• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
July 12, 2026
in Top Story, ಕರ್ನಾಟಕ, ರಾಜಕೀಯ, ಸಿನಿಮಾ
0
ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್
Share on WhatsAppShare on FacebookShare on Telegram

ಬೆಂಗಳೂರು: ಗಾನ ಕೋಗಿಲೆ ಎಸ್ ಜಾನಕಿ ಅವರು ನಿನ್ನೆ (ಜುಲೈ 11) ಇಹಲೋಕ ತ್ಯಜಿಸಿದ್ದಾರೆ. ಅಗಲಿರುವ ಖ್ಯಾತ ಹಿರಿಯ ಗಾಯಕಿಯ ಬಗ್ಗೆ ಸಿಎಂ ಡಿ.ಕೆ ಶಿವಕುಮಾರ್ ಭಾವುಕ ಮಾತುಗಳನ್ನಾಡಿದ್ದು, ʼನಮ್ಮ ಭಾರತದ ಒಬ್ಬ ಅಪ್ರತಿಮ ಗಾಯಕಿ, ಗಾನಕೋಗಿಲೆ ಎಸ್ ಜಾನಕಿ ಅವರ ಹೆಸರು ಅಜರಾಮರವಾಗಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು. ಇದರ ಬಗ್ಗೆ ಚಿತ್ರರಂಗದ ಪ್ರಮುಖರ ಬಳಿ ಚರ್ಚಿಸಿ ತೀರ್ಮಾನಿಸಲಾಗುವುದುʼ ಎಂದರು.

ADVERTISEMENT
S Janaki Passes Away: ಮೈಸೂರಿನಲ್ಲಿ ಸಚಿವ Dr. Yathindra Siddaramaiah ಹೇಳಿಕೆ..

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಐವತ್ತು ವರ್ಷಗಳ ಕಾಲ ನಮ್ಮ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದವರು. ಎಲ್ಲಾ ಭಾಷೆಯಲ್ಲೂ ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದು ಇತಿಹಾಸ ಪುಟಕ್ಕೆ ಸೇರಿದ್ದಾರೆ. 33 ಬಾರಿ ವಿವಿಧ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಾವು ಕೂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದೇವೆ. ನಲವತ್ತೆಂಟು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದನಿಯಾದ ಏಕೈಕ ಗಾಯಕಿ” ಎಂದು ಹೇಳಿದರು.

ನನಗೆ ಅಚ್ಚರಿಯಾಯಿತು

“ಜಾನಕಿ ಅಮ್ಮನವರ ಕುಟುಂಬದವರ ಜೊತೆ ದೂರವಾಣಿ ಮೂಲಕ ನಾನು ಮಾತನಾಡಿದೆ. ನನಗೆ ಅಚ್ಚರಿ ತಂದ ವಿಚಾರ ಎಂದರೆ ಕಳೆದ ಹಲವಾರು ವರ್ಷದಿಂದ ಮೈಸೂರಿನಲ್ಲಿ ಅವರು ವಾಸವಾಗಿದ್ದರು. ಅವರ ಕುಟುಂಬದವರಿಗೆ ಕೇಳಿದೆ, ಚೆನ್ನೈ ಅಥವಾ ಹೈದರಾಬಾದ್ ಗೆ ಹೋಗಬೇಕು ಎಂದರೆ ಏರ್ ಲಿಫ್ಟ್ ಮಾಡಿಕೊಡುವೆ ಎಂದು ಹೇಳಿದೆ. ಮೈಸೂರಿನಲ್ಲೇ ಇರಬೇಕು ಎಂಬುದು ನಮ್ಮ ಅಜ್ಜಿ ಕೊನೆ ಆಸೆ ಎಂದು ತಿಳಿಸಿದರು” ಎಂದರು.

“ಜಾನಕಿ ಅವರು ಬಹಳ ಸರಳ ಜೀವಿ. ಲತಾ ಮಂಗೇಶ್ಕರ್ ಯಾವ ರೀತಿ ಅವರ ಸರಳತೆಯನ್ನು ಕಾಪಾಡಿಕೊಂಡು ಬಂದಿದ್ದರೋ ಆ ರೀತಿ ಬದುಕಿದವರು. ನಮ್ಮ ಭಾಷೆ, ನಮ್ಮ ನೆಲದ ಮೇಲೆ, ಮೈಸೂರು ಮೇಲೆ ವಿಶೇಷ ಪ್ರೀತಿ ಇಟ್ಟಿದ್ದರು. ನಮ್ಮೆಲ್ಲರಿಗೂ ಕೂಡ ಅತಿ ಹೆಚ್ಚು ಗೌರವವನ್ನು ತಂದಿದೆ. ಅವರು ಮೊದಲನೇ ಹಾಗೂ ಕೊನೆಯ ಹಾಡು ಹಾಡಿದ್ದು ಮೈಸೂರಿನಲ್ಲೇ. ಇದು ಕೂಡ ಬಹಳ ವಿಶೇಷವಾದಂತಹ ವಿಚಾರ” ಎಂದರು‌.

S Janaki Passes Away: ಎಸ್. ಜಾನಕಿ ಮಂಡ್ಯ, ಮೈಸೂರು ಜನರನ್ನು ಹೆಚ್ಚು ಪ್ರೀತಿಸುತ್ತಿದ್ರು..

“ಅವರ ಪ್ರೀತಿಗೆ ಗೌರವ ಕೊಟ್ಟು ನಾನು ನಮ್ಮ ಜಿಲ್ಲಾಡಳಿತಕ್ಕೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಮಾರ್ಗದರ್ಶನ ನೀಡಿದ್ದೇನೆ. ಅವರಿಗೆ ಯಾವ ರೀತಿ ಅಂತಿಮ ಗೌರವವನ್ನು ಸಲ್ಲಿಸಬೇಕೋ ಆ ಕೆಲಸವನ್ನು ಸರ್ಕಾರ ಮಾಡಲಿದೆ. ಇಂದು ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ಮೈಸೂರಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಯತೀಂದ್ರ ಅವರು ಕಲಬುರ್ಗಿ ಪ್ರವಾಸ ಹೋಗುವವರಿದ್ದರು. ಅವರಿಗೆ ನಾನು ಮನವಿ ಮಾಡಿ ಅಂತಿಮ ಗೌರವದ ವ್ಯವಸ್ಥೆ ವೇಳೆ ನೀವು ಇರಬೇಕು ಎಂದು ಮನವಿ ಮಾಡಿದೆ” ಎಂದು ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

Tags: CM DK ShivakumarDeathDK ShivakumarKarnatakaKarnataka PoliticsMysuruS Janakisinger
Previous Post

ಬೆಂಗಳೂರು ದಕ್ಷಿಣದಲ್ಲೇ ಎರಡನೇ ವಿಮಾನ ನಿಲ್ದಾಣ: ಸಿಎಂ ಡಿ.ಕೆ ಶಿವಕುಮಾರ್

Next Post

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

Related Posts

‘ಈ ನಾಯಕಿ ಚಿತ್ರಗಳಿಗೆ ಹಾಡುವುದಿಲ್ಲ’ ಎಂದು ಜಾನಕಿ ನಿರ್ಧರಿಸಲು ಕಾರಣವೇನು? ವರ್ಷಗಳ ಬಳಿಕ ಬಹಿರಂಗವಾದ ಅಪರೂಪದ ಘಟನೆ
Top Story

‘ಈ ನಾಯಕಿ ಚಿತ್ರಗಳಿಗೆ ಹಾಡುವುದಿಲ್ಲ’ ಎಂದು ಜಾನಕಿ ನಿರ್ಧರಿಸಲು ಕಾರಣವೇನು? ವರ್ಷಗಳ ಬಳಿಕ ಬಹಿರಂಗವಾದ ಅಪರೂಪದ ಘಟನೆ

by ಪ್ರತಿಧ್ವನಿ
July 13, 2026
0

ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಕಲಾವಿದರ ನಡುವೆಯೂ ವೃತ್ತಿಪರ ಭಿನ್ನಾಭಿಪ್ರಾಯಗಳು ಹಾಗೂ ಅಭಿರುಚಿಯ ವ್ಯತ್ಯಾಸಗಳು ಹೊಸದೇನಲ್ಲ. ಆದರೆ ದಕ್ಷಿಣ ಭಾರತದ ಇಬ್ಬರು ದಿಗ್ಗಜರಾದ ಮಹಾನಟಿ ಸಾವಿತ್ರಿ ಮತ್ತು ಗಾನಕೋಗಿಲೆ...

Read moreDetails
16 ವರ್ಷ ವಯಸ್ಸಿನ ಅಂತರದ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿದ ರಘು ದೀಕ್ಷಿತ್‌

16 ವರ್ಷ ವಯಸ್ಸಿನ ಅಂತರದ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿದ ರಘು ದೀಕ್ಷಿತ್‌

July 13, 2026
ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

July 12, 2026
30 ದಿನಗಳು..50ಕ್ಕೂ ಹೆಚ್ಚು ನಿರ್ಧಾರಗಳು: ಹೇಗಿತ್ತು ಡಿ.ಕೆ ಶಿವಕುಮಾರ್ ಸರ್ಕಾರದ ಮೊದಲ ತಿಂಗಳು..?

ಬೆಂಗಳೂರು ದಕ್ಷಿಣದಲ್ಲೇ ಎರಡನೇ ವಿಮಾನ ನಿಲ್ದಾಣ: ಸಿಎಂ ಡಿ.ಕೆ ಶಿವಕುಮಾರ್

July 12, 2026
ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

July 12, 2026
Next Post
ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!