• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಕ್ಷದ ಹಿತಕ್ಕಾಗಿ ಸಚಿವ ಸ್ಥಾನ ತ್ಯಾಗ..? ರಾಜೀನಾಮೆ ಕೊಡ್ತಾರಾ ಕೆ.ಹೆಚ್‌ ಮುನಿಯಪ್ಪ..?

ಪ್ರತಿಧ್ವನಿ by ಪ್ರತಿಧ್ವನಿ
August 6, 2026
in Top Story, ಕರ್ನಾಟಕ, ರಾಜಕೀಯ
0
ಪಕ್ಷದ ಹಿತಕ್ಕಾಗಿ ಸಚಿವ ಸ್ಥಾನ ತ್ಯಾಗ..? ರಾಜೀನಾಮೆ ಕೊಡ್ತಾರಾ ಕೆ.ಹೆಚ್‌ ಮುನಿಯಪ್ಪ..?
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 19 ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಒಟ್ಟು 33 ಸಚಿವರು ಡಿ.ಕೆ ಶಿವಕುಮಾರ್ ಸಂಪುಟ ಸೇರಿದಂತಾಗಿದೆ. ಆದರೆ, ಈ ಬಾರಿ ಸಂಪುಟದಲ್ಲಿ ಒಬ್ಬರೂ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Congress :ಇರುವುದೊಂದು ಸ್ಥಾನ, ಯಾರ ಪರ ನಾಯಕರ ಬ್ಯಾಟಿಂಗ್?

ಕರ್ನಾಕಟ ಕಾಂಗ್ರೆಸ್‌ ಸಂಪುಟದಲ್ಲಿ 30% ಬೇಡ ಮೂರು ಜನ ಮಹಿಳೆಯರಿಗೆ ಆದರೂ ಸಚಿವ ಸ್ಥಾನ ಕೊಡಬಹುದಿತ್ತು ಎನ್ನುವ ಅಭಿಪ್ರಾಯ ಜೋರಾಗಿದ್ದು, ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಪ್ರತಿನಿಧಿತ್ವಕ್ಕೆ ಅವಕಾಶ ಸಿಗದಿರುವುದು ಹಲವು ವಲಯಗಳಲ್ಲಿ ಅಸಮಾಧಾನ ಮೂಡಿಸಿದೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ನೋಡಿಕೊಳ್ಳಲು ಕೂಡ ಮಹಿಳಾ ಸಚಿವೆ ಇಲ್ಲದಿರುವುದು ಟೀಕೆಗೆ ಗುರಿಯಾಗಿದೆ.

ಒಂದೆಡೆ ಕೆಲ ಶಾಸಕರು ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಪಕ್ಷದ ವಿರುದ್ಧ ಗುಡುಗುತ್ತಿದ್ದರೆ, ಇನ್ನೊಂದೆಡೆ ಮಹಿಳೆಯರಿಗೆ ಸಚಿವ ಸ್ಥಾನ ಕೊಡುವುದು ಕೂಡ ಸದ್ಯ ಪಕ್ಷಕ್ಕೆ ಕಗ್ಗಂಟಾಗಿದೆ. ಹಿಂದಿನ ಸರ್ಕಾರದಲ್ಲಿ ಸಚಿವೆಯಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ಮೇಲ್ಮನೆಯ ನೂತನ ಸದಸ್ಯೆ ಗಾಯತ್ರಿ ಶಾಂತೇಗೌಡ ಹಾಗೂ ಎಂಎಲ್‌ಸಿ ಉಮಾಶ್ರೀ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದು, ತಮ್ಮ ತಮ್ಮ ಕ್ಷೇತ್ರದ ಮಹಿಳಾ ಕಾಂಗ್ರೆಸ್‌ ನಾಯಕಿಯರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬೆಂಬಲಿಗರ ಒತ್ತಡ ಜೋರಾಗಿದೆ.

Aishwarya DK Shivakumar : ನಾವೆಲ್ಲ ಯಾರಿಗಾಗಿ ಸುಸ್ಥಿರ ಕೌಶಲ್ಯ ಕಲಿಯಬೇಕಿದೆ.. #pratidhvani

ಮಹಿಳೆಯರಿಗೆ ಸಚಿವ ಸ್ಥಾನ ಹಂಚಿಕೆ ಸದ್ಯ ಕರ್ನಾಟಕ ಕಾಂಗ್ರೆಸ್‌ ಮುಂದಿನ ದೊಡ್ಡ ಸವಾಲಾಗಿದ್ದು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತ್ರವಲ್ಲದೇ ಪಕ್ಷದ ಹಿರಿಯ ನಾಯಕರಿಗೂ ಕೂಡ ಇದೊಂದು ಛಾಲೆಂಜಿಂಗ್‌ ಸನ್ನಿವೇಶವಾಗಿದೆ. ಸದ್ಯ ಒಬ್ಬ ಮಹಿಳಾ ಸಚಿವೆಗೆ ಸಂಪುಟದಲ್ಲಿ ಅವಕಾಶವಿದ್ದು, ಸಂಪೂರ್ಣ ಸಂಪುಟದಲ್ಲಿ ಒಬ್ಬರೇ ಮಹಿಳೆಯರಿಗೆ ಸ್ಥಾನ ನೀಡಿದರೆ ಅದರಿಂದ ಕೂಡ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸದ್ಯ ಚತುರ ನಡೆ ಅನುಸರಿಸಬೇಕಾಗಿದ್ದು, ಕೊನೆಯ ಪಕ್ಷ ಇಬ್ಬರು ಮಹಿಳಾ ನಾಯಕಿಯರಿಗೆ ಸಂಪುಟದಲ್ಲಿ ಸ್ಥಾನ ನೀಡಿದರೆ ಈಗ ಆಗಿರುವ ಡ್ಯಾಮೇಜ್‌ ಕಂಟ್ರೋಲ್‌ ಮಾಡಬಹುದುದಾಗಿದೆ.

ಸದ್ಯ ಸಂಪುಟದಲ್ಲಿ ಒಂದು ಸ್ಥಾನ ಮಾತ್ರ ಇರುವುದರಿಂದ ಈಗಿರುವ ಸಚಿವರ ಪೈಕಿ ಒಬ್ಬರು ರಾಜೀನಾಮೆ ನೀಡಿದರೆ ಮಾತ್ರ ಮತ್ತೊಬ್ಬ ಮಹಿಳಾ ನಾಯಕಿಯರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ. ಆದರೆ ಈಗಾಗಲೇ ಸಿಕ್ಕಿರುವ ಸಚಿವ ಸ್ಥಾನವನ್ನು ತೊರೆಯಲು ಯಾರು ಸಿದ್ಧರಿರುತ್ತಾರೆ ಎನ್ನುವುದೇ ಪ್ರಶ್ನೆ. ಆದರೆ ಈಗಿರುವ ಸಚಿವರ ಪೈಕಿ ಮೊದಲಿನಿಂದಲೂ ಪಕ್ಷ ನಿಷ್ಠೆ ಮೆರೆದು, ಪಕ್ಷಕ್ಕಾಗಿ ಸುಧೀರ್ಘ ಸೇವೆ ಸಲ್ಲಿಸಿರುವ ಕೆ.ಹೆಚ್ ಮುನಿಯಪ್ಪ ಪಕ್ಷದ ಹಿತಕ್ಕಾಗಿ ತಮ್ಮ ಸಚಿವ ಸ್ಥಾನ ತೊರೆಯಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

CM  DK Shivakumar :ಪಕ್ಷದಲ್ಲಿ ಯಾವ್ದೇ ಭಿನ್ನಮತ ಇಲ್ಲ.. #pratidhvani

ಹೌದು ಸಚಿವ ಸ್ಥಾನ ಹಂಚಿಕೆಯಿಂದ ಒತ್ತಡಕ್ಕೆ ಸಿಲುಕಿರುವ ಕಾಂಗ್ರೆಸ್‌ ಪಕ್ಷಕ್ಕೆ ಸದ್ಯ ಎದುರಾಗಿರುವ ಸವಾಲನ್ನು ನಿವಾರಿಸಲು, ಪಕ್ಷದ ಹಿತಕ್ಕಾಗಿ ಕೆ.ಹೆಚ್ ಮುನಿಯಪ್ಪ ರಾಜೀನಾಮೆಗೆ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೂ ಅಧೀಕೃತವಾದ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ಒಂದು ವೇಳೆ ಕೆ.ಹೆಚ್ ಮುನಿಯಪ್ಪ ರಾಜೀನಾಮೆ ನೀಡಿದರೆ ಅವರ ಸ್ಥಾನಕ್ಕೆ ಮಹಿಳಾ ಶಾಸಕಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಕೆ.ಹೆಚ್ ಮುನಿಯಪ್ಪ ಅವರ ಪಕ್ಷ ನಿಷ್ಠೆಗೆ ಪಕ್ಷವೂ ಕೂಡ ಈಗ ಬೆಲೆ ಕೊಡಬೇಕಾಗಿದ್ದು, ಕೆ.ಜಿ.ಎಫ್ ಕ್ಷೇತ್ರದ ಶಾಸಕಿ, ಕೆ.ಹೆಚ್ ಮುನಿಯಪ್ಪ ಅವರ ಪುತ್ರಿ ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸದ್ಯದ ಸನ್ನಿವೇಶವನ್ನು ನಿರ್ವಹಿಸಬೇಕಿದೆ. ಒಂದು ವೇಳೆ ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ನೀಡಿದರೆ ಕೋಲಾರ ಜಿಲ್ಲಾ ಉಸ್ತುವಾರಿಯನ್ನೂ ಕೂಡ ಅವರು ನಿರ್ವಹಿಸಬಹುದು. ಇದರಿಂದ ಕ್ಷೇತ್ರದಲ್ಲಿ ಪಕ್ಷ ಇನ್ನಷ್ಟು ಬಲಿಷ್ಠವಾಗಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Balakrishna ಮಾತಿಗೆ DK Shivakumar ರಿಯಾಕ್ಷನ್ ನೋಡಿ..! | Ramanagara karaga Utsava | pratidhvani
Tags: #CabinetExpansionBJPCM DK ShivakumarcongressKarnatakaKarnataka Politicskh muniyappaRoopakala shashidar
Previous Post

‘ರಾಮಾಯಣ’ ಇಂಗ್ಲಿಷ್ ಟ್ರೇಲರ್‌ಗೆ ಜಾಗತಿಕ ಮೆಚ್ಚುಗೆ; AI  ತಂತ್ರಜ್ಞಾನಕ್ಕೆ ಭಾರಿ ಪ್ರಶಂಸೆ

Next Post

ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಈ ಸೂಚನೆಗಳು!

Related Posts

ಜೆನ್-ಜಿ ಮತದಾರರೇ ರಾಜಕೀಯದ ಹೊಸ ಕಿಂಗ್‌ಮೇಕರ್? 2029ರ ಚುನಾವಣೆಗೆ ಹೊಸ ಲೆಕ್ಕಾಚಾರ
Top Story

ಜೆನ್-ಜಿ ಮತದಾರರೇ ರಾಜಕೀಯದ ಹೊಸ ಕಿಂಗ್‌ಮೇಕರ್? 2029ರ ಚುನಾವಣೆಗೆ ಹೊಸ ಲೆಕ್ಕಾಚಾರ

by ಪ್ರತಿಧ್ವನಿ
August 6, 2026
0

ಕೆಲವು ದಿನಗಳಿಂದ ದೇಶದಲ್ಲಿ ಜೆನ್-ಜಿ (Gen Z) ಯುವಕರ ಚಟುವಟಿಕೆಗಳು ಹೆಚ್ಚು ಗಮನ ಸೆಳೆಯುತ್ತಿವೆ. ಇತ್ತೀಚೆಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್-ಮಂತರ್‌ನಲ್ಲಿ ನಡೆದ ಪ್ರತಿಭಟನೆ...

Read moreDetails
ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಈ ಸೂಚನೆಗಳು!

ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಈ ಸೂಚನೆಗಳು!

August 6, 2026
ಸಂಕಷ್ಟದಲ್ಲಿ ನವಲಗುಂದ ರೈತರು: ಪರಿಹಾರದ ಭರವಸೆ ನೀಡಿದ ಸಚಿವ ಸಂತೋಷ ಲಾಡ್

ಸಂಕಷ್ಟದಲ್ಲಿ ನವಲಗುಂದ ರೈತರು: ಪರಿಹಾರದ ಭರವಸೆ ನೀಡಿದ ಸಚಿವ ಸಂತೋಷ ಲಾಡ್

August 6, 2026
ಗ್ರೀನ್‌ ಸ್ಟೀಲ್‌ ಉತ್ಪಾದನೆಯಲ್ಲಿ ಸ್ವಾವಲಂಭನೆಯತ್ತ ಭಾರತ: ಹೆಚ್‌.ಡಿ ಕುಮಾರಸ್ವಾಮಿ

ಗ್ರೀನ್‌ ಸ್ಟೀಲ್‌ ಉತ್ಪಾದನೆಯಲ್ಲಿ ಸ್ವಾವಲಂಭನೆಯತ್ತ ಭಾರತ: ಹೆಚ್‌.ಡಿ ಕುಮಾರಸ್ವಾಮಿ

August 6, 2026
Lalbagh Flower Show 2026: ಇಂದಿನಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಈ ಬಾರಿಯ ವಿಶೇಷತೆಯೇನು..?

Lalbagh Flower Show 2026: ಇಂದಿನಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಈ ಬಾರಿಯ ವಿಶೇಷತೆಯೇನು..?

August 6, 2026
Next Post
ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಈ ಸೂಚನೆಗಳು!

ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಈ ಸೂಚನೆಗಳು!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada