ಕರೋನಾ ಪ್ರಣೀತ ಲಾಕ್ಡೌನ್ನಿಂದಾಗಿ ಮುಚ್ಚಲ್ಪಟ್ಟಿದ್ದ ಪಾರ್ಕುಗಳನ್ನು ಮೇ 30 ರಂದು ಸಾರ್ವಜನಿಕರಿಗೆ ತೆರಯುವಂತೆ ಆದೇಶಿಲಾಗಿತ್ತು. ಆದೇಶದಂತೆ ಬೆಳಗ್ಗೆ 07 ರಿಂದ 09 ರವರೆಗೆ ಹಾಗೂ ಸಾಯಂಕಾಲ 04 ರಿಂದ 07 ರವರೆಗೆ ತೆರೆಯಲಾಗುತ್ತಿತ್ತು.
ಜೂನ್ 20 ರಂದು ಹೊಸ ಆದೇಶ ಹೊರಡಿಸಿದ ಕರ್ನಾಟಕ ಸಚಿವಾಲಯ ಪಾರ್ಕ್ ತೆರೆಯುವಿಕೆಯ ಅವಧಿಯನ್ನು ವಿಸ್ತರಣೆಗೊಳಿಸಿದೆ. ಕಂಟೈನ್ಮೆಂಟ್ ಝೋನ್ಗಳನ್ನು ಹೊರತುಪಡಿಸಿ, ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಹಾಗೂ ಪುರಸಭೆ ಪಾರ್ಕುಗಳನ್ನು ಬೆಳಗ್ಗೆ 05 ರಿಂದ ರಾತ್ರಿ 09 ರವರೆಗೆ ತೆರೆಯಲು ಆದೇಶ ನೀಡಿದೆ.
