• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಜಿಎಸ್‌ಟಿ ಅನ್ಯಾಯ; ಪ್ರಶ್ನೆ ಮಾಡುವ ತಾಕತ್ತು 25 ಬಿಜೆಪಿ ಸಂಸದರ ಪೈಕಿ ಒಬ್ಬರಿಗೂ ಇಲ್ಲವೇ?

by
April 23, 2020
in ದೇಶ
0
ಜಿಎಸ್‌ಟಿ ಅನ್ಯಾಯ; ಪ್ರಶ್ನೆ ಮಾಡುವ ತಾಕತ್ತು 25 ಬಿಜೆಪಿ ಸಂಸದರ ಪೈಕಿ ಒಬ್ಬರಿಗೂ ಇಲ್ಲವೇ?
Share on WhatsAppShare on FacebookShare on Telegram

ಕೊರೋನಾ ಬೆನ್ನಿಗೆ ಎಲ್ಲಾ ರಾಜ್ಯಗಳನ್ನೂ ಇನ್ನಿಲ್ಲದಂತೆ ಕಾಡುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ಜಿಎಸ್‌ಟಿ ಪಾಲು. ಈಗಾಗಲೇ ಮಾರಣಾಂತಿಕ ಕೊರೋನಾ ವೈರಸ್ ಎಲ್ಲಾ ರಾಜ್ಯಗಳನ್ನೂ ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ದೇಶದ ವಾಣಿಜ್ಯ ವಹಿವಾಟು ಸಂಪೂರ್ಣವಾಗಿ ಸ್ತಬ್ಧವಾಗಿದೆ. ಮೊದಲೇ ಖಾಲಿ ಖಜಾನೆಯೊಂದಿಗೆ ಅಧಿಕಾರಕ್ಕೇರಿದ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದ್ದರೆ, ಮತ್ತೊಂದೆಡೆ ಜಿಎಸ್‌ಟಿ ಪಾಲು ಎಂಬುದು ಬಿಸಿ ತುಪ್ಪವಾಗಿದೆ.

ADVERTISEMENT

ನೋಟು ಅಮಾನ್ಯೀಕರಣದ ನಂತರ ಕೇಂದ್ರ ಸರ್ಕಾರ ಜಾರಿ ತಂದ ತೆರಿಗೆ ಸುಧಾರಣಾ ನೀತಿಯೇ ಈ ಜಿಎಸ್‌ಟಿ. ಜಿಎಸ್‌ಟಿ ಜಾರಿಯಿಂದ ರಾಜ್ಯದ ತೆರಿಗೆ ಹಕ್ಕು ಚ್ಯುತಿಯಾಗುತ್ತದೆ ಎಂಬ ವಿರೋಧ ಪಕ್ಷದ ವಿರೋಧದ ನಡುವೆಯೂ ಇದನ್ನು ಜಾರಿಗೊಳಿಸಲಾಗಿತ್ತು.

ಆರಂಭದಲ್ಲಿ ಜಿಎಸ್‌ಟಿ ಜಾರಿಗೆ ಬಂದರೆ ತೆರಿಗೆ ಸಂಗ್ರಹದ ಪ್ರಮಾಣ ಏರಲಿದೆ. ಈ ಮೂಲಕ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದೇ ಕೇಂದ್ರ ಸರ್ಕಾರ ಹೇಳಿಕೊಂಡಿತ್ತು. ಅಲ್ಲದೆ, ಜಿಎಸ್‌ಟಿಯಿಂದಾಗಿ ಹೊಸದಾಗಿ ತೆರಿಗೆ ಪಟ್ಟಿಗೆ ಸೇರಿದವರ ಸಂಖ್ಯೆಯನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ, ಇದರ ಲಾಭ ಮಾತ್ರ ಈವರೆಗೆ ರಾಜ್ಯ ಸರ್ಕಾರಗಳಿಗೆ ಅದರಲ್ಲೂ ಬಹುಮುಖ್ಯವಾಗಿ ಕರ್ನಾಟಕಕ್ಕೆ ನ್ಯಾಯಯುತವಾಗಿ ಬಂದಂತೆ ಕಾಣಿಸುತ್ತಿಲ್ಲ.

ಚಿತ್ರ ಕೃಪೆ: Bloomberg Quint

ಈ ನಡುವೆ ಎಲ್ಲಾ ರಾಜ್ಯಗಳೂ ಕೊರೋನಾ ವಿರುದ್ಧ ಹೋರಾಟಕ್ಕೆ ಹಣವಿಲ್ಲದೆ ಪರಿತಪಿಸುತ್ತಿರುವ ಇಂತಹ ಸಂದರ್ಭದಲ್ಲಿ ಕೊನೆಗೂ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಜಿಎಸ್‌ಟಿ ಪಾಲನ್ನು ನೀಡಿದೆ. ಆದರೆ, ಜಿಎಸ್‌ಟಿ ಪಾಲಿನಲ್ಲಿ ರಾಜ್ಯಕ್ಕೆ ಎಂದಿನಂತೆ ಆಗಿರುವುದು ಮತ್ತದೇ ಅನ್ಯಾಯ.

ಉತ್ತರ ಪ್ರದೇಶಕ್ಕೆ ಜಿಎಸ್‌ಟಿ ಪಾಲಿನಲ್ಲಿ ಬರೋಬ್ಬರಿ 8,255 ಕೋಟಿ ನೀಡಿರುವ ಕೇಂದ್ರ ಸರ್ಕಾರ, ದಕ್ಷಿಣ ರಾಜ್ಯಗಳಾದ ತಮಿಳುನಾಡಿಗೆ 1,929 ಕೋಟಿ, ಆಂಧ್ರಪ್ರದೇಶಕ್ಕೆ 1,893 ಕೋಟಿ, ಕರ್ನಾಟಕಕ್ಕೆ 1,679 ಕೋಟಿ, ತೆಲಂಗಾಣಕ್ಕೆ 982 ಕೋಟಿ ಮತ್ತು ಕೇರಳಕ್ಕೆ 894 ಕೋಟಿ ಹಣ ನೀಡಿದೆ. ಈ ಮೂಲಕ ಕರ್ನಾಟಕ ಸೇರಿದಂತೆ ಎಲ್ಲಾ ದಕ್ಷಿಣ ರಾಜ್ಯಗಳಿಗೆ ಮತ್ತೊಮ್ಮೆ ತಾರತಮ್ಯವೆಸಗಿದೆ.

ತೆರಿಗೆಯಲ್ಲಿ ಕರ್ನಾಟಕದ ಪಾಲು ಎಷ್ಟು ಗೊತ್ತೇ?

ಕೇಂದ್ರ ತೆರಿಗೆ ಇಲಾಖೆಯೇ ನೀಡುವ ಅಂಕಿಅಂಶಗಳ ಪ್ರಕಾರ ತೆರಿಗೆ ಸಂಗ್ರಹದಲ್ಲಿ ದೆಹಲಿ, ಮಹಾರಾಷ್ಟ್ರ ನಂತರದ 3ನೇ ಸ್ಥಾನದಲ್ಲಿ ಕರ್ನಾಟಕ ಇದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ರಾಜಸ್ವದ ಪಾಲಾಗಿ ಕರ್ನಾಟಕ ಅಪಾರ ಪ್ರಮಾಣ ತೆರಿಗೆ ಹಣ ನೀಡುತ್ತಿದೆ. 14ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯದ ತೆರಿಗೆ ಪಾಲು ಶೇ.42ರಷ್ಟು. ಇವನ್ನೆಲ್ಲಾ ಲೆಕ್ಕ ಹಾಕಿ ನೋಡಿದರೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಪಾರ ಹಣವನ್ನು ಹಿಂದಿರುಗಿಸಬೇಕು.

ಆದರೆ, ಕೇಂದ್ರ ಸರ್ಕಾರವೋ ಕೇಂದ್ರದ ಅನುದಾನ ಅಡಿಯಲ್ಲಿ ರಾಜ್ಯಕ್ಕೆ ನೀಡಬೇಕಾದ ಸುಮಾರು 17,000 ಕೋಟಿ ರೂ. ಹಣವನ್ನು ಮನ್ನಾ ಮಾಡಿದೆ. ಅಲ್ಲದೆ, ರಾಜ್ಯದ ಜಿಎಸ್‌ಟಿ ಪಾಲು ಹಾಗೂ ಪ್ರವಾಹ ಪರಿಹಾರ ನಿಧಿಯನ್ನೂ ನ್ಯಾಯಯುತವಾಗಿ ನೀಡಿಲ್ಲದಿರುವುದು ವಿಪರ್ಯಾಸ.

ಕರ್ನಾಟಕಕ್ಕೆ ಕಳೆದ 5 ವರ್ಷದಲ್ಲಿ ಆಗಿರುವ ಜಿಎಸ್‌ಟಿ ನಷ್ಟ ಎಷ್ಟು ಗೊತ್ತೇ?

ಅಂಕಿಅಂಶಗಳ ಪ್ರಕಾರ 2019-20 ನೇ ವಾರ್ಷಿಕ ಸಾಲಿನಲ್ಲಿ ಜಿಎಸ್‌ಟಿ ತೆರಿಗೆ ರೂಪದಲ್ಲಿ ಕರ್ನಾಟಕಕ್ಕೆ ಸಂದಾಯವಾಗಬೇಕಿದ್ದ ನಮ್ಮ ಪಾಲಿನ ರೂ. 9,000 ಕೋಟಿ ತೆರಿಗೆ ಹಣ ಈಗಾಗಲೇ ಖೋತಾ ಆಗಿದೆ. ಇನ್ನೂ 2020-21 ನೇ ಸಾಲಿನಲ್ಲಿ 11,000 ಕೋಟಿಗೂ ಅಧಿಕ ಹಣ ಕಡಿಮೆಯಾಗಿದೆ. ಈ ನಡುವೆ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲವೇಕಾದ ನೆರೆ-ಬರ ಪರಿಹಾರ ಹಣವೂ ಸಂದಾಯವಾಗಿಲ್ಲ. ಇವನ್ನೆಲ್ಲಾ ಲೆಕ್ಕಾ ಹಾಕಿದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳೆದ 5 ವರ್ಷದ ಅವಧಿಯಲ್ಲಿ ಕನಿಷ್ಟ 60,000 ಕೋಟಿ ರೂ ರಾಜ್ಯದ ಪಾಲಿನ ಹಣ ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ.

ನಮ್ಮ ಹಣ ಉತ್ತರಪ್ರದೇಶ-ಗುಜರಾತ್‌ಗೆ ಏಕೆ?

ಕೇಂದ್ರಕ್ಕೆ ಕರ್ನಾಟಕ ತೆರಿಗೆ ಸಂಗ್ರಹ ರೂಪದಲ್ಲಿ ರೂ.100 ನೀಡಿದರೆ ರೂ.42 ಮಾತ್ರ ರಾಜ್ಯಕ್ಕೆ ವಾಪಾಸು ಬರುತ್ತಿದೆ. ಆದರೆ, ಉತ್ತಪ್ರದೇಶಕ್ಕೆ ರೂ.198, ಗುಜರಾತ್ಗೆ ರೂ.235 ವಾಪಾಸು ನೀಡಲಾಗುತ್ತಿದೆ. ಕರ್ನಾಟದಿಂದ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತಿರುವ ಹಣವನ್ನು ಹೀಗೆ ಉತ್ತರಪ್ರದೇಶ-ಗುಜರಾತ್ಗೆ ನಾವೇಕೆ ಕೊಡಬೇಕು? ಎಂಬುದು ಪ್ರಮುಖ ಪ್ರಶ್ನೆ.

ಬಿಹಾರ, ಉತ್ತರ ಪ್ರದೇಶಗಳೇನೋ ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಆದರೆ, ಗುಜರಾತಿಗೇನಾಗಿದೆ? ಕರ್ನಾಟಕದ ಜನರೇಕೆ ಗುಜರಾತಿನ ಉದ್ಧಾರಕ್ಕೆ ಹಣ ನೀಡಬೇಕು? ಗುಜರಾತ್ ಮಾದರಿ ಹೇಳಕೊಂಡೇ ನರೇಂದ್ರ ಮೋದಿಯವರು ಪ್ರಧಾನಿಯಾದರು. ಹಾಗಿದ್ದರೆ ಗುಜರಾತ್ ಮಾದರಿ ಸುಳ್ಳೇ? ಎಂಬುದು ಮತ್ತೊಂದು ಪ್ರಶ್ನೆ. ಆದರೆ, ಈ ಯಾವ ಪ್ರಶ್ನೆಗೂ ಈವರೆಗೆ ಉತ್ತರ ಮಾತ್ರ ದಕ್ಕಿಲ್ಲ.

ಸಾಮಾನ್ಯವಾಗಿ ಒಂದು ಹಣಕಾಸು ಆಯೋಗದಿಂದ ಇನ್ನೊಂದು ಹಣಕಾಸು ಆಯೋಗಕ್ಕೆ ಬದಲಾದಾಗ ರಾಜ್ಯದ ತೆರಿಗೆ ಪಾಲು ಹೆಚ್ಚಾಗಬೇಕಿತ್ತು, ದುರಂತವೆಂದರೆ ವರ್ಷ ಕಳೆದಂತೆ ಕರ್ನಾಟಕದ ಪಾಲು ಮಾತ್ರ ಕಡಿಮೆಯಾಗುತ್ತಲೇ ಇದೆ ಎಂಬುದು ವಿರೋಧ ಪಕ್ಷಗಳ ನಿರಂತರ ಟೀಕೆ.

ಕೊರೋನಾ ಸಂದರ್ಭದಲ್ಲೂ ಕರ್ನಾಟಕ್ಕೆ ಅನ್ಯಾಯವೇಕೆ?

ಇತಿಹಾಸ ಕಾಣದ ನೆರೆ ಮತ್ತು ಬರದಿಂದಾಗಿ ಈಗಾಗಲೇ ಕರ್ನಾಟಕ ಕಂಗಾಲಾಗಿದೆ. ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಸ್ವತಃ ಸಿಎಂ ಬಿಎಸ್ವೈ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ನಡುವೆ ಅಪ್ಪಳಿಸಿರುವ ಮಾರಣಾಂತಿಕ ಕೊರೋನಾ ವೈರಸ್ ಇಡೀ ರಾಜ್ಯದ ಹಣಕಾಸು ವ್ಯವಸ್ಥೆಯನ್ನೇ ಹಿಂಡಿ ಹಿಪ್ಪೆ ಮಾಡಿದೆ.

ಸರ್ಕಾರಿ ಮೂಲಗಳೇ ಹೇಳುವ ಪ್ರಕಾರ ರಾಜ್ಯದಲ್ಲಿ ಕೊರೋನಾ ವಿರುದ್ಧ ಹೋರಾಡುವಷ್ಟು ಹಣಕಾಸು ಸೌಲಭ್ಯ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ನೆಚ್ಚಿಕೊಂಡಿರುವುದು ಜಿಎಸ್‌ಟಿ ಹಣವನ್ನು ಮಾತ್ರ. ಆದರೆ, ಅದರಲ್ಲೂ ರಾಜ್ಯಕ್ಕೆ ನಿರಂತರವಾಗಿ ತಾರತಮ್ಯ ಎಸಗಲಾಗುತ್ತಿದೆ. ಈ ಬಾರಿಯ ಜಿಎಸ್‌ಟಿ ಪಾಲನ್ನೂ ನ್ಯಾಯಯುತವಾಗಿ ನೀಡಿಲ್ಲ. ಕರ್ನಾಟಕಕ್ಕೆ ಮಾತ್ರ ಏಕೆ ಈ ನಿರಂತರ ತಾರತಮ್ಯ? ರಾಜ್ಯದಿಂದ 25 ಜನ ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದಾಗ್ಯೂ ರಾಜ್ಯಕ್ಕೆ ಆದ ಲಾಭವೇನು? ಈ ಅನ್ಯಾಯಕ್ಕೆ ಕೊನೆ ಎಂದು? ಈ ಎಲ್ಲಾ ಪ್ರಶ್ನೆಗೆ ಉತ್ತರಿಸುವವರಾರು?

Tags: BJP MPGSTGST shareKarnatakaUttara Pradeshಕರ್ನಾಟಕಜಿಎಸ್‌ಟಿಬಿಜೆಪಿ ಸಂಸದ
Previous Post

ಕರೋನಾ ಸೇನಾನಿಗಳಿಗೆ ಕಠಿಣ ಕಾನೂನು ಬಲ: ಕರಾಳ ದಿನ ಕೈಬಿಟ್ಟ ವೈದ್ಯರು

Next Post

ಲಾಕ್‌ಡೌನ್‌ ವಿನಾಯಿತಿ ನಿರ್ಧಾರ ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಲಿದೆಯೇ?

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
Next Post
ಲಾಕ್‌ಡೌನ್‌ ವಿನಾಯಿತಿ ನಿರ್ಧಾರ ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಲಿದೆಯೇ?

ಲಾಕ್‌ಡೌನ್‌ ವಿನಾಯಿತಿ ನಿರ್ಧಾರ ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಲಿದೆಯೇ?

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada