• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಐಪಿಎಲ್‌ಗೆ ಕುಸಿತದ ಸಂಕೇತ: ಟಿಆರ್‌ಪಿ, ವೀಕ್ಷಕರು ಮತ್ತು ಜಾಹೀರಾತುಗಳಲ್ಲೂ ಇಳಿಕೆ! ಕಾರಣವೇನು ?

ಪ್ರತಿಧ್ವನಿ by ಪ್ರತಿಧ್ವನಿ
May 5, 2026
in ಕ್ರೀಡೆ
0
ಐಪಿಎಲ್‌ಗೆ ಕುಸಿತದ ಸಂಕೇತ: ಟಿಆರ್‌ಪಿ, ವೀಕ್ಷಕರು ಮತ್ತು ಜಾಹೀರಾತುಗಳಲ್ಲೂ ಇಳಿಕೆ! ಕಾರಣವೇನು ?
Share on WhatsAppShare on FacebookShare on Telegram

2026ರ ಐಪಿಎಲ್‌ನಲ್ಲಿ ಈಗಾಗಲೇ 47 ಪಂದ್ಯಗಳು ಪೂರ್ಣಗೊಂಡಿದ್ದು, ಟೂರ್ನಿಯ ಅರ್ಧ ಹಂತ ಮುಗಿದಂತಾಗಿದೆ. ಆರಂಭದಲ್ಲಿ ಕಂಡುಬಂದ ಭರ್ಜರಿ ಉತ್ಸಾಹ ಪಂದ್ಯಗಳು ಮುಂದುವರಿದಂತೆ ಕಡಿಮೆಯಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ಪ್ರಮುಖ ಕಾರಣವಾಗಿ ಈ ಆವೃತ್ತಿಯಲ್ಲೂ ಬ್ಯಾಟರ್‌ಗಳ ಏಕಪಕ್ಷೀಯ ಪ್ರಾಬಲ್ಯ ಹೆಚ್ಚಿರುವುದನ್ನು ಹೇಳಲಾಗುತ್ತಿದೆ.

ADVERTISEMENT
Prashant Kishore on Vijay : ಟಿವಿಕೆ ಗೆಲುವಿನ ಭವಿಷ್ಯ ನುಡಿದಿದ್ದ ಚುನಾವಣಾ ಚಾಣಕ್ಯ..! #vijay #tvk

ಇದಕ್ಕು ಇನ್ನೂ ಹಲವು ಅಂಶಗಳು ಅಭಿಮಾನಿಗಳ ಆಸಕ್ತಿ ಕುಗ್ಗಲು ಕಾರಣವಾಗಿವೆ. ಇತ್ತೀಚೆಗೆ ಹೊರಬಂದ ವರದಿಯ ಪ್ರಕಾರ, ಐಪಿಎಲ್ ಜನಪ್ರಿಯತೆಯಲ್ಲೂ ಇಳಿಮುಖ ಕಂಡುಬಂದಿದೆ.ವಿಶೇಷವಾಗಿ ಟಿಆರ್‌ಪಿ ಹಾಗೂ ವೀಕ್ಷಕರ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ದಾಖಲಾಗಿದೆ. ಇದರ ಪರಿಣಾಮವಾಗಿ ಜಾಹೀರಾತುದಾರರ ಸಂಖ್ಯೆಯೂ ಇಳಿಕೆಯಾಗಿರುವುದು ಗಮನಸೆಳೆಯುತ್ತಿದೆ.

DKS on Assam Result: ಅಸ್ಸಾಂ, ಬಂಗಾಳ ಫಲಿತಾಂಶದ ಬಗ್ಗೆ DCM ಡಿಕೆಶಿ ಹೇಳಿದ್ದೇನು? #pratidhvani

ಟಿಆರ್‌ಪಿ ದೃಷ್ಟಿಯಿಂದ ನೋಡಿದರೆ, TAM Sports ಮತ್ತು BARC India ವರದಿಯ ಪ್ರಕಾರ ಐಪಿಎಲ್ 2026ರ ಟಿಆರ್‌ಪಿ ಶೇಕಡಾ 18.8ರಷ್ಟು ಕುಸಿದು 4.57ರಿಂದ 3.71ಕ್ಕೆ ಇಳಿದಿದೆ. ಅದೇ ವೇಳೆ ವೀಕ್ಷಕರ ಸಂಖ್ಯೆಯೂ ಶೇಕಡಾ 26ರಷ್ಟು ಕಡಿಮೆಯಾಗಿದ್ದು, 124 ಮಿಲಿಯನ್‌ನಿಂದ 113.6 ಮಿಲಿಯನ್‌ಗೆ ಇಳಿಕೆಯಾಗಿದೆ.

ವೀಕ್ಷಕರ ಸಂಖ್ಯೆ ಕಡಿಮೆಯಾಗಿರುವುದು ಜಾಹೀರಾತು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಜಾಹೀರಾತುದಾರರ ಸಂಖ್ಯೆಯಲ್ಲಿ ಶೇಕಡಾ 31ರಷ್ಟು ಕುಸಿತ ಕಂಡುಬಂದಿದ್ದು, ಹಿಂದಿನ 65ರಷ್ಟಿದ್ದ ಸಂಖ್ಯೆ ಈಗ ಸುಮಾರು 45ಕ್ಕೆ ಇಳಿದಿದೆ.

DKS on Assam Result: ಅಸ್ಸಾಂ, ಬಂಗಾಳ ಫಲಿತಾಂಶದ ಬಗ್ಗೆ DCM ಡಿಕೆಶಿ ಹೇಳಿದ್ದೇನು?  #pratidhvani

ಈ ಇಳಿಕೆಗೆ ಹಲವು ಕಾರಣಗಳನ್ನು ಉಲ್ಲೇಖಿಸಲಾಗುತ್ತಿದೆ. ಟೂರ್ನಿಯ ದೀರ್ಘಾವಧಿ, ಫ್ಲಾಟ್ ಪಿಚ್‌ಗಳಲ್ಲಿ ನಡೆಯುತ್ತಿರುವ ಪಂದ್ಯಗಳು ಹಾಗೂ ಆಟದ ಸಮತೋಲನ ಕಳೆದುಹೋಗಿರುವುದು ಪ್ರಮುಖ ಕಾರಣಗಳಾಗಿವೆ.ಬ್ಯಾಟರ್‌ಗಳ ಮೇಲುಗೈ ಹೆಚ್ಚಿದಂತೆ ಬೌಲರ್‌ಗಳಿಗೆ ಅವಕಾಶ ಕಡಿಮೆಯಾಗಿದ್ದು, ಪಂದ್ಯಗಳ ರೋಚಕತೆ ಕುಗ್ಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.ಇದಕ್ಕೆ ಜೊತೆಗೆ ಫ್ಯಾಂಟಸಿ ಅಪ್ಲಿಕೇಶನ್‌ಗಳ ಮೇಲಿನ ನಿರ್ಬಂಧ ಹಾಗೂ ವೀಕ್ಷಕರ ಅಭ್ಯಾಸದಲ್ಲಿ ಆಗಿರುವ ಬದಲಾವಣೆಗಳೂ ಪರಿಣಾಮ ಬೀರಿವೆ. ಅನೇಕರು ಈಗ ತಮ್ಮ ನೆಚ್ಚಿನ ತಂಡಗಳ ಪಂದ್ಯಗಳನ್ನಷ್ಟೇ ವೀಕ್ಷಿಸುತ್ತಿದ್ದು, ಉಳಿದ ಪಂದ್ಯಗಳತ್ತ ಆಸಕ್ತಿ ತೋರುತ್ತಿಲ್ಲ. ಈ ಎಲ್ಲ ಅಂಶಗಳು ಸೇರಿ ಐಪಿಎಲ್‌ನ ಒಟ್ಟು ಜನಪ್ರಿಯತೆಯ ಮೇಲೆ ಪ್ರಭಾವ ಬೀರಿವೆ ಎನ್ನಲಾಗುತ್ತಿದೆ.

Tags: #AdvertisingCrisis#DigitalStreamingShift#IPLAnalysis#IPLTRPDecline#IPLViewershipDrop#SportsBusiness#SportsEconomy#TVvsOTT#ViewerFatiguecricketnewsIndianPremierLeagueIPL2026
Previous Post

ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

Next Post

ರಾಹುಲ್ ಸಲಹೆ ಕೈಬಿಟ್ಟದ್ದೇ ಕಾಂಗ್ರೆಸ್‌ಗೆ ಹಿನ್ನಡೆ? ತಮಿಳುನಾಡು ಫಲಿತಾಂಶದ ಸುತ್ತ ಹೊಸ ಚರ್ಚೆ

Related Posts

ವಿಜಯ್ ಬೆಂಬಲದ ವಿಚಾರಕ್ಕೆ ಎಐಎಡಿಎಂಕೆಯಲ್ಲಿ ಬಿರುಕು..? ಎಡಪ್ಪಾಡಿ ವಿರುದ್ಧವೇ ಎದ್ದ ಬಂಡಾಯ!
ಕ್ರೀಡೆ

‘ಗೆಲುವಿನ ಸಂಭ್ರಮದಲ್ಲೇ ಆರ್‌ಸಿಬಿಗೆ ಬಿಗ್ ಶಾಕ್..! ಕೋಚ್‌ಗೆ ದಂಡ, ಮುಂಬೈ ಪ್ಲೇಆಫ್‌ನಿಂದ ಔಟ್’

by ಪ್ರತಿಧ್ವನಿ
May 11, 2026
0

2026ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ನೀಡಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಆರ್‌ಸಿಬಿ ವಿರುದ್ಧದ ಸೋಲಿನೊಂದಿಗೆ ಮುಂಬೈ ತಂಡ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ...

Read moreDetails
“ಯಾವ ಪುರುಷಾರ್ಥಕ್ಕೆ ಅಭಿಮಾನೋತ್ಸವ?”: ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ!

“ದಾದಾ ರಾಜಕೀಯಕ್ಕೆ ಬಂದಿದ್ದರೆ ಇಂದು ಸಿಎಂ ಆಗುತ್ತಿದ್ರಾ?”: ಸೌರವ್ ಗಂಗೂಲಿ ಕುರಿತು ಮತ್ತೆ ಚರ್ಚೆ!

May 9, 2026
ಐಪಿಎಲ್‌ನಲ್ಲಿ ‘ಹನಿಟ್ರ್ಯಾಪ್’ ಭೀತಿ? ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ; ಹೊಸ ಭದ್ರತಾ ನಿಯಮ ಜಾರಿ

ಐಪಿಎಲ್‌ನಲ್ಲಿ ‘ಹನಿಟ್ರ್ಯಾಪ್’ ಭೀತಿ? ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ; ಹೊಸ ಭದ್ರತಾ ನಿಯಮ ಜಾರಿ

May 8, 2026
“ಫ್ರೀ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರಿಗೆ ಶಾಕ್?” ಚಿನ್ನಸ್ವಾಮಿಯಿಂದ ಐಪಿಎಲ್ ಫೈನಲ್ ಶಿಫ್ಟ್‌ ಹಿಂದಿನ ಕಾರಣ  ಇದು!

“ಫ್ರೀ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರಿಗೆ ಶಾಕ್?” ಚಿನ್ನಸ್ವಾಮಿಯಿಂದ ಐಪಿಎಲ್ ಫೈನಲ್ ಶಿಫ್ಟ್‌ ಹಿಂದಿನ ಕಾರಣ  ಇದು!

May 7, 2026
ಜೀವಾವಧಿ ಶಿಕ್ಷೆ ಹಿನ್ನೆಲೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅಮಾನ್ಯ – ಧಾರವಾಡ ಕ್ಷೇತ್ರ ಖಾಲಿ

ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೇಸ್ ಬೆದರಿಕೆ: ವೈಭವ್ ಸೂರ್ಯವಂಶಿ ವಿಚಾರಕ್ಕೆ ಹೊಸ ತಿರುವು

May 2, 2026
Next Post
ರಾಹುಲ್ ಸಲಹೆ ಕೈಬಿಟ್ಟದ್ದೇ ಕಾಂಗ್ರೆಸ್‌ಗೆ ಹಿನ್ನಡೆ? ತಮಿಳುನಾಡು ಫಲಿತಾಂಶದ ಸುತ್ತ ಹೊಸ ಚರ್ಚೆ

ರಾಹುಲ್ ಸಲಹೆ ಕೈಬಿಟ್ಟದ್ದೇ ಕಾಂಗ್ರೆಸ್‌ಗೆ ಹಿನ್ನಡೆ? ತಮಿಳುನಾಡು ಫಲಿತಾಂಶದ ಸುತ್ತ ಹೊಸ ಚರ್ಚೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada