• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಆರ್‌ಎಸ್‌ಎಸ್ ನಿಷೇಧ ಸರಿಯಲ್ಲ; ಕಾನೂನು ಉಲ್ಲಂಘಿಸಿದರೆ ಮಾತ್ರ ಕ್ರಮ: ನಟ ಚೇತನ್

ಪ್ರತಿಧ್ವನಿ by ಪ್ರತಿಧ್ವನಿ
June 16, 2026
in ಕರ್ನಾಟಕ
0
ಆರ್‌ಎಸ್‌ಎಸ್ ನಿಷೇಧ ಸರಿಯಲ್ಲ; ಕಾನೂನು ಉಲ್ಲಂಘಿಸಿದರೆ ಮಾತ್ರ ಕ್ರಮ: ನಟ ಚೇತನ್
Share on WhatsAppShare on FacebookShare on Telegram

ಆರ್‌ಎಸ್‌ಎಸ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆ ಹಾಗೂ ಸಂಘಟನೆಗಳ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್, ಯಾವುದೇ ಸಂಘಟನೆಯನ್ನು ಗುರಿಯಾಗಿಸಿ ನಿಷೇಧಿಸುವ ಕ್ರಮವನ್ನು ತಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಉಲ್ಲಂಘಿಸುವ ವ್ಯಕ್ತಿಗಳು ಅಥವಾ ಸಂಘಟನೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ರಾಜಕೀಯ ಲಾಭಕ್ಕಾಗಿ ಅಥವಾ ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಉದ್ದೇಶದಿಂದ ಸಂಘಟನೆಗಳನ್ನು ಗುರಿಯಾಗಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆ ಎಂದು ಅಭಿಪ್ರಾಯಪಟ್ಟರು.

“ಯಾವುದೇ ಸಿದ್ಧಾಂತ ಅಥವಾ ವಿಚಾರಧಾರೆಯನ್ನು ನಿಷೇಧಿಸುವ ಬದಲು ಅದನ್ನು ಮತ್ತೊಂದು ವಿಚಾರಧಾರೆಯ ಮೂಲಕ ಎದುರಿಸಬೇಕು. ತನ್ನ ವಿಚಾರಗಳ ಬಗ್ಗೆ ಆತ್ಮವಿಶ್ವಾಸ ಇಲ್ಲದಾಗ ಮಾತ್ರ ನಿಷೇಧದಂತಹ ಕ್ರಮಗಳನ್ನು ಅನುಸರಿಸಲಾಗುತ್ತದೆ,” ಎಂದು ಚೇತನ್ ಹೇಳಿದರು.

Priyank Kharge vs Mohan Bhagwat : RSS ಯಾವ ಕಾನೂನಿನ ಆಧಾರದಲ್ಲಿ ಕಾರ್ಯನಿರ್ವಾಹಿಸುತ್ತದೆ.? #pratidhvani

ಆರ್‌ಎಸ್‌ಎಸ್ ಸೇರಿದಂತೆ ಯಾವುದೇ ಸಂಘಟನೆ ಕಾನೂನುಬದ್ಧ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದರೆ, ಸರ್ಕಾರವು ಅವುಗಳನ್ನು ನೋಂದಣಿ ಮಾಡಿಸಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಆದರೆ ಕೇವಲ ಒಂದು ಸಂಘಟನೆಯನ್ನು ಮಾತ್ರ ಗುರಿಯಾಗಿಸುವುದು ಸರಿಯಾದ ವಿಧಾನವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

“ನಾವು ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ಒಪ್ಪದಿರಬಹುದು. ಆದರೆ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ. ಆ ಹಕ್ಕನ್ನು ಗೌರವಿಸಬೇಕು,” ಎಂದು ಹೇಳಿದರು.

MLakshmana on R Ashoka : 36 ಕೋಟಿ ಲೂಟಿ ಯಾವ ರೀತಿ, ಆರ್‌.ಅಶೋಕ್‌ಗೆ ಎಂ.ಲಕ್ಷ್ಮಣ್ ತಿರುಗೇಟು.! #pratidhvani

ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಮಾತನಾಡಿದ ಚೇತನ್, ಸುಮಾರು 9,600 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಮತ್ತು ನಗರಾಭಿವೃದ್ಧಿ ಉದ್ದೇಶಕ್ಕಾಗಿ ಬಳಸುವ ಪ್ರಸ್ತಾವವನ್ನು ತೀವ್ರವಾಗಿ ವಿರೋಧಿಸಿದರು.

ರಾಜ್ಯ ಸರ್ಕಾರದ ನಿಲುವು ರೈತಪರವಾಗಿಲ್ಲ ಎಂಬ ಭಾವನೆ ಮೂಡುತ್ತಿದೆ. ರೈತರ ಹಿತಾಸಕ್ತಿಯನ್ನು ರಕ್ಷಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರವೇ ಈಗ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ರೈತರಿಗೆ ಸಂಕಷ್ಟ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆ ಜನವಿರೋಧಿಯಾಗಿದ್ದು, ಅದನ್ನು ಕೂಡಲೇ ಕೈಬಿಡಬೇಕು. ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಪರ ಅಭಿವೃದ್ಧಿ ಮಾದರಿಗಳಿಂದ ಸಾಮಾನ್ಯ ಜನರಿಗೆ ಪ್ರಯೋಜನವಾಗುವುದಿಲ್ಲ ಎಂದು ಚೇತನ್ ಅಭಿಪ್ರಾಯಪಟ್ಟರು.

Tags: #BidadiTownship#ConstitutionalRights#FarmerIssues#FreedomOfExpression#KarnatakaPolitics#latestnews#politicalnews#PoliticalStatement#priyankkharge#RSSControversyACTORCHETANbreakingnewschetanahimsacongressgovernmentDharwadNewskarnatakanewsLawAndOrderPoliticalDebatePublicOpinionRSS
Previous Post

110 ದಿನಗಳ ಸಂಘರ್ಷಕ್ಕೆ ಬ್ರೇಕ್: ಅಮೆರಿಕ–ಇರಾನ್ ನಡುವೆ ಶಾಂತಿ ಒಪ್ಪಂದ: ಷರತ್ತುಗಳು ಇಲ್ಲಿವೆ

Next Post

ಮೈಸೂರಿನ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, 7 ಮಂದಿಗೆ ಗಂಭೀರ ಗಾಯ

Related Posts

*ಕ್ಲೀನ್ ಅಪ್ ಬೆಂಗಳೂರಿಗೆ ಆಂದೋಲನದ ರೂಪ ನೀಡಿದ ಬೆಸ್ಕಾಂ*
ಕರ್ನಾಟಕ

*ಕ್ಲೀನ್ ಅಪ್ ಬೆಂಗಳೂರಿಗೆ ಆಂದೋಲನದ ರೂಪ ನೀಡಿದ ಬೆಸ್ಕಾಂ*

by ಪ್ರತಿಧ್ವನಿ
August 8, 2026
0

*ಬೆಂಗಳೂರು, ಆಗಸ್ಟ್ 8, 2026*: ಸ್ವಚ್ಚ, ಸುರಕ್ಷಿತ ಬೆಂಗಳೂರಿಗಾಗಿ ಜಿಬಿಎ ಜತೆ ಕೈಜೋಡಿಸಿರುವ ಬೆಸ್ಕಾಂ,ನಗರದ ಜನರಿಗೆ ಸುರಕ್ಷಿತ ನಡಿಗೆಯ ಗ್ಯಾರಂಟಿ ನೀಡುವ ಉದ್ದೇಶದಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕ...

Read moreDetails
ತಮಿಳುನಾಡು ಜನ ಮಾತ್ರ ರೈತರಾ? ಕರ್ನಾಟಕದವರು ರೈತರಲ್ಲವೇ?-ಹೆಚ್.ಡಿ ಕುಮಾರಸ್ವಾಮಿ

ಖಾತೆ ಹಂಚಿಕೆ ವಿಳಂಬ ಕಾಂಗ್ರೆಸ್ ದಿವಾಳಿತನ ತೋರುತ್ತದೆ: ಹೆಚ್.ಡಿ ಕುಮಾರಸ್ವಾಮಿ

August 8, 2026
ಶಿವಗಂಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಯುವಕ ದಿಢೀರ್‌ ನಾಪತ್ತೆ: ಶೋಧ ಕಾರ್ಯ ಚುರುಕು

ಶಿವಗಂಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಯುವಕ ದಿಢೀರ್‌ ನಾಪತ್ತೆ: ಶೋಧ ಕಾರ್ಯ ಚುರುಕು

August 8, 2026
SIR ಪ್ರಕ್ರಿಯೆ: ನ್ಯಾಯಾಂಗದ ತೀರ್ಪು ಮತ್ತು ವಿಶ್ಲೇಷಣೆ-ಭಾಗ 3

SIR ಪ್ರಕ್ರಿಯೆ: ನ್ಯಾಯಾಂಗದ ತೀರ್ಪು ಮತ್ತು ವಿಶ್ಲೇಷಣೆ-ಭಾಗ 3

August 8, 2026
ಜ್ಞಾನಭಾರತಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾ**: ಸರ್ಕಾರದಿಂದ 10 ಲಕ್ಷ ಪರಿಹಾರ

ಜ್ಞಾನಭಾರತಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾ**: ಸರ್ಕಾರದಿಂದ 10 ಲಕ್ಷ ಪರಿಹಾರ

August 8, 2026
Next Post
ಮೈಸೂರಿನ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, 7 ಮಂದಿಗೆ ಗಂಭೀರ ಗಾಯ

ಮೈಸೂರಿನ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, 7 ಮಂದಿಗೆ ಗಂಭೀರ ಗಾಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada