ಬೆಂಗಳೂರು: ಗ್ರಾಮೀಣ ಭಾಗದ ಜನರಿಗೆ ಮತ್ತು ಸಾರ್ವಜನಿಕರಿಗೆ ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಸಿಹಿ ಸುದ್ದಿ (Good News) ಸಿಕ್ಕಿದೆ. ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರೆ ಅಗತ್ಯ ದಾಖಲೆಗಳನ್ನು ಪಡೆಯಲು ತಾಲೂಕು ಕೇಂದ್ರದ ನಾಡಕಚೇರಿಗಳಿಗೆ (ಅಟಲ್ ಜೀ ಜನಸ್ನೇಹಿ ಕೇಂದ್ರಗಳು) ಅಲೆದಾಡುವ ಅವಶ್ಯಕತೆ ಇನ್ನುಮುಂದೆ ಇರುವುದಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ನಾಡಕಚೇರಿಯ ವಿವಿಧ ಪ್ರಮುಖ ಸೇವೆಗಳನ್ನು ಈಗ ಆಯಾ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರ (Bapuji Seva Kendras)ಗಳಲ್ಲಿಯೇ ಒದಗಿಸಲಾಗುತ್ತಿದೆ.
ಬಾಪೂಜಿ ಸೇವಾ ಕೇಂದ್ರಗಳಲ್ಲಿ ಲಭ್ಯವಿರುವ ಪ್ರಮುಖ ಪ್ರಮಾಣ ಪತ್ರಗಳು
ಕೃಷಿ ಕಾರ್ಮಿಕ ದೃಢೀಕರಣ ಪತ್ರ
ವ್ಯವಸಾಯಗಾರರ ದೃಢೀಕರಣ ಪತ್ರ
ಸಣ್ಣ / ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ
ಮೇಲುಸ್ತರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ (Non-Creamy Layer Certificate)
ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೆ ಸೇವೆಗಳು
ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು:
ಕಡ್ಡಾಯ ದಾಖಲೆಗಳು:
ಪಡಿತರ ಚೀಟಿ (Ration Card) / ಮತದಾರರ ಗುರುತಿನ ಚೀಟಿ (Voter ID) / ಆಧಾರ್ ಕಾರ್ಡ್.
ಪಹಣಿ ಪತ್ರ (RTC).
ಮೇಲುಸ್ತರಕ್ಕೆ ಸೇರಿಲ್ಲವೆಂಬ ಪತ್ರಕ್ಕಾಗಿ ಅರ್ಜಿ ನಮೂನೆಯಲ್ಲಿ ಆದಾಯದ ಬಗ್ಗೆ ಸ್ವಯಂ ಘೋಷಿತ ಪತ್ರ.
ಐಚ್ಛಿಕ ದಾಖಲೆಗಳು:
ವೇತನ ರಶೀದಿ ಹಾಗೂ ಆದಾಯ ತೆರಿಗೆ ಪಾವತಿ ವಿವರಗಳು.
ಕಾರ್ಯ ವಿಧಾನ ಮತ್ತು ವಿತರಣೆ:
ಏಕದಿನ ಸೇವೆ (One Day Service): ಭೂಮಿ ಆನ್ಲೈನ್ ಪೋರ್ಟಲ್ನಲ್ಲಿ ಆಪರೇಟರ್ ಪಹಣಿಯನ್ನು ಪರಿಶೀಲಿಸಲಿದ್ದಾರೆ. ಪಹಣಿಯಲ್ಲಿ ಅರ್ಜಿದಾರರ ಹೆಸರು ಸ್ಪಷ್ಟವಾಗಿದ್ದರೆ, ಪಹಣಿ ಆಧಾರದ ಮೇಲೆ ಒಂದೇ ದಿನದಲ್ಲಿ (One Day Service) ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ.
ಕ್ಷೇತ್ರ ಪರಿಶೀಲನೆ: ಪಹಣಿಯಲ್ಲಿ ಹೆಸರು ಇಲ್ಲದ ಸಂದರ್ಭದಲ್ಲಿ ಅಥವಾ ನಿಯಮಾನುಸಾರ, ಗ್ರಾಮಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸಿ/ವಂಶವೃಕ್ಷ ಪರಿಶೀಲಿಸಿದ ನಂತರ ನಿಯಮಾನುಸಾರ ಪ್ರಮಾಣ ಪತ್ರ ನೀಡಲಾಗುತ್ತದೆ.
ನಿಗದಿತ ಶುಲ್ಕ:
ಪ್ರತಿ ಅರ್ಜಿಗೆ ನಿಗದಿತ ಶುಲ್ಕ ಕೇವಲ ರೂ. 40/- ಮಾತ್ರ.
ನಾಗರಿಕರು ದೂರದ ತಾಲೂಕು ಕಚೇರಿ ಅಥವಾ ನಾಡಕಚೇರಿಗಳಿಗೆ ತೆರಳಿ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಳ್ಳದೆ, ತಮ್ಮ ಸಮೀಪದ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ: 750 ಕೆಜಿ ಚಿನ್ನದ ಅಂಬಾರಿ ಹೊರಲು ‘ಪ್ರಶಾಂತ’ ಸಜ್ಜು





