• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್‌, ಮಾತ್ನಾಡೋ ಜನ ಒಂದ್‌ ಅರ್ಥ ಮಾಡ್ಕೋಬೇಕು.. : ಮೌನ ಮುರಿದ ರಶ್ಮೀಕಾ..

ಸುತ್ತಲೂ ಇರುವವರು ಸಂತೋಷದಿಂದ ಇದ್ದರೆ ಎಲ್ಲವೂ ಸರಿಯಾಗುತ್ತಿದೆ ಎಂದು ಭಾವಿಸಿಕೊಂಡಿದ್ದೆ : ರಶ್ಮೀಕಾ ಮಂದಣ್ಣ..

ಪ್ರತಿಧ್ವನಿ by ಪ್ರತಿಧ್ವನಿ
March 12, 2026
in Top Story, ಇದೀಗ, ಕರ್ನಾಟಕ, ದೇಶ, ಸಿನಿಮಾ, ಸೌಂದರ್ಯ
0
ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್‌, ಮಾತ್ನಾಡೋ ಜನ ಒಂದ್‌ ಅರ್ಥ ಮಾಡ್ಕೋಬೇಕು.. : ಮೌನ ಮುರಿದ ರಶ್ಮೀಕಾ..
Share on WhatsAppShare on FacebookShare on Telegram

ಬೆಂಗಳೂರು : ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನ್ಯಾಷನಲ್ ಕ್ರಷ್‌ ಎಂದೇ ಖ್ಯಾತಿಯಾಗಿರುವ ನಟಿ ರಶ್ಮೀಕಾ ಮಂದಣ್ಣ ಇದೀಗ ಮೌನ ಮುರಿದಿದ್ದಾರೆ. ಅಲ್ಲದೆ ಇತ್ತಿಚಿಗೆ ನಡೆದ ವಿವಾಹದ ಬಳಿಕ ತಮ್ಮ ತಾಯಿಯದ್ದು ಎನ್ನಲಾಗಿರುವ ಆಡಿಯೋ ಒಂದು ವೈರಲ್‌ ಆಗುತ್ತಿದೆ. ಈ ಸಮಯದಲ್ಲಿ ರಶ್ಮೀಕಾ ಎಲ್ಲ ಬೆಳವಣಿಗೆಗಳ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT
Budget Assembly on BY Vijayendra : ಸಿದ್ದು ಬಜೆಟ್‌ ವಿರುದ್ಧ ವಿಜಯೇಂದ್ರ ಕಿಡಿ..! #pratidhvani

ನನ್ನ ಸಿನಿಮಾ ಲೋಕದ ಈ ಅದ್ಭುತ ಪಯಣದಲ್ಲಿ ಇಲ್ಲಿಯವರೆಗೆ ನನ್ನ ಜೊತೆಗಿರುವ ಪ್ರೀತಿಯ ಜನರಿಗೆ, ಇದಕ್ಕೆ ಸಂಬಂಧಿಸಿದವರಿಗೂ ನಮಸ್ಕಾರಗಳು. ಕಳೆದ 8 ವರ್ಷಗಳಿಂದ ಮೀಡಿಯಾದ ಒಂದು ವರ್ಗ, ಕೆಲವು ವ್ಯಕ್ತಿಗಳಿಂದ ನನ್ನ ವಿರುದ್ಧ ಸುಳ್ಳು ಮಾಹಿತಿ ಹರಡುತ್ತಿದೆ. ನನಗೆ ಇದು ಕಿರುಕುಳ ಆಗುತ್ತಿದ್ದು, ನನ್ನ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Image

ನಾನು ನನ್ನ ಮಾತುಗಳನ್ನು ಸಂದರ್ಭಕ್ಕೆ ಬೇಕಾದಂತೆ ಬಳಸುವುದಿಲ್ಲ, ಆದರೆ ಅವುಗಳನ್ನು ತಿರುಚಲಾಗಿದೆ. ನಾನು ಹೇಳದ ಮಾತುಗಳನ್ನು ಸುಳ್ಳು ಕಥೆಗಳಂತೆ ಸೃಷ್ಟಿ ಮಾಡಲಾಗಿದೆ. ಬರೀ ವ್ಯೂಸ್, ಎಂಗೇಜ್‌ಮೆಂಟ್‌ಗಾಗಿ ದ್ವೇಷ ಹಬ್ಬಿಸುವುದನ್ನು ನಾನು ನೋಡುತ್ತಿದ್ದೇನೆ. ಈ ಎಲ್ಲ ಬೆಳವಣಿಗೆಗಳು ನನಗೆ ನೋವು ನೀಡಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ನಾನು ತಾಳ್ಮೆ ಹಾಗೂ ಮೌನದಿಂದ ಇದ್ದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : LPG ಸಿಲಿಂಡರ್ ಸರಬರಾಜು ಸ್ಥಗಿತ: ಹೋಟೆಲ್, ಪಿ.ಜಿ, ಹಾಸ್ಟೇಲ್ ಗಳಿಗೆ ಬಿಸಿ ತಟ್ಟಿದ್ದು ಹೀಗೆ!

ಸಾರ್ವಜನಿಕ ಜೀವನದಲ್ಲಿ ಈ ರೀತಿಯ ಅನ್ಯಾಯ ಹಾಗೂ ಟೀಕೆಗಳು ಬರುತ್ತವೆ ಎಂದು ನಂಬಿಕೊಂಡಿರುವೆ. ನಾನು ಪ್ರಾಮಾಣಿಕವಾಗಿದ್ದು, ಸುತ್ತಲೂ ಇರುವವರು ಸಂತೋಷದಿಂದ ಇದ್ದರೆ ಎಲ್ಲವೂ ಸರಿಯಾಗುತ್ತಿದೆ ಎಂದು ಭಾವಿಸಿಕೊಂಡಿದ್ದೆ. ಆದರೆ ಕಳೆದ 24 ಗಂಟೆಗಳಲ್ಲಿ ನಡೆದಿರುವ ಬೆಳವಣಿಗೆ ಮಿತಿ ಮೀರಿದೆ ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Image

8 ವರ್ಷಗಳ ಹಿಂದಿನ ಹಳೆಯದಾದ ಖಾಸಗಿ ಸಂಭಾಷಣೆಯ ಆಡಿಯೋವನ್ನು ಸಂಬಂಧಪಟ್ಟವರ ಅರಿವಿಗೆ ತರದೆಯೋ ಅಥವಾ ಅನುಮತಿಯಿಲ್ಲದೆ ರೆಕಾರ್ಡ್ ಮಾಡಿ ಬಿಡುಗಡೆ ಮಾಡಲಾಗಿದೆ. ಆ ಆಡಿಯೋದ ಒಂದು ಸಣ್ಣ ತುಣುಕನ್ನು ಉದ್ದೇಶಪೂರ್ವಕವಾಗಿ ಸಂದರ್ಭಕ್ಕೆ ಅನುಗಣವಾಗಿ ಉಪಯೋಗಿಸಿಕೊಳ್ಳಬೇಕಿತ್ತು. ಅದರ ಬದಲಿಗೆ ಇನ್ನೊಂದು ವಿವಾದವನ್ನು ಸೃಷ್ಟಿಸಲು ಬಳಸಿಕೊಳ್ಳಲಾಗಿದೆ. ನನ್ನ ಖಾಸಗಿ ಜೀವನದ ಇತ್ತೀಚಿನ ಬೆಳವಣಿಗೆಯ ಜೊತೆಯಲ್ಲೇ ಇದೆಲ್ಲ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Karnataka LPG Shortage: ಗ್ಯಾಸ್ ಇಲ್ಲದೆ ಸಮಸ್ಯೆ ಆಗ್ತಿದೆ #pratidhvani #lpg #autodriving #lpgpricehike

ಜನರು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಲ್ಲರೇ..? ಇದೇ ರೀತಿಯಾಗಿ ನನ್ನ ಕುಟುಂಬವನ್ನು ಹಾಗೂ ಈ ವಿಚಾರಕ್ಕೆ ಸಂಬಂಧವಿಲ್ಲದವರನ್ನು ಅನಗತ್ಯವಾಗಿ ಮುಜುಗರಕ್ಕೆ ತಳ್ಳಿದ್ದಾರೆ. ಇದು ಖಾಸಗಿ ಬದುಕಿನ, ಗೌಪ್ಯತೆಯನ್ನು ಉಲ್ಲಂಘಿಸಿರುವ ವಿಚಾರವಾಗಿದೆ. ಇದೊಂದು ದಾರಿ ತಪ್ಪಿಸುವ, ಮಾನಹಾನಿಕರ ಸುಳ್ಳುಗಳ ಪ್ರಚಾರದ ವಿಷಯವಾಗಿದೆ ಎಂದು ಕಿಡಿ ಕಾರಿದ್ದಾರೆ.

ನಮ್ಮ ಜೀವನದಲ್ಲಿ ಮುಂದೆ ಸಾಗುತ್ತ, ಬೆಳೆಯುತ್ತ, ಅರ್ಥಪೂರ್ಣ ಕೆಲಸಗಳೊಂದಿಗೆ ಹೊರಟರೆ, ಧನಾತ್ಮಕ ವಿಚಾರಗಳನ್ನು ಪಸರಿಸುತ್ತಿರುವ ಈ ಸಮಯದಲ್ಲಿ, ಕೆಲವರು ಮತ್ತೊಬ್ಬರ ಘನತೆ, ಶಾಂತಿಯ ವಿಚಾರದಲ್ಲಿ ದ್ವೇಷ ಹಾಗೂ ವಿವಾದಗಳನ್ನು ಸೃಷ್ಟಿಸುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿದ್ದಾರೆ.

Image

ಕಳೆದ ಎಂಟು ವರ್ಷಗಳಿಂದ ನನ್ನ ಮೇಲೆ ದಾಳಿ ನಡೆದರೂ ನಾನು ಮೌನವಾಗಿದ್ದೆ. ಆದರೆ ಇಂದು ಬೇರೆಯವರನ್ನು ಈ ವಿಚಾರದಲ್ಲಿ ಎಳೆದು ತಂದಾಗ, ನಾನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

Image

ಇಲ್ಲಿಯವರೆಗೆ ನನಗೆ ತುಂಬಾ ಜನ ಪ್ರೀತಿ ತೋರಿದ್ದೀರಿ, ಬೆಂಬಲಿಸಿದ್ದೀರಿ. ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ. ಒಂದ್ ಮಾತು ಈ ಸಮಯದಲ್ಲಿ ಹೇಳಲೇಬೇಕು ಅನ್ನಿಸುತ್ತಿದೆ. ಬೇಕಂತ ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್ ಮಾತನಾಡೋ ಜನ, ಒಂದ್ ಅರ್ಥ ಮಾಡ್ಕೊಬೇಕು – ಅವರೆಲ್ಲ ನನ್ನ ಜೀವನ ಹೇಗಿರಬೇಕು ಅಂತ ನಿರ್ಧಾರ ಮಾಡಕ್ಕಾಗತ್ತಾ? ನಮ್ ಜೀವನ ನಮ್ಗಲ್ವಾ? ನಮ್ ನಿರ್ಧಾರ ನಾವೇ ತೊಗೋಬೇಕು ಮತ್ತೆ ತೊಗೋತೀವಿ ಕೂಡ ಎಂದು ರಶ್ಮೀಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ಸುದೀರ್ಘ ಪ್ರತಿಕ್ರಿಯೆ ನೀಡಿರುವುದು ಕುತೂಹಲ ಮೂಡಿಸಿದೆ.

Image

ನಟಿ ರಶ್ಮೀಕಾ ಮಂದಣ್ಣ ಕಳೆದ ಕೆಲ ದಿನಗಳ ಹಿಂದಷ್ಟೇ ನಟ ವಿಜಯ್‌ ದೇವರಕೊಂಡ ಕೈ ಹಿದಿದು ಅದ್ಧೂರಿ ವಿವಾಹ ಮಾಡಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ರಶ್ಮೀಕಾ ತಾಯಿಯದ್ದು ಎನ್ನಲಾಗಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಹೀಗಾಗಿ ಇದರ ವಿರುದ್ಧ ನಟಿ ಈಗ ಮೌನ ಮುರಿದಿದ್ದಾರೆ.

Tags: Actor Vijay DevarakondaActress Rashmika MandannaBreaks SilenceFake messagesPersonal LifePratidhvaniPublic lifeRashmika MandannaSpreading LiesTwitter PostVijay DevarakondaViral audio
Previous Post

ಹೋರಾಟಗಾರರ ಮುಂದೆ ಬಹಿರಂಗವಾಗಿಯೇ ತೊಡೆ ತಟ್ಟಿದ DYSP : ಮುಂದೇನಾಯ್ತು ನೋಡಿ..!

Next Post

ಮೀಸಲಾತಿ: OBC ಸಮುದಾಯಕ್ಕೆ ಇಲ್ಲಿದೆ‌ ಶುಭ ಸುದ್ದಿ!

Related Posts

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು
ಸಿನಿಮಾ

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

by ಪ್ರತಿಧ್ವನಿ
May 21, 2026
0

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರ ದಾಂಪತ್ಯ ಜೀವನದ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಹಿನ್ನೆಲೆಯಲ್ಲಿ ನಟ ದರ್ಶನ್...

Read moreDetails
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

May 21, 2026
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
Next Post
ಮೀಸಲಾತಿ: OBC ಸಮುದಾಯಕ್ಕೆ ಇಲ್ಲಿದೆ‌ ಶುಭ ಸುದ್ದಿ!

ಮೀಸಲಾತಿ: OBC ಸಮುದಾಯಕ್ಕೆ ಇಲ್ಲಿದೆ‌ ಶುಭ ಸುದ್ದಿ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada