ಬಹಳಷ್ಟು ಗೊಂದಲಗಳ ನಂತರ ನಡೆದ ದ್ವಿತಿಯ ಪಿಯುಸಿಯ ಪರಿಕ್ಷೆ ಸುಗಮವಾಗಿ ನಡೆಯಿತು ಎಂದು ಷರಾ ಬರೆಯುವಷ್ಟರಲ್ಲಿ, ಓರ್ವ ವಿದ್ಯಾರ್ಥಿಗೆ ಕರೋನಾ ಸೋಂಕು ಇರುವುದು ಧೃಢಪಟ್ಟಿದೆ. ಈ ಸುದ್ದಿ ಮುಂಬರುವ ಪರೀಕ್ಷೆಗಳ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ. ಇದರೊಂದಿಗೆ ಶಿಕ್ಷಣ ಸಚಿವರು ಕ್ವಾರೆಂಟೈನ್ ಆಗಬೇಕಾದ ಪರಿಸ್ಥಿತಿಯೂ ಬಂದಿದೆ.
ದ್ವಿತಿಯ ಪಿಯುಸಿಯ ಇಂಗ್ಲಿಷ್ ಪರೀಕ್ಷೆ ಕರೋನಾ ಕಂಟಕದಿಂದ ಮುಂದೂಡಲ್ಪಟ್ಟಿತ್ತು. ಪರೀಕ್ಷೆಗಿಂತ ಮಕ್ಕಳ ಆರೋಗ್ಯ ಮುಖ್ಯ ಎಂಬ ಆಧಾರದ ಮೇಲೆ ಲಾಕ್‌ಡೌನ್ ನೆಪವೊಡ್ಡಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಲಾಕ್‌ಡೌನ್ ತೆರವಾದ ನಂತರ ಜೂನ್ 178ರಂದು ಪರೀಕ್ಷೆ ನಡೆಸಲು ನಿರ್ಧರಿಸಿದ್ದ ಶಿಕ್ಷಣ ಇಲಾಖೆಯ ನಿರ್ಧಾರ ಸರಿಯಾಗಿತ್ತೇನೋ ಎನ್ನುವಂತೆ ನಿನ್ನೆಯವರೆಗೂ ಭಾಸವಾಗಿತ್ತು. ಆದರೆ, ಇಂದು ಜಯನಗರದ ಎನ್ಎಂಕೆಆರ್‌ವಿ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕರೋನಾ ಸೋಂಕು ಇರುವುದು ಪತ್ತೆಯಾದ್ದರಿಂದ ಮತ್ತೆ ಶಿಕ್ಷಣ ಇಲಾಖೆಯ ನಿರ್ಧಾರದ ಮೇಲೆ ಪ್ರಶ್ನೆ ಎದ್ದಿದೆ.
ಇಷ್ಟು ಮಾತ್ರವಲ್ಲದೇ, ಪರೀಕ್ಷೆ ನಡೆಯುತ್ತಿರುವದನ್ನು ಪರಿಶೀಲಿಸಲು ಹೊರಟಿದ್ದ ರಾಜ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಎನ್ಎಂಕೆಆರ್‌ವಿ ಕಾಲೇಜಿಗೆ ಭೇಟಿ ನೀಡಿದ್ದರಿಂದ ಅವರು ಕೂಡಾ ಕ್ವಾರೆಂಟೈನ್ ಆಗಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳಲ್ಲಿ ಗೊಂದಲ ಮೂಡಿದೆ.

“ಅಗತ್ಯ ಬಿದ್ದರೆ ಆ ಕೊಠಡಿಯಲ್ಲಿ ಇದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಕೋವಿಡ್ ಟೆಸ್ಟ್ ನಡೆಸಲು ಕ್ರಮ ಕೈಗೊಳ್ಳುತ್ತೆವೆ. ರೋಗ ಲಕ್ಷಣ ಇರುವವರನ್ನು ಪ್ರತ್ಯೇಕವಾಗಿ ಕೂರಿಸಲು ವ್ವಸ್ಥೆ ಮಾಡಲಾಗಿದೆ. ಬಹುಶಃ ಆ ವಿದ್ಯಾರ್ಥಿನಿಗೆ ರೋಗಲಕ್ಷಣ ಇಲ್ಲದೇ ಇದ್ದಿರಬಹುದು. ಇಂತಹ ಪ್ರಸಂಗಗಳು ನಡೆಯಬಹುದು. ಆದರೆ, ನಡೆಯಲೇ ಬೇಕೆಂದೇನಿಲ್ಲ,” ಎಂದು ಸಚಿವ ಸುರೇಸ್ ಕುಮಾರ್ ಮಾಧ್ಯಮಗಳಿಗೆ ಉತ್ತರ ನೀಡಿದ್ದಾರೆ.
ಇನ್ನು SSLC ಪರೀಕ್ಷೆ ಬರೆಯುವಂತೆ ಒತ್ತಾಐಇಸಿ ಮಕ್ಕಳನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ ಎಂಬ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸುರೇಶ್ ಕುಮಾರ್ ಅವರ ವಿರುದ್ದ ದೂರು ದಾಖಲಾಗಿದೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸುರೇಶ್ ಕುಮಾರ್ ದೂರು ದಾಖಲಾಗಿರುವ ಕುರಿತು ನನಗೇನೂ ಗೊತ್ತಿಲ್ಲ ಎಂದಷ್ಟೇ ಹೇಳಿದ್ದಾರೆ.