• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸಾಮಾಜಿಕ ತಾಣಗಳನ್ನು ಹೊಣೆ ಮಾಡುವ ಸೆಕ್ಷನ್ 230 ರ ಬದಲಾವಣೆಗೆ ಮುಂದಾದ ಡೊನಾಲ್ಡ್ ಟ್ರಂಪ್!

by
May 30, 2020
in ದೇಶ
0
ಸಾಮಾಜಿಕ ತಾಣಗಳನ್ನು ಹೊಣೆ ಮಾಡುವ ಸೆಕ್ಷನ್ 230 ರ ಬದಲಾವಣೆಗೆ ಮುಂದಾದ ಡೊನಾಲ್ಡ್ ಟ್ರಂಪ್!
Share on WhatsAppShare on FacebookShare on Telegram

ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೇರಿಕಾವು ತನ್ನ ಫೆಡರಲ್‌ ಶಾಸಕಾಂಗದ 230 ನೇ ಸೆಕ್ಷನ್‌ ಗೆ ತಿದ್ದುಪಡಿ ತರಲು ಹೊರಟಿದೆ. ಈ ಸೆಕ್ಷನ್‌ ನ್ನು 1996 ರಲ್ಲಿ ಜಾರಿಗೆ ತಂದಿದ್ದು ಇದೂ ಕೂಡ ಕೇವಲ 26 ಪದಗಳ ಉದ್ದವಿದೆ. ಅದರೆ ಇದಕ್ಕೆ ತಿದ್ದುಪಡಿ ತಂದರೆ ಜನಸಾಮಾನ್ಯರ ಜೀವನದಲ್ಲೂ ಗಣನೀಯ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಮೂಲಭೂತವಾಗಿ ಸೆಕ್ಷನ್‌ 230 ಸಾಮಾಜಿಕ ತಾಣ ಕಂಪೆನಿಗಳಾದ ಫೇಸ್‌ ಬುಕ್‌ ಮತ್ತು ಟ್ವಿಟರ್‌ ಗೆ ಅದರಲ್ಲಿ ಪ್ರಕಟಗೊಳ್ಳುವ ವಿಚಾರಗಳ ಕುರಿತು ಕಂಪೆನಿಗಳ ಮೇಲೆ ದಾವೆ ಹೂಡುವುದರ ವಿರುದ್ದ ರಕ್ಷಣೆ ನೀಡುತ್ತಿದೆ. ಇದರಿಂದಾಗಿ ಅವುಗಳಲ್ಲಿ ಪ್ರಕಟಗೊಳ್ಳುವ ವಿಷಯವನ್ನು ಬದಲಾವಣೆ ಮಾಡದೇ ಇರಬಹುದಾಗಿದೆ.

ADVERTISEMENT

ಅಮೇರಿಕಾದ ನೇವಲ್‌ ಅಕಾಡೆಮಿಯ ಹಿರಿಯ ಪ್ರೊಫೆಸರ್‌ ಜೆಫ್‌ ಕೊಸೆಟ್ಟ್‌ ಅವರ ಪ್ರಕಾರ, ಇಂದಿನ ಪ್ರಪಂಚದಲ್ಲಿ ಸಾಮಾಜಿಕ ಜಾಲತಾಣಗಳ ಕಂಪೆನಿಗಳ ಬಳಕೆದಾರರು ಪೋಸ್ಟ್‌ ಮಾಡುವ ವಿಷಯಗಳ ಮೇಲೆ ಅವಲಂಬಿತವಾಗಿವೆಯೇ ಹೊರತು ತಾವು ವಿಷಯ ಸೃಷ್ಟಿ ಮಾಡುವುದಿಲ್ಲ. ಹೀಗಿರುವಾಗ ಈ ಕಂಪೆನಿಗಳು ಸೆಕ್ಷನ್‌ 230 ನ್ನೇ ನಂಬಿಕೊಂಡಿದ್ದು ಇದನ್ನು ಹೊರತುಪಡಿಸಿ ಅವುಗಳು ರಿಸ್ಕ್‌ ತೆಗೆದುಕೊಳ್ಳಲು ಮುಂದಾಗುವುದಿಲ್ಲ ಎನ್ನುತ್ತಾರೆ.

ಅಮೇರಿಕಾದ ಅದ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೆಕ್ಷನ್‌ 230ನ್ನು ಬದಲಾವಣೆ ಮಾಡಲು ಉದ್ದೇಶಿಸಿದ್ದು ಅವರು ಗುರುವಾರ ಈ ಕುರಿತ ಕಾರ್ಯಾಂಗದ ಆದೇಶವೊಂದಕ್ಕೆ ಸಹಿ ಹಾಕಿದ್ದಾರೆ. ಈ ಪ್ರಕಾರ ಸಾಮಾಜಿಕ ತಾಣಗಳು ಈ ತನಕ ಪಡೆಯುತಿದ್ದ ಕಾನೂನು ಕ್ರಮದ ವಿರುದ್ದ ರಕ್ಷಣೆ ಇನ್ನು ಮುಂದೆ ಸಿಗುವ ಸಾಧ್ಯತೆ ಕಡಿಮೆ. ಈ ಕುರಿತು ಪ್ರತಿಕ್ರಿಯಿಸಿರುವ ಅದ್ಯಕ್ಷ ಟ್ರಂಪ್‌ ಅವರು ಅಮೇರಿಕಾದ ಇತಿಹಾಸದಲ್ಲಿ ಎದುರಿಸಿದ ಮುಕ್ತ ವಾಕ್‌ ಸ್ವತಂತ್ರ್ಯದ ರಕ್ಷಣೆ ಗಾಗಿ ಪ್ರಯತ್ನಿಸಲಾಗಿದೆ ಎಂದಿದ್ದಾರೆ.

ಈಗಿನ ಕಾನೂನಿನ ಪ್ರಕಾರ ಯಾವುದೇ ಸಾಮಾಜಿಕ ತಾಣದ ಮಾಲೀಕರನ್ನು ಅಥವಾ ವ್ಯಕ್ತಿಗಳನ್ನು ಅವರು ಪ್ರಕಟಿಸಿದ ವಿಷಯಗಳ ಪ್ರಕಾಶಕರು ಎಂದು ಪರಿಗಣಿಸುತ್ತಿಲ್ಲ. ಈ ರೀತಿ ಪರಿಗಣಿಸುತ್ತಿಲ್ಲವಾದ್ದರಿಂದ ಅವರು ಕಾನೂನು ಮೊಕದ್ದಮೆಗಳಿಂದ ಪಾರಾಗುತಿದ್ದಾರೆ. ಈ ಕಾಯ್ದೆ ಬಳಕೆದಾರರು ಪ್ರಕಟಿಸಿದ ವಿಷಯಗಳನ್ನು ತಿದ್ದುಪಡಿ ಮಾಡುವುದಕ್ಕೆ ಅವಕಾಶ ಕೊಡುತ್ತದೆ. ಆದರೆ ಆ ಜವಾಬ್ದಾರಿಯನ್ನು ಕೊಡುವುದಿಲ್ಲ. ಏಕೆಂದರೆ ನಿಮಿಷವೊಂದಕ್ಕೆ ಲಕ್ಷಾಂತರ ವಿಷಯಗಳು ಪ್ರಕಟಿತಗೊಳ್ಳುತ್ತವೆ. ಇದೆಲ್ಲವನ್ನೂ ಅವರು ಪೋಲೀಸಿಂಗ್‌ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸೆಕ್ಷನ್‌ 230 ನ್ನು ರೂಪಿಸಲು ಸಹಕರಿಸಿದ ತಜ್ಞ ರಾನ್‌ ವೈಡನ್‌ ಹೇಳುತ್ತಾರೆ. ಆದರೆ, ಈ ಕಂಪೆನಿಗಳಿಗೆ ಸಂಪೂರ್ಣ ಕಾನೂನು ರಕ್ಷಣೆ ನೀಡಿಲ್ಲ. ಕೆಲವೊಂದು ಕಾನೂನು ಉಲ್ಲಂಘಿಸುವ ವಿಷಯಗಳು, ಮಕ್ಕಳ ಲೈಂಗಿಕ ಸೆಕ್ಸ್‌ ವಿಷಯಗಳ ಬಗ್ಗೆ ನಿಗಾ ವಹಿಸಬೇಕಿದೆ ಎಂದೂ ಅವರು ಹೇಳಿದರು.

1990 ರಲ್ಲಿ ಜೋರ್ಡಾನ್‌ ಬೆಲ್‌ ಫೋರ್ಟ್‌ ಎಂಬವವರ ಸ್ಟ್ರಾಟನ್‌ ಒಕ್‌ಮೌಂಟ್‌ ಎಂಬ ಬ್ರೋಕರೇಜ್‌ ಕಂಪೆನಿಯು ಅಂತರ್ಜಾಲ ಸೇವೆ ಒದಗಿಸುವ ʼಪ್ರೊಡಿಗಿ ಸರ್ವೀಸಸ್‌ʼ ಎಂಬ ಕಂಪೆನಿಯ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿತ್ತು. ಸಾಮಾಜಿಕ ತಾಣದಲ್ಲಿ ಬಳಕೆದಾರರೊಬ್ಬರು ʼಸ್ಟ್ರಾಟನ್‌ ಕಂಪೆನಿʼ ವಂಚಕ ಎಂದು ಆರೋಪಿಸಿ ಪೋಸ್ಟ್‌ ಮಾಡಿದ್ದರು. ನಂತರ ಈ ಮೊಕದ್ದಮೆ ನ್ಯೂಯಾರ್ಕ್‌ ನ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬಂದಾಗ ʼಪ್ರೊಡಿಗಿ ಕಂಪೆನಿʼಯು ಮಾನನಷ್ಟಕ್ಕೆ ಹೊಣೆಗಾರ ಎಂದು ತೀರ್ಪು ನೀಡಿತ್ತು. ಈ ತೀರ್ಪು ಒರೆಗಾವ್‌ ಸಂಸದ ವೈಡನ್‌ ಅವರ ಗಮನ ಸೆಳೆದಿದ್ದು ಅವರು ಈ ವಿಷಯವನ್ನು ಕಾಂಗ್ರೆಸ್‌ ನಲ್ಲಿ ಚರ್ಚಿತವಾಗುವಂತೆ ಮಾಡಿದರು. ನಂತರದ ಬೆಳವಣಿಗೆಯೇ ಟ್ರಂಪ್‌ ಅವರು ಕೈಗೊಂಡಿರುವ ನಿರ್ಧಾರ ಆಗಿದೆ.

1996 ರ ಸಂಪರ್ಕ ಸಂಭಾವಿತ ಕಾಯ್ದೆ (ಕಮ್ಯುನಿಕೇಷನ್ಸ್‌ ಡೀಸೆನ್ಸಿ ಆಕ್ಟ್‌)ರಲ್ಲಿರುವ ಸೆಕ್ಷನ್‌ 230ನ್ನು ಜಾರಿಗೆ ತರಲಾಗಿತ್ತು. ಈ ಕಾಯ್ದೆಯು ಅಂತರ್ಜಾಲದಲ್ಲಿ ಮಕ್ಕಳ ಲೈಂಗಿಕ ವಿಷಯ ಪ್ರಕಟಗೊಳ್ಳುವುದನ್ನು ತಡೆಗೊಳಿಸುವ ಉದ್ದೇಶ ಹೊಂದಿದೆ. ಟ್ರಂಪ್ ಆಡಳಿತದ ಅನೇಕ ಪ್ರಸ್ತಾಪಗಳಂತೆ, ಸೆಕ್ಷನ್ 230 ಅನ್ನು ಬದಲಾಯಿಸುವ ಅವರ ಕಲ್ಪನೆಯು ಇನ್ನೂ ಸ್ಪಷ್ಟವಾಗಿಲ್ಲ. ಅವರ ಕಾರ್ಯನಿರ್ವಾಹಕ ಆದೇಶವು ಸಾಮಾಜಿಕ ಮಾಧ್ಯಮ ಸೈಟ್‌ಗಳ ನಿಯಂತ್ರಣವನ್ನು ಹೆಚ್ಚಿಸಲು ಮತ್ತು ಸೆಕ್ಷನ್ 230 ರ ಅಡಿಯಲ್ಲಿ ತಮ್ಮನ್ನು ಕಾನೂನು ಪ್ರಕ್ರಿಯೆಯಿಂದ ರಕ್ಷಿಸಿಕೊಳ್ಳಲು ಅನುಮತಿಸಬೇಕೇ ಎಂದು ಮರುಪರಿಶೀಲಿಸುವಂತೆ ಕೇಳುತ್ತದೆ. ಅವರು ಈ ವಿಷಯವನ್ನು ಕಾಂಗ್ರೆಸ್‌ ನಲ್ಲಿ ಚರ್ಚಿತವಾಗುವಂತೆ ಮಾಡಿದರು. ನಂತರದ ಬೆಳವಣಿಗೆಯೇ ಟ್ರಂಪ್‌ ಅವರು ಕೈಗೊಂಡಿರುವ ನಿರ್ಧಾರ ಆಗಿದೆ.

ಅಮೇರಿಕಾ ಅಧ್ಯಕ್ಷರ ಈ ಪ್ರಸ್ತಾವನೆಗೆ ಟ್ವಿಟರ್‌ ತನ್ನ ಟ್ವೀಟ್‌ ಗಳಲ್ಲಿ ಫ್ಯಾಕ್ಟ್‌ ಚೆಕ್‌ ನ ಎಚ್ಚರಿಕೆಯನ್ನು ಪದೇ ಪದೇ ನೀಡುತ್ತಿದೆ. ಫೇಸ್ಬುಕ್ ಮತ್ತು ಮಾರ್ಕ್ ಜುಕರ್‌ಬರ್ಗ್ ವಿಭಿನ್ನವಾದ ಕ್ರಮವನ್ನು ಕೈಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮವು ವಾಸ್ತವ ಪರಿಶೀಲನೆಗೆ ಅವಕಾಶ ನೀಡಬಾರದು ಎಂದು ವಾದಿಸುತ್ತಿದೆ.

ಮೇಲಿನ ವಿದ್ಯಮಾನಗಳು ಏನೇ ಇರಲಿ ಈಗ ಸಾಮಾಜಿಕ ತಾಣಗಳನ್ನೂ ಹೊಣೆಗಾರರನ್ನಾಗಿ ಮಾಡುವುದರಿಂದ ಸಾಮಾಜಿಕ ತಾಣಗಳು ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಇವುಗಳ ಹೊಣೆಗಾರಿಕೆಯೂ ಹೆಚ್ಚಾಗುತ್ತದೆ. ನಮ್ಮ ದೇಶದಲ್ಲಿ ಈವರೆಗೂ ಇಂತಹ ಕಾಯ್ದೆ ಇಲ್ಲ. ಇದನ್ನು ನಮ್ಮ ದೇಶವೂ ಕಾಯ್ದೆ ತಿದ್ದುಪಡಿಯ ಮೂಲಕ ಜಾರಿಗೆ ತಂದರೆ ಹೆಚ್ಚಿನ ಅನುಕೂಲವಿದೆ. ಏಕೆಂದರೆ ನೂರಾರು ಪ್ರಕರಣಗಳು ಪೋಲೀಸ್‌ ಠಾಣೆಗೆ ಹೋಗುವುದನ್ನು ತಡೆಯಬಹುದಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಸಾಮಾಜಿಕ ತಾಣಗಳಿಂದ ಸಹಸ್ರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ.

ನಮ್ಮ ದೇಶದಲ್ಲಿ ಇಂದು ವಿವಿಧ ರಾಜಕೀಯ ಪಕ್ಷಗಳು ತಮ್ಮದೇ ಆದ ಐಟಿ ಸೇನೆಯನ್ನೇ ಹೊಂದಿವೆ. ಅನೇಕ ಬಾರಿ ಈ ಸೇನೆಯ ಕೆಲಸಗಾರರು ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಎಂದೋ ನಡೆದ ಘಟನೆಗೆ ಯಾವುದೋ ಘಟನೆಯನ್ನು ವೀಡಿಯೋ ಎಡಿಟಿಂಗ್‌ ಮಾಡಿ ಹರಿ ಬಿಡುತ್ತಾರೆ. ಇವು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಶೇರ್‌ ಆಗಿರುತ್ತವೆ. ನಂತರ ಯಾರಾದರೂ ʼಫ್ಯಾಕ್ಟ್‌ ಚೆಕ್‌ʼ ಮಾಡಿದಾಗ ಸತ್ಯ ಗೊತ್ತಾಗುತ್ತದೆ. ಆದರೆ ಸುಳ್ಳು ಉಂಟು ಮಾಡಿರುವ ಪರಿಣಾಮ ಸತ್ಯ ಉಂಟು ಮಾಡುವುದಿಲ್ಲ ಎಂಬುದು ಕಟು ಸತ್ಯ.

Tags: America‌covid-19Donald Trumpsection 230ಅಮೆರಿಕಾಕೋವಿಡ್-19ಡೊನಾಲ್ಡ್ ಟ್ರಂಪ್ಸೆಕ್ಷನ್‌ 230
Previous Post

ವಲಸೆ ಕಾರ್ಮಿಕರಿಗೂ ಕಿಸಾನ್ ಸಮ್ಮಾನ್ ಯೋಜನೆಯಡಿ ಸಿಗಲಿದೆ 6,000 ರೂ.!

Next Post

ಕರೋನಾ ಭ್ರಷ್ಟಾಚಾರ: ತನಿಖೆಗೆ ತಡೆಯೊಡ್ಡಿದ ಸ್ಪೀಕರ್

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ಕರೋನಾ ಭ್ರಷ್ಟಾಚಾರ: ತನಿಖೆಗೆ ತಡೆಯೊಡ್ಡಿದ ಸ್ಪೀಕರ್

ಕರೋನಾ ಭ್ರಷ್ಟಾಚಾರ: ತನಿಖೆಗೆ ತಡೆಯೊಡ್ಡಿದ ಸ್ಪೀಕರ್

Please login to join discussion

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada