ಮೊಬೈಲ್ ಗೆ ಅಪರಿಚಿತ ನಂಬರಿಂದ ಕರೆ ಬಂದೊಡನೆ ನಮಗೆ ಕಾಡುವ ಪ್ರಶ್ನ ಯಾರಿದು? ಎಂದು ಹಾಗಾಗಿ ಹಲವಾರು ಜನರು ಟ್ರು ಕಾಲರ್ ಬಳಸುತ್ತಾರೆ. ಆದರೆ ಇದೀಗ ಕೇಂದ್ರ ಸರ್ಕಾರ ಟ್ರೂ ಕಾಲರ್ ಬದಲಾಗಿ CNAP (Calling Name Presentation) ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ. ಈ ಸೇವೆ ಮೂಲಕ ಜನರಿಗೆ ಬರುವ ಕರೆಗಳ ಹಿಂದಿನ ವ್ಯಕ್ತಿಯ ಗುರುತನ್ನು ಇದು ತೋರಿಸುತ್ತದೆ. ಇದಕ್ಕಾಗಿ ನೀವು ಯಾವುದಕ್ಕೆ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಅವಶ್ಯಕತೆ ಇಲ್ಲ.

CNAP ಸೇವೆಯ ವಿಶೇಷತೆ ಏನೆಂದರೆ, ಇದು ಸಿಮ್ ಕಾರ್ಡ್ ಖರೀದಿಸುವಾಗ ಸಲ್ಲಿಸಿದ ಅಧಿಕೃತ KYC ದಾಖಲೆಗಳ ಆಧಾರದಲ್ಲಿ ಕರೆ ಮಾಡುವವರ ನಿಜವಾದ ಹೆಸರನ್ನು ಮೊಬೈಲ್ ಸ್ಕ್ರೀನ್ ಮೇಲೆ ಪ್ರದರ್ಶಿಸುತ್ತದೆ. ಯಾವುದೇ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಅಗತ್ಯ ಇಲ್ಲ. ಇಂಟರ್ನೆಟ್ ಸಂಪರ್ಕವೂ ಬೇಕಾಗುವುದಿಲ್ಲ. ಇದು ನೇರವಾಗಿ ಮೊಬೈಲ್ ನೆಟ್‌ವರ್ಕ್‌ನಲ್ಲೇ ಕಾರ್ಯನಿರ್ವಹಿಸುತ್ತದೆ.

ಈ ಸೇವೆ Airtel, Jio ಹಾಗೂ Vi ಬಳಕೆದಾರರಿಗೆ ಹಂತ ಹಂತವಾಗಿ ಲಭ್ಯವಾಗಲಿದೆ. ಆದರೆ CNAP ನಲ್ಲಿ ಸ್ಪ್ಯಾಮ್ ಎಂದು ಗುರುತಿಸುವ ವ್ಯವಸ್ಥೆ ಇಲ್ಲ. ಇದು ಕೇವಲ ಕರೆ ಮಾಡುವವರ ಅಧಿಕೃತ ಹೆಸರು ತೋರಿಸುತ್ತದೆ. ಸರ್ಕಾರ ಈಗ CNAP ಸೇವೆಯನ್ನು ಪರೀಕ್ಷಿಸುತ್ತಿದ್ದು, ಇದು ಹೊಸ ಕಾಲರ್ ಐಡಿ ವ್ಯವಸ್ಥೆಯಾಗಿದೆ. ಇದು ನಿಮ್ಮ ಫೋನ್’ನಲ್ಲಿ ಹೆಸರು ಸೇವ್ ಮಾಡುವ ಮೊದಲೇ ಕರೆ ಮಾಡಿದವರ ಆಧಾರ್-ಲಿಂಕ್ ಮಾಡಲಾದ ಹೆಸರನ್ನು ಮೊದಲು ತೋರಿಸುತ್ತದೆ.






