• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ: ಕರ್ನಾಟಕ ಪ್ರವಾಸಿ ಸೌಧದಲ್ಲಿ ಇನ್ಮುಂದೆ 3-ಸ್ಟಾರ್ ಹೋಟೆಲ್ ಮಾದರಿ ಸೌಲಭ್ಯ | Tirupati

ಪ್ರತಿಧ್ವನಿ by ಪ್ರತಿಧ್ವನಿ
October 1, 2026
in Top Story, ಕರ್ನಾಟಕ
0
Good news for devotees of Tirupati Thimmappa
Share on WhatsAppShare on FacebookShare on Telegram

ಬೆಂಗಳೂರು : ತಿರುಪತಿ (Tirupati) ತಿಮ್ಮಪ್ಪನ ಭಕ್ತರಿಗೆ ರಾಜ್ಯ ಸರ್ಕಾರವು (State Government) ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಯಾತ್ರಾ ಪ್ರವಾಸೋದ್ಯಮವನ್ನು ಹೆಚ್ಚು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಆಂಧ್ರಪ್ರದೇಶದ ತಿರುಮಲದಲ್ಲಿರುವ ಕರ್ನಾಟಕ ಪ್ರವಾಸಿ ಸೌಧದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (KSTDC) ವಹಿಸುವ ಒಪ್ಪಂದಕ್ಕೆ ಮುಜರಾಯಿ ಇಲಾಖೆ ಮತ್ತು KSTDC ಸಹಿ ಹಾಕಿವೆ.

ADVERTISEMENT
DK Shivakumar :  ರಾಜ್ಯದಲ್ಲಿ ಮತದಾರರ ಡಿಲೀಟ್ ಬಗ್ಗೆ ಎಲ್ಲಾ ದಾಖಲೆ ಸಲ್ಲಿಸಿದ್ದೇವೆ-ಸಿಎಂ ಡಿಕೆಶಿ..!

ತಿರುಪತಿಗೆ ತೆರಳುವ ಕರ್ನಾಟಕದ ಯಾತ್ರಿಕರಿಗೆ ಸ್ವಚ್ಛ, ಸುರಕ್ಷಿತ, ಗುಣಮಟ್ಟದ ಮತ್ತು ಕೈಗೆಟುಕುವ ವಸತಿ ಒದಗಿಸುವುದರ ಜೊತೆಗೆ, ಸರ್ಕಾರಿ ಪ್ರವಾಸಿ ಆಸ್ತಿಗಳನ್ನು ವೃತ್ತಿಪರವಾಗಿ ನಿರ್ವಹಿಸಿ ಯಾತ್ರಾ ಪ್ರವಾಸೋದ್ಯಮಕ್ಕೆ ಸಮಗ್ರ ಮಾದರಿಯನ್ನು ರೂಪಿಸುವುದು ಈ ಕ್ರಮದ ಉದ್ದೇಶವಾಗಿದೆ.

ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಜರಾಯಿ ಹಾಗೂ ಮೀನುಗಾರಿಕೆ ಸಚಿವ ಕೆ.ಎಸ್. ಬಸವಂತಪ್ಪ ಹಾಗೂ KSTDC ಅಧ್ಯಕ್ಷ ಎಂ. ಶ್ರೀನಿವಾಸ್ ಉಪಸ್ಥಿತರಿದ್ದರು.

ಒಪ್ಪಂದದಡಿ ತಿರುಮಲದ ಕರ್ನಾಟಕ ಪ್ರವಾಸಿ ಸೌಧದಲ್ಲಿರುವ ಐದು ಪ್ರಮುಖ ಬ್ಲಾಕ್‌ಗಳ ಒಟ್ಟು 377 ಕೊಠಡಿಗಳು, 12 ಡಾರ್ಮಿಟರಿಗಳು, ಕಲ್ಯಾಣ ಮಂಟಪ ಸೇರಿದಂತೆ ಪ್ರಮುಖ ಆತಿಥ್ಯ ಸೌಲಭ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 10 ವರ್ಷಗಳ ಅವಧಿಗೆ KSTDC ವಹಿಸಿಕೊಳ್ಳಲಿದೆ. ಸೌಲಭ್ಯಗಳನ್ನು ಹಂತ ಹಂತವಾಗಿ ನವೀಕರಿಸಿ ಕನಿಷ್ಠ 3-ಸ್ಟಾರ್ ಹೋಟೆಲ್ ಮಟ್ಟದ ಗುಣಮಟ್ಟದಲ್ಲಿ ನಿರ್ವಹಿಸಲು ಒತ್ತು ನೀಡಲಾಗಿದೆ.

DK Shivakumar : ಚುನಾವಣೆ ಆಯೋಗದ ಕಚೇರಿಯಲ್ಲಿ ಸಿಎಂ ಧರಣಿ..! #election #gyaneshkumar #pratidhvani

ಯಾತ್ರೆಯಿಂದ ಪ್ರವಾಸೋದ್ಯಮಕ್ಕೂ ವಿಸ್ತರಣೆ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, ಯಾತ್ರಿಕರಿಗೆ ಕೇವಲ ವಸತಿ ಕಲ್ಪಿಸುವುದಕ್ಕೆ ಈ ಯೋಜನೆ ಸೀಮಿತವಾಗಬಾರದು; ಯಾತ್ರಾ ಪ್ರವಾಸವನ್ನು ಸಮಗ್ರ ಪ್ರವಾಸಿ ಅನುಭವವಾಗಿ ರೂಪಿಸುವ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದು ಹೇಳಿದರು.

ತಿರುಪತಿ–ತಿರುಮಲಕ್ಕೆ ಕರ್ನಾಟಕದಿಂದ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ತೆರಳುತ್ತಾರೆ. ಅವರಿಗೆ ಉತ್ತಮ ಮತ್ತು ಕೈಗೆಟುಕುವ ವಸತಿ ಕಲ್ಪಿಸುವುದು ಮೊದಲ ಆದ್ಯತೆ. ಅದರ ಜೊತೆಗೆ, ರಾಜ್ಯದ ಇತರೆ ಯಾತ್ರಾ ತಾಣಗಳನ್ನೂ ಭೇಟಿ ಮಾಡುವಂತೆ ಮಾಹಿತಿ, ಸಂಪರ್ಕ ಮತ್ತು ಪ್ರವಾಸಿ ಸೌಲಭ್ಯಗಳನ್ನು ಜೋಡಿಸಿದರೆ ಯಾತ್ರಾ ಪ್ರವಾಸೋದ್ಯಮದ ವ್ಯಾಪ್ತಿ ಇನ್ನಷ್ಟು ವಿಸ್ತರಿಸುತ್ತದೆ. ಪ್ರವಾಸೋದ್ಯಮ ಇಲಾಖೆ ಈ ಕ್ಷೇತ್ರವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.

BK Hariprasad : SIR ವಿರುದ್ಧ ಹರಿಪ್ರಸಾದ್‌ ಆಕ್ರೋಶ..! #election #pmmodi #electioncommission #pratidhvani

ತಿರುಮಲದ ಪ್ರವಾಸಿ ಸೌಧದ ಕೊಠಡಿಗಳು, ಸ್ವಚ್ಛತೆ, ಆಹಾರ, ನಿರ್ವಹಣೆ ಮತ್ತು ಆತಿಥ್ಯ ಸೇವೆಗಳನ್ನು ವೃತ್ತಿಪರ ಮಟ್ಟಕ್ಕೆ ಏರಿಸಲು KSTDC ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಸರ್ಕಾರದ ಆಸ್ತಿಗಳು ಉತ್ತಮವಾಗಿ ನಿರ್ವಹಣೆಯಾಗಬೇಕು; ಅವು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗುವ ಮಾದರಿಯನ್ನೂ ರೂಪಿಸಬೇಕು. ತಿರುಮಲದಲ್ಲಿ ಆರಂಭವಾಗುತ್ತಿರುವ ಈ ವ್ಯವಸ್ಥೆಯ ಅನುಭವವನ್ನು ಆಧರಿಸಿ, ಮುಂದಿನ ದಿನಗಳಲ್ಲಿ ಇತರೆ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿಯೂ ಇಂತಹ ಅವಕಾಶಗಳನ್ನು ಪರಿಶೀಲಿಸಲಾಗುವುದು,” ಎಂದು ಕೆ.ಜೆ. ಜಾರ್ಜ್ ಹೇಳಿದರು.

ಮುಜರಾಯಿ, ಮೀನುಗಾರಿಕೆ ಹಾಗೂ ಬಂದರುಗಳ ಸಚಿವರಾದ ಕೆ.ಎಸ್. ಬಸವಂತಪ್ಪ ಮಾತನಾಡಿ, “ತಿರುಮಲ ಯಾತ್ರಾ ನಿವಾಸವನ್ನು ಕೇವಲ ವಾಣಿಜ್ಯ ಚಟುವಟಿಕೆಯಾಗಿ ನೋಡಬಾರದು. ಇದು ಭಕ್ತರ ಸೇವೆಯಾಗಿದ್ದು, ಅತ್ಯಂತ ಶ್ರದ್ಧೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕು,” ಎಂದರು.

DK Shivakumar : BJP - JDS ಮಾಡ್ತಿರೋ ಕುತಂತ್ರ ನೋಡಿ ಇಂಥಾ ಕ್ರಿಮಿನಲ್ಸ್‌ ದೇಶದಲ್ಲಿ ಯಾರೂ ಇಲ್ಲ..! #pratidhvani

ತಿರುಮಲದ ಕರ್ನಾಟಕ ಪ್ರವಾಸಿ ಸೌಧವನ್ನು KSTDC ಮೂಲಕ ವೃತ್ತಿಪರವಾಗಿ ನಿರ್ವಹಿಸಿ, ಭಕ್ತರಿಗೆ ಸ್ವಚ್ಛ, ಸುರಕ್ಷಿತ ಮತ್ತು ಗುಣಮಟ್ಟದ ವಸತಿ ಸೌಲಭ್ಯ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಹಂತ ಹಂತವಾಗಿ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಿ ಉತ್ತಮ ಆತಿಥ್ಯ ಸೇವೆ ನೀಡಲಾಗುವುದು,” ಎಂದು KSTDC ಅಧ್ಯಕ್ಷ ಎಂ. ಶ್ರೀನಿವಾಸ್ ತಿಳಿಸಿದರು

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ತಿರುಮಲದ ಕರ್ನಾಟಕ ಪ್ರವಾಸಿ ಸೌಧವನ್ನು KSTDC ಮೂಲಕ ನಿರ್ವಹಿಸುವುದು ಕೇವಲ ಒಂದು ಆಸ್ತಿಯ ನಿರ್ವಹಣಾ ಬದಲಾವಣೆಯಲ್ಲ. ಯಾತ್ರಾ ಪ್ರವಾಸೋದ್ಯಮವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಕರ್ನಾಟಕದಿಂದ ಪ್ರಮುಖ ಯಾತ್ರಾ ಕೇಂದ್ರಗಳಿಗೆ ತೆರಳುವ ಪ್ರವಾಸಿಗರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ವಸತಿ ಒದಗಿಸುವುದು, ಸರ್ಕಾರಿ ಪ್ರವಾಸಿ ಆಸ್ತಿಗಳನ್ನು ವೃತ್ತಿಪರವಾಗಿ ನಿರ್ವಹಿಸುವುದು ಹಾಗೂ ಯಾತ್ರಾ ಪ್ರವಾಸವನ್ನು ಸುತ್ತಮುತ್ತಲಿನ ಇತರೆ ಪ್ರವಾಸಿ ಅನುಭವಗಳೊಂದಿಗೆ ಜೋಡಿಸುವುದು ನಮ್ಮ ದೃಷ್ಟಿಕೋನವಾಗಿದೆ,” ಎಂದರು.

ಈ ಮಾದರಿಯಿಂದ ಯಾತ್ರಿಕರಿಗೆ ಉತ್ತಮ ಸೌಲಭ್ಯ ದೊರೆಯುವುದರ ಜೊತೆಗೆ KSTDCಯಂತಹ ಸರ್ಕಾರಿ ಸಂಸ್ಥೆಗಳಿಗೆ ಆದಾಯ ಸೃಷ್ಟಿಯಾಗುತ್ತದೆ ಮತ್ತು ಸರ್ಕಾರಿ ಆಸ್ತಿಗಳ ಸಮರ್ಥ ಬಳಕೆಯೂ ಸಾಧ್ಯವಾಗುತ್ತದೆ. ತಿರುಮಲದ ಅನುಭವವನ್ನು ಒಂದು ಮಾದರಿಯಾಗಿ ಪರಿಗಣಿಸಿ, ರಾಜ್ಯದ ಯಾತ್ರಾ ಪ್ರವಾಸೋದ್ಯಮವನ್ನು ಇನ್ನಷ್ಟು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ಅವಕಾಶಗಳನ್ನು ಮುಂದಿನ ಹಂತದಲ್ಲಿ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, KSTDC ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ.ಆರ್., ಮುಜರಾಯಿ ಇಲಾಖೆ ಆಯುಕ್ತ ಶರತ್ ಬಿ. ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಒಪ್ಪಂದದಡಿ ತಿರುಮಲದ ಕರ್ನಾಟಕ ಪ್ರವಾಸಿ ಸೌಧದಲ್ಲಿರುವ ಐದು ಪ್ರಮುಖ ಬ್ಲಾಕ್‌ಗಳ ಒಟ್ಟು 364 ಕೊಠಡಿಗಳು, 12 ಡಾರ್ಮಿಟರಿಗಳು, ಕಲ್ಯಾಣ ಮಂಟಪ ಸೇರಿದಂತೆ ಪ್ರಮುಖ ಆತಿಥ್ಯ ಸೌಲಭ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 10 ವರ್ಷಗಳ ಅವಧಿಗೆ KSTDC ವಹಿಸಿಕೊಳ್ಳಲಿದೆ. ಸೌಲಭ್ಯಗಳನ್ನು ಹಂತ ಹಂತವಾಗಿ ನವೀಕರಿಸಿ ಕನಿಷ್ಠ 3-ಸ್ಟಾರ್ ಹೋಟೆಲ್ ಮಟ್ಟದ ಗುಣಮಟ್ಟದಲ್ಲಿ ನಿರ್ವಹಿಸಲು ಒತ್ತು ನೀಡಲಾಗಿದೆ.

GOOD NEWS : ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ  ಖರೀದಿಗೆ ಕೇಂದ್ರ ಅನುಮೋದನೆ

Tags: DevoteesThimmappatirupati
Previous Post

GOOD NEWS : ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ  ಖರೀದಿಗೆ ಕೇಂದ್ರ ಅನುಮೋದನೆ

Next Post

ದಂಡ ಕಟ್ಟದಿದ್ದರೆ ವಾಹನದ RC, PUC, DL ಸೇವೆಗಳಿಗೆ ತಡೆ? ಸುಪ್ರೀಂ ಕೋರ್ಟ್ ಮಹತ್ವದ ಆದೇಶ

Related Posts

ನಕಲಿ ಮತದಾರರ ಅರ್ಜಿ ಸಲ್ಲಿಸಿದರೆ ಕಾನೂನು ಕ್ರಮ: ಫಾರಂ 6, 6A, 7, 8 ಕುರಿತು ಕರ್ನಾಟಕ CEO ಖಡಕ್ ಸೂಚನೆ
Top Story

ನಕಲಿ ಮತದಾರರ ಅರ್ಜಿ ಸಲ್ಲಿಸಿದರೆ ಕಾನೂನು ಕ್ರಮ: ಫಾರಂ 6, 6A, 7, 8 ಕುರಿತು ಕರ್ನಾಟಕ CEO ಖಡಕ್ ಸೂಚನೆ

by ಪ್ರತಿಧ್ವನಿ
October 1, 2026
0

ಬೆಂಗಳೂರು, ಅ.1: ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಅಥವಾ ತಪ್ಪು ಘೋಷಣೆ ನೀಡಿ ಅರ್ಜಿ ಸಲ್ಲಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ...

Read moreDetails
ಕರ್ನಾಟಕದಲ್ಲಿ ಬರದ ಬಿಸಿ ಹೆಚ್ಚಳ: ಮತ್ತೆ 40 ತಾಲೂಕು ಬರಪೀಡಿತ ಘೋಷಣೆ!

ಕರ್ನಾಟಕದಲ್ಲಿ ಬರದ ಬಿಸಿ ಹೆಚ್ಚಳ: ಮತ್ತೆ 40 ತಾಲೂಕು ಬರಪೀಡಿತ ಘೋಷಣೆ!

October 1, 2026
ಕಾಕ್‌ಪಿಟ್‌ನಲ್ಲಿ ಚಾಕು ದಾಳಿ ನಡೆದಾಗ ಸ್ಮಿತ್ ಮಚ್ಚಾರ್ ಮಾಡಿದ್ದೇನು?ಸಾವಿನಂಚಿನಲ್ಲಿದ್ದ 174 ಪ್ರಯಾಣಿಕರು ಪಾರಾಗಿದ್ದು ಹೇಗೆ? 

ಕಾಕ್‌ಪಿಟ್‌ನಲ್ಲಿ ಚಾಕು ದಾಳಿ ನಡೆದಾಗ ಸ್ಮಿತ್ ಮಚ್ಚಾರ್ ಮಾಡಿದ್ದೇನು?ಸಾವಿನಂಚಿನಲ್ಲಿದ್ದ 174 ಪ್ರಯಾಣಿಕರು ಪಾರಾಗಿದ್ದು ಹೇಗೆ? 

October 1, 2026
₹3 ಕೋಟಿ ಮೇಲ್ಪಟ್ಟ FDಗೆ ಹೊಸ ನಿಯಮ: ಅಕ್ಟೋಬರ್ 1ರಿಂದ ಬಲ್ಕ್ ಡೆಪಾಸಿಟ್ ಬಡ್ಡಿದರ ಪ್ರಕಟಣೆಯಲ್ಲಿ ಬದಲಾವಣೆ

₹3 ಕೋಟಿ ಮೇಲ್ಪಟ್ಟ FDಗೆ ಹೊಸ ನಿಯಮ: ಅಕ್ಟೋಬರ್ 1ರಿಂದ ಬಲ್ಕ್ ಡೆಪಾಸಿಟ್ ಬಡ್ಡಿದರ ಪ್ರಕಟಣೆಯಲ್ಲಿ ಬದಲಾವಣೆ

October 1, 2026
Transfer of 49 Civil Police Inspectors in the State Police Department

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 49 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ |  Transfer

October 1, 2026
Next Post
ದಂಡ ಕಟ್ಟದಿದ್ದರೆ ವಾಹನದ RC, PUC, DL ಸೇವೆಗಳಿಗೆ ತಡೆ? ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ದಂಡ ಕಟ್ಟದಿದ್ದರೆ ವಾಹನದ RC, PUC, DL ಸೇವೆಗಳಿಗೆ ತಡೆ? ಸುಪ್ರೀಂ ಕೋರ್ಟ್ ಮಹತ್ವದ ಆದೇಶ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada