ಉಳಿತಾಯ ಖಾತೆದಾರರು ಕಳೆದ ಮೂರು ವರ್ಷಗಳಲ್ಲಿ 10,000 ಕೋಟಿ ರುಪಾಯಿಗಳನ್ನು ದಂಡ ಕಟ್ಟಿದ್ದಾರೆ. ಬ್ಯಾಂಕ್ ಅಕೌಂಟಿನಲ್ಲಿ ಕನಿಷ್ಟ ಬ್ಯಾಲೆನ್ಸ್ ಉಳಿಸಲು ಸಾಧ್ಯವಾಗದವರಿಂದ ಬ್ಯಾಂಕ್‌ಗಳು ಈ ಮೊತ್ತದ ದಂಡವನ್ನು ವಸೂಲಿ ಮಾಡಿದೆ. 18 ರಾಷ್ಟ್ರೀಕೃತ ಬ್ಯಾಂಕ್‌ಗಳು 6,155 ಕೋಟಿ ರುಪಾಯಿಗಳನ್ನು ಕಳೆದ ಮೂರು ವರ್ಷಗಳಲ್ಲಿ ವಸೂಲಿ ಮಾಡಿದೆ. ಅದೇ ಅವಧಿಯಲ್ಲಿ ಖಾಸಗೀ ಬ್ಯಾಂಕ್‌ಗಳು 3,567 ದಂಡವನ್ನು ಸಾಮಾನ್ಯ ಉಳಿತಾಯ ಖಾತೆದಾರರಿಂದ ವಸೂಲಿ ಮಾಡಿದೆ ಎಂದು ಹಣಕಾಸು ಸಚಿವಾಲಯದ ರಾಜ್ಯ ಮಂತ್ರಿ ಅನುರಾಗ್ ಠಾಕೂರ್ ರಾಜ್ಯ ಸಭೆಯಲ್ಲಿ ಹೇಳಿದ್ದಾರೆ.
ಕನಿಷ್ಟ ಬ್ಯಾಲೆನ್ಸ್ ನಿರ್ವಹಿಸಲು ಸಾಧ್ಯವಾಗದಿದ್ದರೆ ದಂಡ ಕಟ್ಟುವುದನ್ನು 2017 ರ ಎಪ್ರಿಲ್‌ನಲ್ಲಿ ಭಾರತದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಪರಿಚಯಿಸಿತ್ತು. 2017-18 ಹಣಕಾಸು ಅವಧಿಯಲ್ಲಿ ಆ ಒಂದೇ ಬ್ಯಾಂಕ್ ವಸೂಲಿ ಮಾಡಿರುವ ದಂಡದ ಮೊತ್ತವೇ 2,400 ಕೋಟಿ ದಾಟಿದೆ. 2018-19 ರಲ್ಲಿ 862 ಕೋಟಿ ರುಪಾಯಿಗಳನ್ನು ನಿವ್ವಳ ಲಾಭವಾಗಿ ಎಸ್‌ಬಿಐ ಘೋಷಿಸಿತು. ಇದಕ್ಕೂ ಮೊದಲಿನ ಎರಡು ವರ್ಷ ಬ್ಯಾಂಕ್ ನಷ್ಟದಲ್ಲಿದೆಯೆಂದು ಹೇಳಿತ್ತು. ಬಡ್ಡಿ ಆದಾಯವೂ ಇದರ ಲಾಭಕ್ಕೆ ಒಂದು ಬಹು ಮುಖ್ಯ ಕಾರಣವೆಂದು ಫಿನಾಂಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಮತ್ತು ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿನ ಉಳಿತಾಯ ಖಾತೆದಾರರು ಕನಿಷ್ಠ 10,000 ರೂ.ಗಳವರೆಗೆ ಬಾಕಿ ಉಳಿಸಿಕೊಳ್ಳಬೇಕು. , ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರಮವಾಗಿ ಕನಿಷ್ಠ 2,000 ರೂ ಮತ್ತು 3,000 ರೂ ಗಳನ್ನು ತಮ್ಮ ಉಳಿತಾಯ ಖಾತೆಯಲ್ಲಿ ಉಳಿಸಬೇಕು. ಉಳಿತಾಯ ಖಾತೆಗಳಲ್ಲಿ ಉಳಿಸಬೇಕಾದ ಕನಿಷ್ಟ ಉಳಿತಾಯ ಪ್ರದೇಶಗಳನುಸಾರ ಭಿನ್ನವಾಗಿರುತ್ತೆ. ಮಾಸಿಕ ಸರಾಸರಿ ಉಳಿತಾಯ (MAB), ಮೆಟ್ರೋ ನಗರ, ನಗರ, ಅರೆನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ದಂಡ ಶುಲ್ಕಗಳು ಭಿನ್ನವಾಗಿರುತ್ತದೆ.










