ಮುಂಬೈನಿಂದ 94 ಕಿಮೀ ದೂರ ಇರುವ ಅಲಿಬಾಗ್ನಲ್ಲಿ ನಿಸರ್ಗ ಚಂಡಮಾರುತವು ಅಪ್ಪಳಿಸಲಿದೆ. ಗಂಟೆಗೆ 100 ರಿಂದ 110 ಕಿ.ಮೀ ವೇಗದಲ್ಲಿ ಬರುವ ಚಂಡಮಾರುತವು ಬುಧವಾರ ಮಧ್ಯಾಹ್ನ ಮಹಾರಾಷ್ಟ್ರದ ಕರಾವಳಿ ಭಾಗಗಳಿಗೆ ತಲುಪಲಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕರಾವಳಿ ಹಾಗೂ ಗುಜರಾತ್ ಕರಾವಳಿಗಳು ನಿಸರ್ಗಾ ಚಂಡಮಾರುತದ ಭಾರೀ ಪರಿಣಾಮ ಎದುರಿಸಲಿದೆ.
#WATCH Effect of #NisargaCyclone in Sindhudurg District of Maharashtra: India Meteorological Department, IMD pic.twitter.com/vyB8Qoa1mv
— ANI (@ANI) June 3, 2020
ಚಂಡಮಾರುತವು ಅಪರಾಹ್ನ 2 ಗಂಟೆಯಿಂದ 4:30 ಯೊಳಗಡೆ ಭೂಪ್ರದೇಶಕ್ಕೆ ತಲುಪುವ ಸಾಧ್ಯತೆಯಿದೆಯೆಂದು ಅಂದಾಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ತೀರ ಪ್ರದೇಶದ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
#WATCH Maharashtra: Strong winds and high tides hit Ratnagiri area. #CycloneNisarga pic.twitter.com/Cg85bxwMdL
— ANI (@ANI) June 3, 2020
35 ಶಾಲೆಗಳನ್ನು ತಾತ್ಕಾಲಿಕ ವಸತಿಯಾಗಿ ನಾಗರಿಕರಿಗೆ ನಿಡಲಾಗಿದೆ ಎಂಧು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ತಿಳಿಸಿದೆ.
ಅಪಾಯದ ಭೀತಿ ಇರುವ ಕಡೆಗಳಲ್ಲಿ ಒಟ್ಟು 43 NDRF ತಂಡಗಳನ್ನು ನಿಯೋಜಿಸಲಾಗಿದೆ. ಅದರಲ್ಲಿ ಗುಜರಾತ್ ತೀರ ಪ್ರದೇಶಗಳಲ್ಲಿ 16 ಮತ್ತು ಮಹಾರಾಷ್ಟ್ರದಲ್ಲಿ 21 ತಂಡಗಳನ್ನು ನಿಯೋಜಿಸಲಾಗಿದೆ. ಉಳಿದ ತಂಡಗಳನ್ನು ಹೆಚ್ಚುವರಿ ಸುರಕ್ಷತೆಗೆ ನಿಯೋಜಿಸಲಾಗಿದೆ.
#WATCH: #CycloneNisarga makes landfall along Maharashtra coast, process will be completed during next 3 hours. Visuals from Mumbai. pic.twitter.com/YKWizX82lC
— ANI (@ANI) June 3, 2020