• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

‘ಫಾದರ್’ ಟೀಸರ್‌ಗೆ ಕಾತರ – ಆರ್. ಚಂದ್ರು, ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್ ಕಾಂಬೋ ಕುತೂಹಲ

ಆ. 25ರ ಸಂಜೆ 4ಕ್ಕೆ ಆನಂದ್ ಆಡಿಯೋದಲ್ಲಿ ರಿಲೀಸ್‌ : ಕ್ಲಾಸ್‌ ಸಿನಿಮಾ ನಿರ್ದೇಶಕ ಆರ್.ಚಂದ್ರು ಆರ್.ಸಿ.ಸ್ಟುಡಿಯೋಸ್‌ ಮೂಲಕ ತರುತ್ತಿರುವ ಭಾವನಾತ್ಮಕ ಚಿತ್ರ

ಪ್ರತಿಧ್ವನಿ by ಪ್ರತಿಧ್ವನಿ
August 22, 2026
in ಕರ್ನಾಟಕ, ಸಿನಿಮಾ
0
‘ಫಾದರ್’ ಟೀಸರ್‌ಗೆ ಕಾತರ – ಆರ್. ಚಂದ್ರು, ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್ ಕಾಂಬೋ ಕುತೂಹಲ
Share on WhatsAppShare on FacebookShare on Telegram

ಬೆಂಗಳೂರು: ‘ತಾಜ್ ಮಹಲ್’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಆರ್. ಚಂದ್ರು ಹಾಗೂ ‘ಲವ್ ಮಾಕ್ಟೇಲ್’ ಸರಣಿಯ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಷನ್ ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರವನ್ನು ರಾಜಮೋಹನ್ ನಿರ್ದೇಶಿಸುತ್ತಿದ್ದು, ಪ್ರತಿಭಾವಂತ ನಟ ಪ್ರಕಾಶ್ ರಾಜ್ ಅವರ ಪ್ರಮುಖ ಪಾತ್ರ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.

ADVERTISEMENT

ಆರ್. ಚಂದ್ರು ಅವರ ನಿರ್ಮಾಣ, ರಾಜಮೋಹನ್ ಅವರ ನಿರ್ದೇಶನ, ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ಅವರ ಕಾಂಬಿನೇಷನ್‌ನಿಂದ ‘ಫಾದರ್’ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ. ಸಿನಿಮಾ ಈಗಾಗಲೇ ವೀಕ್ಷಿಸಿರುವವರ ವಲಯದಲ್ಲಿ ಇದು ಒಂದು ಭಾವನಾತ್ಮಕ ಹಾಗೂ ಕುಟುಂಬ ಸಮೇತವಾಗಿ ನೋಡಬಹುದಾದ ಉತ್ತಮ ಸಿನಿಮಾ ಎಂಬ ಪಾಸಿಟಿವ್ ಟಾಕ್ ಕೇಳಿಬರುತ್ತಿದೆ.

ಕುಟುಂಬ, ಭಾವನೆಗಳು ಮತ್ತು ಸಂಬಂಧಗಳ ಸುತ್ತ ಸಾಗುವ ಕಥಾಹಂದರ ಹೊಂದಿರುವ ‘ಫಾದರ್’, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಕನೆಕ್ಟ್ ಆಗುವಂತಹ ಸಿನಿಮಾ ಆಗುವ ನಿರೀಕ್ಷೆ ಮೂಡಿಸಿದೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್‌ಗಾಗಿ ಒಂದು ಅದ್ಭುತ ಎಮೋಷನಲ್ ಜರ್ನಿ ಆಗುವ ಎಲ್ಲಾ ಲಕ್ಷಣಗಳು ಚಿತ್ರದಲ್ಲಿವೆ.

ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲೂ ಚಿತ್ರವನ್ನು ವೀಕ್ಷಿಸಿ ಮೆಚ್ಚಿರುವ ಮ್ಯಾಕೀಸ್ ಸಂಸ್ಥೆ, ‘ಫಾದರ್’ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಅನ್ನು ಪಡೆದುಕೊಂಡಿದೆ. ಸಿನಿಮಾ ನೋಡಿ ಮೆಚ್ಚಿ ಡಿಸ್ಟ್ರಿಬ್ಯೂಷನ್‌ಗೆ ಮುಂದಾಗಿರುವುದು, ಚಿತ್ರದ ಕಂಟೆಂಟ್ ಮೇಲಿರುವ ನಂಬಿಕೆಗೆ ಮತ್ತೊಂದು ಸಾಕ್ಷಿಯಾಗಿದೆ.

ಇದೀಗ ಈ ನಿರೀಕ್ಷೆಗೆ ಮತ್ತಷ್ಟು ಕುತೂಹಲ ಸೇರಿಸಲು ಚಿತ್ರದ ಟೀಸರ್ ಆಗಸ್ಟ್ 25ರಂದು ಸಂಜೆ 4 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ಟೀಸರ್ ಹೇಗಿರಲಿದೆ? ರಾಜಮೋಹನ್ ಅವರ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಅವರನ್ನು ಯಾವ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ? ಪ್ರಕಾಶ್ ರಾಜ್ ಹಾಗೂ ಕೃಷ್ಣ ಅವರ ಕಾಂಬಿನೇಷನ್ ಹೇಗಿರಲಿದೆ? ಎಂಬ ಕುತೂಹಲ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

ಆಗಸ್ಟ್ 25ರಂದು ಸಂಜೆ 4 ಗಂಟೆಗೆ ಬಿಡುಗಡೆಯಾಗಲಿರುವ ‘ಫಾದರ್’ ಟೀಸರ್ ಪ್ರೇಕ್ಷಕರಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಮೂಡಿಸಲಿದೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.

‘ಫಾದರ್’ – ಒಂದು ಸಿನಿಮಾ ಮಾತ್ರವಲ್ಲ, ಸಂಬಂಧಗಳೊಂದಿಗೆ ಪ್ರಯಾಣಿಸುವ ಒಂದು ಭಾವನಾತ್ಮಕ ಅನುಭವವಾಗುವ ನಿರೀಕ್ಷೆ ಮೂಡಿಸಿದೆ.

Previous Post

ಬೀದಿ ಕಾಮಣ್ಣನ ರೀತಿ ಆಡಿದ ಕಾಶಪ್ಪನವರ್ ಮೋದಿ ಬಗ್ಗೆ ಮಾತಾಡ್ತಾರೆ: ಛಲವಾದಿ ನಾರಾಯಣಸ್ವಾಮಿ

Next Post

ಇದು ಕನ್ನಡದ ರಂಗಸ್ಥಳ! ಕುತೂಹಲ ಮೂಡಿಸಿದ ಟೀಸರ್

Related Posts

ಆರ್ಟ್ ಆಫ್ ಲಿವಿಂಗ್‌ಗೆ ₹5 ಕೋಟಿ ಮರುಪಾವತಿಗೆ ಸುಪ್ರೀಂ ಕೋರ್ಟ್ ಆದೇಶ
Top Story

ಆರ್ಟ್ ಆಫ್ ಲಿವಿಂಗ್‌ಗೆ ₹5 ಕೋಟಿ ಮರುಪಾವತಿಗೆ ಸುಪ್ರೀಂ ಕೋರ್ಟ್ ಆದೇಶ

by ಪ್ರತಿಧ್ವನಿ
August 22, 2026
0

ನವದೆಹಲಿ: 2016ರಲ್ಲಿ ದೆಹಲಿಯ ಯಮುನಾ ನದಿ ಪ್ರವಾಹ ಪ್ರದೇಶದಲ್ಲಿ ಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಸಂಬಂಧಿಸಿದಂತೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಪಾವತಿಸಿದ್ದ ₹5 ಕೋಟಿ ದಂಡವನ್ನು...

Read moreDetails
ಮನೆ ಮುಂದೆ ನಿಲ್ಲಿಸುವ ವಾಹನಗಳಿಗೆ ಪಾರ್ಕಿಂಗ್ ಶುಲ್ಕದ ಬರೆ: ಸರ್ಕಾರ ವಿರುದ್ಧ ಜೆಡಿಎಸ್‌ ಆಕ್ರೋಶ

ಮನೆ ಮುಂದೆ ನಿಲ್ಲಿಸುವ ವಾಹನಗಳಿಗೆ ಪಾರ್ಕಿಂಗ್ ಶುಲ್ಕದ ಬರೆ: ಸರ್ಕಾರ ವಿರುದ್ಧ ಜೆಡಿಎಸ್‌ ಆಕ್ರೋಶ

August 22, 2026
ಇನ್ಮುಂದೆ ಪಿಯು ವಿದ್ಯಾರ್ಥಿಗಳಿಗೂ ಉಚಿತ ನೋಟ್‌ಬುಕ್‌: ಸಚಿವ ಮಧು ಬಂಗಾರಪ್ಪ ಘೋಷಣೆ

ಇನ್ಮುಂದೆ ಪಿಯು ವಿದ್ಯಾರ್ಥಿಗಳಿಗೂ ಉಚಿತ ನೋಟ್‌ಬುಕ್‌: ಸಚಿವ ಮಧು ಬಂಗಾರಪ್ಪ ಘೋಷಣೆ

August 22, 2026
ಬೀದಿ ಕಾಮಣ್ಣನ ರೀತಿ ಆಡಿದ ಕಾಶಪ್ಪನವರ್ ಮೋದಿ ಬಗ್ಗೆ ಮಾತಾಡ್ತಾರೆ: ಛಲವಾದಿ ನಾರಾಯಣಸ್ವಾಮಿ

ಬೀದಿ ಕಾಮಣ್ಣನ ರೀತಿ ಆಡಿದ ಕಾಶಪ್ಪನವರ್ ಮೋದಿ ಬಗ್ಗೆ ಮಾತಾಡ್ತಾರೆ: ಛಲವಾದಿ ನಾರಾಯಣಸ್ವಾಮಿ

August 22, 2026
ನಮ್ಮ ಅಧಿಕಾರಿಗಳ ತಪ್ಪಿದ್ದರೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

ನಮ್ಮ ಅಧಿಕಾರಿಗಳ ತಪ್ಪಿದ್ದರೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

August 22, 2026
Next Post
ಇದು ಕನ್ನಡದ ರಂಗಸ್ಥಳ! ಕುತೂಹಲ ಮೂಡಿಸಿದ ಟೀಸರ್

ಇದು ಕನ್ನಡದ ರಂಗಸ್ಥಳ! ಕುತೂಹಲ ಮೂಡಿಸಿದ ಟೀಸರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada