ಭಾರತೀಯ ರಾಜಕೀಯದಲ್ಲಿ ಇತ್ತೀಚೆಗೆ ಯುವ ನಾಯಕರ ಪ್ರಭಾವ ಹೆಚ್ಚಾಗುತ್ತಿದೆ. ಅವರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವವರು ರಾಘವ ಚಡ್ಡಾ (Raghav Chadha). ತಮ್ಮ ಸರಳ ಸ್ವಭಾವ ಮತ್ತು ಸ್ಪಷ್ಟ ಮಾತಿನ ಮೂಲಕ ಅವರು ಜನರ ಗಮನ ಸೆಳೆದಿದ್ದಾರೆ. ಆಮ್ ಆದಮಿ ಪಾರ್ಟಿ(Aam Aadmi Party) ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾದ ರಾಘವ ಚಡ್ಡಾ, ಪಂಜಾಬ್ ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಯುವ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡು ರಾಜಕೀಯದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ.
ದೆಹಲಿ ಮೂಲದ ಚಡ್ಡಾ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಿ ವಿದ್ಯಾಭ್ಯಾಸ ಮುಗಿಸಿ, ಬಳಿಕ ಸಾರ್ವಜನಿಕ ಸೇವೆಗೆ ಬಂದರು. ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿ ಭಾಗವಹಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು.ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ರಾಜೇಂದ್ರ ನಗರ ಕ್ಷೇತ್ರದಿಂದ ಗೆದ್ದು ಶಾಸಕರಾದ ಅವರು, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಜನಪ್ರಿಯರಾದರು. ಪಂಜಾಬ್ ಚುನಾವಣೆಯಲ್ಲೂ ಪಕ್ಷದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.ಇಂದು ಯುವ ನಾಯಕನಾಗಿ ರಾಘವ ಚಡ್ಡಾ ರಾಜಕೀಯದಲ್ಲಿ ಹೊಸ ದಾರಿಯನ್ನು ತೋರಿಸುತ್ತಿದ್ದಾರೆ. ಅವರ ಸಾಧನೆ ಅನೇಕ ಯುವಕರಿಗೆ ಪ್ರೇರಣೆಯಾಗಿದೆ.

ಸದನದಲ್ಲಿ ಮಾತನಾಡಿದ ವೇಳೆ ಅವರು ಆರ್ಥಿಕ ವಿಚಾರಗಳು, ಆಡಳಿತದ ಪಾರದರ್ಶಕತೆ ಮತ್ತು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವಂತೆ ಮಾತನಾಡಿದ್ದಾರೆ. ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನೆ ಕೇಳಿ, ಜನರಿಗೆ ನ್ಯಾಯ ಸಿಗಬೇಕು ಎಂಬ ದೃಷ್ಟಿಯಿಂದ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.ಖರ್ಚಿನ ನಿಯಂತ್ರಣ, ಭ್ರಷ್ಟಾಚಾರ ನಿಯಂತ್ರಣೆ ಹಾಗೂ ಜನರಿಗೆ ಉತ್ತಮ ಸೇವೆ ಒದಗಿಸುವ ಬಗ್ಗೆ ಅವರು ಸದನದಲ್ಲಿ ಒತ್ತಿ ಹೇಳುತ್ತಾರೆ. ಯುವಕರಿಗೆ ಅವಕಾಶ ನೀಡಬೇಕು, ಶಿಕ್ಷಣ ಮತ್ತು ಉದ್ಯೋಗದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂಬುದನ್ನೂ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ದೆಹಲಿ ವಿಧಾನಸಭೆಯಿಂದ ಆರಂಭವಾದ ಅವರ ರಾಜಕೀಯ ಪಯಣ ಇಂದು ರಾಷ್ಟ್ರಮಟ್ಟಕ್ಕೆ ತಲುಪಿದೆ. ಸದನದಲ್ಲಿ ಅವರ ಮಾತುಗಳು ಅನೇಕ ಬಾರಿ ಚರ್ಚೆಗೆ ಕಾರಣವಾಗುತ್ತಿವೆ.ರಾಘವ ಚಡ್ಡಾ ಅವರು ಕೇವಲ ಯುವ ನಾಯಕ ಮಾತ್ರವಲ್ಲ, ಸದನದಲ್ಲಿ ಜನರ ಪರವಾಗಿ ಧೈರ್ಯವಾಗಿ ಮಾತನಾಡುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.






