• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರಕೃತಿ ವಿಕೋಪದ ಪರಿಣಾಮ ಎದುರಿಸಲು ಇಂಧನ ಇಲಾಖೆ ಸಂಪೂರ್ಣ ಸಜ್ಜು

ಪ್ರತಿಧ್ವನಿ by ಪ್ರತಿಧ್ವನಿ
July 9, 2026
in Top Story, ಕರ್ನಾಟಕ, ರಾಜಕೀಯ
0
ಪ್ರಕೃತಿ ವಿಕೋಪದ ಪರಿಣಾಮ ಎದುರಿಸಲು ಇಂಧನ ಇಲಾಖೆ ಸಂಪೂರ್ಣ ಸಜ್ಜು
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ದೇಶದೆಲ್ಲೆಡೇ ಎಲ್‌ ನಿನೋದಿಂದಾಗಿ ಮಳೆ ಪ್ರಮಾಣ ಕಡಿಮೆಯಾಗಿದೆ. ಎಲ್ ನಿನೋ ಪ್ರಭಾವದಿಂದ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಕಾರ್ಯತಂತ್ರ ರೂಪಿಸುವಂತೆ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

CM DKS visits Belagavi: ಸಿಎಂ ಆಗಿ ಮೊದಲ ಬಾರಿ ಸುವರ್ಣಸೌಧಕ್ಕೆ ಬಂದ DKS ಶಾಸಕರ ಜೊತೆ ಫೋಟೋಶೂಟ್

ರಾಜ್ಯದ ಪ್ರಸ್ತುತ ವಿದ್ಯುತ್ ಸ್ಥಿತಿಗತಿಗಳ ಕುರಿತು ಬೆವಿಕಂನ ನಿಗಮ ಕಚೇರಿಯ ಬೆಳಕು ಭವನದಲ್ಲಿ ಪರಿಶೀಲನಾ ಸಭೆ ನಡೆಸಿದ ಅವರು, ‘ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆಯಲ್ಲಿ ಪರಿಣಾಮ ಬೀರಬಹುದು. ಹೀಗಾಗಿ ಸಮರ್ಪಕ ವಿದ್ಯುತ್ ಪೂರೈಕೆಗೆ ಪರ್ಯಾಯ ಕ್ರಮ ಕೈಗೊಂಡು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಈ ಬಾರಿ ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಹಾಗಾಗಿ, ರಾಜ್ಯದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಹೆಚ್ಚು ವಿದ್ಯುತ್ ಉತ್ಪಾದಿಸಲು ಕ್ರಮ ವಹಿಸಬೇಕು. ಅದೇ ರೀತಿ ರಾಜ್ಯದಲ್ಲಿ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆ ಹೆಚ್ಚಿಸಿ ಅದನ್ನು ಬಳಸಿಕೊಳ್ಳಬೇಕು. ಜತೆಗೆ ಕೋ-ಜನರೇಷನ್ ವಿದ್ಯುತ್ ಘಟಕಗಳಿಂದಲೂ ವಿದ್ಯುತ್ ಪಡೆಯಲು ಕ್ರಮ ವಹಿಸಬೇಕು’ ಎಂದು ಸೂಚನೆ ನೀಡಿದರು.

Priyank kharge on RSS: ಕಾನೂನು ಕ್ರಮಕೈಗೊಳ್ತೀರಾ? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ವಿದ್ಯುತ್ ಕಂಬ, ತಂತಿಗಳು ಹಾಗೂ ಟ್ರಾನ್ಸ್ ಫಾರ್ಮರ್ ಗಳು ಹಾನಿಗೊಳಗಾಗುತ್ತವೆ. ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವಾಗುತ್ತಿದೆ ಇದನ್ನು ತ್ವರಿತವಾಗಿ ಬಗೆಹರಿಸಿ ಪೂರೈಕೆ ಸುಗಮಗೊಳಿಸಲು ಸಿದ್ಧತೆಗಳನ್ನು ತ್ವರಿತಗೊಳಿಸುವಂತೆ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಗೌರವ್ ಗುಪ್ತ ಸೂಚಿಸಿದರು.

Channaraj Hattiholi: ಮಹಿಳಾ ನಾಯಕತ್ವ ಬೆಳೆಸಲು ಲಕ್ಷ್ಮೀಗೆ ಮಂತ್ರಿ ಸ್ಥಾನ ಕೊಡಬೇಕು ಎಂದ ಸಹೋದರ ಚನ್ನರಾಜ್!

ಸಭೆಯಲ್ಲಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿ. ರಾಮ ಪ್ರಸಾತ್ ಮನೋಹರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎನ್. ಶಿವಶಂಕರ, ಪಿಸಿಕೆಎಲ್ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಕೆ. ವೆಂಕಟೇಶ್, ಕೆಆರ್‌ಇಡಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಪಿ. ರುದ್ರಪ್ಪಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.

ಕ್ರಿಯಾ ಯೋಜನೆ ಪ್ರಮುಖ ಕ್ರಮಗಳು

*ಕೆಪಿಸಿಎಲ್ ವತಿಯಿಂದ ಉಷ್ಣ ವಿದ್ಯುತ್ ಸ್ಥಾವರಗಳ ಗರಿಷ್ಠ ಕಾರ್ಯನಿರ್ವಹಣೆ ಖಚಿತಪಡಿಸುವುದು, ಅಗತ್ಯ ಕಲ್ಲಿದ್ದಲು ದಾಸ್ತಾನು ಲಭ್ಯತೆ ನೋಡಿಕೊಳ್ಳುವುದು ಹಾಗೂ ಉಷ್ಣ ಮತ್ತು ಜಲ ವಿದ್ಯುತ್ ಸ್ಥಾವರಗಳ ನಿರ್ವಹಣಾ ಕಾರ್ಯಗಳನ್ನು ಆದ್ಯತೆ ಮತ್ತು ವ್ಯವಸ್ಥೆಯ ಅಗತ್ಯತೆಗೆ ಅನುಗುಣವಾಗಿ ಯೋಜಿಸುವುದು.
* ಕೆಪಿಟಿಸಿಎಲ್ ವತಿಯಿಂದ 500 ಮೆ.ವ್ಯಾ. ಬ್ಯಾಟರಿ ಎನರ್ಜಿ ಸ್ಟೋರೇಜ್‌ ಸಿಸ್ಟೆಮ್‌ ಹಾಗೂ ಕ್ರೆಡಲ್‌ ಮೂಲಕ ಜೆಎಸ್‌ಡಬ್ಲ್ಯೂನ 300 ಮೆ.ವ್ಯಾ. ಸೌರ ವಿದ್ಯುತ್ ಯೋಜನೆಗಳ ತ್ವರಿತ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳುವುದು.
* ಎಸ್ಕಾಂಗಳು ಮತ್ತು ಕ್ರೆಡಲ್‌ ವತಿಯಿಂದ ಕುಸುಮ್-ಬಿ ಮತ್ತು ಕುಸುಮ್-ಸಿ ಯೋಜನೆಗಳ ಕಾಮಗಾರಿಗಳನ್ನು ತ್ವರಿತಗೊಳಿಸಿ ಶೀಘ್ರ ಅನುಷ್ಠಾನಗೊಳಿಸುವುದು.
* ಸಹ-ಉತ್ಪಾದನಾ ಘಟಕಗಳಿಂದ 500–700 ಮೆ.ವ್ಯಾ. ವಿದ್ಯುತ್ ಖರೀದಿ ಪ್ರಕ್ರಿಯೆಯನ್ನು ಪಿಸಿಕೆಎಲ್ ಮೂಲಕ ಪೂರ್ಣಗೊಳಿಸುವುದು.
* 2026ರ ಅಕ್ಟೋಬರ್‌ಗೂ ಮುನ್ನ ಇತರೆ ರಾಜ್ಯಗಳೊಂದಿಗೆ ವಿದ್ಯುತ್ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಆರಂಭಿಸುವುದು. ಇದರಲ್ಲಿ ರೌಂಡ್‌ ದ ಕ್ಲಾಕ್‌ (ಆರ್‌ಟಿಸಿ) ಹಾಗೂ ಪೀಕ್ ಅವರ್ ವಿದ್ಯುತ್ ಖರೀದಿಗೆ ಕ್ರಮವಹಿಸುವುದು.

ಈ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಪ್ರತಿಕ್ರಿಯಿಸಿದ್ದು, ʼಪ್ರಕೃತಿ ವಿಕೋಪದ ನಡುವೆಯೂ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈಗಾಗಲೇ ನಿರ್ದೇಶನ ನೀಡಿದ್ದಾರೆ. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಮಂದಿನ ವರ್ಷದ ಮೇ ಅಂತ್ಯದವರೆಗೆ ಸಮರ್ಪಕ ವಿದ್ಯುತ್ ಪೂರೈಸಲು ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡು ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಬೇಕುʼ ಎಂದರು.

Street vendors :  ವೋಟ್ ಹಾಕೋಕೆ ನಾವ್  ಬೇಕು ಇವಾಗ ತೆರವು ಮಾಡ್ತೀರಾ.!  #pratidhvani
Tags: BJPcongressdepartment of energy karnatakaJDSK. J. GeorgeKarnatakaKarnataka PoliticsPolitics
Previous Post

ಬೆಳಗಾವಿ ಜಿಲ್ಲೆ ವಿಭಜನೆ ಅಪ್ರಸ್ತುತ ವಿಚಾರ: ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Next Post

FIFA World Cup 2026: ಒಂದೇ ಟೂರ್ನಿಯಲ್ಲಿ 59 ಫೌಲ್​​! ರೆಫರಿಗಳಿಂದ ಅರ್ಜೆಂಟೀನಾ ಬಚಾವ್‌..?

Related Posts

TMC TO BJP join Mps
Top Story

BREAKING NEWS : ದೀದಿಗೆ ಬಿಗ್‌ ಶಾಕ್‌ : ಟಿಎಂಸಿಗೆ ಗುಡ್‌ ಬೈ ಹೇಳಿದ್ದ ಸಂಸದರು ಬಿಜೆಪಿ ಸೇರ್ಪಡೆ

by ಪ್ರತಿಧ್ವನಿ
July 9, 2026
0

ನವದೆಹಲಿ : ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿಗೆ ಬಿಗ್‌ ಶಾಕ್‌ ಎದುರಾಗಿದೆ. ಟಿಎಂಸಿ ತೊರೆದಿದ್ದ ಮಾಜಿ ಸಂಸದರು ಇಂದು ಅಧಿಕೃತವಾಗಿ ಕಮಲ ತೆಕ್ಕೆಗೆ ಸೇರಿದ್ದಾರೆ. ಈ...

Read moreDetails
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿದೆ “ರಾ.. ರಾ.. RX”

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿದೆ “ರಾ.. ರಾ.. RX”

July 9, 2026
ಶಿಕ್ಷಕಿ ಬೈದಿದ್ದಕ್ಕೆ 8ನೇತರಗತಿ ವಿದ್ಯಾರ್ಥಿನಿ ಆತ್ಮ**!

ಶಿಕ್ಷಕಿ ಬೈದಿದ್ದಕ್ಕೆ 8ನೇತರಗತಿ ವಿದ್ಯಾರ್ಥಿನಿ ಆತ್ಮ**!

July 9, 2026
ಮೇಲುಕೋಟೆಯಲ್ಲಿ ‘ಸೆಲೆಬ್ರಿಟಿ’ ಸಾಂಗ್ ಶೂಟ್..ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಅಶ್ವಿನ್-ಪ್ರಿಯಾಂಕಾ ಕುಣಿತ

ಮೇಲುಕೋಟೆಯಲ್ಲಿ ‘ಸೆಲೆಬ್ರಿಟಿ’ ಸಾಂಗ್ ಶೂಟ್..ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಅಶ್ವಿನ್-ಪ್ರಿಯಾಂಕಾ ಕುಣಿತ

July 9, 2026
666 ಆಪರೇಷನ್ ಡ್ರೀಮ್ ಥಿಯೇಟರ್ ಟೀಸರ್ ಬಿಡುಗಡೆ

666 ಆಪರೇಷನ್ ಡ್ರೀಮ್ ಥಿಯೇಟರ್ ಟೀಸರ್ ಬಿಡುಗಡೆ

July 9, 2026
Next Post
FIFA World Cup 2026: ಒಂದೇ ಟೂರ್ನಿಯಲ್ಲಿ  59 ಫೌಲ್​​! ರೆಫರಿಗಳಿಂದ ಅರ್ಜೆಂಟೀನಾ ಬಚಾವ್‌..?

FIFA World Cup 2026: ಒಂದೇ ಟೂರ್ನಿಯಲ್ಲಿ 59 ಫೌಲ್​​! ರೆಫರಿಗಳಿಂದ ಅರ್ಜೆಂಟೀನಾ ಬಚಾವ್‌..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada