• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

ಸಿಎಂ ತವರು ಜಿಲ್ಲೆಯೇ ಡ್ರಗ್ ಮಾಫಿಯಾದ ಕೇಂದ್ರವಾಗಿದೆ, ಮಾದಕವಸ್ತು ಉತ್ಪಾದನಾ ಫ್ಯಾಕ್ಟರಿಗಳು ಇರುವುದು ಪತ್ತೆಯಾಗಿದೆ : ವಿಜಯೇಂದ್ರ ಗಂಭೀರ ಆರೋಪ..

ಪ್ರತಿಧ್ವನಿ by ಪ್ರತಿಧ್ವನಿ
May 19, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”
Share on WhatsAppShare on FacebookShare on Telegram

ಬೆಂಗಳೂರು : ಮುಖ್ಯಮಂತ್ರಿಗಳೇ, ಯಾವ ಪುರುಷಾರ್ಥಕ್ಕೆ ನೀವು ತುಮಕೂರಿನಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದೀರಿ, ಇದು ಗ್ಯಾರಂಟಿಗಳನ್ನು ಕೇವಲ ಚುನಾವಣಾ ತಂತ್ರಗಾರಿಕೆಗೆ ಬಳಸುವ ಕೆಲಸ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ADVERTISEMENT
Mohan Kumar Danappa On Power Department : ನಕಲಿ ಬಿಲ್‌ ಕಲೆಕ್ಟರ್‌ ಹಾವಳಿಗೆ‌ ಬಿತ್ತು ಬ್ರೇಕ್..#pratidhvani

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 3 ವರ್ಷಗಳಲ್ಲಿ ತಾವು ಮಾಡಿದ ಸಾಧನೆಯಾದರೂ ಏನು? ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿವೆಯೇ? ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೀರಾ? ನಾಡಿಗೆ ಎರಡು ತುತ್ತು ಅನ್ನ ಕೊಡುವ ರೈತರ ಬದುಕನ್ನು ಕಟ್ಟಿಕೊಡುವ ಸಲುವಾಗಿ ನೆರೆ ಮತ್ತು ಬರದ ಸಂದರ್ಭದಲ್ಲಿ ನೆರವಿಗೆ ನಿಮ್ಮ ಸರಕಾರ ಬಂದಿದೆಯೇ ಎಂದು ಪ್ರಶ್ನಿಸಿದ್ದಾರೆ.

ಇದ್ಯಾವುದನ್ನೂ ಮಾಡದೇ, ಗ್ಯಾರಂಟಿಗಳ ನೆಪ ಒಡ್ಡಿಕೊಂಡು ರಾಜ್ಯ ಸರ್ಕಾರ ಜನರ ಪಾಲಿಗೆ ಬದುಕಿದೆ ಎಂಬುದನ್ನು ನೆನಪಿಸುವ ಕಾರ್ಯವನ್ನು ಈ ಸಾಧನಾ ಸಮಾವೇಶದ ಮೂಲಕ ತಾವು ಮಾಡಿದ್ದೀರಿ. ಕಾಂಗ್ರೆಸ್ ಸರ್ಕಾರ ಕೇವಲ ಜಾಹೀರಾತಿನ ಮೂಲಕ ತಮ್ಮ ಯಶಸ್ಸನ್ನು ಬಿಚ್ಚಿಡುವ ಕೆಲಸ ಮಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ನಿಮ್ಮ ಗೆಲುವಿಗೆ ಗ್ಯಾರಂಟಿಗಳು ಸಹಕರಿಸಿವೆ. ಗ್ಯಾರಂಟಿ ಹಣ ಬಿಡುಗಡೆ ಮಾಡಿ ಚುನಾವಣೆ ಗೆಲ್ಲಲು ಪ್ರಯತ್ನ ಮಾಡಿದ್ದೀರಿ. ಈ ಗೆಲುವಿನ ನಾಗಾಲೋಟ ಬಹಳ ದಿನ ನಡೆಯಲು ಸಾಧ್ಯವಿಲ್ಲ. ಹಿಂದೆಯೂ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಇದೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ನಂಜನಗೂಡು ಉಪ ಚುನಾವಣಾ ಫಲಿತಾಂಶ ಏನಾಗಿತ್ತು..? ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ನಿಮ್ಮನ್ನು ಮನೆಗೆ ಕಳಿಸಿದ್ದನ್ನು ತಾವು ಮರೆತಿಲ್ಲ ಎಂಬ ಭಾವನೆಯಿದೆ ಎಂದು ಸೋಲಿನ ನೆನಪು ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ : ನಾರ್ವೆ ಪತ್ರಕರ್ತೆಯ ಪ್ರಶ್ನೆಗೆ ಮೋದಿ ಮೌನ? ವೈರಲ್ ಆಯ್ತು ಮಹುವಾ ಮೊಯಿತ್ರಾ ಪೋಸ್ಟ್

ಗ್ಯಾರಂಟಿಗಳನ್ನು ಕೇವಲ ಚುನಾವಣಾ ತಂತ್ರಗಾರಿಕೆಗೆ ಬಳಸುವ ಕೆಲಸ ಈ ಸರಕಾರದಿಂದ ಬಳಸುವ ಆಗುತ್ತಿದೆ. ಗ್ಯಾರಂಟಿಗಳೇ ಅಭಿವೃದ್ಧಿ ಎಂದು ಬಿಂಬಿಸುವ ಕೆಲಸವನ್ನು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ರಸ್ತೆಗೆ ಆದ್ಯತೆ ನೀಡಿದ್ದೀರಾ? ನೀರಾವರಿ ಯೋಜನೆಗಳಿಗೆ ಹಣ ಒದಗಿಸಿದ್ದೀರಾ? ಆಸ್ಪತ್ರೆಗಳು, ಶಾಲೆಗಳಿಗೆ ಕಾಂಗ್ರೆಸ್ ಸರ್ಕಾರ ಹಣ ನೀಡಿದೆಯೇ? ಅಭಿವೃದ್ಧಿಯನ್ನು ಕಣ್ಮುಂದೆ ಇಟ್ಟುಕೊಂಡು ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲು ನಿಮಗೆ ಸಾಧ್ಯ ಆಗಿದೆಯೇ ಎಂದು ವಿಜಯೇಂದ್ರ ಸರಣಿ ಪ್ರಶ್ನೆಗಳನ್ನು ಎತ್ತಿದ್ದಾರೆ.

ರಸ್ತೆ ಗುಂಡಿ ಮುಚ್ಚಿಲ್ಲ; ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ..

ಇವರ ಯೋಗ್ಯತೆಗೆ ಬೆಂಗಳೂರು ಮಹಾನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯ ಆಗುತ್ತಿಲ್ಲ. ಕೃಷಿ ಕ್ಷೇತ್ರದ ಬಗ್ಗೆ ಈ ಸರಕಾರ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ಸಂಕಷ್ಟದಲ್ಲಿ ಇರುವ ರೈತರಿಗೆ ಸಾಂತ್ವನ ಹೇಳುವ ಸಂವೇದನೆ ಕೂಡ ಈ ಕಾಂಗ್ರೆಸ್ ಸರಕಾರಕ್ಕೆ ಇಲ್ಲ ಎಂಬುದು ದುರ್ದೈವ. ನೆರೆ ಮತ್ತು ಬರದ ಸಂದರ್ಭದಲ್ಲಿ ನೆರವಿಗೆ ಇವರು ಧಾವಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ರಾಜೀನಾಮೆ ಕೊಡಬೇಕಿತ್ತು..

ಉದ್ಯೋಗ ಸೃಷ್ಟಿ ಕುರಿತು ಸಾಕಷ್ಟು ಮಾತನಾಡುತ್ತಾರೆ. ಯುವಜನತೆ ಜೀವನದ ಜೊತೆ ಚೆಲ್ಲಾಟ ಆಡುವ ಕಾಂಗ್ರೆಸ್ ಸರ್ಕಾರದ ಅಹಿಂದ ಮುಖವಾಡವೂ ಕಳಚಿಬಿದ್ದಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಹಲವಾರು ಬಾರಿ ಹೇಳಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಆದಾಗಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಾಗಿತ್ತು. ಈ ಹಗರಣದ ಕುರಿತು ಸದನದಲ್ಲೇ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದು, ಸಚಿವರು ರಾಜೀನಾಮೆ ಕೊಟ್ಟಿದ್ದನ್ನು ನೆನಪಿಸಿದರು. ಮತ್ತೊಂದು ಕಡೆ ‘ಮುಡಾ’ ಹಗರಣ ನಡೆದಿದೆ. 14 ನಿವೇಶನ ವಾಪಸ್ ಮಾಡಿದ್ದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಟೀಕಾಪ್ರಹಾರ ನಡಸಿದ್ದಾರೆ.

Actor Darshan Amid Wedding Anniversary : ಲಕ್ಷ್ಮೀ ದರ್ಶನ!ಜೈಲಲ್ಲೇ ವಾರ್ಷಿಕೋತ್ಸವ #pratidhvani

ಶಿಕ್ಷಣ ಕ್ಷೇತ್ರದಲ್ಲಿ ಈ ಥರದ ಶಿಕ್ಷಣ ಸಚಿವರು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಂದಿದ್ದಾರೆ. ರಾಜ್ಯ ಶಿಕ್ಷಣ ನೀತಿಯನ್ನು ತರಲು ಇವರಿಗೆ ಸಾಧ್ಯವಾಗಿಲ್ಲ; ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ (ಎನ್‍ಇಪಿ) ಅನುಷ್ಠಾನ ಮಾಡುತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲೂ ಗೊಂದಲ ಸೃಷ್ಟಿಸಿ ರಾಜ್ಯದ ಮಕ್ಕಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ವಿಜಯೇಂದ್ರ ಗುಡುಗಿದ್ದಾರೆ.

ರಾಜ್ಯ ಸರ್ಕಾರದ ಎಡವಟ್ಟಿನಿಂದಾಗಿ 6,500 ಗ್ರಾಮೀಣ ಗ್ರಂಥಾಲಯಗಳು ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಮೂಲಭೂತ ಸೌಕರ್ಯ ಕೊರತೆಯಿಂದ 15 ತಿಂಗಳಿನಿಂದ 550ಕ್ಕೂ ಹೆಚ್ಚು ನವಜಾತ ಶಿಶುಗಳು ಮರಣ ಹೊಂದಿವೆ. ಗರ್ಭಿಣಿಯರು, ಬಾಣಂತಿಯರ ಸರಣಿ ಸಾವುಗಳು ಸಂಭವಿಸುತ್ತಿವೆ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಿನ ಬೆಳಗಾದರೆ ಕೊಲೆಗಳು ನಡೆಯುತ್ತಿವೆ. ಮುಖ್ಯಮಂತ್ರಿಗಳ ಜಿಲ್ಲೆಯು ಡ್ರಗ್ ಮಾಫಿಯಾಕ್ಕೆ ಇವತ್ತು ಕೇಂದ್ರವಾಗಿದೆ. ಮಾದಕವಸ್ತು ಉತ್ಪಾದನಾ ಫ್ಯಾಕ್ಟರಿಗಳು ಇರುವುದು ಪತ್ತೆಯಾಗಿದೆ. ಪೊಲೀಸ್ ಇಲಾಖೆ, ಮುಖ್ಯಮಂತ್ರಿಗಳಿಗೆ ಅವರ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂಬುದರ ಅಂದಾಜಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಿಎಂ ಸಿದ್ದರಾಮಯ್ಯ ವಿರುದ್ಧ ನೇರವಾದ ಆರೋಪಗಳನ್ನು ಮಾಡಿದ್ದಾರೆ.

ಅಹಿಂದ ಹೆಸರು ದುರ್ಬಳಕೆಯ ಅಪಕೀರ್ತಿ..

ಕ್ರಿಮಿನಲ್ ಚಟುವಟಿಕೆಯ ವ್ಯಕ್ತಿಗಳಿಗೆ ಭಯ ಹುಟ್ಟಿಸಬೇಕಾದ ಜೈಲುಗಳಲ್ಲಿ ಕೈದಿಗಳಿಗೆ ಕುಡಿಯುವ ವ್ಯವಸ್ಥೆ ಮಾಡಲಾಗುತ್ತಿದೆ. ರಾಜಾರೋಷವಾಗಿ ಕೈದಿಗಳು ಆರಾಮವಾಗಿ ಇದ್ದಾರೆ. ಅತಿ ಹೆಚ್ಚು ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು, ದೀರ್ಘಕಾಲ ಸಿಎಂ ಎಂಬ ವೈಯಕ್ತಿಕ ಕಾರಣ ಬಿಟ್ಟರೆ, ಅಹಿಂದ ಹೆಸರು ಹೇಳಿಕೊಂಡು ಆ ಸಮುದಾಯಗಳನ್ನು ತನ್ನ ರಾಜಕೀಯ ಸ್ವಾರ್ಥಕ್ಕಾಗಿ, ಅಹಿಂದ ಸಮುದಾಯಗಳನ್ನು ತನ್ನ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ದುರ್ಬಳಕೆ ಮಾಡಿಕೊಂಡ ಅಪಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿನ ಸೋಲಿನಿಂದ ಹತಾಶವಾದ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದೆ. ಈ ಸರ್ಕಾರದ ಆಡಳಿತ ವೈಖರಿಗೆ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಯಾವತ್ತೇ ಚುನಾವಣೆ ನಡೆದರೂ ಈ ಸರ್ಕಾರಕ್ಕೆ ಜನರು ಪಾಠ ಕಲಿಸುತ್ತಾರೆ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಬ್ಬರಿಸಿದ್ದಾರೆ

ಈ ವೇಳೆ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ,  ಶಾಸಕರಾದ ಬಿ.ಎ ಬಸವರಾಜ್, ಶ್ರೀಮತಿ ಶಶಿಕಲಾ ಜೊಲ್ಲೆ, ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ, ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಉಪಸ್ಥಿತರಿದ್ದರು.

Tags: B Y Vijayendrabjp karnatakaCM Siddaramaiahcongress karnatakaDK ShivakumarDrugs MafiaKarnataka GovernmentLaw and orderMadhu BangarappaPratidhvaniR ashokaWest Bengal elections
Previous Post

ಕಾಂಗ್ರೆಸ್‌ ಸರ್ಕಾರಕ್ಕೆ 3 ವರ್ಷದ ಸಂಭ್ರಮ : ಕಲ್ಪತರು ನಾಡಿನಿಂದ ಬಿಜೆಪಿಗೆ ಸಿದ್ದರಾಮಯ್ಯ ಖಡಕ್‌ ಸಂದೇಶವೇನು..?

Next Post

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

Related Posts

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?
Top Story

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

by ಪ್ರತಿಧ್ವನಿ
May 20, 2026
0

ನವದೆಹಲಿ : ಐದ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ನೆದರ್ಲ್ಯಾಂಡ್‌, ಸ್ವೀಡನ್‌ , ನಾರ್ವೆ ಬಳಿಕ ಇದೀಗ ಇಟಲಿ ತಲುಪಿದ್ದಾರೆ. ಭಾರತದ ಬಾಂಧವ್ಯ ಜಾಗತಿಕ ಮಟ್ಟದ...

Read moreDetails
ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ “ಭಾರತ–ನಾರ್ಡಿಕ್” ಬಗ್ಗೆ ಹೇಳಿದ್ದೇನು ?

ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ “ಭಾರತ–ನಾರ್ಡಿಕ್” ಬಗ್ಗೆ ಹೇಳಿದ್ದೇನು ?

May 20, 2026
ಸಿದ್ದರಾಮಯ್ಯ ದೆಹಲಿ ಭೇಟಿ ಚರ್ಚೆ ಜೋರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಸುಳಿವೇ?

ಸಿದ್ದರಾಮಯ್ಯ ದೆಹಲಿ ಭೇಟಿ ಚರ್ಚೆ ಜೋರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಸುಳಿವೇ?

May 20, 2026
ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಆತಂಕ: ಆರೋಗ್ಯ ಇಲಾಖೆ ಅಲರ್ಟ್

ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಆತಂಕ: ಆರೋಗ್ಯ ಇಲಾಖೆ ಅಲರ್ಟ್

May 20, 2026
ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

May 20, 2026
Next Post
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada