• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜೆಫ್ರಿ ಎಪ್‌ಸ್ಟೀನ್ ಜೊತೆಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಫೋಟೋ ಬಹಿರಂಗ: ರಾಜಕೀಯದಲ್ಲಿ ಹೊಸ ಚರ್ಚೆ

ಪ್ರತಿಧ್ವನಿ by ಪ್ರತಿಧ್ವನಿ
October 22, 2026
in Top Story, Uncategorized, ದೇಶ, ರಾಜಕೀಯ
0
Photo of Union Minister Hardeep Puri with Jeffrey Epstein surfaces: Sparks new political debate
Share on WhatsAppShare on FacebookShare on Telegram

ನವದೆಹಲಿ :  ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ (effrey Epstein )ಜೊತೆಗೆ ಭಾರತದ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Puri) ಮುಖಾಮುಖಿ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಅಮೆರಿಕದ ನ್ಯಾಯಾಂಗ ಇಲಾಖೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಎಪ್‌ಸ್ಟೀನ್‌ಗೆ ಸಂಬಂಧಿಸಿದ ದಾಖಲೆಗಳ ಒಂಬತ್ತನೇ ಸರಣಿಯಲ್ಲಿ (Dataset 9) ಈ ಚಿತ್ರ ಲಭ್ಯವಾಗಿದೆ. ಸೂಟ್ ಧರಿಸಿರುವ ಹರ್ದೀಪ್ ಪುರಿ ಹಾಗೂ ಕಪ್ಪು ಬಣ್ಣದ ಉಡುಪಿನಲ್ಲಿರುವ ಎಪ್‌ಸ್ಟೀನ್ ಮುಖಾಮುಖಿಯಾಗಿ ಆರಾಮದಾಯಕ ಕುರ್ಚಿಗಳಲ್ಲಿ ಕುಳಿತಿರುವುದು ಫೋಟೋದಲ್ಲಿದ್ದು, ಇಬ್ಬರ ನಡುವಿನ ಟೇಬಲ್ ಮೇಲೆ ಕೆಲವು ಕಡತಗಳು ಮತ್ತು ದಾಖಲೆಗಳು ಕಂಡುಬಂದಿವೆ. ಈ ಫೋಟೋದಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ಕಾಣಿಸಿಲ್ಲ. ‘ದಿ ವೈರ್’ ವರದಿಯ ಪ್ರಕಾರ, ಈ ನಿರ್ದಿಷ್ಟ ಭೇಟಿಗೆ ಸಂಬಂಧಿಸಿದಂತೆ ಬೇರೆ ಬೇರೆ ಕೋನಗಳಿಂದ ತೆಗೆಯಲಾದ ಸುಮಾರು ಹತ್ತು ಛಾಯಾಚಿತ್ರಗಳು ದಾಖಲೆಗಳಲ್ಲಿ ಸೇರಿವೆ.

ಪ್ರತಿ ನಿಯೋಗದ ಭಾಗವಾಗಿ ಭೇಟಿಯಾಗಿದ್ದೆ ಎಂದಿದ್ದ ಸಚಿವರಿಗೆ ಹೊಸ ಪ್ರಶ್ನೆ

ಈ ಹಿಂದೆ ಅಂತಾರಾಷ್ಟ್ರೀಯ ಶಾಂತಿ ಸಂಸ್ಥೆಯ (ಐಪಿಐ) ನಿಯೋಗದ ಭಾಗವಾಗಿ ಮಾತ್ರ ಎಪ್‌ಸ್ಟೀನ್‌ನನ್ನು ಭೇಟಿಯಾಗಿದ್ದೆ ಎಂದು ಸಚಿವರು ನೀಡಿದ್ದ ಹೇಳಿಕೆಗೂ, ಪ್ರಸ್ತುತ ಬಿಡುಗಡೆಯಾಗಿರುವ ಏಕಾಂಗಿ ಸಭೆಯ ಫೋಟೋಗೂ ತಾಳೆಯಾಗುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ. ಈ ಹಿಂದೆ ಫೆಬ್ರವರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪುರಿ, 2009ರಲ್ಲಿ ವಿಶ್ವಸಂಸ್ಥೆಗೆ ಭಾರತದ ರಾಜತಾಂತ್ರಿಕರಾಗಿ ನಿಯೋಜನೆಗೊಂಡಾಗಿನಿಂದ 2017ರಲ್ಲಿ ಸಚಿವರಾಗುವವರೆಗಿನ ಅವಧಿಯಲ್ಲಿ ತಾವು ಎಪ್‌ಸ್ಟೀನ್‌ನನ್ನು ಒಟ್ಟು ಮೂರರಿಂದ ನಾಲ್ಕು ಬಾರಿ ಮಾತ್ರ ಭೇಟಿಯಾಗಿದ್ದಾಗಿ ತಿಳಿಸಿದ್ದರು. ಐಪಿಐ ಸಂಸ್ಥೆಯಲ್ಲಿದ್ದ ತಮ್ಮ ಹಿರಿಯ ಅಧಿಕಾರಿ ಟರ್ಜೆ ರಾಡ್-ಲಾರ್ಸೆನ್ ಮೂಲಕ ಎಪ್‌ಸ್ಟೀನ್ ಪರಿಚಯವಾಗಿದ್ದು, ಸಂಸ್ಥೆಯ ನಿಯೋಗದ ಜತೆಗಷ್ಟೇ ಭೇಟಿ ನಡೆದಿತ್ತು ಎಂದು ಈ ಹಿಂದೆ ಸಮರ್ಥಿಸಿಕೊಂಡಿದ್ದರು.

ಸಷ್ಟನೆ ನೀಡಿದ ಸಚಿವರ ಕಚೇರಿ

ಹೊಸ ಫೋಟೋ ಬಹಿರಂಗವಾದ ಬೆನ್ನಲ್ಲೇ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಕಚೇರಿ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಸುಮಾರು ಒಂದು ದಶಕದ ಹಿಂದೆ ನಡೆದ ಸಭೆಯಾಗಿದ್ದರಿಂದ ಈ ನಿರ್ದಿಷ್ಟ ಫೋಟೋ ಯಾವ ಸಭೆಯದ್ದು ಅಥವಾ ಆ ಸಮಯದಲ್ಲಿ ಇತರೆ ವ್ಯಕ್ತಿಗಳು ಹಾಜರಿದ್ದರೇ ಎಂಬುದು ಸಚಿವರಿಗೆ ನಿಖರವಾಗಿ ನೆನಪಿಲ್ಲ ಎಂದು ಕಚೇರಿ ತಿಳಿಸಿದೆ. ಜತೆಗೆ, ಈ ಚಿತ್ರಗಳು ಯಾವುದೇ ಹೊಸ ಸಂಗತಿಯನ್ನು ಬಯಲು ಮಾಡಿಲ್ಲ; ಬದಲಿಗೆ ಸಚಿವರು ಮೊದಲಿನಿಂದಲೂ ಹೇಳಿಕೊಂಡು ಬಂದಿರುವಂತೆ, ಸೂಕ್ತ ಉಡುಪು ಧರಿಸಿ ದಾಖಲೆಗಳೊಂದಿಗೆ ನಡೆದ ಔಪಚಾರಿಕ ಹಾಗೂ ವೃತ್ತಿಪರ ಸಭೆಗಳಿವು ಎಂಬುದನ್ನು ಸಾಬೀತುಪಡಿಸುತ್ತವೆ ಎಂದು ಸ್ಪಷ್ಟಪಡಿಸಿದೆ. ತಾವು ಎಂದಿಗೂ ಎಪ್‌ಸ್ಟೀನ್‌ನ ಖಾಸಗಿ ದ್ವೀಪಕ್ಕೆ ಭೇಟಿ ನೀಡಿಲ್ಲ ಹಾಗೂ ಭಾರತದ ಆರ್ಥಿಕತೆ ಮತ್ತು ಡಿಜಿಟಲ್ ಸಾಮರ್ಥ್ಯದಲ್ಲಿ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಮಾತ್ರ ಆ ಸಂವಾದಗಳು ನಡೆದಿದ್ದವು ಎಂದು ಕಚೇರಿ ಪುನರುಚ್ಚರಿಸಿದೆ.

ಹಳೆಯ ಇಮೇಲ್‌ಗಳಿಂದ ಬಹಿರಂಗವಾದ ಸಭೆಗಳು ಮತ್ತು ಸಂವಹನ ವಿವರ

ಅಮೆರಿಕ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಇಮೇಲ್ ದಾಖಲೆಗಳ ಪ್ರಕಾರ, 2014 ಮತ್ತು 2017ರ ನಡುವೆ ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಎಪ್‌ಸ್ಟೀನ್ ನಿವಾಸದಲ್ಲಿ ಸಚಿವರೊಂದಿಗೆ ಕನಿಷ್ಠ ಮೂರು ಸಭೆಗಳು ನಿಗದಿಯಾಗಿದ್ದವು. ಲಿಂಕ್ಡ್‌ಇನ್ ಸಂಸ್ಥಾಪಕ ರೀಡ್ ಹಾಫ್‌ಮನ್ ಅವರನ್ನು ಎಪ್‌ಸ್ಟೀನ್ ಮೂಲಕ ಸಂಪರ್ಕಿಸಿದ್ದ ಪುರಿ, ‘ಡಿಜಿಟಲ್ ಇಂಡಿಯಾ’ ಯೋಜನೆ ಮತ್ತು ಭಾರತದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸಿದ್ದರು. ಇದಲ್ಲದೆ, ಎಪ್‌ಸ್ಟೀನ್ ಅವರ ಸಹಾಯಕಿ ಭಾರತಕ್ಕೆ ಬರಲು ವೀಸಾ ಕೋರಿದಾಗ ಅದಕ್ಕೆ ಆದ್ಯತೆ ನೀಡುವಂತೆ ಭಾರತೀಯ ರಾಜತಾಂತ್ರಿಕರಿಗೆ ಪುರಿ ಸಂದೇಶ ರವಾನಿಸಿದ್ದು ಹಾಗೂ ದ್ವೀಪ ಪ್ರವಾಸದಿಂದ ಹಿಂದಿರುಗಿದ ನಂತರ ಭೇಟಿಯಾಗುವ ಕುರಿತು ಇಮೇಲ್ ವಿನಿಮಯ ಮಾಡಿಕೊಂಡಿದ್ದ ವಿವರಗಳು ಈ ದಾಖಲೆಗಳ ಮೂಲಕ ಬೆಳಕಿಗೆ ಬಂದಿವೆ. 2008ರಲ್ಲೇ ಲೈಂಗಿಕ ಅಪರಾಧ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದ ಎಪ್‌ಸ್ಟೀನ್, 2019ರಲ್ಲಿ ಲೈಂಗಿಕ ಕಳ್ಳಸಾಗಣೆ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾಗಲೇ ಸಾವನ್ನಪ್ಪಿದ್ದ.

Tags: Hardeep PuriJeffrey Epsteinphoto
Previous Post

ದಾಖಲೆ ಮಟ್ಟದ ತಾಪಮಾನ ಏರಿಕೆ : ‘ಎಲ್ ನಿನೋ’ ಪ್ರಭಾವದ ಕುರಿತು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

Next Post

ಫಾಸ್ಟ್‌ಟ್ಯಾಗ್ ಕೆಲಸ ಮಾಡದಿದ್ದರೆ ಡಬಲ್ ಟೋಲ್ ಕಟ್ಟಬೇಕೇ? NHAI ನಿಯಮ ಏನು ಹೇಳುತ್ತದೆ?

Related Posts

Incident involving the obstruction of a minister during the 'Nandidhwaja' worship in Mysuru: CM orders an inquiry
Top Story

ಮೈಸೂರು : ನಂದಿಧ್ವಜ ಪೂಜೆ ಸಂದರ್ಭ ಸಚಿವರನ್ನು ತಡೆದ ಪ್ರಕರಣ: ವಿಚಾರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಆದೇಶ

by ಪ್ರತಿಧ್ವನಿ
October 22, 2026
0

ಬೆಂಗಳೂರು :  ಮೈಸೂರು ಅರಮನೆ ಆವರಣದಲ್ಲಿ ನಿನ್ನೆ ನಡೆದ ನಂದಿಧ್ವಜ ಪೂಜೆ (Nandidhwaja) ಸಂದರ್ಭದಲ್ಲಿ ಸಚಿವರಾದ ಬಾಲಕೃಷ್ಣ, ನರೇಂದ್ರ ಸ್ವಾಮಿ, ಬಸವಂತಪ್ಪ ಅವರನ್ನು ಪೂಜೆ ಆವರಣ ಪ್ರವೇಶಿಸಲು...

Read moreDetails
Do you have to pay double the toll if FASTag doesn't work? What do the NHAI rules say?

ಫಾಸ್ಟ್‌ಟ್ಯಾಗ್ ಕೆಲಸ ಮಾಡದಿದ್ದರೆ ಡಬಲ್ ಟೋಲ್ ಕಟ್ಟಬೇಕೇ? NHAI ನಿಯಮ ಏನು ಹೇಳುತ್ತದೆ?

October 22, 2026
Record-breaking temperature rise: World Meteorological Organization warns about the impact of 'El Niño'

ದಾಖಲೆ ಮಟ್ಟದ ತಾಪಮಾನ ಏರಿಕೆ : ‘ಎಲ್ ನಿನೋ’ ಪ್ರಭಾವದ ಕುರಿತು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

October 22, 2026
South-East Graduates' Constituency: Vigorous campaigning in support of Congress candidate Shashi Hulikuntemath

ಆಗ್ನೇಯ ಪದವೀಧರರ ಕ್ಷೇತ್ರ : ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಪರ ಭರ್ಜರಿ ಪ್ರಚಾರ

October 22, 2026
Low-pressure area: Heavy rain forecast for these districts in the state

ವಾಯುಭಾರ ಕುಸಿತ : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ

October 22, 2026
Next Post
Do you have to pay double the toll if FASTag doesn't work? What do the NHAI rules say?

ಫಾಸ್ಟ್‌ಟ್ಯಾಗ್ ಕೆಲಸ ಮಾಡದಿದ್ದರೆ ಡಬಲ್ ಟೋಲ್ ಕಟ್ಟಬೇಕೇ? NHAI ನಿಯಮ ಏನು ಹೇಳುತ್ತದೆ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada