ಭಾನುವಾರ ನಡೆದಂತಹ ಮಹಿಳೆಯರ ಟಿ ಟ್ವೆಂಟಿ ಕ್ರಿಕೇಟ್‌ನಲ್ಲಿ ಇದೇ ಮೊದಲ ಬಾರಿಗೆ ನಮ್ಮ ಭಾರತದ ಮಹಿಳಾ ಕ್ರಿಕೆಟ್ ತಂಡವು ಫೈನಲ್ ಪ್ರವೇಶೀಸಿದ್ದು ಒಂದು ಹೆಮ್ಮೆಯ ಸಂಗತಿಯಾಗಿದೆ. ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 85 ರನ್ ಗಳಿಂದ ಸೋತಿದ್ದರೂ ಭಾರತಿಯರಿಂದ ಮೆಚ್ಚುಗೆಯ ಮಹಾಪೂರವನ್ನೇ ಗಳಿಸಿದೆ. ಆ ಮೂಲಕ ಮೊದಲ ಬಾರಿಗೆ ವಿಶ್ವಕಪ್ ರನ್ನರ್ ಆಗಿ ಹೊರಹೊಮ್ಮಿದೆ.
ಪಂದ್ಯದ ನಂತರದಲ್ಲಿ ಮಾಜಿ ಕ್ರಿಕೆಟಿಗರು ಭಾರತ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದರು. ಆದರೆ ಭಾರತೀಯ ಹಿರಿಯ ಕ್ರಿಕೇಟಿಗ ಸುನೀಲ್ ಗವಾಸ್ಕರ್ ಭಾರತೀಯ ಕ್ರಿಕೇಟ್ ನಿಯಂತ್ರಣಾ ಮಂಡಳಿಗೆ ( ಬಿಸಿಸಿಐ) ಉತ್ತಮ ರೀತಿಯ ಒಂದು ಸಲಹೆಯನ್ನು ನೀಡಿದ್ದಾರೆ. ಇವರು ಪುರುಷರ ಐಪಿಎಲ್ ನಂತೆಯೆ ಮುಂದಿನ ವರ್ಷದಿಂದಲೇ ನೂತನವಾಗಿ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗನ್ನು ಪ್ರಾರಂಭಿಸುವುದು ಉತ್ತಮ ಎಂದು ತಿಳಿಸಿದ್ದಾರೆ.
ಏನಿದು ಮಹಿಳಾ ಐಪಿಎಲ್!
ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುವ ಸಮಯದಲ್ಲಿಯೇ ಕ್ರಿಕೆಟ್ ಆಸ್ಟ್ರೇಲಿಯಾ ವು(ಸಿಎ) ಪುರುಷರಂತೆ ಮಹಿಳೆಯರಿಗೆ ಪ್ರತ್ಯೇಕ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಆಯೋಜಿಸುತ್ತಿದೆ. ಈ ಬಾರಿ ಆಸ್ಟ್ರೇಲಿಯಾ ತಂಡವು ಪ್ರಶಸ್ತಿ ಗೆಲ್ಲಲು ಇದೂ ಒಂದು ಪ್ರಮುಖವಾದ ಕಾರಣವಾಗಿದೆ ಎಂದು ಹೇಳಬಹುದು. ಇದರಿಂದಾಗಿ ಅವರ ತಂಡವು ಬಹಳಷ್ಟು ಬಲಿಷ್ಠವಾಗಿ ಹೊರಹೊಮ್ಮಲು ಸಹಾಯವಾಯಿತು. ಇದಕ್ಕಾಗಿ ನಮ್ಮಲ್ಲಿರುವ ಶಿಫಾಲಿ ವರ್ಮಾರಂತಹ ಅನೇಕ ಯುವ ಕ್ರಿಕೆಟಿಗರಿಗೆ ಉತ್ತಮ ವೇದಿಕೆ ದೊರೆಯಲಿದೆ.
ಮಹಿಳಾ ಪ್ರೀಮಿಯರ್ ಲೀಗನಿಂದ ಏನು ಪ್ರಯೋಜನ ?
ಇದು ಸಾಮಾನ್ಯವಾಗಿ ಎಲ್ಲರಲ್ಲಿಯೂ ಮೂಡುವಂತಹ ಪ್ರಶ್ನೆಯಾಗಿದೆ. ಆದರೆ ಇಂತಹ ಲೀಗ್‌ಗಳಿಂದಾಗಿ ನಮಗೆ ಭಾರತ ತಂಡವನ್ನು ಆಯ್ಕೆ ಮಾಡಲು ಸಹಾಯವಾಗುತ್ತದೆ. ಹಾಗೇಯೆ ಭಾರತದಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ್ತಿಯರಿದ್ದಾರೆ ಇನ್ನು ಮಹಿಳೆಯರಿಗಾಗಿಯೇ ಪ್ರತ್ಯೇಕವಾಗಿ ಐಪಿಎಲ್ ಅನ್ನು ಆಯೋಜಿಸುವುದರಿಂದಾಗಿ ನಮ್ಮಲ್ಲಿ ಇನ್ನಷ್ಟು ಹೊಸ ಪ್ರತಿಭೆಗಳನ್ನು ಹುಡುಕಲು ಸಹಾಯವಾಗುತ್ತದೆ. ಅಲ್ಲದೆಯೇ ಅದೇಷ್ಟೋ ಉತ್ತಮ ಆಟಗಾರ್ತಿಯರು ತೆರೆಮರೆಯಿಂದ ಈ ರಂಗಕ್ಕೆ ನೇರವಾಗಿ ಬರಲು ಇದು ಸಹಾಯಕವಾಗುತ್ತದೆ. ಈಗಿರುವ ತಂಡವು ಬಲಿಷ್ಠವಾಗಿದೆ ನಿಜ, ಆದರೆ ಈ ರೀತಿಯ ಸರಣಿಗಳನ್ನು ಆಯೋಜಿಸುವುದರಿಂದ ನಮ್ಮ ಭಾರತ ಮಹಿಳಾ ಕ್ರಿಕೆಟ್ ತಂಡವು ಮತ್ತಷ್ಟು ಬಲಿಷ್ಠಗೊಳ್ಳಲು ಸಹಾಯಕವಾಗುತ್ತದೆ.
ಇನ್ನು ಮಹಿಳಾ ಐಪಿಎಲ್‌ನಿಂದಾಗಿ ಅಂತರಾಷ್ಟ್ರೀಯ ಸರಣಿಗಳಲ್ಲಿ ಇನ್ನೂ ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲಲೂ ಸಹಾಯಕವಾಗುತ್ತದೆ. ಇದರೊಂದಿಗೆ ಎಲ್ಲಾ ಸ್ಥಳಿಯ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಳ್ಳೆಯ ವೇದಿಕೆಯಾಗ ಬಹುದಾಗಿದೆ. ಈ ರೀತಿಯ ಟೂರ್ನಮೆಂಟ್ಗಳಿAದ ವಿದೇಶಿ ಆಟಗಾರರೊಂದಿಗೆ ಸೇರಿ ಆಡುವುದರಿಂದ ಅವರಲ್ಲಿರುವ ಉತ್ತಮ ರೀತಿಯ ಸಲಹೆಗಳು ಮತ್ತು skillಳನ್ನು ಕಲಿಯಬಹುದಾಗಿದೆ. ವಿದೇಶಿ ಸಹ ಆಟಗಾರರೊಂದಿಗೂ ಉತ್ತಮ ಸ್ನೇಹ ಬಾಂದವ್ಯ ಬೆಳೆಯಲು ಮಹಿಳಾ ಐಪಿಎಲ್ ಪ್ರಯೋಜನಕಾರಿಯಾಗುತ್ತದೆ. ಹಾಗೇಯೆ ಅನೇಕರಿಗೆ ಇದು ಕ್ರಿಕೆಟ್ ಪ್ರಪಂಚಕ್ಕೆ ಬರಲು ಸ್ಪೂರ್ತಿಯೂ ಆಗಬಹುದಾಗಿದೆ. ಜೊತೆಗೆ ಹೆಚ್ಚಿನ ಪ್ರೋತ್ಸಾಹವೂ ಈ ಮೂಲಕವಾಗಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಸಿಗವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಈ ಯೋಜನೆಯನ್ನು ಭಾರತೀಯ ಕ್ರಿಕೇಟ್ ಮಂಡಳಿ ಆದಷ್ಟು ಬೇಗ ಗಣನೆಗೆ ತೆಗೆದುಕೊಂಡಲ್ಲಿ ಮುಂಬರುವ ದಿನಗಳಲ್ಲಿ ಭಾರತೀಯ ಮಹಿಳೆಯರ ಕ್ರಿಕೆಟ್ ತಂಡವು ವಿಶ್ವದ ನಂಬರ್ ಒನ್ ತಂಡವಾಗಿ ಹೊರಹೊಮ್ಮವಲ್ಲಿ ಸಹಾಯಕವಾಗುತ್ತದೆ. ಮತ್ತು ಈ ವರ್ಷ ಕೈ ತಪ್ಪಿದ ಕನಸಿಗೆ ಮುಂದಿನ ದಿನದಲ್ಲಿ ಮುತ್ತಿಕ್ಕಲು ಈ ವೇದಿಕೆ ಬಹಳಷ್ಟು ಸಹಾಯವಾಗುತ್ತದೆ.