• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

666 ಆಪರೇಷನ್ ಡ್ರೀಮ್ ಥಿಯೇಟರ್ ಟೀಸರ್ ಬಿಡುಗಡೆ

ಪ್ರತಿಧ್ವನಿ by ಪ್ರತಿಧ್ವನಿ
July 9, 2026
in Top Story, ಸಿನಿಮಾ
0
666 ಆಪರೇಷನ್ ಡ್ರೀಮ್ ಥಿಯೇಟರ್ ಟೀಸರ್ ಬಿಡುಗಡೆ
Share on WhatsAppShare on FacebookShare on Telegram

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾ ‘666 ಆಪರೇಷನ್ ಡ್ರೀಮ್ ಥಿಯೇಟರ್’. ಪೋಸ್ಟರ್ , ಡೈರೆಕ್ಟರ್ ಹಾಗೂ ತಾರಾಬಳಗದ ಮೂಲಕವೇ ಈ ಚಿತ್ರ ಕುತೂಹಲ ಹೆಚ್ಚಿಸಿದೆ. ಶಿವರಾಜ್‌ಕುಮಾರ್ ಹಾಗೂ ಧನಂಜಯ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನ ಒರೈಯನ್ ಮಾಲ್ ನಲ್ಲಿ ನಡೆಯಿತು. ಈ‌ ಸಂದರ್ಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.

ADVERTISEMENT
Toxic Tabaahi 🔥 | Toxic | Rocking Star Yash & Kiara Advani | Vishal Mishra | Yogaraj Bhat

ಈ ವೇಳೆ ಶಿವರಾಜ್ ಕುಮಾರ್ ಮಾತನಾಡಿ, ಹೇಮಂತ್ ವರ್ಡರ್ ಫುಲ್ ಡೈರೆಕ್ಟರ್. ವೈಶಾಖ್ ನನ್ನ ಅಭಿಮಾನಿ. ಈಗ ಅವರು ನನ್ನ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಧನಂಜಯ್ ಅವರ ಜೊತೆ ನಾನು ಮೂರನೇ ಸಿನಿಮಾ. ಪ್ರಿಯಾಂಕಾ ಅವರ ಜೊತೆ ಎರಡನೇ ಚಿತ್ರ. ಒಂದೊಳ್ಳೆ ತಂಡ. ಚರಣ್ ರಾಜ್ ಟಾಪ್ ಮ್ಯೂಸಿಕ್ ಡೈರೆಕ್ಟರ್. ನನಗೆ ಸಿನಿಮಾ ಎಂದರೆ ಪ್ರೀತಿ. ಯಾವುದನ್ನು ಬಿಡಲ್ಲ.

ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಒಂದೊಳ್ಳೆ ಅನುಭವ ಕೊಟ್ಟಿದೆ. ಆ ವೇಷ ಹಾಕಿದಾಗ ಆ ಅಟಿಡ್ಯೂಡ್, ಸ್ವಾಗ್ ಎಲ್ಲಾ ಬರುತ್ತೆ. ವೈಶಾಖ್ ಸಕ್ಸಸ್ ಫುಲ್ ಪ್ರೊಡ್ಯೂಸರ್ ಆಗ್ತಾರೆ ಎಂದ‌ ಅವರು ತಮ್ಮ ಪಾತ್ರದ ಬಗ್ಗೆಯೂ ಮಾಹಿತಿ‌ ನೀಡಿದರು. ಬಾಂಡ್ ಸಿನಿಮಾಗಳಲ್ಲಿ ಈಜುಕೊಳ ಇರುತ್ತದೆ. ಅದರಲ್ಲಿ ಐದಾರು ಹುಡುಗಿಯರು ಇರ್ತಾರೆ. ನಡುವೆ ಬಾಂಡ್ ಇರ್ತಾರೆ. ಆದರೆ, 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲಿ ನಾನು ಆ ರೀತಿಯ ಬಾಂಡ್ ಅಲ್ಲ. ನಾನು ಈ ಚಿತ್ರದಲ್ಲಿ ಡಿಸೆಂಟ್ ಬಾಂಡ್ ಆಗಿದ್ದೇನೆ. ಎಲ್ಲರನ್ನೂ ಬಾಂಡಿಂಗ್ ಮಾಡುವ ಬಾಂಡ್ ಆಗಿದ್ದೇನೆ ಎಂದರು.

Karunakar Ex Army Podcast : ಬಿಜೆಪಿಯವ್ರು ಚರಿತ್ರೆಯನ್ನು ಉಳಿಸ್ತಿಲ್ಲಾ, ಅಳಿಸ್ತಿದ್ದಾರೆ.. #pratidhvani #ram

ಡಾಲಿ ಧನಂಜಯ್ ಮಾತನಾಡಿ, ವೈಶಾಖ್ ಸ್ಯಾಂಡಲ್ ವುಡ್ ಗೆ ಸ್ವಾಗತ. ಅವರು ಸಿನಿಮಾದ ಬಗ್ಗೆ ಕಲಿತು, ಜೀವಿಸಿ, ಯಾರ್ ಜೊತೆ ಕೆಲಸ ಮಾಡಬೇಕು ಎಲ್ಲವನ್ನೂ ತಿಳಿದುಕೊಂಡು ಬಂದಿದ್ದಾರೆ. ಚಿತ್ರರಂಗಕ್ಕೆ ಒಳ್ಳೆ ನಿರ್ಮಾಪಕ ಆಗುವ ಶಕ್ತಿ ಅವರಲ್ಲಿದೆ. ಡಿಸ್ಟಿಬ್ಯೂಟರ್ ಆಫೀಸ್ ನಲ್ಲಿ ಕುಳಿತು ಹೇಮಂತ್ ನನ್ನ ಸಿನಿಮಾ ಮಾಡಲು ಕರೆಯುತ್ತಿಲ್ಲವಲ್ಲ ಎಂದ ಒಂದು ವಾರಕ್ಕೆ ಮೀಟ್ ಮಾಡಬೇಕು ಎಂದರು. ಒಳ್ಳೆ ಟೀಂ ಸೇರಿಕೊಂಡು ಈ ಚಿತ್ರ ಮಾಡಿದ್ದೇವೆ. ಮಗು ರಚ್ಚೆ ಹಿಡಿದು ಕೆಲಸ ಮಾಡಿಸಿಕೊಳ್ಳುವ ರೀತಿ ಹೇಮಂತ್ ಕೆಲಸ ಮಾಡಿಸಿಕೊಳ್ಳುತ್ತಾರೆ. ಅವರಿಂದ ತುಂಬಾ ಕಲಿತಿದ್ದೇನೆ. ಶಿವಣ್ಣ ನನಗೆ ದೊಡ್ಡ ಶಕ್ತಿ. ಇದು ಟೀಸರ್ ಅಷ್ಟೇ. ಚಿತ್ರದಲ್ಲಿ ಬಹಳ‌ ಸರ್ ಪೈಸ್ ಇದೆ. ಇಡೀ ತಂಡ ಅದ್ಭುತವಾಗಿ ದುಡಿಸಿಕೊಂಡಿದೆ ಎಂದು ಹೇಳಿದರು.

ನಿರ್ಮಾಪಕ ವೈಶಾಖ್ ಮಾತನಾಡಿ, ನಾನು 12 ವರ್ಷದವನಿದ್ದಾಗಲೂ ನನ್ನದು ಒಂದು ಪ್ರೊಡಕ್ಷನ್ ಹೌಸ್ ಶುರು ಮಾಡಬೇಕು ಎಂದು ಕನಸು ಕಾಣುತ್ತಾ ಬಂದಿದ್ದೆ. ಆ ಪ್ರೊಡಕ್ಷನ್ ನಲ್ಲಿ ನನಗೆ ಇಷ್ಟವಾಗುವ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಆ ಕನಸು ಈಗ ನನಸಾಗಿದೆ. ಮೊದಲ ಚಿತ್ರದಲ್ಲಿಯೇ ಒಂದೊಳ್ಳೆ ತಂಡ ಸಿಕ್ಕಿರುವುದು ನನ್ನ ಅದೃಷ್ಟ. ನನ್ನ ಅಚ್ಚುಮೆಚ್ಚಿನ ನಟ ಶಿವಣ್ಣ ಜೊತೆ ಚಿತ್ರ ಮಾಡಿರುವುದು ಖುಷಿ. ನಾನು ಚಿಕ್ಕ ವಯಸ್ಸಿನಿಂದ ಅವರ ದೊಡ್ಡ ಅಭಿಮಾನಿ. ಅವರ ಪ್ರತಿ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದೆ.

Karavali Film Clash : ಕರಾವಳಿ ಟ್ರೇಲರ್ ಲಾಂಚ್ ವೇಳೆ ಗದ್ದಲ ಆಗಿದ್ದು ಈ ಕಾರಣಕ್ಕೆ... #pratidhvani

ವೇದ ಸಿನಿಮಾ ಶೂಟಿಂಗ್ ಸಮಯದಲ್ಲಿ ನನ್ನ ಫಸ್ಟ್ ಚಿತ್ರ ನಿಮ್ಮ ಜೊತೆ ಮಾಡಬೇಕು ಎಂದು ಕೇಳಿದೆ. ಬಜೆಟ್, ಕಥೆ, ಡೈರೆಕ್ಟರ್ ಏನು ಕೇಳಲಿಲ್ಲ. ಒಳ್ಳೆ ಕಥೆ ಮಾಡಿಕೊಂಡು ಬಾ ಬೇಗ ಶುರು ಮಾಡೋಣ ಎಂದಿದ್ದರು. ಇವತ್ತಿನ ಕಾಲದಲ್ಲಿ ಏನೂ ಯೋಚನೆ ಮಾಡದೆ ಕಥೆ ಕೇಳಿ ಸಿನಿಮಾ ಮಾಡುವ ಸೂಪರ್ ಸ್ಟಾರ್ ಶಿವಣ್ಣ. ಧನಂಜಯ್ ಅವರು ಈ ಚಿತ್ರದ ಮೂಲಕ ಪರಿಚಯವದವರು. ಈ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ಅವರ ವೃತ್ತಿ ಜೀವನದ ಅತ್ಯುತ್ತಮ ನಟನೆ ಈ ಚಿತ್ರದಲ್ಲಿ ಇದೆ. ಅವರ ಟ್ಯಾಲೆಂಟ್‌, ಹಾರ್ಡ್ ವರ್ಕ್ ಗೆ ಈ ಚಿತ್ರ ಅವರ ವೃತ್ತಿ ಜೀವನದ ಮೈಲಿಗಲ್ಲು ಆಗಲಿ. 90 ದಿನ ಶೂಟಿಂಗ್ ನಡೆಸಿದರೆ. 100 ದಿನ ಸೆಟ್ ವರ್ಕ್ ಮಾಡಿದ್ದೇವೆ. ವಿಶ್ವಾಸ್ ಅದ್ಬುತ ಸೆಟ್ ನಿರ್ಮಿಸಿದ್ದಾರೆ. ಚರಣ್ ಮ್ಯೂಸಿಕ್, ಅದ್ವೈತ್ ಕ್ಯಾಮೆರಾ ವರ್ಕ್ ಸೂಪರ್ ಆಗಿದೆ.‌ಚಿತ್ರದ‌ ಮತ್ತೊಬ್ಬ ಹೀರೋ ಹೇಮಂತ್. ಕಳೆದ ಐದು ವರ್ಷಗಳಿಂದ ಬೇರೆ ಇಂಡಸ್ಟ್ರಿಯಿಂದ ಕಾಲ್ ಬಂದರೂ ಅವರು ನನ್ನ ಜೊತೆ ನಿಂತರು ಎಂದರು.

Actress Dhanu Harsha Exclusive Podcast : ಇಷ್ಟು ಒಳ್ಳೆಯ Project ಸಿಗುತ್ತೆ ಅಂತ ಅನ್ಕೊಂಡಿರಲಿಲ್ಲ..#cinema

ನಿರ್ದೇಶಕ ಹೇಮಂತ್ ಎಂ ರಾವ್ ಮಾತನಾಡಿ, ಪ್ರೊಡ್ಯೂಸರ್ ಗೆ ಎಷ್ಟು ಹುಡುಕಿದ್ದೇನೆ? ಎಷ್ಟು ಒದ್ದಾಡಿದ್ದೇನೆ ಎಂದರೆ ನನಗೆ ಗೊತ್ತು. ಹತ್ತು ವರ್ಷ ಕರೆಕ್ಟ್ ಪ್ರೊಡ್ಯೂಸರ್ ಸಿಕ್ಕಿರಲಿಲ್ಲ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಮಾಡುವಾಗ ಅಪ್ಪನ ಸಹಾಯ ತೆಗೆದುಕೊಂಡೆ. ನನ್ನ ಜೊತೆ ಇನ್ನೊಬ್ಬರು ಸಿಕ್ಕಿದರು. ಈ ಚಿತ್ರದಿಂದ ನನ್ನ ಕೆರಿಯರ್ ಕಟ್ಟುಕೊಂಡೆ. ಅಷ್ಟು ವರ್ಷ ಓಡಾಡಿದ್ದಕ್ಕೆ ಈ ರೀತಿ ಒಳ್ಳೆ ನಿರ್ಮಾಪಕರು ಸಿಕ್ಕಿದ್ದಾರೆ.

ಸಿನಿಮಾ ಆರ್ಟ್, ಫೋಟೋಗ್ರಫಿ, ಮ್ಯೂಸಿಕ್ ಎಲ್ಲದರ ಮಿಶ್ರಣ. ಸಿನಿಮಾವನ್ನು ಒಬ್ಬರ ಕೈಯಲ್ಲಿ ಮಾಡಲು ಆಗುವುದಿಲ್ಲ. ಇಡೀ ಊರು ಬೇಕು. ನಮಗೆ ಆನೆಬಲ ರೀತಿ ಶಕ್ತಿ ಇರುವುದು ಶಿವಣ್ಣ. ಅವರ ನೋಡಿರುವ ಸಕ್ಸಸ್, ಮಾಡದ ಚಿತ್ರಗಳು ಇಲ್ಲ. ನಮ್ಮ ಸೆಟ್ ಗೆ ಬಂದಾಗ ಅವರು ನಡೆದುಕೊಳ್ಳುವ ರೀತಿ ನಮ್ಮ ಕೆಲಸದ ಮೇಲಿನ ಆಸಕ್ತಿ ಹೆಚ್ಚು ಮಾಡುತ್ತದೆ. ಧನು, ಅದಿತಿ, ಪ್ರಿಯಾಂಕಾ ಅದ್ಭುತ ಕಲಾವಿದರು. ತುಂಬಾ ಜನ ಹೊಸಬರು ಚಿತ್ರದಲ್ಲಿ ಇದ್ದಾರೆ. ನಮ್ಮ‌ಚಿತ್ರದ ಸಣ್ಣ ಭಾಗವನ್ನು ಬಿಟ್ಟಿದ್ದೇವೆ ಅದನ್ನು ವೀಕ್ಷಕರು ಮುಂದೆ neevu ತೆಗೆದುಕೊಂಡು ಹೋಗಬೇಕು ಎಂದರು.

Vijayalakshmi Darshan : ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೇಳಿದ್ದು ಯಾರಿಗೆ? #pratidhvani

‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಏಜೆಂಟ್ ಪ್ರಕಾಶ್ ಎಂಬ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಏಜೆಂಟ್ ಶಂಕರ್ ಪಾತ್ರದಲ್ಲಿ ಧನಂಜಯ್ ಬಣ್ಣ ಹಚ್ಚಿದ್ದಾರೆ. ಪ್ರಿಯಾಂಕ ಮೋಹನ್, ಅದಿತಿ ಬಾಲನ್, ಸುಖ್ವಿಂದರ್ ಸಿಂಗ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ‘ಸಪ್ತಸಾಗರದಾಚೆ ಎಲ್ಲೊ’ ಸರಣಿ ಸಿನಿಮಾಗಳ ಬಳಿಕ ಹೇಮಂತ್ ಎಂ ರಾವ್ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಕುತೂಹಲ ಮೂಡಿದೆ. ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Dr H N Ravindra on CM Dk Shivakumar : Blue Print ಇಟ್ಟುಕೊಂಡು ನಮ್ಮಣ್ಣಾ ಸಿಎಂ ಆಗಿ ರಾಜ್ಯ ಆಳ್ತಿದ್ದಾರೆ..!

ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕಿದೆ. ಇಂಚರಾ ಸುರೇಶ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.

Previous Post

ಬಿಟ್‌ಕಾಯಿನ್ ಹಗರಣ ಕೇಸ್‌ಗೆ ಟ್ವಿಸ್ಟ್: ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಬಿಗ್ ರಿಲೀಫ್

Next Post

ಮೇಲುಕೋಟೆಯಲ್ಲಿ ‘ಸೆಲೆಬ್ರಿಟಿ’ ಸಾಂಗ್ ಶೂಟ್..ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಅಶ್ವಿನ್-ಪ್ರಿಯಾಂಕಾ ಕುಣಿತ

Related Posts

TMC TO BJP join Mps
Top Story

BREAKING NEWS : ದೀದಿಗೆ ಬಿಗ್‌ ಶಾಕ್‌ : ಟಿಎಂಸಿಗೆ ಗುಡ್‌ ಬೈ ಹೇಳಿದ್ದ ಸಂಸದರು ಬಿಜೆಪಿ ಸೇರ್ಪಡೆ

by ಪ್ರತಿಧ್ವನಿ
July 9, 2026
0

ನವದೆಹಲಿ : ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿಗೆ ಬಿಗ್‌ ಶಾಕ್‌ ಎದುರಾಗಿದೆ. ಟಿಎಂಸಿ ತೊರೆದಿದ್ದ ಮಾಜಿ ಸಂಸದರು ಇಂದು ಅಧಿಕೃತವಾಗಿ ಕಮಲ ತೆಕ್ಕೆಗೆ ಸೇರಿದ್ದಾರೆ. ಈ...

Read moreDetails
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿದೆ “ರಾ.. ರಾ.. RX”

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿದೆ “ರಾ.. ರಾ.. RX”

July 9, 2026
ಮೇಲುಕೋಟೆಯಲ್ಲಿ ‘ಸೆಲೆಬ್ರಿಟಿ’ ಸಾಂಗ್ ಶೂಟ್..ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಅಶ್ವಿನ್-ಪ್ರಿಯಾಂಕಾ ಕುಣಿತ

ಮೇಲುಕೋಟೆಯಲ್ಲಿ ‘ಸೆಲೆಬ್ರಿಟಿ’ ಸಾಂಗ್ ಶೂಟ್..ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಅಶ್ವಿನ್-ಪ್ರಿಯಾಂಕಾ ಕುಣಿತ

July 9, 2026
ಬಿಟ್‌ಕಾಯಿನ್ ಹಗರಣ ಕೇಸ್‌ಗೆ ಟ್ವಿಸ್ಟ್: ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಬಿಗ್ ರಿಲೀಫ್

ಬಿಟ್‌ಕಾಯಿನ್ ಹಗರಣ ಕೇಸ್‌ಗೆ ಟ್ವಿಸ್ಟ್: ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಬಿಗ್ ರಿಲೀಫ್

July 9, 2026
FIFA World Cup 2026: ಒಂದೇ ಟೂರ್ನಿಯಲ್ಲಿ  59 ಫೌಲ್​​! ರೆಫರಿಗಳಿಂದ ಅರ್ಜೆಂಟೀನಾ ಬಚಾವ್‌..?

FIFA World Cup 2026: ಒಂದೇ ಟೂರ್ನಿಯಲ್ಲಿ 59 ಫೌಲ್​​! ರೆಫರಿಗಳಿಂದ ಅರ್ಜೆಂಟೀನಾ ಬಚಾವ್‌..?

July 9, 2026
Next Post
ಮೇಲುಕೋಟೆಯಲ್ಲಿ ‘ಸೆಲೆಬ್ರಿಟಿ’ ಸಾಂಗ್ ಶೂಟ್..ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಅಶ್ವಿನ್-ಪ್ರಿಯಾಂಕಾ ಕುಣಿತ

ಮೇಲುಕೋಟೆಯಲ್ಲಿ 'ಸೆಲೆಬ್ರಿಟಿ' ಸಾಂಗ್ ಶೂಟ್..ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಅಶ್ವಿನ್-ಪ್ರಿಯಾಂಕಾ ಕುಣಿತ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada