ಬೆಂಗಳೂರು : ಪಂಚಮಸಾಲಿ ಸಮಾಜದ ಎರಡು ಟ್ರಸ್ಟ್ ಸ್ವಂತ ಆಸ್ತಿಯಾಗಿವೆ, ಇದರಿಂದ ಸಮಾಜ ಹಾಗೂ ಜನರಿಂದ ನಂಬಿಕೆಗೆ ಅನರ್ಹವಾಗಿವೆ. ವಚನಾನಂದ ಶ್ರೀಗಳ ಉಚ್ಚಾಟನೆ ಅಷ್ಟೇನೂ ವಿಶೇಷ ಎಂದು ಭಾವಿಸುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವಿಠಲ್ ರುಕ್ಮಿಣಿ ದೇವಸ್ಥಾನ ಉದ್ಘಾಟನೆ ನೆರವೇರಿಸಿ ನಂತರ ಮಾದ್ಯಮಗಳಿಗೆ ಪ್ರತಿಕ್ರಿಯಿಸಿ, ಟ್ರಸ್ಟ್‌ನವರು ಸಮಾಜದ ಆಸ್ತಿಯನ್ನು ಖಾಸಗಿ ಆಸ್ತಿಯಾಗಿ ಮಾಡಿಕೊಂಡಿದ್ದಾರೆ. ಕೂಡಲಸಂಗಮ ಪೀಠ ಹಾಗೂ ಹರಿಹರ ಪೀಠದ ಎರಡೂ ಸಮಾಜದ ಆಸ್ತಿ ಯಾಗಿ ಉಳಿದಿಲ್ಲ, ಎರಡೂ ಪೀಠಗಳ ಟ್ರಸ್ಟಿಗಳ ಮೇಲೆ ಸಮಾಜ ಹಾಗೂ ಜನರ ನಂಬಿಕೆ ಉಳಿದಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?
ಇಂತವರಿಂದ ಸಮಾಜಕ್ಕೆ ನ್ಯಾಯ ಸಿಗಲ್ಲ. ಪ್ರಾಮಾಣಿಕರು, ಸಮಾಜಕ್ಕಾಗಿ ಕೆಲಸ ಮಾಡುವವರು ಯಾರು ಟ್ರಸ್ಟ್‌ನಲ್ಲಿ ಇಲ್ಲ. ಉಚ್ಚಾಟನೆ ಮಾಡಿದವರು, ಮಾಡಿಸಿಕೊಂಡವರು ಎಲ್ಲರೂ ಒಂದೇ ರೀತಿಯಾಗಿದ್ದಾರೆ. ಇವರಿಗೆ ಸಾಮಾಜಿಕ ಕಳಕಳಿಯಿಲ್ಲ, ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಈ ಟ್ರಸ್ಟ್‌ಗಳು ಇದ್ದಂತೆ ಆಗಿದೆ ಎಂದು ಆರೋಪಿಸಿದ್ದಾರೆ.
ಸವದಿ, ರಮೇಶ್ ಇದ್ದಲ್ಲಿಯೇ ಇರುತ್ತಾರೆ..
ಇನ್ನೂ ರಮೇಶ್ ಜಾರಕಿಹೊಳಿ ಜೆಡಿಎಸ್ ಪಕ್ಷಕ್ಕೆ ಹೊಗುತ್ತಾರೆ ಎಂಬ ಶಾಸಕ ಲಕ್ಷ್ಮಣ್ ಸವದಿ ಮಾತಿಗೆ ಪ್ರತಿಕ್ರಿಯಿಸಿದ ಯತ್ನಾಳ್, ರಾಜಕೀಯವಾಗಿ ಕೆಲವು ಮಾತುಗಳನ್ನು ಹೇಳುತ್ತಾರೆ, ಅದಕ್ಕೆಲ್ಲ ಹೇಚ್ಚಿನ ಮಹತ್ವ ಕೊಡಬೇಡಿ , ನಾನು ರಮೇಶ ಜಾರಕಿಹೊಳಿ ಜೊತೆಯಾಗಿ ಇದ್ದೇವೆ , ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಹೊಗುದಿಲ್ಲ ಎಲ್ಲವೂ ಊಹಾಪೋಹಗಳು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.






