• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಗಡಿಗಳಿಲ್ಲದ ‘ಕೈಲಾಸ’; ನಗೆಪಾಟಲಿಗೀಡಾದ ನಿತ್ಯಾನಂದ

by
December 6, 2019
in ದೇಶ
0
ಗಡಿಗಳಿಲ್ಲದ ‘ಕೈಲಾಸ’; ನಗೆಪಾಟಲಿಗೀಡಾದ ನಿತ್ಯಾನಂದ
Share on WhatsAppShare on FacebookShare on Telegram

ಗುಜರಾತ್ ಮೂಲದ ಅಸಾರಾಂ ಬಾಪು, ಹರಿಯಾಣದ ದೇರಾ ಸಚ್ಚಾ ಸೌದಾ ಸಂಸ್ಥಾಪಕ, ಕುಖ್ಯಾತ ಗುರುಮೀತ್ ಸಿಂಗ್ ರಾಮ್ ರಹೀಮ್, ರಾಂಪಾಲ್, ನಮ್ಮದೇ ರಾಜ್ಯದ ಬಿಡದಿಯಲ್ಲಿ ಆಶ್ರಮ ಸ್ಥಾಪಿಸಿ ಕುಖ್ಯಾತನಾದ ನಿತ್ಯಾನಂದನಂಥ ಸ್ವಯಂ ಘೋಷಿತ ದೇವ ಮಾನವರ ಕಾಮ ಪುರಾಣ, ತಿಕ್ಕಲುತನಗಳಿಗೆ ಸಾಕ್ಷಿಯಾಗಿದ್ದ ಭಾರತೀಯರು ಅವರ ತಲೆತಿರುಕ ಹೇಳಿಕೆಗಳಿಗೆ ಗಹಗಹಿಸಿ ನಗುತ್ತಿದ್ದಾರೆ. ಅಧ್ಯಾತ್ಮದ ಹೆಸರಿನಲ್ಲಿ‌ ನಂಬಿಕೆಯನ್ನು ಸರ್ವನಾಶ ಮಾಡಿದ ನಕಲಿ ಬಾಬಾಗಳು ಸಾಮಾಜಿಕ ಕ್ಷೋಭೆಗೆ ಕಾರಣವಾಗುತ್ತಿರುವುದು ಇಂದು ಸಾಮಾನ್ಯವಾಗಿಬಿಟ್ಟಿದೆ.

ADVERTISEMENT

ಹೆಣ್ಣು ಬಾಕತನ, ಅತ್ಯಾಚಾರ, ಯುವತಿಯರನ್ನು ಅಕ್ರಮವಾಗಿ ಒತ್ತೆಯಾಳಾಗಿಸಿಕೊಂಡಿದ್ದ ಆರೋಪದಲ್ಲಿ ನ್ಯಾಯಾಲಯದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ನಿತ್ಯಾನಂದ ಈಗ ಏಕಾಏಕಿ ‘ಕೈಲಾಸ’ ಎಂಬ ಹಿಂದೂ ರಾಷ್ಟ್ರ ಸ್ಥಾಪಿಸಿರುವುದಾಗಿ ಘೋಷಿಸುವ ಮೂಲಕ ಜಾಗತಿಕ ಜೋಕರ್ ಆಗಿ ಹೊರಹೊಮ್ಮಿದ್ದಾನೆ. ಈಕ್ವೆಡಾರ್ ಕರಾವಳಿ ಹಾಗೂ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಸಮೀಪದಲ್ಲಿ ದ್ವೀಪವೊಂದನ್ನು ಖರೀದಿಸಿದ್ದು, ಸನಾತನ ಹಿಂದೂ ಸಂಸ್ಕೃತಿ ರಕ್ಷಿಸಲು ಗಡಿಗಳಿಲ್ಲದ ದೇಶವನ್ನು ಸ್ಥಾಪಿಸದ್ದು, ಇಲ್ಲಿಗೆ ಭೇಟಿ ನೀಡಲು ಯಾವುದೇ ಪಾಸ್ ಪೋರ್ಟ್ ಅಗತ್ಯವಿಲ್ಲ ಎಂದು ಘೋಷಿಸಿರುವ ನಿತ್ಯಾನಂದ ಬಿಡುಗಡೆ ಮಾಡಿರುವ ವಿಡಿಯೊ ಕುರಿತು ವಿಭಿನ್ನ ಬಗೆಯ ಜೋಕ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

41 ವರ್ಷದ ತಮಿಳುನಾಡು ಮೂಲದ ನಿತ್ಯಾನಂದನ ಅಹಮದಾಬಾದ್ ಆಶ್ರಮದಲ್ಲಿದ್ದ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಇತ್ತೀಚೆಗೆ ಬಿಡದಿಯ ಆಶ್ರಮಕ್ಕೆ ಭೇಟಿ ನೀಡಿ, ನಿತ್ಯಾನಂದನಿಗೆ ಹುಡುಕಾಟ ನಡೆಸಿದ್ದರು.

ಆಗ ತಲೆಮರೆಸಿಕೊಂಡಿದ್ದ ನಿತ್ಯಾನಂದ, ಈಗ ಏಕಾಏಕಿ ವಿಡಿಯೊ ಬಿಡುಗಡೆ ಮಾಡಿ ತನ್ನ ಹೊಸ ದೇಶ ಕೈಲಾಸವು ತನ್ನದೇ ಸರ್ಕಾರ ಹೊಂದಿದ್ದು, ಗೃಹ, ಹಣಕಾಸು, ಮಾನವ ಸಂಪನ್ಮೂಲ, ರಕ್ಷಣಾ ಇಲಾಖೆಯನ್ನು‌ ಹೊಂದಿದೆ. ಪರಶಿವ, ನಂದಿಯನ್ನೊಳಗೊಂಡ ತ್ರಿವರ್ಣ ಧ್ವಜವನ್ನು ಕೈಲಾಸ ಹೊಂದಿರಲಿದ್ದು, ತಮಿಳು, ಸಂಸ್ಕೃತ ಮತ್ತು‌ ಇಂಗ್ಲಿಷ್ ಅಧಿಕೃತ ಭಾಷೆಯಾಗಿರಲಿವೆ ಎಂದು ಹೇಳಿದ್ದಾನೆ.

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾದ ನಿತ್ಯಾನಂದನ ಪಾಸ್ ಪೋರ್ಟ್ ಅನ್ನು ಪೊಲೀಸರು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ನೇಪಾಳ ಮಾರ್ಗವಾಗಿ ನಿತ್ಯಾನಂದ ಇಕ್ವೆಡಾರ್ ಸಮೀಪದ ತನ್ನ ಕೈಲಾಸ ಪ್ರದೇಶ ತಲುಪಿರುವ ಸಾಧ್ಯತೆ ಇದೆ ಎನ್ನಲಾಗಿದೆ. 2018ರಲ್ಲೇ ನಿತ್ಯಾನಂದನ ಪಾಸ್ ಪೋರ್ಟ್ ನಿಷ್ಕ್ರಿಯವಾಗಿದ್ದು, ಈ ಮಧ್ಯೆ ಆತ ಆಸ್ಟ್ರೇಲಿಯಾ ಪಾಸ್ ಪೋರ್ಟ್ ಗೆ ಪ್ರಯತ್ನಿಸಿದ್ದ. ಅಲ್ಲಿನ ಅಧಿಕಾರಿಗಳು ಬಿಡದಿ‌ ಪೊಲೀಸರ ಸ್ಪಷ್ಟನೆ ಕೇಳಿದ್ದರಿಂದ ನಿತ್ಯಾನಂದನ ಅವತಾರ ಬಹಿರಂಗವಾಗಿತ್ತು.

2010ರಲ್ಲಿ ತಮಿಳು ಸಿನಿಮಾ ನಟಿಯೊಂದಿಗೆ ಕಾಮಕೇಳಿಯಲ್ಲಿ ತೊಡಗಿದ್ದ ನಿತ್ಯಾನಂದನ ವಿಡಿಯೊ ದೇಶಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಅನಂತರ ಆತ ಹಲವು ಯುವತಿಯರೊಂದಿಗೆ ಲೈಂಗಿಕ‌ ಸಂಬಂಧ ಹೊಂದಿದ್ದ ವಿಚಾರ ಬಹಿರಂಗಗೊಂಡಿತ್ತು. ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ನಿತ್ಯಾನಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಕಳೆದ ವರ್ಷ ವಿಭಿನ್ನ ವೇಷತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಪ್ರತ್ಯಕ್ಷನಾಗಿ ಮನರಂಜನೆ ಒದಗಿಸಿದ್ದ. ಕಳೆದ ವಾರ ನಿತ್ಯಾನಂದನ ಹಲವು ಆಶ್ರಮಗಳ ಪೈಕಿ ಒಂದಾದ ಅಹಮದಾಬಾದ್ ಆಶ್ರಮದಲ್ಲಿ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಎಫ್ ಐ ಆರ್ ದಾಖಲಾಗಿದ್ದರಿಂದ ನಿತ್ಯಾನಂದ ಸುದ್ದಿಯ ಕೇಂದ್ರಬಿಂದುವಾಗಿದ್ದನು.

ಆಶ್ರಮ ಬೆಳವಣಿಗೆಗೆ ಚ್ಯುತಿ ತರದ ವಿವಾದ

ನಿತ್ಯಾನಂದನ ಕುರಿತಾಗಿ ಹಲವಾರು ವಿವಾದಗಳು ಸೃಷ್ಟಿಯಾದರೂ ಆತನ ಅಧ್ಯಾತ್ಮ ಉದ್ಯಮ ಬೆಳವಣಿಗೆ ಕಾಣುತ್ತಿರುವ ಪರಿ ಯಾರಿಗಾದರೂ ಆಶ್ಚರ್ಯ ಉಂಟು ಮಾಡದೇ ಇರದು. 2000ನೇ ಇಸ್ವಿಯಲ್ಲಿ ಮೊದಲ ಬಾರಿಗೆ ನಿತ್ಯಾನಂದ ತಮಿಳುನಾಡಿನಲ್ಲಿ ನಿತ್ಯಾನಂದ ಪೀಠ ಆರಂಭಿಸುವ ಮೂಲಕ ಸ್ವಯಂಘೋಷಿತ ದೇವಮಾನವ ಸ್ಥಾನಕ್ಕೇರುತ್ತಾನೆ.

ಬಳಿಕ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಪೀಠ ತೆರೆಯುವ ನಿತ್ಯಾನಂದ ಮೊದಲ ಬಾರಿಗೆ 2003ರಲ್ಲಿ ಬೆಂಗಳೂರು ಸಮೀಪದ ಬಿಡದಿಯಲ್ಲಿ ಆಶ್ರಮ ತೆರೆಯುವುದರೊಂದಿಗೆ ಅಂತಾರಾಜ್ಯ ಪ್ರವೇಶಿಸುತ್ತಾನೆ. 2010ರಲ್ಲಿ ನಿತ್ಯಾನಂದನ ಕಾಮಪುರಾಣದ ಸಿಡಿಯನ್ನು ಆತನ ಬೆಂಬಲಿಗನೊಬ್ಬ ಬಿಡುಗಡೆ ಮಾಡುವ ಮೂಲಕ ನಿತ್ಯಾನಂದನ ಅಸಲಿ ಆಟವನ್ನು ಅನಾವರಣಗೊಳಿಸುತ್ತಾನೆ. ಈ ಸಂದರ್ಭದಲ್ಲಿ ನಿತ್ಯಾನಂದ ತಾನು ಹಿಂದೂ ಸ್ವಾಮೀಜಿ ಎಂಬ ಕಾರಣಕ್ಕೆ ಇಷ್ಟೆಲ್ಲಾ ಸಮಸ್ಯೆ ಮಾಡಲಾಗುತ್ತದೆ ಎಂದೂ ಹೇಳಿಕೆ ನೀಡಿದ್ದು ಉಂಟು. ಮತ್ತೆ 2015ರಲ್ಲಿ ನಿತ್ಯಾನಂದನ ಆಶ್ರಮದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಹೊರಬೀಳುತ್ತಿದ್ದಂತೆ ನಿತ್ಯಾನಂದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಾಪಕಗೊಂಡಿತ್ತು.

ಈ ಆಪತ್ತಿನಿಂದಲೂ ಬಚಾವಾದ ನಿತ್ಯಾನಂದ ಕೆಲವು ವರ್ಷ ಮೌನಕ್ಕೆ ಶರಣಾಗಿದ್ದ. ಇಷ್ಟೆಲ್ಲಾ ರಾದ್ಧಾಂತಗಳಿಗೆ ನಿತ್ಯಾನಂದ ಗುರಿಯಾದರೂ ಆತನ ಬೆಂಬಲಿಗರಾದ ಶ್ರೀಮಂತ ವರ್ಗ ಆಶ್ರಮದ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆಯನ್ನು ಅರ್ಥೈಸುವ ಬಗೆ ತಿಳಿಯದಂತಾಗಿದೆ. ದೇಶ, ವಿದೇಶಗಳಲ್ಲಿ ನಿತ್ಯಾನಂದನ ಆಶ್ರಮಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವುದು ಸಹ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಅಧ್ಯಾತ್ಮದ ಸೋಗಿನಲ್ಲಿ ಅಕ್ರಮ ದಂಧೆಗಳಲ್ಲಿ ತೊಡಗಿದ್ದ ವ್ಯಕ್ತಿಯ ನೈಜ ಮುಖ ಜಗಜ್ಜಾಹೀರಾದರೂ ಆತನನ್ನು ಒಪ್ಪಿಕೊಳ್ಳುವ ಜನಸಮುದಾಯ ನಮ್ಮ ನಡುವೆ ಇರುವಾಗ ನಿತ್ಯಾನಂದನ ಅಂತ್ಯ ಹೇಗೆ ಸಾಧ್ಯ?

Tags: AhmedabadashramgodmanGujarat policeHindu 'nation'Nithyanandaself-styledಅಹ್ಮದಾಬಾದ್ಆಶ್ರಮಗುಜರಾತ್ ಪೊಲೀಸ್ನಿತ್ಯಾನಂದವಿವಾದಿತಸ್ವಘೋಷಿತ ದೇವಮಾನವಹಿಂದೂ ರಾಷ್ಟ್ರ
Previous Post

ಮಂಗಗಳನ್ನು ಓಡಿಸಲು ಹುಲಿಯಾದ ನಾಯಿ!  

Next Post

ಕಾಮುಕರಿಗೆ ಆಯ್ತು ತಕ್ಕ ಶಾಸ್ತಿ

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ಕಾಮುಕರಿಗೆ ಆಯ್ತು ತಕ್ಕ ಶಾಸ್ತಿ

ಕಾಮುಕರಿಗೆ ಆಯ್ತು ತಕ್ಕ ಶಾಸ್ತಿ

Please login to join discussion

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada