• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮುಂಗಾರು ಕಣ್ಣಾಮುಚ್ಚಾಲೆ: ಮಳೆ ಕೊರತೆ ಎಚ್ಚರಿಕೆ, ರೈತರಲ್ಲಿ ಬರದ ಭೀತಿ!

ಪ್ರತಿಧ್ವನಿ by ಪ್ರತಿಧ್ವನಿ
June 11, 2026
in Top Story
0
ಮುಂಗಾರು ಕಣ್ಣಾಮುಚ್ಚಾಲೆ: ಮಳೆ ಕೊರತೆ ಎಚ್ಚರಿಕೆ, ರೈತರಲ್ಲಿ ಬರದ ಭೀತಿ!
Share on WhatsAppShare on FacebookShare on Telegram

ಮುಂಗಾರು ಆರಂಭವಾಗಿ ಒಂದು ವಾರ ಕಳೆದಿದ್ದರೂ ರಾಜ್ಯದ ಬಹುತೇಕ ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಸುರಿಯದಿರುವುದು ಆತಂಕಕ್ಕೆ ಕಾರಣವಾಗಿದೆ. ಕೆರೆ-ಕಟ್ಟೆಗಳು ಇನ್ನೂ ತುಂಬಿಲ್ಲ, ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ.ಈ ನಡುವೆ ಭಾರತೀಯ ಹವಾಮಾನ ಇಲಾಖೆ ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಇದರಿಂದ ರೈತಾಪಿ ವರ್ಗದಲ್ಲಿ ಬರದ ಭೀತಿ ಆವರಿಸಿದೆ. ಜೂನ್ 4ರಂದು ಕೇರಳ ಪ್ರವೇಶಿಸಿದ ಮುಂಗಾರು ಕೆಲವು ಪ್ರದೇಶಗಳಲ್ಲಿ ಮಾತ್ರ ಮಳೆಯಾಗಿದ್ದು, ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಿಲ್ಲ.

ADVERTISEMENT
Sushmita Dev on Mamata : ರಾಜಕೀಯದಲ್ಲಿ ಯಾವ ನಿರ್ಧಾರ ಪಡೆಯಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ..!

ಸಾಮಾನ್ಯವಾಗಿ ಮುಂಗಾರು ಆರಂಭವಾದರೆ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ ಆ ಪ್ರದೇಶಗಳಲ್ಲಿಯೂ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದರೂ ಕೃಷಿಗೆ ಪೂರಕವಾಗುವಷ್ಟು ಮಳೆಯಾಗಿಲ್ಲ.ಹವಾಮಾನ ತಜ್ಞರ ಪ್ರಕಾರ, ಎಲ್ ನಿನೋ ಪರಿಣಾಮವು ಮಳೆಯ ಕೊರತೆಗೆ ಪ್ರಮುಖ ಕಾರಣವಾಗಬಹುದು. ಪೆಸಿಫಿಕ್ ಮಹಾಸಾಗರದ ಉಷ್ಣಾಂಶದಲ್ಲಾಗುವ ಬದಲಾವಣೆಗಳಿಂದ ಜಾಗತಿಕ ಹವಾಮಾನ ವ್ಯವಸ್ಥೆಯ ಮೇಲೆ ಪರಿಣಾಮ ಬೀಳುತ್ತದೆ. ಇದರ ಪರಿಣಾಮವಾಗಿ ಭಾರತದ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. 2002, 2009, 2015 ಮತ್ತು 2023ರಲ್ಲಿ ಇದೇ ರೀತಿಯ ಪರಿಸ್ಥಿತಿಯಿಂದ ಬರಗಾಲದ ಆತಂಕ ಎದುರಾಗಿತ್ತು.

ಮಳೆಯ ಕೊರತೆಯಿಂದ ಕೃಷಿ ಮಾತ್ರವಲ್ಲದೆ ಮೀನುಗಾರಿಕೆ ಕ್ಷೇತ್ರವೂ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಗತ್ಯ ಮಟ್ಟದ ಚಟುವಟಿಕೆಗಳು ನಡೆಯದಿದ್ದರೆ ಮೀನುಗಳ ಸಂತಾನೋತ್ಪತ್ತಿಯ ಮೇಲೂ ಪರಿಣಾಮ ಬೀಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Priyank Kharge vs RSS : ಸಚಿವ ಪ್ರಿಯಾಂಕ್ ಖರ್ಗೆಗೆ ಸಿ.ಟಿ ರವಿ ಕೌಂಟರ್! #ctravi #rss #priyankkharge

ಇದೇ ವೇಳೆ, ಈಗಾಗಲೇ ಭತ್ತ ಬಿತ್ತನೆ ಮಾಡಿರುವ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಉತ್ತಮ ಮಳೆಯಾಗಿದ್ದರೆ, ಈ ಬಾರಿ ಮಣ್ಣಿಗೆ ಬೇಕಾದಷ್ಟು ತೇವಾಂಶವೂ ಸಿಗುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಕೇವಲ 35.7 ಮಿಲಿಮೀಟರ್ ಮಳೆಯಷ್ಟೇ ದಾಖಲಾಗಿದ್ದು, ಇದು ಕಳೆದ ವರ್ಷದ ಪ್ರಮಾಣಕ್ಕೆ ಹೋಲಿಸಿದರೆ ಬಹಳ ಕಡಿಮೆಯಾಗಿದೆ.

ಆರಂಭಿಕ ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ಮಳೆಯ ನಿರೀಕ್ಷೆಯಲ್ಲಿದ್ದು, ಬಿತ್ತಿದ ಬೀಜಗಳು ಒಣಗಿ ಹೋಗುವ ಭೀತಿ ಎದುರಿಸುತ್ತಿದ್ದಾರೆ.

 

Tags: #DroughtFear#ElNino#FarmerIssues#IndiaWeather#KannadaNews#KarnatakaWeather#Monsoon2026#MonsoonAlert#MonsoonNews#MonsoonSeason#RainDeficit#udupi#weathernews#WeatherUpdateAgriculturebreakingnewsClimateChangeFarmerskarnatakarainrainfall
Previous Post

2027ರ ಏಕದಿನ ವಿಶ್ವಕಪ್‌ಗೆ ದಿನಾಂಕ ನಿಗದಿ? 54 ಪಂದ್ಯಗಳ ಕ್ರಿಕೆಟ್ ಮಹಾಸಂಗ್ರಾಮಕ್ಕೆ ವೇದಿಕೆ ಸಜ್ಜು

Next Post

ಮಹಿಳೆಯರಿಗೆ ಡಬಲ್ ಖುಷಿ: ಗೃಹಲಕ್ಷ್ಮಿ ಹಣ ಹಾಗೂ ಗ್ಯಾಸ್ ದರ ಬಗ್ಗೆ ಇಲ್ಲಿದೆ ಶುಭ ಸುದ್ದಿ

Related Posts

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ
Top Story

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ

by ಪ್ರತಿಧ್ವನಿ
June 13, 2026
0

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿರುವಿತಾಂಕುರ್ ದೇವಸ್ವಂ ಬೋರ್ಡ್ (ಟಿಡಿಬಿ) ಮಹತ್ವದ ನಿರ್ಧಾರ ಕೈಗೊಂಡಿದೆ....

Read moreDetails
ರಾಜಕೀಯ ಚದುರಂಗದಲ್ಲಿ ಯಾವ ಕಾಯಿ ನಡೆಸ್ತಾರೆ ಅಂತಾ ಯಾರೂ ಹೇಳಲ್ಲ: ಸಿಎಂ ಡಿಕೆಶಿ

ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸಂದೇಶ: ‘ಲಂಚಕ್ಕೆ ಬ್ರೇಕ್, ಡ್ರಗ್ಸ್‌ಗೆ ಕಡಿವಾಣ, ಜನಸೇವೆಗೆ ಆದ್ಯತೆ’

June 13, 2026
ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

June 13, 2026
‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

June 13, 2026
Priyanka Kharge: ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯ: ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ

June 13, 2026
Next Post
ಮಹಿಳೆಯರಿಗೆ ಡಬಲ್ ಖುಷಿ: ಗೃಹಲಕ್ಷ್ಮಿ ಹಣ ಹಾಗೂ ಗ್ಯಾಸ್ ದರ ಬಗ್ಗೆ ಇಲ್ಲಿದೆ ಶುಭ ಸುದ್ದಿ

ಮಹಿಳೆಯರಿಗೆ ಡಬಲ್ ಖುಷಿ: ಗೃಹಲಕ್ಷ್ಮಿ ಹಣ ಹಾಗೂ ಗ್ಯಾಸ್ ದರ ಬಗ್ಗೆ ಇಲ್ಲಿದೆ ಶುಭ ಸುದ್ದಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada