• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಶಾಸಕಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ..!

ಪ್ರತಿಧ್ವನಿ by ಪ್ರತಿಧ್ವನಿ
April 29, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!
Share on WhatsAppShare on FacebookShare on Telegram

ಬೆಳಗಾವಿ : ಜನ ಸಮುದಾಯ ಎಷ್ಟೇ ಮುಂದುವರೆದರೂ, ತಂತ್ರಜ್ಷಾನ ದಿನದಿಂದ ದಿನಕ್ಕೆ ಬೆಳವಣಿಗೆ ಕಂಡರೂ ಅಲ್ಲದೆ ಕಾನೂನುಗಳು ಅದೆಷ್ಟೇ ಬಿಗಿಯಾದರೂ ಸಹ ಜನರ ಮನಸ್ಸುಗಳು, ಯೋಚನೆಗಳು ಮಾತ್ರ ಬದಲಾಗುತ್ತಿಲ್ಲ. ಜಾತಿ ವ್ಯವಸ್ಥೆ, ಸಾಮಾಜಿಕ ಬಹಿಷ್ಕಾರದಂತಹ ಅಮಾನವೀಯ ಘಟನೆಗಳಿಗೆ ಇಂದಿಗೂ ನಮ್ಮ ಸಮಾಜ ಸಾಕ್ಷಿಯಾಗುತ್ತಿರುವುದು ನಿಜಕ್ಕೂ ದುರಂತ..!

ADVERTISEMENT
Olympic medallist Manu Bhaker : ಯುವ ಕ್ರಿಕೆಟರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಒಲಿಂಪಿಕ್ ವಿಜೇತೆ ಹೇಳಿದ್ದೇನು?

ಆದರೆ ಇಂತದ್ದೇ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಜಿಲ್ಲೆಯ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಕುರುಬ ಸಮುದಾಯದ ಬಡ ಕುಟುಂಬದ ಜೊತೆ ಮಾತನಾಡದಂತೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಮಾತನಾಡಿದರೆ 5 ಸಾವಿರ ರೂಪಾಯಿ ದಂಡ ಹಾಗೂ ಅವರ ಮಾಹಿತಿ ನೀಡಿದರೆ 1 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಅದೇ ಸಮಾಜದ ಪಂಚರು ಘೋಷಿಸಿದ್ದಾರೆ.

ಇನ್ನೂ ಬಹಿಷ್ಕಾರ ಹಾಕಿದ 10 ಜನ ಸಮಾಜದ ಮುಖಂಡರ ವಿರುದ್ಧ ಹಿರೇಬಾಗೇವಾಡಿ ಪೊಲೀಸ್‌ ಠಾಣೆಗೆ ದೂರು ನೀಡಿ 15 ದಿನಗಳಾದರೂ ಕೂಡ ಇದುವರೆಗೂ ಎಫ್‌ಐಆರ್‌ ದಾಖಲಾಗಿಲ್ಲ. ದೇವಸ್ಥಾನ ಪೂಜೆ ಹಾಗೂ ವೈಯಕ್ತಿಕ ಸಂಬಂಧದ ವಿಚಾರವನ್ನು ನೆಪ ಮಾಡಿಕೊಂಡು, ಅದೇ ಸಮಾಜದಿಂದ ಸಾಂಬ್ರೇಕರ್‌ ಕುಟುಂಬವೊಂದನ್ನು ದೂರ ಇಡುವಂತೆ ಆಜ್ಞೆ ಹೊರಡಿಸಿದ್ದಾರೆ ಎಂದು ನೊಂದ ಕುಟುಂಬಸ್ಥರು ಆರೋಪಿಸಿದ್ದಾರೆ. ದೇವಸ್ತಾನ ಪೂಜೆ, ಪ್ರೀತಿ ವಿಚಾರಕ್ಕೆ ಗ್ರಾಮದ ಕುರುಬ ಸಮಾಜದ ಪಂಚರು ಬಹಿಷ್ಕಾರ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಾವು ಏನು ತಪ್ಪು ಮಾಡಿದ್ದೇವೆ..?

ನನಗೂ ಬದುಕಲು ಅವಕಾಶ ಕೊಡಿ, ‘‘ನಾವು ಏನು ಅಪರಾಧ ಮಾಡಿದ್ದೇವೆ? ನಮಗೂ ಈ ಊರಿನಲ್ಲಿ ಬದುಕುವ ಹಕ್ಕಿಲ್ಲವೇ? ನಮ್ಮ ಐದು ವರ್ಷದ ಮಗುವಿನ ಜೊತೆಯೂ ಯಾರೂ ಮಾತನಾಡುತ್ತಿಲ್ಲ. ಗ್ರಾಮದಲ್ಲಿನ ಮದುವೆ, ಕಾರ್ಯಕ್ರಮಗಳಿಗೆ ಆಹ್ವಾನ ಇಲ್ಲದೆ ನಮ್ಮ ಕುಟುಂಬ ಒಂಟಿಯಾಗಿದೆ. ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ ತಡರಾತ್ರಿ ಮನೆ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ದುಷ್ಕರ್ಮಿಗಳ ಅಟ್ಟಹಾಸ ಮೆರೆದಿದ್ದಾರೆ. ನಾವು ಜೀವ ಭಯದಲ್ಲಿ ಬದುಕುತ್ತಿದ್ದೇವೆ ನಮಗೆ ಸೂಕ್ತ ಭದ್ರತೆ ಒದಗಿಸುವಂತೆ ಕುಟುಂಬ ಸರ್ಕಾರವನ್ನು ಒತ್ತಾಯಿಸಿದೆ.

ಬಹಿಷ್ಕಾರ ಮಾಡಿದ ಕುಟಂಬದ ಮನೆ ಮೇಲೆ ರಾತ್ರಿಯಾದ್ರೆ ಸಾಕು ಕಲ್ಲುಗಳು ಬೀಳ್ತಿವೆಯಂತೆ. ಊರಲ್ಲಿ ಯಾರು ಮಾತಾಡ್ತಿಲ್ಲ ಮದುವೆ, ಕಾರ್ಯಕ್ರಮಗಳಿಗೆ ಆಹ್ವಾನ ನೀಡ್ತಿಲ್ಲ. ಐದು ವರ್ಷದ ಮಗುವನ್ನ ಕೂಡ ಜನರು ದೂರ ಇಟ್ಟಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಈ ರೀತಿಯ ಅನಿಷ್ಠ ಪದ್ಧತಿಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಮೂಢ ನಂಬಿಕೆಗಳ ಕಡು ವಿರೋಧಿಯಾಗಿರುವ ಅವರು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಮಾನವೀಯತೆ ಮರೆತು ಅಮಾನವೀಯ ನಿರ್ಧಾರ ತೆಗೆದುಕೊಂಡಿರುವ ನೀಚ ಪಂಚರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ. ಅಲ್ಲದೆ ನೊಂದ ಕುಟುಂಬ ಎಂದಿನಂತೆ ಸಾಮಾಜಿಕ ಬೆರೆತು ಬಾಳುವೆ ಮಾಡುವ ವಾತಾವರಣ ನಿರ್ಮಿಸಬೇಕಿದೆ.
Tags: Belagavi District newsCM SiddaramaiahCongress GovernmentKuruba Communitylaxmi hebbalkarPratidhvaniSatish Jarakiholisocial boycott
Previous Post

Breking:ಮಂಡ್ಯದಲ್ಲಿ ಮೂವರು ವೈದ್ಯರ ಬಂಧನ, ಸರ್ಕಾರಿ ವೈದ್ಯೆ ನಾಪತ್ತೆ

Next Post

‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

Related Posts

Breking:ಮಂಡ್ಯದಲ್ಲಿ ಮೂವರು ವೈದ್ಯರ ಬಂಧನ, ಸರ್ಕಾರಿ ವೈದ್ಯೆ ನಾಪತ್ತೆ
Top Story

Breking:ಮಂಡ್ಯದಲ್ಲಿ ಮೂವರು ವೈದ್ಯರ ಬಂಧನ, ಸರ್ಕಾರಿ ವೈದ್ಯೆ ನಾಪತ್ತೆ

by ಪ್ರತಿಧ್ವನಿ
April 29, 2026
0

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಅಕ್ರಮ ಭ್ರೂಣ ಪತ್ತೆಗೆ ಸಂಬಂಧಿಸಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಪಟ್ಟಣದ ಡಯಾಗ್ನಸ್ಟಿಕ್ ಸೆಂಟರ್‌ಗಳಲ್ಲಿ ನಿಯಮ ಉಲ್ಲಂಘನೆ ಮಾಡಿ ಸ್ಕ್ಯಾನಿಂಗ್ ನಡೆಸಿದ ಆರೋಪದ...

Read moreDetails
ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ

ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ

April 29, 2026
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

April 28, 2026
Next Post
‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada