• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮೇಡ್ ಇನ್ ಚೈನಾ; ತಿರಸ್ಕರಿಸಿದ ವಿಶ್ವ.. ಮುಗಿಬಿದ್ದ ಭಾರತ!

by
April 18, 2020
in ದೇಶ
0
ಮೇಡ್ ಇನ್ ಚೈನಾ; ತಿರಸ್ಕರಿಸಿದ ವಿಶ್ವ.. ಮುಗಿಬಿದ್ದ ಭಾರತ!
Share on WhatsAppShare on FacebookShare on Telegram

‘ಮೇಡ್ ಇನ್ ಚೈನಾ’ ಎಂದರೆ, ಬಾಳಿಕೆ ಕಡಿಮೆ ಎನ್ನುವ ಮಾತಿದೆ. ಕಡಿಮೆ ಬೆಲೆಗೆ ಸಿಗುವ ʼಮೇಡ್ ಇನ್ ಚೈನಾʼ ವಸ್ತುಗಳಿಗೆ ಯಾವುದೇ ಗ್ಯಾರಂಟಿ ವ್ಯಾರಂಟಿ ಇರುವುದಿಲ್ಲ. ಇದೇ ಕಾರಣಕ್ಕಾಗಿ ಕೋವಿಡ್-19 ಭಾರತಕ್ಕೆ ಎಂಟ್ರಿಕೊಟ್ಟ ಮೊದಮೊದಲು ಒಂದು ಕಾಮಿಡಿ ಕೂಡ ಹುಟ್ಟಿಕೊಂಡಿತ್ತು. ಅಪ್ಪ ಮಗನಿಗೆ ಕರೋನಾ ವೈರಸ್ ಬಂದಿದೆ ಶಾಲೆಗೆ ಹೋಗುವಾಗ ಮಾಸ್ಕ್ ಹಾಕೊಂಡು ಹೋಗು ಎಂದು ಹೇಳುತ್ತಾನೆ. ಮಗಾ “ಯಾಕಪ್ಪ?” ಅಂತಾನೆ. “ಕರೋನಾ ಬಂದಿದೆ ಗೊತ್ತಿಲ್ವೇನು?” ಎಂದು ಮರು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಮಗ “ಕರೋನಾ ಬಂದಿರೋದು ಎಲ್ಲಿಂದ ಹೇಳು.. ಚೀನಾದಿಂದ, ಚೀನಾ ವಸ್ತುಗಳಿಗೆ ಯಾವುದಕ್ಕಾದರೂ ಗ್ಯಾರಂಟಿ ಇದೆಯಾ? ಅಂತಾ ತಂದೆಯನ್ನೇ ಅವಾಕ್ಕಾಗಿಸುತ್ತಾನೆ. ಇದು ಕಾಮಿಡಿಗಾಗಿ ಮಾಡಿದ್ದರೂ ಇದೀಗ ಸತ್ಯ ಎನ್ನುವಂತಾಗಿದೆ. ಆದರೆ ಕರೋನಾ ಸೋಂಕಿನ ಮೇಲಿನ ಗ್ಯಾರಂಟಿ ಅಲ್ಲ. ಅದರ ಬದಲಿಗೆ ಕರೋನಾ ಸೋಂಕನ್ನು ಪತ್ತೆ ಮಾಡಲು ಬಳಸುತ್ತಿರುವ ರ‍್ಯಾಪಿಡ್ ಟೆಸ್ಟಿಂಗ್ ಕಿಟ್‌ಗಳ ಮೇಲೆ ಭಾರೀ ಅನುಮಾನ ಮೂಡುವಂತಾಗಿದೆ.

ADVERTISEMENT

ಚೀನಾದಲ್ಲಿ ಮೊದಲು ಕಾಣಿಸಿಕೊಂಡಿದ್ದ ಕರೋನಾ ವೈರಸ್ ನಿಧಾನವಾಗಿ ವಿಶ್ವವನ್ನೇ ನುಂಗಿ ಹಾಕುವತ್ತ ದಾಪುಗಾಲು ಇಟ್ಟಿದೆ. ವಿಶ್ವದಲ್ಲಿ ಬರೋಬ್ಬರಿ 23 ಲಕ್ಷ ಜನರು ಈ ಹೆಮ್ಮಾರಿ ಕರೋನಾ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ. ಅದರಲ್ಲಿ ಒಂದೂವರೆ ಲಕ್ಷ ಜನರು ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಈ ರೀತಿಯ ಚಂಡಮಾರುತವನ್ನೇ ಸೃಷ್ಟಿ ಮಾಡಿರುವ ಕರೋನಾ ವೈರಸ್ ಪತ್ತೆ ಮಾಡಲು ಚೀನಾ ಒಂದು ಸಲಕರಣೆಯನ್ನು ಪತ್ತೆ ಮಾಡಿದೆ. ಈ ಟೆಸ್ಟ್ ಕಿಟ್‌ಗಳಲ್ಲಿ ಕೆಲವೇ ಸಮಯದಲ್ಲಿ ಕರೋನಾ ಸೋಂಕು ಇದೆಯೋ ಇಲ್ಲವೋ ಎನ್ನುವ ಬಗ್ಗೆ ಫಲಿತಾಂಶ ಹೇಳಿಬಿಡಬಹುದು. ರಿಯಲ್ ಟೈಂ ಪಿಸಿಆರ್ ಟೆಸ್ಟ್‌ನಲ್ಲಿ ಶೇಕಡವಾರು 99.9 ರಷ್ಟು ನಿಖರ ವರದಿ ಸಿಗಲಿದ್ದು, ರ‍್ಯಾಪಿಡ್ ಟೆಸ್ಟ್ ಕಿಟ್‌ ನಲ್ಲಿ ಶೇಕಡವಾರು 80 ಖಚಿತ ಮತ್ತು ವೇಗವಾದ ವರದಿ ಸಿಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಭಾರತ 6.5 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್ ಆಮದು ಮಾಡಿಕೊಳ್ಳುತ್ತಿದ್ದು, ಅದರಲ್ಲಿ ಕರ್ನಾಟಕಕ್ಕೆ 1 ಲಕ್ಷ ರ್ಯಾಪಿಡ್ ಕಿಟ್ ಸಿಗುವ ಭರವಸೆ ವ್ಯಕ್ತಪಡಿಸಿದ್ದರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್.

ಇದೀಗ ಉನ್ನತ ಶಿಕ್ಷಣ ಸಚಿವ ಡಿಸಿಎಂ ಅಶ್ವತ್ಥ ನಾರಯಣ ನೀಡುವ ಮಾಹಿತಿಯಂತೆ ಕೇವಲ ಕರ್ನಾಟಕಕ್ಕೆ 2 ಲಕ್ಷ ರ‍್ಯಾಪಿಡ್ ಕಿಟ್‌ ಗಳಿಗಾಗಿ ಆರ್ಡರ್ ಕೊಡಲಾಗಿದೆ. ಈ ತಿಂಗಳಾಂತ್ಯಕ್ಕೆ ಕೆಲವು ಕಿಟ್‌ಗಳು ಬರುತ್ತವೆ ಎಂದಿದ್ದಾರೆ. ಡಿಸಿಎಂ ಅಶ್ವತ್ಥ ನಾರಾಯಣ ನೇತೃತ್ವದ ಕೋವಿಡ್-19 ʼಟಾಸ್ಕ್ ಫೋರ್ಸ್ʼ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚೀನಾ ಸರ್ಕಾರವೇ ಪಟ್ಟಿ ಮಾಡಿರುವ ಅಧಿಕೃತ ಸಂಸ್ಥೆಗೆ ಆರ್ಡರ್ ಕೊಟ್ಟಿದ್ದು, ರ್ಯಾಪಿಡ್‌ ಕಿಟ್ ಸಿಗುತ್ತಿದ್ದಂತೆ ರಾಜ್ಯದಲ್ಲಿ 250 ಕಿಯೋಸ್ಕ್ ಕೇಂದ್ರಗಳನ್ನು ತೆರೆದು ಪರೀಕ್ಷೆ ಮಾಡಲಾಗುತ್ತದೆ ಎಂದಿದ್ದಾರೆ. ಆದರೆ ಈ ಚೀನಾದಲ್ಲಿ ಜನನವಾದ ಕರೋನಾ ವೈರಸ್ ಪತ್ತೆಗೆ ಚೀನಾ ನಿರ್ಮಿತ ರ‍್ಯಾಪಿಡ್ ಕಿಟ್ ಉಪಯೋಗಕ್ಕೆ ಬರುತ್ತಾ ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ. ಯಾಕಂದ್ರೆ ಇದೇ ಚೀನಾ ನಿರ್ಮಿತ ರ‍್ಯಾಪಿಡ್ ಟೆಸ್ಟ್ ಕಿಟ್‌ ಗಳನ್ನು ವಿಶ್ವದ ಏಳು ರಾಷ್ಟ್ರಗಳು ತಿರಸ್ಕಾರ ಮಾಡಿವೆ. ಚೀನಾ ಕಳುಹಿಸಿದ್ದ ಅಷ್ಟೂ ಕಿಟ್‌ ಗಳನ್ನು ವಾಪಸ್ ಕಳುಹಿಸಲಾಗಿದೆ. ಅಂತಹದರಲ್ಲಿ ಭಾರತ ಸರ್ಕಾರ ಚೀನಾ ನಿರ್ಮಿತ ಟೆಸ್ಟ್ ಕಿಟ್ ಪಡೆಯಲು ಚೀನಾ ಹಿಂದೆ ದುಂಬಾಲು ಬಿದ್ದಿದೆ ಎನ್ನುವುದೇ ಆಶ್ಚರ್ಯ.

ಈಗಾಗಲೇ ನಮ್ಮ ದೇಶದಲ್ಲಿ ಪರೀಕ್ಷೆ ಮಾಡಲು ಬಳಸುತ್ತಿರುವ ವಿಧಾನ ʼರಿಯಲ್ ಟೈಂ ಪಿಸಿಆರ್ ಟೆಸ್ಟ್‌ʼನಲ್ಲಿ ಶೇಕಡವಾರು 99.9 ರಷ್ಟು ನಿಖರ ವರದಿ ಸಿಗಲಿದೆ ಎಂದಿದ್ದಾರೆ ತಜ್ಞರು. ಆದರೆ ಚೀನಾ ನಿರ್ಮಿತ ರ್ಯಾಪಿಡ್ ಟೆಸ್ಟ್ ಕಿಟ್‌ನಲ್ಲಿ ಶೇಕಡವಾರು ಫಲಿತಾಂಶ ಕೇವಲ 30 ರಿಂದ 35 ರಷ್ಟು ನಿಖರತೆ ಹೊಂದಿರುತ್ತದೆ ಎನ್ನಲಾಗಿದೆ. ಈಗಾಗಲೇ ವಿಶ್ವದ 7 ರಾಷ್ಟ್ರಗಳು ಚೀನಾ ನಿರ್ಮಿತ ಕರೋನಾ‌ ರ್ಯಾಪಿಡ್ ಕಿಟ್‌ ಗಳನ್ನು ತಿರಸ್ಕರಿಸಿ ವಾಪಸ್ ಕಳುಹಿಸಿವೆ. ಆದರೆ ನಮ್ಮ ಭಾರತ ಚೀನಾದ ರ‍್ಯಾಪಿಡ್ ಟೆಸ್ಟ್ ಕಿಟ್‌ ಗಳಿಗಾಗಿ ಆಸೆಗಣ್ಣಿನಿಂದ ಕಾಯುತ್ತಿದೆ. ಯೂರೋಪಿಯನ್ ರಾಷ್ಟ್ರಗಳಾದ ಸ್ಪೈನ್, ಟರ್ಕಿ, ಜಾರ್ಜಿಯಾ, ಚೆಕ್ ರಿಪಬ್ಲಿಕ್, ನೆದರ್ಲ್ಯಾಂಡ್ ದೇಶಗಳು ಕೂಡ ಚೀನಾ ನಿರ್ಮಿತ ರ್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ತಿರಸ್ಕಾರ ಮಾಡಿವೆ. ಚೀನಾ ನಿರ್ಮಿತಿ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳು ಸರಿಯಾದ ಫಲಿತಾಂಶ ನೀಡುತ್ತಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ, ಚೀನಾಗೆ ಕಿಟ್‌ ಗಳನ್ನು ವಾಪಸ್ ಮಾಡಿವೆ.

ರ‍್ಯಾಪಿಡ್ ಟೆಸ್ಟ್ ಕಿಟ್ ಮಾತ್ರವಲ್ಲದೆ ಮಾಸ್ಕ್‌ ಗಳಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಫಿಲ್ಟರ್‌ಗಳು ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ʼಡಚ್ ಹೆಲ್ತ್ ಮಿನಿಸ್ಟ್ರಿʼ ತಿಳಿಸಿದೆ. ಐದೂವರೆ ಲಕ್ಷ ಟೆಸ್ಟ್ ಕಿಟ್‌ ಗಳನ್ನು ಖರೀದಿ ಮಾಡಿ ಹಂಚಿಕೆ ಮಾಡಿದ್ದ ಸ್ಪೈನ್ ಸರ್ಕಾರ, ಕಿಟ್‌ಗಳು ಸರಿಯಿಲ್ಲ ಎಂದು ಘೋಷಣೆ ಮಾಡಿದ ಬಳಿಕ 9 ಸಾವಿರ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಚೀನಾಗೆ ವಾಪಸ್ ಕಳುಹಿಸಿದೆ. ಗುಣಮಟ್ಟ ಸರಿಯಿಲ್ಲ ಎಂದು ವಿಶ್ವದ ಹಲವು ರಾಷ್ಟ್ರಗಳು ವಾಪಸ್ ಮಾಡುತ್ತಿರುವಾಗ ಭಾರತ ಸರ್ಕಾರ ಇಷ್ಟೆಲ್ಲಾ ನೋಡಿಯೂ ಚೀನಾದಿಂದ ರ‍್ಯಾಪಿಡ್ ಟೆಸ್ಟ್ ಕಿಟ್ ತರಿಸುತ್ತಿದೆ. ಸರ್ಕಾರದ ಉದ್ದೇಶ ಶೀಘ್ರ ತಪಾಸಣೆ ಆಗಿದ್ದರೂ ಕರೋನಾ ಸೋಂಕಿತರಾಗಿದ್ದರೂ ಈ ರ್ಯಾಪಿಡ್‌ ಟೆಸ್ಟ್ ಕಿಟ್ ನಲ್ಲಿ ಸರಿಯಾಗಿ ಪತ್ತೆಯಾಗದಿದ್ದರೆ ಮತ್ತೊಂದು ದೊಡ್ಡ ತಲೆನೋವು ಶುರುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Tags: ashwath narayanCorona OutbreakCovid 19Dr Sudhakarmade in chinarapid test kitಅಶ್ವತ್ಥ ನಾರಾಯಣಕೋವಿಡ್-19ಡಾ.ಸುಧಾಕರ್‌ಮೇಡ್‌ ಇನ್‌ ಚೈನಾರ್ಯಾಪಿಡ್‌ ಟೆಸ್ಟ್‌ ಕಿಟ್‌
Previous Post

ಜಿಡಿಪಿ ಕುಸಿತ ತಡೆಗೆ ಒದಗಿಬರಲಿದೆಯೇ ಮೇಟಿ ವಿದ್ಯೆಯ ಬಲ?

Next Post

KPCL ನಲ್ಲಿ ಭ್ರಷ್ಟಾಚಾರ ಆರೋಪ: ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಸಾಧ್ಯತೆ!

Related Posts

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..
Top Story

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

by ಪ್ರತಿಧ್ವನಿ
April 30, 2026
0

ಹಾವೇರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುವ ಆಸೆ ಇದೆ ಅಂದಿದ್ದಾರೆ ಮೇ 4 ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ ಇಲ್ವವೊ...

Read moreDetails
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
Next Post
KPCL ನಲ್ಲಿ ಭ್ರಷ್ಟಾಚಾರ ಆರೋಪ: ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಸಾಧ್ಯತೆ!

KPCL ನಲ್ಲಿ ಭ್ರಷ್ಟಾಚಾರ ಆರೋಪ: ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಸಾಧ್ಯತೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada