ಇಂದು ಬೆಳಿಗ್ಗೆ 8 ಗಂಟೆಯಿಂದ ಭಾರತದ ಎರಡು ಹೈ ಕಮಿಷನ್ ಅಧಿಕಾರಿಗಳು ಇಸ್ಲಾಮಾದ್ನಲ್ಲಿ ನಾಪತ್ತೆಯಾಗಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಾರತ ಸರ್ಕಾರ ಈ ಆತಂಕಕಾರಿ ಬೆಳವಣಿಗೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ ಪಾಕಿಸ್ತಾನ ಸರ್ಕಾರಕ್ಕೆ ದೂರು ನೀಡಿದೆ.
ಗೂಢಾಚಾರಿಕೆ ಆರೋಪದಲ್ಲಿ ವೀಸಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪಾಕಿಸ್ತಾನದ ಇಬ್ಬರು ಹೈ ಕಮಿಷನ್ ಸಿಬ್ಬಂದಿಗಳನ್ನು ಭಾರತ ಗಡಿಪಾರು ಮಾಡಿದ ಬಳಿಕ ಪಾಕಿಸ್ತಾನದಲ್ಲಿ ಭಾರತದ ಹೈ ಕಮಿಷನ್ನ ಎರಡು ಅಧಿಕಾರಿಗಳು ಕಾಣೆಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಪಾಕಿಸ್ತಾನದಲ್ಲಿ ಭಾರತದ ಉನ್ನತ ಅಧಿಕಾರಿಗಳನ್ನು ಹಿಂಬಾಲಿಸುತ್ತಿರುವ ಹಾಗೂ ತೀವ್ರ ಕಣ್ಗಾವಲು ಮಾಡುತ್ತಿರುವ ಕುರಿತು ಭಾರತ ಪ್ರತಿಭಟನೆ ವ್ಯಕ್ತಪಡಿಸಿದೆ.
ಭಾರತದ ಅಧಿಕಾರಿಯ ಕಾರನ್ನು ಐಎಸ್ಐ ಸದಸ್ಯರು ಬೆನ್ನಟ್ಟುತ್ತಿದ್ದುದಾಗಿ NDTV ವರದಿ ಮಾಡಿದೆ.