ಬೆಂಗಳೂರು : 2026ರ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಅದ್ಭುತ ಸಾಧನೆಗೈದು, ನಾಡಿಗೆ ಕೀರ್ತಿ ತಂದ ಕರ್ನಾಟಕದ ಹೆಮ್ಮೆಯ ಕ್ರೀಡಾಪಟುಗಳನ್ನು ಇಂದು ಸಿಎಂ ಡಿ.ಕೆ. ಶಿವಕುಮಾರ್ (CM D.K. Shivakumar) ಸನ್ಮಾನಿಸಿದ್ದಾರೆ.
ಕ್ರೀಡಾಪಟುಗಳಾದ ಮೋಹಿತ್ ಎಚ್. ಎಸ್., ಅದಿತಿ ಅಶೋಕ್, ಪೂವಮ್ಮ, ಆಯುಷ್ ಶೆಟ್ಟಿ, ತಿಲೋತ್ತಮಾ ಸೇನ್, ಶ್ರೇಯಾಂಕ ಪಾಟೀಲ್ ಹಾಗೂ ಸ್ನೇಹ ಎಸ್. ಎಸ್. ಅವರನ್ನು ವಿಧಾನಸೌಧದಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿದ್ದಾರೆ.
ನಟ ಧ್ರುವ ಸರ್ಜಾ ಹೊಸ ಪಯಣ; ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಜೊತೆ ‘ಕೆಮಿಸ್ಟ್ರಿ’ ಶುರು! Dhruva Sarja
ಈ ಕ್ರೀಡಾಪಟುಗಳ ಐತಿಹಾಸಿಕ ಸಾಧನೆ ಪ್ರತಿಯೊಬ್ಬ ಕನ್ನಡಿಗನ ಎದೆಯುಬ್ಬುವಂತೆ ಮಾಡಿದೆ. ಇವರ ಕಠಿಣ ಪರಿಶ್ರಮ, ಛಲ ಮತ್ತು ಕ್ರೀಡಾಭಕ್ತಿ ನಮ್ಮ ನಾಡಿನ ಯುವ ಪೀಳಿಗೆಗೆ ಅತ್ಯುತ್ತಮ ಸ್ಫೂರ್ತಿಯಾಗಿದೆ. ಮುಂಬರುವ ದಿನಗಳಲ್ಲಿ ಈ ಎಲ್ಲ ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆಗೈದು, ನಮ್ಮ ರಾಜ್ಯ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಲಿ. ಕ್ರೀಡೆ ಹಾಗೂ ಕ್ರೀಡಾಪಟುಗಳ ಏಳಿಗೆಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಈ ವೇಳೆ ಮಾನ್ಯ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಮತ್ತು ಯುವಜನ ಸೇವೆ ಸಚಿವರಾದ ಡಾ. ಜಿ. ಪರಮೇಶ್ವರ, ಕರ್ನಾಟಕ ಒಲಂಪಿಕ್ ಒಕ್ಕೂಟದ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಎಂ. ಎನ್. ಅನುಚೇತ್ ಮತ್ತಿತರರು ಉಪಸ್ಥಿತರಿದ್ದರು.
BREAKING : ಖ್ಯಾತ ವಿಜ್ಞಾನಿ` ಫ್ರಾನ್ಸಿಸ್ ಹಾಲ್ಜೆನ್’ಗೆ ನೊಬೆಲ್ ಪ್ರಶಸ್ತಿ ಗೌರವ | Nobel Prize






