• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ವಿದ್ಯಾರ್ಥಿ ಹೋರಾಟ ಮೋದಿಗೆ ಮುಳುವಾಗಬಹುದೇ?

by
December 17, 2019
in ದೇಶ
0
ವಿದ್ಯಾರ್ಥಿ ಹೋರಾಟ ಮೋದಿಗೆ ಮುಳುವಾಗಬಹುದೇ?
Share on WhatsAppShare on FacebookShare on Telegram

ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಯುವ ಸಮುದಾಯದಲ್ಲಿ ಎಬ್ಬಿಸಿರುವ ಕಿಚ್ಚು ಪ್ರಧಾನಿ‌ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. 2014 ಮತ್ತು 2019ರ ಲೋಕಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಯುವ ಸಮುದಾಯವು ನರೇಂದ್ರ ಮೋದಿಯವರ ಪ್ರಭಾವಳಿಗೆ ಒಳಗಾಗಿ ಬಿಜೆಪಿಯನ್ನು ಬೆಂಬಲಿಸಿತ್ತು. ಇದರಿಂದ ಭಾರಿ ಬಹುಮತ ಗಳಿಸಿದ್ದ ಬಿಜೆಪಿಯು ತನ್ನ ವಿವಾದಾತ್ಮಕ ವಿಚಾರಧಾರೆಗಳ ಅನುಷ್ಠಾನಕ್ಕೆ ಮುಂದಾಗುವ ಮೂಲಕ ಅದೇ ವರ್ಗದ ಕೆಂಗಣ್ಣಿಗೆ ಗುರಿಯಾಗಲಾರಂಭಿಸಿರುವುದು ಇತಿಹಾಸದ ಚೋದ್ಯ. “ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವ ಮೂಲಕ ಬಿಜೆಪಿಯ ಅವನತಿ ಆರಂಭವಾಗಿದೆ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾರ್ಮಿಕವಾಗಿ ನುಡಿದಿದ್ದಾರೆ.

ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು ಕಾಲೇಜು ಕ್ಯಾಂಪಸ್ ಗಳಿಗೆ ಹಬ್ಬಿದ್ದು, ದೇಶದ ಪ್ರತಿಷ್ಠಿತ 18 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ನವದೆಹಲಿಯ ಜಾಮಿಯಾ ಮಿಲಿಯಾ ಹಾಗೂ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರೌರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ಪ್ರತಿಭಟನಾಕಾರರು ಧರಿಸಿರುವ ಬಟ್ಟೆಯಿಂದಲೇ ಅವರು ಯಾರು ಎಂಬುದನ್ನು ಪತ್ತೆ ಹಚ್ಚಬಹುದು” ಎಂಬ ಮೋದಿಯವರ ಹೇಳಿಕೆಯೂ ಬಿಜೆಪಿಗೆ ದುಬಾರಿಯಾಗಿ‌ ಪರಿಣಮಿಸಬಹುದು. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಜಾಮಿಯಾ ವಿಶ್ವವಿದ್ಯಾಲಯದ ಹೊರಗೆ ಪ್ರತಿಭಟಿಸಿದ ವಿದ್ಯಾರ್ಥಿಗಳು ಶರ್ಟ್ ತೆಗೆದು ಪ್ರತಿಭಟಿಸಿದ್ದೂ ಮೋದಿ ಹೇಳಿಕೆಗೆ ಸಾಂಕೇತಿಕ ಪ್ರತಿರೋಧವಾಗಿದೆ.

ದೆಹಲಿ ಪೊಲೀಸ್ ಕೇಂದ್ರ‌ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಗೆ ಅದರ ಮೇಲೆ ಹಿಡಿತವಿಲ್ಲ. ಪೊಲೀಸ್ ವ್ಯವಸ್ಥೆಯು ಕೇಂದ್ರದ ಗೃಹ ಸಚಿವಾಲಯಕ್ಕೆ ಒಳಪಡುವುದರಿಂದ ವಿದ್ಯಾರ್ಥಿಗಳ ಮೇಲಿನ ಪೊಲೀಸರ ಕ್ರೌರ್ಯದ ಪರಮಾವಧಿಯನ್ನು ಇಂದಿನ ಹೋರಾಟಗಳಿಗೆ ಕಾರಣರಾದ ಅಮಿತ್ ಶಾ ನೆಪಮಾತ್ರಕ್ಕೂ ಖಂಡಿಸಿಲ್ಲ. ಚುನಾವಣಾ ರ‌್ಯಾಲಿಗಳಲ್ಲಿ ದೇಶದ ಯುವ ಜನತೆ ಮೋದಿ‌ ಬೆನ್ನಿಗಿದೆ ಎಂದು ಅರಚುವ ಅಮಿತ್ ಶಾ, ತನ್ನ ಉಸ್ತುವಾರಿಯಲ್ಲಿ ಬರುವ ಪಡೆಯೊಂದು ತನ್ನದೇ ನಾಗರಿಕರ ಮೇಲಿನ ದೌರ್ಜನ್ಯವನ್ನು ಸಮರ್ಥಿಸುವರೇ? ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಟಿ‌ ಹಿಡಿದು ಎರಗಿರುವ ವಿಡಿಯೊಗಳು ಇಂದಿನ ಭಾರತದ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಸಹವರ್ತಿಯ ಮೇಲಿನ ದಾಳಿಯನ್ನು ತಡೆಯಲು ವಿದ್ಯಾರ್ಥಿನಿಯರು ಆತನನ್ನು ಸುತ್ತುವರಿದಿರುವಾಗಲು ಪೊಲೀಸರು ಅಟ್ಟಹಾಸ ಮೆರೆಯುತ್ತಿರುವ ಪೊಲೀಸರ ಫೋಟೊಗಳು ಎಂಥ ಸಂದೇಶ ರವಾನಿಸುತ್ತವೆ? ಪೊಲೀಸ್ ವ್ಯವಸ್ಥೆ ನಾಗರಿಕ ಸಮಾಜದಲ್ಲಿ ಎಂದೋ ವಿಶ್ವಾಸ ಕಳೆದುಕೊಂಡಾಗಿದೆ.‌ ಈಗ ತುಕ್ಕು ಹಿಡಿದ ಲಾಟಿಗಳ ಮೂಲಕ ಜನಪರ ಹೋರಾಟ ಹತ್ತಿಕ್ಕುವ ಮೂಲಕ ಪೊಲೀಸ್ ರಾಜ್ ನಿರ್ಮಿಸಲು ಕೇಂದ್ರ ಸರ್ಕಾರ ಸಿದ್ಧವಾದಂತಿದೆ.

2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದರು. ನಿಪುಣ ಮಾನವ ಸಂಪನ್ಮೂಲ ಸೃಷ್ಟಿಯ ಭರವಸೆ ನೀಡಿದ್ದರು. ಹೊಸತನಕ್ಕೆ ಹಾತೊರೆಯುತ್ತಿದ್ದ ಯುವ ಸಮುದಾಯವು ವಯಸ್ಸಿನಲ್ಲಿ ಮೋದಿಗಿಂತಲೂ ಕಿರಿಯರಾದ ರಾಹುಲ್ ಗಾಂಧಿಗೆ ಬದಲಾಗಿ ಮೋದಿಯವರನ್ನು ಯುವ ಸಮುದಾಯ ಆಯ್ಕೆ ಮಾಡಿಕೊಂಡಿತ್ತು. ಆದರೆ, ಇತ್ತೀಚೆಗೆ ಬಹಿರಂಗಗೊಂಡ NSSO ವರದಿ ಪ್ರಕಾರ ಭಾರತದಲ್ಲಿ ನಿರುದ್ಯೋಗ ಪ್ರಮಾಣವು 45 ವರ್ಷಗಳ ಹಿಂದೆ ಇದ್ದ ಮಟ್ಟಕ್ಕೆ ಇಳಿದಿದೆ ಎನ್ನುವ ಆಘಾತಕಾರಿ ಅಂಶ ಹೊರಬಿದ್ದಿದೆ. ಕನಸು ಕಂಗಳಿಂದ ಮೋದಿ ಆಡಳಿತದಲ್ಲಿ ಅಚ್ಚೇ ದಿನ ಎದುರು ನೋಡುತ್ತಿದ್ದ ಯುವಕ-ಯುವತಿಯರಿಗೆ ಲಾಟಿ‌ ಏಟು ಎದುರಾಗುತ್ತದೆ ಎನ್ನುವ ನಿರೀಕ್ಷೆ ಇದ್ದಿರಲಿಕ್ಕಿಲ್ಲ. ಈಗ ಯುವ ಸಮುದಾಯವು ನರೇಂದ್ರ ಮೋದಿಯೊಬ್ಬ ಮತ್ತೊಬ್ಬ “ಕಪಟ ರಾಜಕಾರಣಿ” ಎನ್ನಲಾರಂಭಿಸಿದೆ.

ನರೇಂದ್ರ ಮೋದಿ ಸರ್ಕಾರವು ವಿಶ್ವವಿದ್ಯಾಲಯಗಳ ಮೇಲಿನ ಅಟ್ಟಹಾಸ ಮೆರೆಯುತ್ತಿರುವುದು ಮೊದಲೇನಲ್ಲ. ಹಿಂದೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿತ್ತು. ದೇಶ ವಿರೋಧಿ ಕೃತ್ಯ ಎಸಲಾಗುತ್ತಿದೆ ಎಂದು ಆರೋಪಿಸಿದ್ದ ಪೊಲೀಸರು ಆನಂತರ ತಮ್ಮ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು. ಈಗ ಜಾಮಿಯಾ ವಿಶ್ವವಿದ್ಯಾಲಯದ ಮೇಲಿನ ದಾಳಿಯಲ್ಲಿಯೂ ಸರ್ಕಾರದ ಪಿತೂರಿ ಇರಬಹುದು ಎಂಬುದಕ್ಕೆ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ‌ ನಡೆದಿರುವ ದಾಂಧಲೆ ಸ್ಪಷ್ಟ ಉದಾಹರಣೆಯಾಗಿದೆ.

ಚೀನಾ ಹಸ್ತಕ್ಷೇಪ ವಿರೋಧಿಸಿ ನೆರೆಯ ಹಾಂಕಾಂಗ್ ನಲ್ಲಿ ಆರು ತಿಂಗಳ ಹಿಂದೆ ಆರಂಭವಾದ ವಿದ್ಯಾರ್ಥಿ ಚಳವಳಿ ಇನ್ನೂ ನಿಂತಿಲ್ಲ. ಚಿಲಿ ದೇಶದಲ್ಲಿ ಭ್ರಷ್ಟಾಚಾರ ಹಾಗೂ ಅಧಿಕಾರ ದುರ್ಬಳಕೆಯ ವಿರುದ್ಧ ಆರಂಭವಾಗಿರುವ ಹೋರಾಟ ಸಾಕಷ್ಟು ಸವಾಲು ತಂದೊಡ್ಡಿದೆ. ಇವೆಲ್ಲಾ ಹೋರಾಟಗಳಲ್ಲೂ ವಿದ್ಯಾರ್ಥಿ ಸಮುದಾಯದ ಪ್ರಭಾವ ಗಾಢವಾಗಿದೆ. ಈ ನೆಲೆಯಲ್ಲಿ ಭಾರತದಲ್ಲಿ ಆರಂಭವಾಗಿರುವ ವಿದ್ಯಾರ್ಥಿ ಹೋರಾಟವು ಮತ್ತಷ್ಟು ವ್ಯಾಪಕವಾದರೆ ಮೋದ ಸರ್ಕಾರಕ್ಕೆ ಉಳಿಗಾಲ ಇಲ್ಲ ಎಂಬುದು ಮಾತ್ರ ಸ್ಪಷ್ಟ.

Tags: campusCitizenship Amendment ActJamia Millia IslamiaJamia Studentslathi chargeModi GovernmentNew DelhiStudent UnionUniversityಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಜಾಮಿಯಾ ವಿದ್ಯಾರ್ಥಿಗಳುಪೌರತ್ವ ತಿದ್ದುಪಡಿ ಕಾಯ್ದೆ ಮಸೂದೆಪ್ರತಿಭಟನೆಮೋದಿ ಸರ್ಕಾರಲಾಠಿ ಚಾರ್ಜ್ವಿದ್ಯಾರ್ಥಿ ಸಂಘಟನೆವಿಶ್ವವಿದ್ಯಾಲಯಹೊಸದೆಹಲಿ
Previous Post

ಅತ್ಯಾಚಾರ ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಾಧೀಶರ ಸಮಿತಿ

Next Post

ಆರ್‌ಎಸ್‌ಎಸ್ ಮುಖಂಡರ ಶಾಲೆಯಲ್ಲಿ ಬಾಬ್ರಿ ಮಸೀದಿ ಧ್ವಂಸ !

Related Posts

Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
0

ಮಕ್ಕಳ ಯೋಗ ಕ್ಷೇಮ ವಿಚಾರಿಸಿದ ಸಚಿವರು ಬೀದರ್ ಪ್ರವಾಸದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಇಂದು ದಿಢೀರ್ ಅಂಗನವಾಡಿ ಹಾಗೂ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ, ಪರಿಶೀಲನೆ...

Read moreDetails

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025
Next Post
ಆರ್‌ಎಸ್‌ಎಸ್ ಮುಖಂಡರ ಶಾಲೆಯಲ್ಲಿ ಬಾಬ್ರಿ ಮಸೀದಿ ಧ್ವಂಸ !

ಆರ್‌ಎಸ್‌ಎಸ್ ಮುಖಂಡರ ಶಾಲೆಯಲ್ಲಿ ಬಾಬ್ರಿ ಮಸೀದಿ ಧ್ವಂಸ !

Please login to join discussion

Recent News

Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada