ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ- 1 ರ ಫಲಿತಾಂಶ ಪ್ರಕಟಗೊಂಡಿದೆ. ಎಸ್ ಎಸ್ ಎಲ್ ಸಿ ಅಲ್ಲಿ ಶೇಕಡ 90ರಷ್ಟು ಈ ಬಾರಿ ಫಲಿತಾಂಶ ದಾಖಲಾಗಿದೆ. ಮಾರ್ಚ್ 18ರಿಂದ ಏಪ್ರಿಲ್ 2 ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆದಿದ್ದವು ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಫಲಿತಾಂಶ ರವನಿಸಲಾಗುತ್ತದೆ.

ಇನ್ನು ಈ ಬಾರಿಯೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದು 625 ಕ್ಕೆ 625 ಅಂಕಗಳನ್ನು 7 ವಿದ್ಯಾರ್ಥಿಗಳು ಗಳಿಸಿದ್ದಾರೆ. ಬೆಳಗಾವಿಯ ರೂಪ ಚೆನ್ನಗೌಡ ಪಾಟೀಲ್ ಗೆ 625ಕ್ಕೆ 625 ಹಾಸನದ ಜಾನವಿ ಹಾಗೂ ಉತ್ಸವ್ ಪಾಟೀಲ್ 625 ಕ್ಕೆ 625 ಅಂಕಗಳು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ದಾವಣಗೆರೆಯ ಭರತ್, ಚಿಕ್ಕಮಂಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯ, ರಾಯಚೂರಿನ ಸುಖದೇವ್ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
*ರಾಜ್ಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ*
625- 625 07ವಿದ್ಯಾರ್ಥಿಗಳು
625 -624 21 ವಿದ್ಯಾರ್ಥಿಗಳು
625 – 623 28 ವಿದ್ಯಾರ್ಥಿಗಳು
625 – 622 74 ವಿದ್ಯಾರ್ಥಿಗಳು
625 – 621 98ವಿದ್ಯಾರ್ಥಿಗಳು
626 -620 150ವಿದ್ಯಾರ್ಥಿಗಳು

Top Rank students
– ಪಾರ್ಥನಾ ನಾಗಪ್ಪ ಬಿರಾದಾರ್ -625/625 ಅಂಕ ಚಿಕ್ಕೊಡಿ ಜಿಲ್ಲೆ
– ಭರತ್ ಜೀ. 625/625 ಅಂಕ ದಸವಣಗೆರೆ ಜಿಲ್ಲೆ
– ಬೃಂದಾ ಎಮ್ ತಪ್ಸೆ 625/625 ಚಿಕ್ಕಮಗಳೂರು ಜಿಲ್ಲೆ
– ಧನುಶ್ ಸುಧೀರ್ ಮೈಸೂರು 625/625 ಅಂಕ ಬೆಂಗಳೂರು ಉತ್ತರ ಜಿಲ್ಲೆ
– ಪ್ರೀತಂ ಜೀ 625/625 ಅಂಕ ಉಡುಪಿ ಜಿಲ್ಲೆ
– ಸುಜನ್ಯ ಬಸವರಾಜ್ ಕಂದಕುರ್ 625/625 ಅಂಕ ವಿಜಯಪುರ ಜಿಲ್ಲೆ
– ಸುಖದೇವ್ 625/625 ಅಂಕ ರಾಯಚೂರು ಜಿಲ್ಲೆ






