ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈ ಬಾರಿ ಒಟ್ಟು 120 ಕೋಟಿ ರೂಪಾಯಿಗಳನ್ನು T20 ವಿಶ್ವಕಪ್ ಟೂರ್ನಿಗಾಗಿ ಘೋಷಣೆ ಮಾಡಿದೆ. ಕಳೆದ 2024ರ ಟೂರ್ನಿಗಿಂತ ಈ ಸಲ 2026ರಲ್ಲಿ ಶೇಕಡಾ 20 ರಷ್ಟು ಹಣವನ್ನು ಹೆಚ್ಚಳ ಮಾಡಲಾಗಿದೆ. ಗೆದ್ದ ತಂಡದ ಜೊತೆಗೆ ರನ್ನರ್ ಅಪ್ ತಂಡಕ್ಕೂ ದೊಡ್ಡ ಮೊತ್ತದಲ್ಲೇ ದುಡ್ಡನ್ನು ಐಸಿಸಿ ನೀಡುತ್ತದೆ.

ಫೈನಲ್ ಪಂದ್ಯದಲ್ಲಿ ರನ್ನರ್ ಅಪ್ ಆದ ತಂಡ ಒಟ್ಟು 14.65 ಕೋಟಿ ರೂಪಾಯಿಗಳನ್ನು ಪಡೆದಿದೆ.ಇದು ಈ ಹಿಂದಿನಕ್ಕಿಂತ ಅತ್ಯಂತ ಹೆಚ್ಚು ದುಡ್ಡು ಎಂದು ಹೇಳಲಾಗುತ್ತಿದೆ.ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನಿಂದ ಸುಮಾರು ₹27.48 ಕೋಟಿ ಬಹುಮಾನವನ್ನು ಪಡೆದುಕೊಂಡಿದೆ.

2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಪ್ರಶಸ್ತಿ ಗೆದ್ದಾಗ ₹20.42 ಕೋಟಿ ಬಹುಮಾನ ಪಡೆದಿತ್ತು. ಅದರ ಜೊತೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ₹125 ಕೋಟಿ ವಿಶೇಷ ಬಹುಮಾನ ಘೋಷಿಸಿತ್ತು.
ಟಿ20 ವಿಶ್ವಕಪ್ 2026 ಬಹುಮಾನದ ಮೊತ್ತ
ಚಾಂಪಿಯನ್: ₹27.58 ಕೋಟಿ
ರನ್ನರ್-ಅಪ್: ₹14.70 ಕೋಟಿ
ಸೆಮಿಫೈನಲ್‌ನಲ್ಲಿ ಸೋತ ತಂಡಗಳು: ತಲಾ ₹7.24 ಕೋಟಿ
ಸೂಪರ್ 8 ಹಂತ ತಲುಪಿದ ತಂಡಗಳು: ತಲಾ ₹3.48 ಕೋಟಿ
ಗುಂಪು ಹಂತದಲ್ಲಿ ಹೊರಬಿದ್ದ ತಂಡಗಳು: ತಲಾ ₹2.29 ಕೋಟಿ






