• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಹದಿಹರೆಯದ ಬಾಲಕ ಪ್ರಧಾನ ಮಂತ್ರಿಯನ್ನ ಪತ್ರ ಬರೆದು ಪ್ರಶ್ನಿಸಿದ್ದು ತಪ್ಪೇ!?

by
June 6, 2020
in ದೇಶ
0
ಹದಿಹರೆಯದ ಬಾಲಕ ಪ್ರಧಾನ ಮಂತ್ರಿಯನ್ನ ಪತ್ರ ಬರೆದು ಪ್ರಶ್ನಿಸಿದ್ದು ತಪ್ಪೇ!?
Share on WhatsAppShare on FacebookShare on Telegram

ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅತ್ಯಂತ ನಿಷ್ಠುರ ಪ್ರಶ್ನೆಗಳನ್ನಿರಿಸಿ ಪತ್ರ ಬರೆದು ಸುದ್ದಿಯಾಗಿದ್ದ ಅನ್ವೇಷ್‌ ಸತ್ಪತಿ ಅವರಿಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರೋತ್ಸಾಹ ಜೊತೆಗೆ ಟೀಕೆಗಳು ಹೀಗೆ ಎರಡೂ ತೂರಿ ಬರುತ್ತಿವೆ. ಪ್ರಮುಖವಾಗಿ ಅನ್ವೇಷ್‌ ಸತ್ಪತಿ ವಯಸ್ಸಿನ ಬಗ್ಗೆಯೇ ಕೆಲವು ಟ್ವೀಟ್‌ ಗಳು ಕಾಣಸಿಗುತ್ತಿವೆ. ಆದರೆ ಪರ, ವಿರೋಧಗಳಿರುವ ಬಹುತೇಕ ಟ್ವೀಟ್‌ಗಳಿಗೂ ಅನ್ವೇಷ್‌ ವಿನಮ್ರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲದೇ ವಿರೋಧಿಸಲೆಂದೆ ಕೆಲವರು ಮಾಡಿರುವ ಟ್ವೀಟ್‌ಗೆ ಅನ್ವೇಷ್‌ ನೀಡಿರುವ ಪ್ರತಿಕ್ರಿಯೆ ಬಲಪಂಥೀಯರನ್ನ ಒಂದೊಮ್ಮೆ ತಿರುಗಿ ನೋಡುವಂತೆ ಮಾಡಿದೆ.

ಬಹುತೇಕ ಮಂದಿ 17 ರ ಹರೆಯದ ಹುಡುಗ ಬರೆದ ಸುದೀರ್ಘ ಪತ್ರಕ್ಕೆ ಭೇಷ್‌ ಎಂದರೆ, ಇನ್ನು ಕೆಲವರು ಆತನ ವಯಸ್ಸನ್ನೇ ಮುಂದಿರಿಸಿ ಪ್ರಶ್ನೆಗಳನ್ನು ಕೇಳಿದ್ದಾರೆ. ಮಾತ್ರವಲ್ಲದೇ ಇನ್ನೂ ಹದಿಹರೆಯ ದಾಟದ ಅಥವಾ ಮತದಾನ ಮಾಡಲು ಹಕ್ಕನ್ನೇ ಹೊಂದಿರದ ಅನ್ವೇಷ್‌ಗೆ ಪ್ರಧಾನಿ ಪ್ರಶ್ನಿಸುವ ಹಕ್ಕಿಲ್ಲ ಎಂದಿದ್ದಾರೆ. ಆದರೆ ಅದೆಲ್ಲಕ್ಕೂ ಅನ್ವೇಷ್‌ ಸ್ವಾರಸ್ಯಕರ ರೀತಿಯಲ್ಲಿ ಉತ್ತರಿಸಿ ಅವರನ್ನೇ ಬೇಸ್ತು ಬೀಳಿಸಿದ್ದಾರೆ. ಹಾಗಾದರೆ ಭಾರತ ದೇಶದಲ್ಲಿ ಪ್ರಧಾನ ಮಂತ್ರಿಗಳನ್ನ ಪ್ರಶ್ನಿಸಲು ಕೇವಲ ಮತದಾರರಿಗೆ ಮಾತ್ರ ಹಕ್ಕು ಇರುವುದೇ? ಅಥವಾ ಪ್ರಧಾನ ಮಂತ್ರಿ ಅವರಿಗೆ ಪತ್ರ ಬರೆಯೋದಾದರೆ ಅದಕ್ಕೂ ವಯೋಮಿತಿ ಅನ್ನೋದಿದೆಯೇ? ಹೀಗೊಂದು ಪ್ರಶ್ನೆಯೂ ಸಹಜವಾದುದು.

ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಮತದಾರನಿಗೆ ನೇರವಾಗಿ ಪ್ರಧಾನಿಯನ್ನ ಆಯ್ಕೆ ಮಾಡುವ ಹಕ್ಕನ್ನ ಹೊಂದಿಲ್ಲ ಅನ್ನೋದು ಸ್ಪಷ್ಟ. ಬದಲಿಗೆ ಪಕ್ಷಗಳೇ ತಮ್ಮ ನಾಯಕನನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂಬಂತೆ ಬಿಂಬಿಸಿ ಪ್ರಚಾರ ಮಾಡುತ್ತವೆ. 2014 ರ ಚುನಾವಣೆಗೂ ಮುನ್ನವೇ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿತ್ತು. ಅಂದು ಇಡೀ ದೇಶಾದ್ಯಂತ ʼಗುಜರಾತ್‌ ಮಾಡೆಲ್‌ʼ ಮಾಡ್ತೀವಿ ಅಂತ ಬಿಜೆಪಿ ನಾಯಕರು ಘಂಟಾಘೋಷವಾಗಿ ಕೂಗಿ ಹೇಳಿದ್ದರು. ಆದರೆ ಅನಂತರದ ದಿನಗಳಲ್ಲಿ ʼಗುಜರಾತ್‌ ಮಾಡೆಲ್‌ʼ ನ ಅಸಲಿಯತ್ತು ಏನು ಎಂಬುದು ಗೊತ್ತಾಗುತ್ತಿದ್ದಂತೆ, ಬಿಜೆಪಿ ಪಾಳಯ ಬತ್ತಳಿಕೆಯಲ್ಲಿದ್ದ ಆ ‌ʼಗುಜರಾತ್ ಮಾಡೆಲ್‌ʼ ಅನ್ನೋ ಪದವನ್ನೇ ಮರೆತು ಬಿಟ್ಟಿದೆ. ಆ ನಂತರ ಹಲವು ರೀತಿಯ ಆಕರ್ಷಕ ಘೋಷಣೆಗಳನ್ನು ಘೋಷಿಸುತ್ತಲೇ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ನಡೆಸುತ್ತಾ ಆರು ವರುಷ ಪೂರೈಸಿದ್ದಾರೆ.

ಆದರೆ ಮೋದಿ 2.0 ಸರಕಾರದಲ್ಲಿ ಮೊದಲ ವರುಷ ಪೂರೈಸುತ್ತಲೇ ದೇಶದ ಜನರನ್ನ ಉದ್ದೇಶಿಸಿ ಪತ್ರವೊಂದನ್ನ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆ ಅನ್ನೋ ಹಾಗೆ ಅನ್ವೇಷ್‌ ಸತ್ಪತಿ ನರೇಂದ್ರ ಮೋದಿ ಅವರಿಂದ ಉತ್ತರ ಬಯಸಿ ಸುದೀರ್ಘ ಪತ್ರ ಬರೆದಿದ್ದಾರೆ. ಇದನ್ನ ʼಪ್ರತಿಧ್ವನಿʼ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿತ್ತು. ʼಪ್ರತಿಧ್ವನಿʼಯ ಕನ್ನಡ ಅನುವಾದಕ್ಕೆ ಅನ್ವೇಷ್‌ ಟ್ವೀಟ್‌ ಮೂಲಕವೇ ಕೃತಜ್ಞತೆ ಸಲ್ಲಿಸಿದ್ದಾರೆ.

Also Read: ಪ್ರಧಾನ ಮಂತ್ರಿಗಳ ಆತ್ಮಸಾಕ್ಷಿಯನ್ನೇ ತಟ್ಟಿ ಪ್ರಶ್ನಿಸುವಂತಿದೆ 17ರ ಹರೆಯದ ಬಾಲಕನ ಪತ್ರ!

ಆದರೆ, ಇದೀಗ ಅನ್ವೇಷ್‌ ಸತ್ಪತಿ ಅನ್ನೋ 17 ರ ಹರೆಯದ ಬಾಲಕ ಬರೆದ ಪತ್ರ ಬಿಜೆಪಿ ಟಾಪ್‌ ಮೋಸ್ಟ್‌ ಲೀಡರ್‌ಗಳನ್ನಾ, ಬಲಪಂಥೀಯ ನಾಯಕರನ್ನ ಕಂಗೆಡಿಸಿ ಬಿಟ್ಟಿದೆ. ಆದ್ದರಿಂದ ಅನ್ವೇಷ್‌ ವಯಸ್ಸು, ಶಿಕ್ಷಣ, ಭಾಷೆ ಬಳಕೆ ಬಗ್ಗೆ ಕಾಮೆಂಟ್‌ ಮಾಡಿ ಅನ್ವೇಷ್‌ ಸತ್ಪತಿಯನ್ನ ಹಿಂದೆ ಸರಿಯುವಂತೆ ಮಾಡುವ ಪ್ರಯತ್ನದಲ್ಲಿದ್ದಾರೆ. ಆದರೆ ಅದೆಲ್ಲಕ್ಕೂ ಅನ್ವೇಷ್‌ ವಿನಮ್ರವಾಗಿ, ಆದರೆ ಖಡಕ್‌ ಆಗಿ ಉತ್ತರಿಸಿದ್ದಾರೆ.

ಆದರೆ ಅನ್ವೇಷ್‌ ಪತ್ರವನ್ನ ಅರಗಿಸಿಕೊಳ್ಳಲಾಗದ ಬಲಪಂಥೀಯ ಗುಂಪು ಅನ್ವೇಷ್‌ ನನ್ನ “ಚೈಲ್ಡ್” ಅಂತಲೂ, “ಅದು ಯಾರೋ ಕಾಂಗ್ರೆಸ್ಸಿಗರು ಬರೆದುಕೊಟ್ಟ ಲೆಟರ್‌” ಅಂತಾನೂ, “ಮೋದಿ ಅಧಿಕಾರಕ್ಕೆ ಬರಬೇಕಾದರೆ ಪ್ರೈಮರಿ ಮಗು” ಅಂತಾನೂ ಮೂದಲಿಸಿ ಆ ಪತ್ರವನ್ನ ವ್ಯಂಗ್ಯ ಮಾಡಲು ಮುಂದಾಗಿದ್ದಾರೆ.

17 Years old. He mus be like 11 when BJP came to power. He knows a lot. Wow. Is he even aware of Mumbai attacks when he was like 5 years old or Twin Towers attack when he was like not even born. Just a publicity stunt. He has no idea what Bharat and world has faced in past.

— Shashank (@bansalshanks) June 1, 2020


The PM should write back a letter,l saying, 'Dear child, take yourself less seriously and read some more' https://t.co/XEhGl9vCMC

— Pratyasha Rath (@pratyasharath) June 1, 2020


ಆದರೆ ಅದ್ಯಾವುದಕ್ಕೂ ಅನ್ವೇಷ್ ತಲೆಗೆಡಿಸಿಕೊಂಡಿಲ್ಲ. ಅಂತಹ ಒಂದಿಷ್ಟು ಟ್ವೀಟ್‌ ಹಾಗೂ ಅದಕ್ಕೆ ಅನ್ವೇಷ್‌ ನೀಡಿರುವ ಪ್ರತಿಕ್ರಿಯೆಯೂ ಸದ್ಯ ಟ್ವಿಟ್ಟರ್‌ ನಲ್ಲಿ ಭಾರೀ ಗಮನಸೆಳೆಯುತ್ತಿದೆ. ಅನ್ವೇಷ್‌ ಶಿಕ್ಷಣದ ಬಗ್ಗೆ ಕೆದಕಿದವರಿಗೆ ಮೋದಿ ವಿದ್ಯಾಭ್ಯಾಸ ಏನು ಅನ್ನೋದನ್ನ ತೋರಿಸಿಕೊಡುವ ಮೂಲಕ ತಿರುಗೇಟು ನೀಡಿದ್ದಾರೆ.

For those who asked me2study instead of asking questions to PM,here's Mr. Modi openly admitting tht he only studied till high school.Note that I dont think that one needs a certificate/degree2be educated.I'll never criticize the PM for this but u believe in formal education so… https://t.co/tFe5sX7vat

— Anwesh Satpathy (@anwesh_satpathy) June 5, 2020


ಇನ್ನು ಹದಿಹರೆಯದ ಬಾಲಕ ಪತ್ರ ಬರೆದಿರೋದ್ದನ್ನ ಪ್ರಶ್ನಿಸಿರೋ ಮಂದಿಗೂ‌, ಮೋದಿ ಈ ಹಿಂದೆ ರಾಷ್ಟ್ರೀಯ ಆಂಗ್ಲ ಮಾಧ್ಯಮ ವಾಹಿನಿಗೆ ನೀಡಿದ ಸಂದರ್ಶನದಲ್ಲಿ “ಸಣ್ಣ ಮಕ್ಕಳು ಕೂಡಾ ತನ್ನನ್ನ ಪ್ರಶ್ನಿಸಬಹುದು” ಎಂದಿರುವ ವೀಡಿಯೋ ತುಣುಕನ್ನ ತನ್ನ ವಾಲ್‌ನಲ್ಲಿ ಟ್ವೀಟ್‌ ಮಾಡುವ ಮೂಲಕ ಖಡಕ್‌ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

For those who said I wasn't old enough to ask questions/criticize/voice my opinions on politics, here's the Hon'ble PM saying “even small kids are allowed to question Modi”. I took his advice to heart. #ModiExposesModi #ModiExposesBhakts https://t.co/qKlr5WJdVm

— Anwesh Satpathy (@anwesh_satpathy) June 5, 2020


ಇದು ಮಾತ್ರವಲ್ಲದೇ, ಇನ್ನೂ ಹಲವರು “ಈ ಪತ್ರವನ್ನ ಅದ್ಯಾವುದೋ ಪಕ್ಷದ ನಾಯಕರು ಬರೆದುಕೊಟ್ಟಿರುವ ಇಲ್ಲವೇ ಹೇಳಿಕೊಟ್ಟಿರುವುದಾಗಿ” ಟ್ವೀಟ್‌ ನಲ್ಲಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಅದಕ್ಕೂ ತಕ್ಕ ಉತ್ತರವನ್ನೇ ನೀಡಿರುವ ಅನ್ವೇಷ್‌ “ನಾನು ಕಮ್ಯೂನಿಷ್ಟನೂ ಅಲ್ಲ, ಕಾಂಗ್ರೆಸ್ಸಿಗನೂ ಅಲ್ಲ, ಜಿಹಾದಿಯೂ ಅಲ್ಲ” ಅನ್ನೋ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಈ ಕುರಿತು ಯಾವುದೇ ಬಹಿರಂಗ ಚರ್ಚೆಗೂ ನಾನು ಸಿದ್ಧನಿರುವುದಾಗಿ ತಿಳಿಸಿದ್ದಾರೆ.

And I accept the challenge. Always willing to have an open conversation. Bring it on.

— Anwesh Satpathy (@anwesh_satpathy) June 1, 2020


For those claiming I didn't write it, the letter by the PM was probably drafted by bureaucrats. There was a team who wrote the letter and you still believe it was written by a single person. But I write a letter on my own and you believe someone else dictated it? Just Wow. https://t.co/NBBcfm0m2Y

— Anwesh Satpathy (@anwesh_satpathy) June 4, 2020


ADVERTISEMENT

ಒಟ್ಟಿನಲ್ಲಿ ಅನ್ವೇಷ್‌ ಸತ್ಪತಿ ಅನ್ನೋ 17 ರ ಹರೆಯದ ಬಾಲಕ ನೀಡಿದ ಉತ್ತರ ಅನ್ನೋದು ಬಿಜೆಪಿ ಪಾಳಯವನ್ನ ಕಂಗೆಡಿಸಿರುವುದು ನಿಜ. ಒಡಿಶಾದ ಭುವನೇಶ್ವರದ ಅನ್ವೇಷ್‌ ತನ್ನ ಹತ್ತನೇ ತರಗತಿ ವಿದ್ಯಾಭ್ಯಾಸದ ಸಮಯದಲ್ಲಿಯೇ The Impatient Athiest ಅನ್ನೋ ಪುಸ್ತಕ ಬರೆದಿದ್ದರು. ಬ್ಲಾಗರ್‌, ಚಿಂತಕ, ಭಾಷಣಕಾರನಾಗಿ ಗುರುತಿಸಿಕೊಳ್ಳುತ್ತಿರುವ ಅನ್ವೇಷ್‌ ತನ್ನ ಮತದಾನದ ಹಕ್ಕನ್ನ ಪಡೆಯುವ ಮುನ್ನವೇ ದೇಶದಲ್ಲಾಗುತ್ತಿರುವ ಬದಲಾವಣೆ ಬಗ್ಗೆ ಪ್ರಜಾಪ್ರಭುತ್ವದ ನೀಡಿರುವ ಸಾಂವಿಧಾನಿಕ ಹಕ್ಕನ್ನ ಬಳಸಿಕೊಂಡು ಪ್ರಶ್ನಿಸುತ್ತಿದ್ದಾನೆ. ಆದರೆ ಅರಗಿಸಿಕೊಳ್ಳಲಾಗದವರು ಮಾತ್ರ ಆತನ ವಯಸ್ಸು, ಭಾಷೆ, ಪರಿಣತಿ ಇದೆಲ್ಲದರ ಮಧ್ಯಯೇ ಕಟ್ಟಿ ಹಾಕುವ ಪ್ರಯತ್ನ ನಡೆಸಿರುವುದು ಸೋಜಿಗದ ಸಂಗತಿಯೇ ಸರಿ.

Tags: Anwesh sathpathyGujarath modelModi 2.0PM Modiಅನ್ವೇಷ್‌ ಸತ್ಪತಿಗುಜರಾತ್‌ ಮಾಡೆಲ್‌ಪ್ರಧಾನಿ ಮೋದಿಮೋದಿ 2.0
Previous Post

ಭಾರತದ ಮೌನಿ ಸೆಲೆಬ್ರಿಟಿಗಳ ಕಾಲೆಳೆದ ಸ್ವರಾ ಭಾಸ್ಕರ್

Next Post

ಚೀನಾದ ವಿರುದ್ಧ ಮೈತ್ರಿ ರಚಿಸಿದ ಎಂಟು ರಾಷ್ಟ್ರಗಳ ನಾಯಕರು

Related Posts

Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
0

ಹೊಸ ಲುಕ್‌ನಲ್ಲಿ ಧನಂಜಯ್….666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಧನಂಜಯ್ ಫಸ್ಟ್‌ ಲುಕ್‌ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ತನ್ನ ಘೋಷಣೆಯಿಂದಲೇ ಡಾ. ಶಿವರಾಜ್‌ಕುಮಾರ್ (Dr...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಚೀನಾದ ವಿರುದ್ಧ ಮೈತ್ರಿ ರಚಿಸಿದ ಎಂಟು ರಾಷ್ಟ್ರಗಳ ನಾಯಕರು

ಚೀನಾದ ವಿರುದ್ಧ ಮೈತ್ರಿ ರಚಿಸಿದ ಎಂಟು ರಾಷ್ಟ್ರಗಳ ನಾಯಕರು

Please login to join discussion

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada