ಬೆಂಗಳೂರು : ಆರ್ಸಿಬಿ ಕ್ರಿಕೆಟ್ ತಂಡವು ಈ ಬಾರಿಯ ಐಪಿಎಲ್ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಸನ್ ಸೈರ್ಸಸ್ ಹೈದ್ರಾಬಾದ್ ಜೊತೆಗೆ ಮುಖಾಮುಖಿಯಾಗಲಿದೆ. ಈ ಮೂಲಕ ಹಾಲಿ ಕಪ್ ಗೆದ್ದಿರುವು ತಂಡ ತನ್ನ ಹೊಸ ಪ್ರಯಾಣವನ್ನು ಶುರು ಮಾಡಲು ಸಜ್ಜಾಗಿದೆ.

ಈ ನಡುವೆಯೇ ಆರ್ಸಿಬಿ ಆಡಳಿತ (Royal Challengers Benglore Management) ಮಂಡಳಿಯು ಒಂದು ಮಹತ್ವದ ತೀರ್ಮಾಣ ಕೈಗೊಂಡಿದ್ದು, ಅದು ಅಭಿಮಾನಿಗಳ ಮನಗೆಲ್ಲಲು ಕಾರಣವಾಗಿದೆ. ಕಳೆದ ಆರ್ಸಿಬಿ ಕಪ್ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿದ್ದ ಘಟನೆಯಲ್ಲಿ ಮೃತಪಟ್ಟ 11 ಅಭಿಮಾನಿಗಳ ಸ್ಮರಣಾರ್ಥ, ಆಟಗಾರರು (Players) 11 ನಂಬರ್ ಜರ್ಸಿಯಲ್ಲಿ ಅಭ್ಯಾಸ ಪಂದ್ಯಗಳನ್ನು ನಡೆಸಲಿದ್ದಾರೆ.
ಅಲ್ಲದೆ ಕ್ರೀಡಾಂಗಣದಲ್ಲಿ 11 ಸೀಟ್ಗಳನ್ನು ಖಾಲಿ ಬಿಡುವ ಮೂಲಕ ಗೌರವ ಸಲ್ಲಿಸುವ ನಿರ್ಧಾರಕ್ಕೆ ತಂಡದ ಮ್ಯಾನೇಜ್ಮೆಂಟ್ ಮಾಹಿತಿ ನೀಡಿದೆ. ಇನ್ನೂ ಈಗಾಗಲೇ ಆರ್ಸಿಬಿ ಅಭಿಮಾನಿಗಳು ಟಕೆಟ್ ಬುಕ್ಕಿಂಗ್ನಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ : ಆಸ್ತಿ ತೆರಿಗೆ ಏರಿಕೆ ವಿರೋಧ: ಮಾರ್ಚ್ 30ಕ್ಕೆ ಬೆಂಗಳೂರು ಪಾಲಿಕೆಗಳ ಮುಂದೆ ಭಾರೀ ಪ್ರತಿಭಟನೆಗೆ ಕರೆ
ಈ ಬಾರಿ ಯಾವುದೇ ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡದೆ ಟಿಕೆಟ್ಗಳನ್ನು ಕೇವಲ ಆನ್ಲೈನ್ನಲ್ಲಿಯೇ ಬುಕ್ ಮಾಡಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ಗಾಗಿ ಅಭಿಮಾನಿಗಳು ಕ್ಯೂನಿಲ್ಲುವ ಸನ್ನಿವೇಶ ನಿರ್ಮಾಣವಾಗಿಲ್ಲ. ಕ್ರೀಡಾಂಗಣದ (Stadium) ಸುತ್ತಲೂ ಮುನ್ನೆಚ್ಚರಿಕಾ ಕ್ರಮವಾಗಿ ಅಭಿಮಾನಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾರ್ಗಸೂಚಿ ಫಲಕಗಳನ್ನು ಅಳವಡಿಲಾಗಿದೆ.
ಕ್ರೀಡಾಂಗಣದ ಕೆಲ ಹಾಳಾದ ಗೇಟ್ಗಳ ರಿಪೇರಿ ಕಾರ್ಯವೂ ನಡೆಯುತ್ತಿದ್ದು, ಪಂದ್ಯಕ್ಕಾಗಿ ಸಿದ್ಧತೆಗಳೂ ಸಹ ಭರದಿಂದ ಸಾಗಿವೆ. ಆಟಗಾರರು ಕೂಡ ಅಭ್ಯಾಸ ಪಂದ್ಯದಲ್ಲಿ ನಿರತರಾಗಿದ್ದಾರೆ.






