• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರು-ಮಂಗಳೂರು ನಡುವಿನ ‘ಗುಂಡಿ’ ಯಾನ

by
October 23, 2019
in ಕರ್ನಾಟಕ
0
ಬೆಂಗಳೂರು-ಮಂಗಳೂರು ನಡುವಿನ ‘ಗುಂಡಿ’ ಯಾನ
Share on WhatsAppShare on FacebookShare on Telegram

ಬೆಂಗಳೂರು – ಮಂಗಳೂರು ನಡುವಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕಲೇಶಪುರ – ಶಿರಾಡಿಘಾಟ್ ನಡುವೆ ಮತ್ತೆ ಸುಗಮ ಸಂಚಾರಕ್ಕೆ ಸಂಚಕಾರವಾಗಿದೆ. ಹಾಸನ ಜಿಲ್ಲೆಯಲ್ಲಿ ಸಾಗುವ ಹೆದ್ದಾರಿ ಸಂಪೂರ್ಣ ಗುಂಡಿಗಳಿಂದ ತುಂಬಿ ಹೋಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಮತ್ತು ಬಂಟ್ವಾಳ ನಡುವೆ ಕೂಡ ಹೆದ್ದಾರಿ ಕೆಟ್ಟು ಹೋಗಿದ್ದು ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ನಡೆದಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ 75ರ ಹಾಸನ – ಸಕಲೇಶಪುರ ಮತ್ತು ಗುಂಡ್ಯ- ಬಿ. ಸಿ. ರೋಡ್ ನಡುವಣ ಚತುಷ್ಪಥ ಹೆದ್ದಾರಿ ಕಾಮಗಾರಿ ಕಳೆದ ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿದೆ. 2018ರ ಮಳೆಗಾಲಕ್ಕೆ ಮುನ್ನ ಹೆದ್ದಾರಿ ಕಾಮಗಾರಿ ಸ್ಥಗಿತ ಮಾಡಲಾಗಿತ್ತು. 2017 ಮಾರ್ಚ್ ನಲ್ಲಿ ಭರದಿಂದ ಆರಂಭಗೊಂಡ ಹೆದ್ದಾರಿ ಕಾಮಗಾರಿ ಒಂದು ವರ್ಷ ಆಗುವುದಕ್ಕೂ ಮೊದಲೇ ಸ್ಥಗಿತ ಆಗಿತ್ತು.

ಮಂಗಳೂರು – ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ನೆಲಮಂಗಲ – ಹಾಸನ ನಡುವೆ ನಾಲ್ಕು ಪಥಗಳ ಕಾಮಗಾರಿ ಪೂರ್ಣಗೊಂಡು ಹಲವು ವರ್ಷಗಳು ಕಳೆದಿವೆ. ಹಾಸನದಿಂದ ಸಕಲೇಶಪುರ ಮಾರನಹಳ್ಳಿ ತನಕ ಹೊಸ ಹೆದ್ದಾರಿ ಅಗಲೀಕರಣ ಆಗಬೇಕಾಗಿದೆ. ಅನಂತರ ಶಿರಾಡಿ ಘಾಟಿನ ಬಹುತೇಕ ಪ್ರದೇಶ ಸೇರಿದಂತೆ ಗುಂಡ್ಯ ತನಕ ಎರಡು ಪಥಗಳ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಿದೆ. ಗುಂಡ್ಯದಿಂದ ಉಪ್ಪಿನಂಗಡಿ – ಮಾಣಿ – ಬಿ. ಸಿ. ರೋಡು ತನಕ ನಾಲ್ಕು ಪಥಗಳ ಹೆದ್ದಾರಿ ನಿರ್ಮಾಣ ಆಗಬೇಕು. ಬಿ. ಸಿ. ರೋಡಿನಿಂದ ಮಂಗಳೂರು ನಂತೂರು ಸರ್ಕಲ್ ತನಕ ಕೇರಳ – ಗೋವಾ ಹೆದ್ದಾರಿಯನ್ನು ಸಂಪರ್ಕಿಸಲು ಕಳಪೆ ದರ್ಜೆಯ ನಾಲ್ಕು ಪಥಗಳ ರಸ್ತೆಗೆ ಇದೀಗ ಒಂದು ದಶಕ ತುಂಬಿದೆ.

ಈ ಮಳೆಗಾಲಕ್ಕೆ ಮುನ್ನ ಶಿರಾಡಿ ಘಾಟಿ ಪ್ರದೇಶದ 27 ಕಿ.ಮೀ. ರಸ್ತೆಯನ್ನು ಹೊರತುಪಡಿಸಿ ಬೆಂಗಳೂರು- ಮಂಗಳೂರು ನಡುವಣ ಹೆದ್ದಾರಿ ಸಂಪೂರ್ಣ ನಾಲ್ಕು ಪಥಗಳ ಹೆದ್ದಾರಿ ಆಗಬೇಕಾಗಿತ್ತು. ಆರ್ಥಿಕ ಮುಗ್ಗಟ್ಟು, ಹಣಕಾಸು ಹೂಡಿಕೆ ಸಂಸ್ಥೆಯ ವೈಫಲ್ಯ ಮತ್ತು ಇತರ ತಾಂತ್ರಿಕ ಕಾರಣಗಳಿಂದಾಗಿ ಕೇಂದ್ರ ಸರಕಾರದ ಅನುದಾನದ ಕಾಮಗಾರಿ ಸ್ಥಗಿತಗೊಂಡಿದೆ.

ಅಡ್ಡಹೊಳೆ (ಗುಂಡ್ಯ) ಮತ್ತು ಬಿ. ಸಿ. ರೋಡ್ ನಡುವಣ 66 ಕಿ. ಮೀ. ಹೆದ್ದಾರಿ ಕಾಮಗಾರಿಯನ್ನು ಎಲ್ ಆಂಡ್ ಟಿ ಕಂಪೆನಿ ವಹಿಸಿಕೊಂಡಿದ್ದು, ಹಾಸನ-ಸಕಲೇಶಪುರ-ಮಾರನಹಳ್ಳಿ 55 ಕಿ. ಮೀ. ಹೆದ್ದಾರಿ ಕಾಮಗಾರಿಯನ್ನು ಇಸೊಲಕ್ಸ್ ಕೊರ್ಸನ್ Isolux Corsan ಕಂಪೆನಿ ವಹಿಸಿಕೊಂಡಿತ್ತು. ಗುಂಡ್ಯ – ಬಂಟ್ವಾಳ ಹಂತದ ಕಾಮಗಾರಿಯನ್ನು 870 ಕೋಟಿ ರೂಪಾಯಿ ವೆಚ್ಚಕ್ಕೆ ಎಲ್ ಆಂಡ್ ಟಿ ಕಂಪೆನಿ ಗುತ್ತಿಗೆ ವಹಿಸಲಾಗಿತ್ತು. ಸಕಲೇಶಪುರ ಹಂತದ ಕಾಮಗಾರಿಯನ್ನು 574 ಕೋಟಿ ರೂಪಾಯಿಗೆ ನೀಡಲಾಗಿದ್ದ ಗುತ್ತಿಗೆಯನ್ನು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನಂತರ ಗುತ್ತಿಗೆ ಮೊತ್ತವನ್ನು 701 ಕೋಟಿ ರೂಪಾಯಿಗೆ ಪರಿಷ್ಕರಣೆ ಮಾಡಿತ್ತು.

ಮಾರ್ಚ್ – ಏಪ್ರಿಲ್ 2016ರಲ್ಲಿ ವಹಿಸಿಕೊಡಲಾಗಿದ್ದ ಇವೆರಡು ಹೆದ್ದಾರಿ ಕಾಮಗಾರಿಗಳು 2019 ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು. ಮೊದಲನೆಯದಾಗಿ ಹಣಕಾಸಿನ ಕೊರತೆಯಿಂದ ಕಾಮಗಾರಿಗಳು ಸ್ಥಗಿತ ಆಗಿವೆ. ಇಸೊಲಕ್ಸ್ ಕೊರ್ಸನ್ ಕಂಪೆನಿ ದಿವಾಳಿ ಆಗಿದ್ದು, ಸಕಲೇಶಪುರ ಪ್ರದೇಶದಲ್ಲಿ ಹಾಳಾಗಿರುವ ರಸ್ತೆಯನ್ನು ರಿಪೇರಿ ಮಾಡಿಲ್ಲ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. ಸಾರ್ವಜನಿಕರ ಒತ್ತಡಕ್ಕೆ ಮಣಿದ ಎಲ್ ಆಂಡ್ ಟಿ ಕಂಪೆನಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗುವ ಹೆದ್ದಾರಿಯ ಗುಂಡಿ ಮುಚ್ಚುವ ಕೆಲಸವನ್ನಾದರು ಮಾಡಿದೆ.

2017ರಲ್ಲಿ ಎರಡೂ ಕಂಪನಿಗಳು ಭರದಿಂದಲೇ ಕಾಮಗಾರಿ ಆರಂಭಿಸಿದ್ದವು. ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕಗಳಲ್ಲಿ ಬೃಹತ್ ಪ್ರಮಾಣದ ಕಂದಕಗಳನ್ನು ತೆಗೆದು ಅವುಗಳನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ. ರಾಷ್ಟ್ರೀಯ ಗುಣಮಟ್ಟದಂತೆ ಪುನಾರಚಿಸಲು ಹೆದ್ದಾರಿ ಲೆವೆಲ್ ಆಗುವಂತೆ ಹಲವೆಡೆ ಕಂದಕಗಳನ್ನು ತೆಗೆಯಲಾಗಿತ್ತು. ದಿಢೀರ್ ಗುತ್ತಿಗೆದಾರರು ಸ್ಥಳದಿಂದ ಪೇರಿ ಕಿತ್ತಿದ್ದು ಎರಡು ವರ್ಷಗಳಿಂದ ಹೆದ್ದಾರಿ ವಾಹನ ಚಾಲಕರಿಗೆ ಹೆದ್ದಾರಿ ಸವಾಲಾಗಿ ನಿಂತಿದೆ.

ಈ ಬಾರಿಯ ಮಳೆಗಾಲದ ಅನಂತರ ಹಾಸನ ಮತ್ತು ಬಂಟ್ವಾಳ ನಡುವೆ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಶಿರಾಡಿ ಘಾಟಿಯ ಹೆದ್ದಾರಿ ಅಭಿವೃದ್ಧಿ ಆಗದಿರುವ ಪ್ರದೇಶದಲ್ಲಿ ಘನ ವಾಹನಗಳ ಸಂಚಾರ ಸಾಹಸದ ಕೆಲಸವಾಗಿದೆ. ದಿನನಿತ್ಯ ಹಲವಾರು ಬಾರಿ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತಿದೆ.

ಬಂಟ್ವಾಳ – ಗುಂಡ್ಯ ನಡುವೆ ಆನೆ ಕಾರಿಡಾರ್ ಇರುವುದರಿಂದ ಹೆದ್ದಾರಿ ವಿನ್ಯಾಸ ಬದಲಿಸಬೇಕಾದ ಪ್ರಮೇಯ ಬಂದಿತ್ತು. ಇದರಿಂದಾಗಿ ಗುತ್ತಿಗೆದಾರರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಡುವೆ ಒಮ್ಮತ ಮೂಡಿಬರಲಿಲ್ಲ. ಇದೇ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟವು ಐಎಲ್‌ಆ್ಯಂಡ್‌ಎಫ್‌ಎಸ್‌ ರೂಪದಲ್ಲಿ ಗುತ್ತಿಗೆದಾರರನ್ನು ಬಾಧಿಸಿತ್ತು. ಇನ್‌ಫ್ರಾಸ್ಟಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ ಸಾಲದ ಸುಳಿಯಲ್ಲಿ ಸಿಲುಕಿದ ಪರಿಣಾಮ ಐಎಲ್‌ ಆ್ಯಂಡ್‌ ಎಫ್‌ಎಸ್‌ ನ ಸಹಕಂಪೆನಿಗಳು ಕೂಡ ಅತಂತ್ರ ಸ್ಥಿತಿಯಲ್ಲಿವೆ. ಇವುಗಳು ಪ್ರಾಮುಖ್ಯವಾಗಿ ಮೂಲಭೂತ ಸೌಕರ್ಯ ಅಭಿವೃದ್ಧಿ ನಡೆಸುವ ಸಂಸ್ಥೆಗಳಿಗೆ ಬೃಹತ್ ಮೊತ್ತದ ದೀರ್ಘಕಾಲಿಕ ಸಾಲ ನೀಡುವ ಹಣಕಾಸು ಸಂಸ್ಥೆಗಳಾಗಿವೆ.

ಸುರಂಗ ಮಾರ್ಗವೆಂಬ ಭೂತ:

ಇವೆಲ್ಲ ಸಮಸ್ಯೆಗಳ ನಡುವೆಯೇ ಸಕಲೇಶಪುರ ಸಮೀಪದಿಂದ – ಗುಂಡ್ಯ ನಡುವೆ ಶಿರಾಡಿ ಘಾಟ್ ಪ್ರದೇಶದಲ್ಲಿ ಸುಮಾರು 26 ಕಿ.ಮೀ.ಉದ್ದದ ಸುರಂಗ ಮಾರ್ಗ ನಿರ್ಮಿಸಲು ಮುಂದಾಗಿದೆ. ಸುರಂಗ ಮಾರ್ಗದ ವಿಸ್ತೃತ ಯೋಜನಾ ವರದಿ ಡಿಪಿಆರ್ ಸಿದ್ಧವಾಗಿದೆ. ಯೋಜನೆಯ ಮೊತ್ತ ಅಂದಾಜು 12,000 ಕೋಟಿ ರೂಪಾಯಿ ಮಾತ್ರ.

ಸಾರ್ವಜನಿಕರು ಈಗ ಕುಲಗೆಟ್ಟ ಹೆದ್ದಾರಿಯಲ್ಲಿ ಪಯಣಿಸಲಾಗದೆ ಹಿಡಿಶಾಪ ಹಾಕುತ್ತಿರುವ ಸಂದರ್ಭದಲ್ಲಿ ಈ 12 ಸಾವಿರ ಕೋಟಿ ವೆಚ್ಚದ ಟೋಲ್ ಸಂಗ್ರಹದ ಸುರಂಗ ಮಾರ್ಗ ಯೋಜನೆಗೆ ಟೆಂಡರ್ ಕರೆಯುವ ಸಾಧ್ಯತೆ ಇದೆ. ಹೆದ್ದಾರಿ ಚೆನ್ನಾಗಿರಬೇಕು ಎಂದು ಜನರು ಬಯಸುವುದರಿಂದ ಅವರ ಇಚ್ಛೆಗೆ ಅನುಗುಣವಾಗಿ ಅನಗತ್ಯವಾಗಿದ್ದರೂ ಸರಕಾರ ದುಬಾರಿ ವೆಚ್ಚದ ಬೈಪಾಸ್ ಸುರಂಗ ಉಡುಗೊರೆಯಾಗಿ ನೀಡಲಿದೆ.

Tags: Bengaluru-Mangaluru National Highway 75Government of IndiaGovernment of KarnatakaNational Highway Authority of IndiaShiradi Ghatಕರ್ನಾಟಕ ಸರ್ಕಾರಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ಭಾರತ ಸರ್ಕಾರರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಶಿರಾಡಿ ಘಾಟಿ
Previous Post

ತಲೆ ಬುಡುವಿಲ್ಲದ ಕೈಗಾರಿಕಾ ನೀತಿಗಳು

Next Post

ನಿಸ್ತೇಜ ಪ್ರತಿಪಕ್ಷಗಳು- ಮತದಾನಕ್ಕೆ ಮೊದಲೇ ಚುನಾವಣೆ ‘ಗೆದ್ದ’ ಬಿಜೆಪಿ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ನಿಸ್ತೇಜ ಪ್ರತಿಪಕ್ಷಗಳು- ಮತದಾನಕ್ಕೆ ಮೊದಲೇ ಚುನಾವಣೆ ‘ಗೆದ್ದ’ ಬಿಜೆಪಿ

ನಿಸ್ತೇಜ ಪ್ರತಿಪಕ್ಷಗಳು- ಮತದಾನಕ್ಕೆ ಮೊದಲೇ ಚುನಾವಣೆ ‘ಗೆದ್ದ’ ಬಿಜೆಪಿ

Please login to join discussion

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada