• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಗ್ನೇಯ ಪದವೀಧರರ ಕ್ಷೇತ್ರ : ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಪರ ಭರ್ಜರಿ ಪ್ರಚಾರ

ಪ್ರತಿಧ್ವನಿ by ಪ್ರತಿಧ್ವನಿ
October 22, 2026
in Top Story, ಕರ್ನಾಟಕ, ರಾಜಕೀಯ
0
South-East Graduates' Constituency: Vigorous campaigning in support of Congress candidate Shashi Hulikuntemath
Share on WhatsAppShare on FacebookShare on Telegram

ಚಿಕ್ಕಬಳ್ಳಾಪುರ : ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಕಾಂಗ್ರೆಸ್ (Congress) ಪಕ್ಷದ ಅಧಿಕೃತ ಅಭ್ಯರ್ಥಿ ಶಶಿ ಹುಲಿಕುಂಟೆಮಠ (Shashi Hulikuntemath) ಅವರ ಪರವಾಗಿ ಭರ್ಜರಿ ಪ್ರಚಾರ ಸಭೆ ನಡೆಯಿತು.

ADVERTISEMENT

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಬೃಹತ್ ಸಭೆಯಲ್ಲಿ ಅಪಾರ ಸಂಖ್ಯೆಯ ಮುಖಂಡರು, ಕಾರ್ಯಕರ್ತರು ಮತ್ತು ಪದವೀಧರ ಮತದಾರರು ಭಾಗವಹಿಸಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು.

ಶಶಿ ಹುಲಿಕುಂಟೆಮಠ ಗೆಲುವಿಗೆ ರಾಜೀವ್‌ಗೌಡ ಕರೆ

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖಂಡ ರಾಜೀವ್‌ಗೌಡ, ಆಗ್ನೇಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು. ಶಿಡ್ಲಘಟ್ಟ ಕ್ಷೇತ್ರದಲ್ಲಿ ಸುಮಾರು ಐದು ಸಾವಿರ ಪದವೀಧರ ಮತದಾರರಿದ್ದು, ಅವರಲ್ಲಿ 4,500ಕ್ಕೂ ಅಧಿಕ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ಕೊಡಿಸುವ ಮೂಲಕ ಅವರನ್ನು ವಿಧಾನ ಪರಿಷತ್ತಿಗೆ ಕಳುಹಿಸಬೇಕು ಎಂದರು.

ಶಶಿ ಹುಲಿಕುಂಟೆಮಠ ಅವರು ವಿದ್ಯಾರ್ಥಿ ದೆಸೆಯಿಂದಲೇ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್‌ನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಬೆಳೆದು ಬಂದ ನಾಯಕರಾಗಿದ್ದು, ಪದವೀಧರರ ಧ್ವನಿಯಾಗಿ ಕೆಲಸ ಮಾಡಲು ಅರ್ಹ ಅಭ್ಯರ್ಥಿಯಾಗಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಕಾರ್ಯಕರ್ತರೂ ಮತಪತ್ರದಲ್ಲಿ ಕ್ರಮ ಸಂಖ್ಯೆ ಒಂದರಲ್ಲಿರುವ ಶಶಿ ಹುಲಿಕುಂಟೆಮಠ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ಕೊಡಿಸಲು ಶ್ರಮಿಸಬೇಕೆಂದು ಮನವಿ ಮಾಡಿದರು.

ಪದವೀಧರರ ಪರ ನಿರಂತರ ಹೋರಾಟದ ಸಂಕಲ್ಪ

ಬಳಿಕ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ, ತಾವು ಕಳೆದ 21 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದರು. ಈ ಹಿಂದೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿರೋಧ ಪಕ್ಷಗಳ ಸದಸ್ಯರು ಪರಿಷತ್‌ನಲ್ಲಿ ಪದವೀಧರರ ಮತ್ತು ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಪದವೀಧರರ ನಿರುದ್ಯೋಗ ಸಮಸ್ಯೆ, ಉದ್ಯೋಗಾವಕಾಶಗಳು ಹಾಗೂ ಯುವ ಸಮುದಾಯದ ಬೇಡಿಕೆಗಳನ್ನು ಪರಿಷತ್‌ನಲ್ಲಿ ಪ್ರಬಲವಾಗಿ ಮಂಡಿಸಲು ತಮಗೆ ಈ ಬಾರಿ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಶೀರ್ವದಿಸಬೇಕೆಂದು ಅವರು ಮತದಾರರಲ್ಲಿ ಕೋರಿದರು.

Tags: Congress candidatShashi HulikuntemathSouth East Graduates Constituency
Previous Post

ವಾಯುಭಾರ ಕುಸಿತ : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ

Next Post

ದಾಖಲೆ ಮಟ್ಟದ ತಾಪಮಾನ ಏರಿಕೆ : ‘ಎಲ್ ನಿನೋ’ ಪ್ರಭಾವದ ಕುರಿತು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

Related Posts

Incident involving the obstruction of a minister during the 'Nandidhwaja' worship in Mysuru: CM orders an inquiry
Top Story

ಮೈಸೂರು : ನಂದಿಧ್ವಜ ಪೂಜೆ ಸಂದರ್ಭ ಸಚಿವರನ್ನು ತಡೆದ ಪ್ರಕರಣ: ವಿಚಾರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಆದೇಶ

by ಪ್ರತಿಧ್ವನಿ
October 22, 2026
0

ಬೆಂಗಳೂರು :  ಮೈಸೂರು ಅರಮನೆ ಆವರಣದಲ್ಲಿ ನಿನ್ನೆ ನಡೆದ ನಂದಿಧ್ವಜ ಪೂಜೆ (Nandidhwaja) ಸಂದರ್ಭದಲ್ಲಿ ಸಚಿವರಾದ ಬಾಲಕೃಷ್ಣ, ನರೇಂದ್ರ ಸ್ವಾಮಿ, ಬಸವಂತಪ್ಪ ಅವರನ್ನು ಪೂಜೆ ಆವರಣ ಪ್ರವೇಶಿಸಲು...

Read moreDetails
Do you have to pay double the toll if FASTag doesn't work? What do the NHAI rules say?

ಫಾಸ್ಟ್‌ಟ್ಯಾಗ್ ಕೆಲಸ ಮಾಡದಿದ್ದರೆ ಡಬಲ್ ಟೋಲ್ ಕಟ್ಟಬೇಕೇ? NHAI ನಿಯಮ ಏನು ಹೇಳುತ್ತದೆ?

October 22, 2026
Photo of Union Minister Hardeep Puri with Jeffrey Epstein surfaces: Sparks new political debate

ಜೆಫ್ರಿ ಎಪ್‌ಸ್ಟೀನ್ ಜೊತೆಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಫೋಟೋ ಬಹಿರಂಗ: ರಾಜಕೀಯದಲ್ಲಿ ಹೊಸ ಚರ್ಚೆ

October 22, 2026
Record-breaking temperature rise: World Meteorological Organization warns about the impact of 'El Niño'

ದಾಖಲೆ ಮಟ್ಟದ ತಾಪಮಾನ ಏರಿಕೆ : ‘ಎಲ್ ನಿನೋ’ ಪ್ರಭಾವದ ಕುರಿತು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

October 22, 2026
Low-pressure area: Heavy rain forecast for these districts in the state

ವಾಯುಭಾರ ಕುಸಿತ : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ

October 22, 2026
Next Post
Record-breaking temperature rise: World Meteorological Organization warns about the impact of 'El Niño'

ದಾಖಲೆ ಮಟ್ಟದ ತಾಪಮಾನ ಏರಿಕೆ : 'ಎಲ್ ನಿನೋ' ಪ್ರಭಾವದ ಕುರಿತು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada