• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಜಾಮಿಯಾ ಗುಂಡಿನ ಸದ್ದು ಬೇರೆಲ್ಲೂ ಕೇಳಿಸದಿರಲಿ!

by
January 31, 2020
in ದೇಶ
0
ಜಾಮಿಯಾ ಗುಂಡಿನ ಸದ್ದು ಬೇರೆಲ್ಲೂ ಕೇಳಿಸದಿರಲಿ!
Share on WhatsAppShare on FacebookShare on Telegram

ಚುನಾವಣಾ ರ‍್ಯಾಲಿಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಾ ಪ್ರಚೋದನಾಕಾರಿ ಭಾಷಣ ಮಾಡಿದ್ದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್‌ಗೆ ಮೂರು ದಿನಗಳವರೆಗೆ ಮತ್ತು ಬಿಜೆಪಿ ಸಂಸದ ಪರ್ವೇಶ್ ವರ್ಮಾರಿಗೆ ನಾಲ್ಕು ದಿನಗಳು  ಪ್ರಚಾರ ಕೈಗೊಳ್ಳದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಬಗ್ಗೆ ಆಕ್ರೊಷ ವ್ಯಕ್ತಪಡಿಸಿರುವ ಅನುರಾಗ್ ಠಾಕೂರ್, ತಮ್ಮ ಭಾಷಣದಲ್ಲಿ ದೇಶದ್ರೋಹಿಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದ ಅನುರಾಗ್‌ ಠಾಕೂರ್‌ಗೆ ಉತ್ತರವಾಗಿ ಅಂಥಹ ವ್ಯಕ್ತಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ನೆರೆದಿದ್ದ ಕಾರ್ಯಕರ್ತರು ಹೇಳಿದ್ದಾರೆ. ಇಲ್ಲಿ ಸಿಎಎ ಕಾಯ್ದೆಯನ್ನು ವಿರೋಧಿಸುತ್ತಿರುವ ಪ್ರತಿಯೊಬ್ಬರೂ ದೇಶದ್ರೋಹಿಗಳು ಎಂಬ ರೀತಿಯಲ್ಲಿ ಬಿಜೆಪಿಯ ನಾಯಕರು ಬಿಂಬಿಸಲು ಪ್ರಯತ್ನ ಪಡುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಯಾರೂ ಪ್ರಶ್ನಿಸಲೇಬಾರದು ಎಂಬ ರೀತಿಯಲ್ಲಿ ಬಿಜೆಪಿ ನಾಯಕರ ಭಾಷಣಗಳು ಮೂಡಿಬರುತ್ತಿರುವುದು ಆತಂಕದ ಸಂಗತಿ.

ADVERTISEMENT

ರಾಜಕೀಯ ನಾಯಕರ ಹೇಳಿಕೆಗಳಿಂದ ಪ್ರಚೋದಿತರಾಗುವ ಯುವಕರು ಯಾವ ರೀತಿಯ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಲುಕುತ್ತಾರೆ ಎಂಬುದಕ್ಕೆ ಈಗ ಪೊಲೀಸರ ಅತಿಥಿಯಾಗಿರುವ ರಾಮ್‌ಭಕ್ತ್‌ ಗೋಪಾಲ್‌ ಸಾಕ್ಷಿ. ತನ್ನ ನಾಯಕರ ಮಾತುಗಳನ್ನು ಚಾಚೂ ತಪ್ಪದೇ ಪಾಲಿಸಿ, ಜೀವನವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಇಂದು ಭಾರತದಲ್ಲಿ ನಿರ್ಮಾಣವಾಗಿರುವುದು ನಿಜಕ್ಕೂ ಆತಂಕಕಾರಿಯಾದ ವಿಷಯ. ಪ್ರತಿಭಟನಾಕಾರರ ನಡುವೆಯೇ ʼಯೇ ಲೋ ಆಜಾದಿʼ (ತೆಗೆದುಕೊಳ್ಳಿ ಸ್ವಾತಂತ್ರ‍್ಯ) ಎನ್ನುತ್ತಾ ವಿದ್ಯಾರ್ಥಿ ಸಮೂಹದತ್ತ ಗುಂಡು ಹಾರಿಸಿದ್ದಾನೆ. ಈವೇಳೆ ಕಾಶ್ಮೀರ ಮೂಲದ ಪತ್ರಿಕೋದ್ಯಮ ವಿದ್ಯಾರ್ಥಿ ಶದಾಬ್ ಫಾಕೂರ್ ಕೈಗೆ ಗುಂಡು ತಗುಲಿದೆ.  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೊದಲು ಈತ ತನ್ನ ಫೇಸ್ ಬುಕ್ ನಲ್ಲಿ ಶಾಹೀನ್ ಬಾಗ್ ಆಟ ಮುಗಿಯಿತು (ಶಾಹೀನ್ ಭಾಗ್ ಕಾ ಖೇಲ್ ಖತ್ಮ್) ಎಂದು ಪೋಸ್ಟ್ ಮಾಡಿದ್ದಾನೆ. ಇಂತಹ ಕೆಲ ವಿಚಾರಗಳು ಪೋಸ್ಟ್ ಆಗುತ್ತಿದ್ದಂತೆ, ಇದಕ್ಕೆ ಪ್ರತಿಯಾಗಿ ಟೀಕೆಗಳೂ ವ್ಯಕ್ತವಾಗತೊಡಗಿದವು.

ಈ ಕುರಿತಾಗಿ ಘಟನೆ ಬಗ್ಗೆ ಗೃಹ ಸಚಿವ  ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದು, ನಾನು ದೆಹಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್  ಬಳಿ ಮಾತನಾಡಿದ್ದೇನೆ. ಗುಂಡಿನ ದಾಳಿ ನಡೆಸಿದವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಇಂತಹ ಕೃತ್ಯಗಳನ್ನು ಕೇಂದ್ರ ಸರ್ಕಾರ ಸಹಿಸಿಕೊಳ್ಳುವುದಿಲ್ಲ. ಗಂಭೀರವಾಗಿ ಪರಿಗಣಿಸಲಾಗುವುದು ಹಾಗೂ ಆರೋಪಿ ಯಾವ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಯಾವ ಪಕ್ಷದ ರಾಜಕೀಯ ನಾಯಕರ ಭಾಷಣಗಳನ್ನು ಕೇಳಿ ಪ್ರಚೋದಿತನಾಗಿ ಗುಂಡಿನ ದಾಳಿ ನಡೆಸಿದ್ದನೋ, ಅದೇ ಪಕ್ಷ ಈಗ ರಾಮ್‌ಭಕ್ತ್‌ಗೆ ಶಿಕ್ಷೆ ನೀಡಲು ಹೊರಟಿದೆ.

ಕೇಂದ್ರ ಸಚಿವರ ಪ್ರಚೋದನಾಕಾರಿ ಭಾಷಣದ ಬೆನ್ನಲ್ಲೇ ಈ ದುಷ್ಕೃತ್ಯ ನಡೆದಿದೆ.  ಕೇಂದ್ರ ಗೃಹ ಸಚಿವರು ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಇದು ತೊಟ್ಟಿಲಲ್ಲಿರುವ ಮಗುವನ್ನು ಚಿವುಟಿ ತಾವೇ ಸಮಾಧಾನ ಪಡಿಸಿದಂತಾಗಿದೆ. ಪ್ರಚೋದನಾಕಾರಿ ಭಾಷಣ ಮಾಡಿದ ಸಂಸದರ ವಿರುದ್ದ ಬಿಜೆಪಿ ಹೈಕಮಾಂಡ್‌ ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಂಡಿಲ್ಲ. ಚುನಾವಣಾ ಪ್ರಚಾರಕರ ಸ್ಥಾನದಿಂದ ಕಿತ್ತು ಹಾಕಿದ ತಕ್ಷಣ ಎಲ್ಲಾ ಗೊಂದಲ ಪರಿಹಾರವಾಗುವುದಿಲ್ಲ. ಪಕ್ಷದ ನಿಯಮದಂತೆ ಅನುರಾಗ್‌ ಠಾಕೂರ್‌ ಹಾಗೂ ಪರ್ವೇಶ್‌ ವರ್ಮಾ ಅವರ ವಿರುದ್ದ ಶಿಸ್ತು ಕ್ರಮ ಜರುಗಿಸುವ ಧೈರ್ಯ ಬಿಜೆಪಿ ನಾಯಕರುಉ ಇನ್ನೂ ತೋರಿಸಲಿಲ್ಲ. ಇದು, ಬಿಜೆಪಿ ನಾಯಕರಿಗೆ ಮತ್ತಷ್ಟು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಲು ಕುಮ್ಮಕ್ಕು ನೀಡಿದಂತಾಗುವುದಿಲ್ಲವೇ? ತಾವು ಏನೇ ಮಾತನಾಡಿದರೂ ರಾಷ್ಟ್ರ ನಾಯಕರು ತಮ್ಮ ಬೆನ್ನಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂದು ಸಂದೇಶ ರವಾನಿಸಿದ ಹಾಗೆ ಆಗುವುದಿಲ್ಲವೇ?

ಈ ಎಲ್ಲಾ ಅಂಶಗಳು ಜನರನ್ನು ದಾರಿ ತಪ್ಪಿಸುವ ಸಲುವಾಗಿ ರಚಿಸಿದ ಷಡ್ಯಂತ್ರದಂತೆ ಕಾಣುತ್ತವೆ. ಯುವಕರು ತಮ್ಮ ಜೀವನದ ಕುರಿತಾದ ನಿರ್ಧಾರಗಳನ್ನು ವಿವೇಚನೆಯಿಂದ ತೆಗೆದುಕೊಳ್ಳುವತ್ತ ಗಮನ ಹರಿಸಲಿ. ರಾಜಕೀಯ ನಾಯಕರು ಪ್ರಚೋದನಾಕಾರಿ ಭಾಷಣಗಳ ಮೂಲಕ ಓಟುಗಳತ್ತ ಗಮನ ಹರಿಸುತ್ತಾರೆಯೇ ಹೊರತು, ಬೇರೆ ಯಾವ ಸದುದ್ದೇಶವೂ ಅವರ ಭಾಷಣದಲ್ಲಿ ಇರುವುದಿಲ್ಲ. ಇಂತಹ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದವರಿಗೆ ಕಠಿಣ ಶಿಕ್ಷೆ ಜಾರಿ ಮಾಡದಿದ್ದಲ್ಲಿ, ಇನ್ನಷ್ಟು ರಾಜಕೀಯ ನಾಯಕರು ತಮ್ಮ ನಾಲಗೆಯನ್ನು ಹರಿ ಬಿಡುವ ಸಾಧ್ಯತೆಗಳು ದಟ್ಟವಾಗುತ್ತವೆ. ಹೀಗಾಗಿ, ಚುನಾವಣಾ ಆಯೋಗವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಇದೆ. ಯುವಕರು ದೇಶವನ್ನು ಮುನ್ನಡೆಸುವತ್ತ ಸಾಧನೆ ಮಾಡಬೇಕೇ ಹೊರತು, ಕ್ರಿಮಿನಲ್‌ ಆರೋಪಗಳನ್ನು ಹೊತ್ತುಕೊಂಡು ಕೋರ್ಟ್‌ ಕಚೇರಿಗಳಿಗೆ ಅಲೆಯಬಾರದು. ಇನ್ನೊಮ್ಮೆ ದೇಶದಲ್ಲೆಂದೂ ಜಾಮಿಯಾದಲ್ಲಿ ಕೇಳಿದ ಗುಂಡಿನ ಸದ್ದು ಕೇಳದಿರಲಿ.

Tags: Anurag ThakurDelhi ElectionJamia ShootoutRambhakth Gopalಅನುರಾಗ್‌ ಠಾಕೂರ್‌ಜಾಮಿಯಾದೆಹಲಿ ಚುನಾವಣೆರಾಮ್‌ಭಕ್ತ್‌ ಗೋಪಾಲ್
Previous Post

ಕೊನೆಗೂ ಶಾ ಭೇಟಿಯಾದ ಯಡಿಯೂರಪ್ಪ, ಸಂಪುಟ ವಿಸ್ತರಣೆಗೆ ಮೂರು ದಿನ ಗಡುವು  

Next Post

CAA ವಿರೋಧಿಸಿ ಪ್ರತಿಭಟಿಸುವವರಿಗೆ ಅವಮಾನದ ಬಹುಮಾನ 

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
CAA ವಿರೋಧಿಸಿ ಪ್ರತಿಭಟಿಸುವವರಿಗೆ ಅವಮಾನದ ಬಹುಮಾನ 

CAA ವಿರೋಧಿಸಿ ಪ್ರತಿಭಟಿಸುವವರಿಗೆ ಅವಮಾನದ ಬಹುಮಾನ 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada