ಹರಿದಾಡುತ್ತಿತ್ತು.
ಈ ನಿಟ್ಟಿನಲ್ಲಿ ಪ್ರತಿಧ್ವನಿ ತಂಡವು “ಸರ್ ಎಚ್ ಎನ್ ರಿಲಾಯನ್ಸ್ ಫೌಂಡೇಶನ್ ಆಸ್ಪತ್ರೆ” ಯನ್ನು ಸಂಪರ್ಕಿಸಿದಾಗ ಇದು ಸುಳ್ಳು ಸುದ್ದಿಯೆಂದು ತಿಳಿದು ಬಂದಿದೆ. ಸರ್ ಎಚ್ ಎನ್ ರಿಲಾಯನ್ಸ್ ಫೌಂಡೇಶನ್ ಆಸ್ಪತ್ರೆ ಮುಂಬೈಯಲ್ಲಿ ಮಾತ್ರ ಇರುವುದಾಗಿ ಹಾಗೂ ಬೆಂಗಳೂರಲ್ಲಿ ಯಾವುದೇ ಬ್ರಾಂಚುಗಳಿಲ್ಲವೆಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ. ಹಾಗೂ ಮೇಲೆ ಹೇಳಿರುವ ಪ್ಯಾಕೇಜು ಮುಂಬೈಯಲ್ಲಿರುವ ಆಸ್ಪತ್ರೆಯಲ್ಲಿ ಲಭ್ಯವಿದೆಯೆಂದೂ ತಿಳಿಸಿದೆ.
ಬೆಂಗಳೂರಿನ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಈ ಸೇವೆಯು ಲಭ್ಯವಿದೆಯೆನ್ನುವ ಸಂದೇಶವು ಬೆಂಗಳೂರಿಗರ ವಾಟ್ಸಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲಾಗಿತ್ತು.